Mumbai: ಮುಂಬೈನ ಲ್ಯಾಬ್​ನಲ್ಲಿ ಗ್ಯಾಸ್​ ಟ್ಯಾಂಕ್ ಸ್ಫೋಟ; ಕಟ್ಟಡದ ಒಂದು ಭಾಗ ನೆಲಸಮ

Mumbai Blast: ಮುಂಬೈನ ವೋರ್ಲಿಯ ವೀರ ಸಾವರ್ಕರ್​ ರಸ್ತೆಯಲ್ಲಿರುವ ಹಳೆಯ ಪಾಸ್‌ಪೋರ್ಟ್ ಕಚೇರಿ ಬಳಿ ಇರುವ ಹಳೆಯ ಕಟ್ಟಡದಲ್ಲಿ ಪ್ರಯೋಗಾಲಯವೂ ಇದೆ. ಅದೇ ಲ್ಯಾಬ್​ನಲ್ಲಿ ಇಂದು ಬೆಳಗ್ಗೆ 9 ಗಂಟೆ ವೇಳೆಗೆ ಲಿಕ್ವಿಡ್ ನೈಟ್ರೋಜನ್ ಗ್ಯಾಸ್ ಟ್ಯಾಂಕ್ ಸ್ಟೋಟಗೊಂಡಿದೆ.

ಮುಂಬೈನಲ್ಲಿ ಗ್ಯಾಸ್ ಟ್ಯಾಂಕ್ ಸ್ಫೋಟ

ಮುಂಬೈನಲ್ಲಿ ಗ್ಯಾಸ್ ಟ್ಯಾಂಕ್ ಸ್ಫೋಟ

  • Share this:
ಮುಂಬೈ (ಸೆ. 18): ಮಹಾರಾಷ್ಟ್ರದ ಮುಂಬೈನಲ್ಲಿ ಲಿಕ್ವಿಡ್ ನೈಟ್ರೋಜನ್ ಗ್ಯಾಸ್ ಟ್ಯಾಂಕ್ ಸ್ಫೋಟಗೊಂಡು ಕಟ್ಟಡದ ಒಂದು ಭಾಗ ನೆಲಕ್ಕುರುಳಿದೆ. ಮುಂಬೈನ ವೋರ್ಲಿ ಬಳಿ ಇರುವ ಮನೀಷ್ ಕಮರ್ಷಿಯಲ್ ಎಸ್ಟೇಟ್ ಬಿಲ್ಡಿಂಗ್​ನ ಮೇಲಿನ ಮಹಡಿ ಕುಸಿದುಬಿದ್ದಿದೆ. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಹೆಚ್ಚಿನ ಅನಾಹುತಗಳೇನೂ ನಡೆದಿಲ್ಲ. ಈ ದುರ್ಘಟನೆಯಲ್ಲಿ ಓರ್ವ ಮಹಿಳೆ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಟೈಮ್ಸ್​ ಆಫ್ ಇಂಡಿಯಾ ವರದಿ ಮಾಡಿದೆ.

ವೋರ್ಲಿಯ ವೀರ ಸಾವರ್ಕರ್​ ರಸ್ತೆಯಲ್ಲಿರುವ ಹಳೆಯ ಪಾಸ್‌ಪೋರ್ಟ್ ಕಚೇರಿ ಬಳಿ ಇರುವ ಹಳೆಯ ಕಟ್ಟಡದಲ್ಲಿ ಪ್ರಯೋಗಾಲಯವೂ ಇದೆ. ಅದೇ ಲ್ಯಾಬ್​ನಲ್ಲಿ ಇಂದು ಬೆಳಗ್ಗೆ 9 ಗಂಟೆ ವೇಳೆಗೆ ಲಿಕ್ವಿಡ್ ನೈಟ್ರೋಜನ್ ಗ್ಯಾಸ್ ಟ್ಯಾಂಕ್ ಸ್ಟೋಟಗೊಂಡಿದೆ. ಅಪಘಾತದ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಮುಂಬೈ ಪೊಲೀಸರು, ಅಗ್ನಿಶಾಮಕ ದಳ ಮತ್ತು ಎನ್‌ಎಂಸಿ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ತಪಾಸಣೆ ನಡೆಸಿ, ರಕ್ಷಣಾ ಕಾರ್ಯಾಚರಣೆ ನಡೆಸಿದರು.ಸ್ಫೋಟದಿಂದಾಗಿ ಸೋರಿಕೆಯಾದ ನೈಟ್ರೋಜನ್ ಗ್ಯಾಸ್​ನಿಂದ ಇನ್ನಷ್ಟು ಜನರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇರುವುದರಿಂದ ಆ ಕಟ್ಟಡದ ಸುತ್ತಮುತ್ತಲೂ ಜನಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ಘಟನೆಗೆ ಕಾರಣವೇನೆಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಳಗ್ಗಿನ ವೇಳೆ ಈ ಘಟನೆ ನಡೆದಿದ್ದರಿಂದ ಇನ್ನೂ ಯಾರೂ ಲ್ಯಾಬ್​ಗೆ ಬಂದಿರಲಿಲ್ಲ. ಹೀಗಾಗಿ, ಹೆಚ್ಚಿನ ಜನರಿಗೆ ತೊಂದರೆಯಾಗಿಲ್ಲ ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ. ಆ ಲ್ಯಾಬ್​ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಮಾತ್ರ ಈ ದುರ್ಘಟನೆಯಲ್ಲಿ ಗಾಯಗಳು ಉಂಟಾಗಿವೆ. ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
Published by:Sushma Chakre
First published: