Viral News: ಜೈಲಿನಲ್ಲೇ ಇದ್ದ ಕೈದಿಗೆ ಬರೋಬ್ಬರಿ 20 ವರ್ಷ ಹುಡುಕಾಟ ನಡೆಸಿದ ಮುಂಬೈ ಪೊಲೀಸರು!

ಜೈಲು

ಜೈಲು

ಕೊಲೆ ಪ್ರಕರಣದ ಆರೋಪಿಯನ್ನು ಪತ್ತೆಹಚ್ಚಲು ಮುಂಬೈ ಪೊಲೀಸರು 20 ವರ್ಷಗಳಿಂದ ಹರಸಾಹಸ ಪಟ್ಟಿದ್ದಾರೆ. ಆದರೆ ಅದೇನೇ ತಿಪ್ಪರಲಾಗ ಹಾಕಿದರೂ ಆರೋಪಿಯ ಸುಳಿವು ಪೊಲೀಸರಿಗೆ ಪತ್ತೆಯಾಗಿರಲಿಲ್ಲ. ಆದರೆ ಇದೀಗ ಆ ಆರೋಪಿಯು ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲೇ ಇದ್ದ ಎಂದು ತಿಳಿದು ಬಂದಿದೆ.

  • News18 Kannada
  • 5-MIN READ
  • Last Updated :
  • Mumbai, India
  • Share this:

ಮುಂಬೈ: ವಿವಿಧ ಪ್ರಕರಣಗಳಿಗೆ ಬೇಕಾಗಿದ್ದು ಆದರೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡ ಆರೋಪಿಗಳ (Accused) ಹುಡುಕಾಟಕ್ಕೆ ಪೊಲೀಸರು ವರ್ಷಗಟ್ಟಲೇ ಹುಡುಕಿ ಸುಸ್ತಾಗೋದು ಸಾಮಾನ್ಯ ಸಂಗತಿ. ಆದರೆ ಜೈಲಿನಲ್ಲೇ (Jail) ಇದ್ದ ಆರೋಪಿಗಾಗಿ ಪೊಲೀಸರು ಒಂದೆರಡಲ್ಲ ಬರೋಬ್ಬರಿ 20 ವರ್ಷಗಳ ಕಾಲ ಹುಡುಕಾಟ ನಡೆಸಿದ ವಿಚಿತ್ರ ಘಟನೆ ಮುಂಬೈನಲ್ಲಿ (Mumbai) ನಡೆದಿದೆ.


ಹೌದು. 1999 ರ ಕೊಲೆ ಪ್ರಕರಣವೊಂದರಲ್ಲಿ ಛೋಟಾ ಶಕೀಲ್ ಗ್ಯಾಂಗ್‌ನ ಶಾರ್ಪ್ ಶೂಟರ್ ಎಂದು ಹೇಳಲಾದ ಆರೋಪಿಯನ್ನು 20 ವರ್ಷಗಳಿಂದ ಪತ್ತೆಹಚ್ಚಲು ಮುಂಬೈ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಆದರೆ ಅದೇನೇ ತಿಪ್ಪರಲಾಗ ಹಾಕಿದರೂ ಆರೋಪಿಯ ಸುಳಿವು ಪೊಲೀಸರಿಗೆ ಪತ್ತೆಯಾಗಿರಲಿಲ್ಲ. ಆದರೆ ಇದೀಗ ಆ ಆರೋಪಿಯು 5 ವರ್ಷಗಳ ಕಾಲ ವಿಚಾರಣಾಧೀನ ಕೈದಿಯಾಗಿ ಮತ್ತೊಂದು ಪ್ರಕರಣದಲ್ಲಿ ಜೈಲಿನಲ್ಲೇ ಇದ್ದ ಎಂದು ತಡವಾಗಿ ಬೆಳಕಿಗೆ ಬಂದಿದೆ.


ಇದನ್ನೂ ಓದಿ: California Mass Shooting: ಕ್ಯಾಲಿಫೋರ್ನಿಯಾದಲ್ಲಿ ಸಾಮೂಹಿಕ ಗುಂಡಿನ ದಾಳಿಗೆ 10 ಬಲಿ, ಜನರ ಜೀವ ತೆಗೆದು ಆತ್ಮಹತ್ಯೆ ಮಾಡಿಕೊಂಡ ಆರೋಪಿ


ಇದೀಗ, ಆರೋಪಿಯು ಜೈಲಿನಲ್ಲೇ ಇದ್ದರೂ ವ್ಯರ್ಥವಾಗಿ 20 ವರ್ಷಗಳ ಕಾಲ ಹುಡುಕಾಟ ನಡೆಸಿದ ಪೊಲೀಸರನ್ನು ನ್ಯಾಯಾಲಯವು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದೆ.


20 ವರ್ಷಗಳ ಹಿಂದೆ ನಡೆದ ಕೊಲೆ ಘಟನೆ ಯಾವುದು?


1999 ರ ಜುಲೈ ತಿಂಗಳಲ್ಲಿ ಮುಂಬೈನ ಎಲ್ ಟಿ ಮಾರ್ಗ್ ಪ್ರದೇಶದಲ್ಲಿ ವಾಹಿದ್ ಅಲಿ ಖಾನ್ ಎಂಬುವರ ಮನೆಯ ಸಮೀಪದಲ್ಲಿ ಸಿದ್ದಿಕಿ ಮತ್ತು ಸಹ-ಆರೋಪಿಗಳು ವಾಹಿದ್ ಅಲಿ ಖಾನ್ ಅವರನ್ನು ಗುಂಡಿಕ್ಕಿ ಕೊಂದಿದ್ದರು. ನಂತರ ಇಬ್ಬರೂ ಅಪರಾಧ ಮಾಡಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದರು ಎಂದು ಪ್ರಾಸಿಕ್ಯೂಷನ್ ವಾದ ಮಾಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 2019ರ ಮೇ ತಿಂಗಳಲ್ಲಿ ಪೊಲೀಸರು ಮಹಿರ್ ಸಿದ್ದಿಕಿಯನ್ನು ಪತ್ತೆ ಹಚ್ಚಿ ಬಂಧನ ಮಾಡಿದ್ದರು. ಆರೋಪಿಯ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳು ದೊರೆತ ನಂತರ ಆರೋಪಪಟ್ಟಿ ಸಲ್ಲಿಸಿದ್ದರು. ತನಿಖೆಯ ವೇಳೆ, ಸಿದ್ದಿಕಿ ಮತ್ತು ಛೋಟಾ ಶಕೀಲ್ ಸೇರಿದಂತೆ ಆರು ಮಂದಿ ಭಾಗಿಯಾಗಿರುವುದು ಪೊಲೀಸರಿಗೆ ಕಂಡುಬಂದಿತ್ತು. ಅಲ್ಲದೆ, ಛೋಟಾ ಶಕೀಲ್‌ನ ನಿರ್ದೇಶನದ ಮೇರೆಗೆ ಈ ಅಪರಾಧ ನಡೆದಿದೆ ಎಂದು ಪೊಲೀಸರು ತಿಳಿಸಿದ್ದರು.


ಇದನ್ನೂ ಓದಿ: Pakistan: ಪಾಕ್​ ತಂಡದ ಕೋಚ್​ ಆಗಿ ಅಮೆರಿಕಾ ನೀಲಿ ತಾರೆ ಡ್ಯಾನಿ ಡೇನಿಯಲ್ಸ್! ‘ನೀವು ಭಾರೀ ರಸಿಕರು ಕಣ್ರೋ’ ಅಂತ ಕಾಲೆಳೆದ ನೆಟ್ಟಿಗರು!


ಆರೋಪಿಯನ್ನು ಖುಲಾಸೆಗೊಳಿಸಿದ ನ್ಯಾಯಾಲಯ


ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (MCOCA) ಪ್ರಕರಣಗಳ ವಿಶೇಷ ನ್ಯಾಯಾಧೀಶ ಎ.ಎಂ. ಪಾಟೀಲ್ ಅವರು 1999 ರಲ್ಲಿ ಬಾಂಬೆ ಅಮಾನ್ ಸಮಿತಿಯ ಅಧ್ಯಕ್ಷ ವಾಹಿದ್ ಅಲಿ ಖಾನ್ ಅವರನ್ನು ಹತ್ಯೆಗೈದ ಆರೋಪಿ ಮಾಹಿರ್ ಸಿದ್ದಿಕಿಯನ್ನು ಖುಲಾಸೆಗೊಳಿಸಿದ್ದಾರೆ. ಪ್ರಾಸಿಕ್ಯೂಷನ್ ವಾದದಲ್ಲಿ ನ್ಯಾಯಾಲಯವು ಅನೇಕ ವ್ಯತ್ಯಾಸಗಳನ್ನು ಕಂಡುಕೊಂಡ ಹಿನ್ನೆಲೆಯಲ್ಲಿ ಖುಲಾಸೆಗೊಳಿಸಲಾಗಿದೆ. ಮಾಹಿರ್ ಸಿದ್ದಿಕಿ ವಿರುದ್ಧ ಪೂರಕ ಆರೋಪಪಟ್ಟಿ ಸಲ್ಲಿಸುವ ಸಮಯದಲ್ಲಿ, ಘಟನೆಯ ದಿನಾಂಕದಿಂದ ಬಂಧಿಸುವವರೆಗೂ ಆರೋಪಿ ತಲೆಮರೆಸಿಕೊಂಡಿದ್ದ ಎಂದು ಪ್ರಾಸಿಕ್ಯೂಷನ್ ವಾದ ಮಾಡಿತ್ತು.
ಜೈಲಿನಲ್ಲೇ ಇದ್ದ ಆರೋಪಿಯನ್ನು ಪೊಲೀಸರು ಹುಡುಕಾಟ ನಡೆಸಿದ್ದು ಹೇಗೆ?


ಆದರೆ ಆರೋಪಿ 2014 ಮತ್ತು 2019 ರ ನಡುವೆ ಮತ್ತೊಂದು ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿದ್ದು, ಆರೋಪಿಯನ್ನು ಸಿಐಡಿ ಬಂಧಿಸಿತ್ತು ಎಂದು ತಿಳಿದುಬಂದಿದೆ. ಇಷ್ಟೆಲ್ಲ ಆಗಿದ್ದರೂ ಜೈಲಿನಲ್ಲೇ ಇದ್ದ ಆರೋಪಿಯನ್ನು ಪೊಲೀಸರು ಹುಡುಕಾಟ ನಡೆಸಿದ್ದು ಹೇಗೆ ಎಂದು ನ್ಯಾಯಾಲಯ ಪ್ರಶ್ನಿಸಿದೆ.


ಇದನ್ನೂ ಓದಿ: BBC Documentary: ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ನನಗೇನೂ ಗೊತ್ತಿಲ್ಲ ಎಂದ ಅಮೆರಿಕಾ ಸರ್ಕಾರದ ವಕ್ತಾರ!

Published by:Avinash K
First published: