ಮುಂಬೈ (ಸೆ. 25): ಭಾರೀ ಮಳೆಯಿಂದ ಮಹಾರಾಷ್ಟ್ರದ ಮುಂಬೈನಲ್ಲಿ ಜನಜೀವನ ಅಸ್ತವ್ಯಸ್ತವಾಗಿತ್ತು. ಮೂರ್ನಾಲ್ಕು ದಿನಗಳಿಂದ ಮುಂಬೈನಲ್ಲಿ ಎಲ್ಲೆಂದರಲ್ಲಿ ಮಳೆನೀರು ನಿಂತಿದೆ. ಮಳೆ ನೀರಿನಿಂದ ರಸ್ತೆಗಳಲ್ಲಿ ನೀರು ತುಂಬಿ, ವಾಹನಗಳು ಸಂಚರಿಸದಂತೆ ಆಗಿತ್ತು. ಈ ವೇಳೆ 56 ವರ್ಷದ ಕ್ಯಾನ್ಸರ್ ರೋಗಿಯೊಬ್ಬರಿಗೆ ಆಕ್ಸಿಜನ್ ಸಮಸ್ಯೆಯಿಂದ ಆರೋಗ್ಯಸ್ಥಿತಿ ಗಂಭೀರವಾಗಿತ್ತು. ಈ ವೇಳೆ ಆ್ಯಂಬುಲೆನ್ಸ್ಗೆ ಫೋನ್ ಮಾಡಿದಾಗ ಭಾರೀ ಮಳೆಯಿಂದ ಆ್ಯಂಬುಲೆನ್ಸ್ಗೆ ಬರಲು ಸಾಧ್ಯವಾಗಲಿಲ್ಲ. ಇದರಿಂದ ಆ ರೋಗಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾರೆ. ಮುಂಬೈನಲ್ಲಿ ಮಳೆಯಿಂದ ರಸ್ತೆಗಳಲ್ಲಿ ನೀರು ತುಂಬಿತ್ತು. ವಾಹನಗಳು ಮುಳುಗುವಷ್ಟು ನೀರು ನಿಂತಿದ್ದರಿಂದ ಜನಸಂಚಾರಕ್ಕೆ ಸಮಸ್ಯೆಯಾಗಿತ್ತು. ಇದರಿಂದ ಕ್ಯಾನ್ಸರ್ ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ. ಆ್ಯಂಬುಲೆನ್ಸ್ಗೆ ಕಾಯುತ್ತಾ ಕುಳಿತಿದ್ದ 56 ವರ್ಷದ ಕ್ಯಾನ್ಸರ್ ರೋಗಿ ರಾಮ ಅವತಾರ್ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಸಾವನ್ನಪ್ಪಿ ಹಲವು ಗಂಟೆಗಳ ಬಳಿಕ ಅವರ ದೇಹವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.
ರಾಮ ಅವತಾರ್ 4ನೇ ಹಂತದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಕಳೆದ ಡಿಸೆಂಬರ್ನಿಂದ ಅವರು ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿದ್ದರು. ಮುಂಬೈನ ಟಾಟಾ ಮೆಮೋರಿಯಲ್ ಸೆಂಟರ್ನಿಂದ ಅವರು ಕೀಮೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದರು. ಈಗಾಗಲೇ 9 ಕೀಮೋಥೆರಪಿ ಸೆಷನ್ಗಳನ್ನು ಪಡೆದಿದ್ದ ಅವರು ಸೆಪ್ಟೆಂಬರ್ 30ರಂದು ಮತ್ತೊಂದು ಸೆಷನ್ಗೆ ದಾಖಲಾಗಬೇಕಾಗಿತ್ತು. ಆದರೆ, ಬುಧವಾರ ಬೆಳಗಿನ ಜಾವ 2 ಗಂಟೆಗೆ ಅವರಿಗೆ ತೀವ್ರ ಉಸಿರಾಟದ ತೊಂದರೆ ಎದುರಾಗಿತ್ತು.
ವೈದ್ಯರಿಗೆ ಫೋನ್ ಮಾಡಿದಾಗ ಅವರು ತಕ್ಷಣ ರಾಮ ಅವತಾರ್ ಅವರನ್ನು ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದರು. ಹೀಗಾಗಿ, ಆ್ಯಂಬುಲೆನ್ಸ್ ಫೋನ್ ಮಾಡಲಾಗಿತ್ತು. ಆದರೆ, ಯಾವ ಆ್ಯಂಬುಲೆನ್ಸ್ನವರೂ ಮಳೆಯಲ್ಲಿ ಬರಲು ಒಪ್ಪಲಿಲ್ಲ. ಕೊನೆಗೆ ಒಂದು ಆ್ಯಂಬುಲೆನ್ಸ್ನವರು ಬರಲು ಒಪ್ಪಿದರೂ ಸಂಜೆಯಿಂದ ಸುರಿದ ಭಾರೀ ಮಳೆಯಿಂದ ರಸ್ತೆಯಲ್ಲಿ ನೀರು ತುಂಬಿ, ಆ್ಯಂಬುಲೆನ್ಸ್ ವಾಹನಕ್ಕೆ ಬರಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ಉಸಿರಾಟದ ತೊಂದರೆಯಿಂದ ರಾಮ ಅವತಾರ್ ಅವರು ಪ್ರಜ್ಞೆ ತಪ್ಪಿದ್ದರು. ಎರಡು ಗಂಟೆ ಆ್ಯಂಬುಲೆನ್ಸ್ಗೆ ಕಾದ ರಾಮ ಅವತಾರ್ ಅವರು ಪ್ರಾಣ ಬಿಟ್ಟರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ