ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಕಳೆದೆರಡು ದಿನಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ, ಟ್ರೋಲ್-ಮೆಮೆ ಪೇಜ್ಗಳಲ್ಲಿ ‘ಗೋಡೆ’ಯದ್ದೇ ಸದ್ದು ಜೋರಾಗಿದೆ. ಸದಾ ಶಾಂತ ವ್ಯಕ್ತಿತ್ವದಿಂದಲೇ ದಶಕಗಳಿಂದ ಗುರುತ್ತಿಸಿಕೊಂಡಿದ್ದ ದ್ರಾವಿಡ್ ‘ಇಂದಿರಾನಗರದ ಗೂಂಡಾ’ ಆಗಿ ಕಾಣಿಸಿಕೊಂಡಿದ್ದು ಅವರ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿದೆ. ದ್ರಾವಿಡ್ ಅವರ ಈ ಡೈಲಾಗನ್ನೇ ಬಳಿಸಿಕೊಂಡು ಮುಂಬೈ ಪೊಲೀಸರು ಈಗ ಕೊರೋನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಕ್ರೆಡಿಟ್ ಕಾರ್ಡ್ ಆ್ಯಪ್ವೊಂದರ ಜಾಹೀರಾತಿನಲ್ಲಿ ರಾಹುಲ್ ದ್ರಾವಿಡ್ ‘ಇಂದಿರಾನಗರದ ಗೂಂಡಾ ಹೂ ಮೇ’ ಎನ್ನುತ್ತಾ ಕಾಣಿಸಿಕೊಂಡಿದ್ದರು. ಟ್ರಾಫಿಕ್ ಮಧ್ಯೆ ಸಿಲುಕಿದಾಗ ಸಿಟ್ಟಿನಲ್ಲಿ ಏನೆಲ್ಲಾ ಮಾಡ್ತಾರೆ ಅನ್ನೋದನ್ನು ರಾಹುಲ್ ದ್ರಾವಿಡ್ ಜಾಹೀರಾತಿನಲ್ಲಿ ಅಭಿನಯಿಸಿದ್ದರು. ದ್ರಾವಿಡ್ ಅವರ ಈ ಹೊಸ ಅವತಾರ ನೆಟ್ಟಿಜನ್ಗೆ ತುಂಬಾ ಮಜಾ ಕೊಡುತ್ತಿದೆ. ಜಾಹೀರಾತಿನ ಫೋಟೋ, ವಿಡಿಯೋವನ್ನು ಬಳಸಿಕೊಂಡು ಮೆಮೆ, ಟ್ರೋಲ್ ಮಾಡಿ ಹರಿಬಿಡಲಾಗ್ತಿದೆ. ಸೋಷಿಯಲ್ ಮಿಡಿಯಾದಲ್ಲಿ ಸದ್ಯಕ್ಕೆ ದ್ರಾವಿಡ್ರದ್ದೇ ಹವಾ ಎಂದರು ತಪ್ಪಾಗಲಾರದು. ಇದನ್ನು ಬಳಸಿಕೊಂಡು ಮುಂಬೈ ಪೊಲೀಸರು ತಮ್ಮ ಇಸ್ಟಾಗ್ರಾಂ ಖಾತೆಯಲ್ಲಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
Come Man Come.. You come Man..!! ಎಂಬ ದ್ರಾವಿಡ್ರ ಡೈಲಾಗ್ ಬಳಸಿಕೊಂಡು ಮುಂಬೈ ನಿವಾಸಿಗಳೇ ನೀವು ಮಾಸ್ಕ್ ಧರಿಸದಿದ್ದರೆ ಕೊರೋನಾ ಕೂಡ ನಿಮ್ಮ ಬಳಿ ಇದೇ ರೀತಿ ಬರುತ್ತೆ ಎಂದು ಎಚ್ಚರಿಸಿದ್ದಾರೆ.
View this post on Instagram
ಇಷ್ಟೇ ಅಲ್ಲ, ದ್ರಾವಿಡ್ರ ‘ಇಂದಿರಾನಗರದ ಗೂಂಡಾ ಹೂ ಮೇ’ ಡೈಲಾಗನ್ನು ಬಳಸಿಕೊಂಡು ಫುಡ್ ಆ್ಯಪ್ ಜೊಮ್ಯಾಟೋ ಕೂಡ ನಗೆಚಟಾಕಿ ಹಾರಿಸಿತ್ತು. ಬೆಂಗಳೂರಿನ ಇಂದಿರಾನಗರದ ಟ್ರಾಫಿಕ್ನಲ್ಲಿ ಗೂಂಡಾ ಇರೋದರಿಂದ ಆ ಕಡೆ ಫುಡ್ ಡೆಲಿವರಿ ಮಾಡಲು ಕೊಂಚ ತಡವಾಗುತ್ತಿದೆ ಎಂದು ತಮಾಷೆ ಮಾಡಿ ಟ್ವೀಟ್ ಮಾಡಿದ್ದರು.
View this post on Instagram
(ವರದಿ: ಕಾವ್ಯ ವಿ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ