Viral News : ಚರಂಡಿಯಲ್ಲಿ ಬಿದ್ದಿದ್ದ ನವಜಾತ ಶಿಶು, ಕಂದಮ್ಮನ ಪ್ರಾಣ ಉಳಿಸಿದ ಬೀದಿ ಬೆಕ್ಕುಗಳು!

Viral News :ಬೀದಿ ಬೆಕ್ಕುಗಳು ಆ ಚರಂಡಿಯ ಬಳಿ ಹೋಗಿ ಜೋರಾಗಿ ಕೂಗಿ, ಭಿನ್ನವಾಗಿ ತಮ್ಮ ವರ್ತನೆಯನ್ನು ತೋರಸಲು ಪ್ರಾರಂಭಿಸಿವೆ. ಅದನ್ನು ನೋಡಿದ ಸ್ಥಳೀಯರು ಕುತೂಹಲದಿಂದ ಅಲ್ಲಿಗೆ ಹೋದಾಗ ಪುಟ್ಟ ಮಗು ಪತ್ತೆಯಾಗಿದೆ.

ನವಜಾತ ಶಿಶು ರಕ್ಷಿಸಿದ ಪೊಲೀಸರು

ನವಜಾತ ಶಿಶು ರಕ್ಷಿಸಿದ ಪೊಲೀಸರು

  • Share this:
ಈ ಕಾಲದಲ್ಲಿ ಮನುಷ್ಯ(Humans) ಮತ್ತೊಬ್ಬ ಮನುಷ್ಯನನ್ನು ನಂಬಲು ಹಿಂದೆ ಮುಂದೆ ನೋಡುತ್ತಾನೆ. ಪರಿಸ್ಥಿತಿ ಹಾಗೇ ಆಗಿದೆ. ಎಲ್ಲರೂ ಸ್ವಾರ್ಥ(Selfish)ದ ಬದುಕು ನಡೆಸುತ್ತಿದ್ದೇವೆ. ಆದರೆ ಪ್ರಾಣಿಗಳು(Animals) ಹಾಗಲ್ಲ. ಮಾತುಬರದಿದ್ದರೂ ಅದರ ಪ್ರೀತಿ ಅಪಾರ. ಕಷ್ಟದ ಸಮಯದಲ್ಲಿ ಅವುಗಳಿಗೆ ಸಹಾಯ(Help) ಮಾಡುವುದು ಹೇಗೆ ಎಂದು ತಿಳಿದುರುತ್ತೆ. ಅದರಲ್ಲೂ ಸಾಕು  ಪ್ರಾಣಿಗಳು ಒಂದೊತ್ತು ಊಟ(Food) ಹಾಕಿದರೆ ಸಾಕು, ಅದು ಸಾಯುವವರೆಗೂ ನಿಮಗೆ ಚಿರಋಣಿಯಾಗಿರುತ್ತೆ. ನೀವು ಎಲ್ಲೆ ಹೋದರು ನಿಮ್ಮನ್ನು ಹಿಂಬಾಲಿಸಿಕೊಂಡು ಬರುತ್ತೆ. ಆದರೆ ಇಲ್ಲಿ ಬೀದಿ ಬೆಕ್ಕುಗಳು(Cats) ಮಾಡಿರುವ ಕೆಲಸ ಎಂಥದ್ದು ಎಂದು ಕೇಳಿದರ, ನಿಮ್ಮ ಕಣ್ಣು ತೇವವಾಗುತ್ತೆ. ಬೆಕ್ಕುಗಳು ಹೇಳಿದ ಮಾತು ಕೇಳುವುದಿಲ್ಲ. ಮಾಲೀಕ(Owner)ನಿಗೆ ಮೋಸ ಮಾಡುತ್ತೆ ಅಂತೆಲ್ಲ ಕೇಳುರಿತ್ತೀರಾ. ಆದರೆ ಇಲ್ಲಿ ನಿಜಕ್ಕೂ ಆ ಬೆಕ್ಕುಗಳು ಸಾಕ್ಷಾತ್​ ಪರಮಾತ್ಮ ರೂಪದಲ್ಲಿ ಬಂದಿತ್ತು. ಯಾರೂ ಊಹಿಸಲಾಗದ ಅಚ್ಚರಿ(Surprise)ಯೊಂದು ಇಲ್ಲಿ ನಡೆದಿತ್ತು. ಮನುಷ್ಯರ ಕಣ್ಣಿಗೆ ಕಾಣಿಸದ್ದು, ಈ ಬೆಕ್ಕುಗಳ ಕಣ್ಣಿಗೆ ಕಾಣಿಸಿತ್ತು. ಅದೇನು ಅಂತೀರಾ ಮುಂದೆ ನೀವೇ ನೋಡಿ..

ಚರಂಡಿಯಲ್ಲಿ ಬಿದ್ದಿದ್ದ ನವಜಾತು ಶಿಶು

ಮನುಷ್ಯರು ಎಷ್ಟು ಕ್ರೂರಿಗಳಾಗಿದ್ದಾರೆ ಎಂದು ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ. ಮೃಗಗಳಗಿಂತ ಕೀಳಾಗಿ ವರ್ತಿಸುತ್ತಾರೆ. ಮುಂಬೈನಲ್ಲೂ ಇಂಥದ್ದೇ ಘಟನೆ ನಡೆದಿದೆ. ಮಗುವನ್ನು ಮಾಡಿಕೊಂಡರೇ ಸಾಲದು, ಅವರನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡುವ ಜವಾಬ್ದಾರಿ ತಂದೆ-ತಾಯಿ ಮೇಲೆ ಇರುತ್ತೆ. ಆದರೆ ಮುಂಬೈನ ಪಂತ್​ನಗರದ ಚರಂಡಿಯಲ್ಲಿ ಮಹಾತಾಯಿ ಮಗುವನ್ನು ಹೆತ್ತು, ಇಲ್ಲಿ ಎಸೆದು ಹೋಗಿದ್ದಾಳೆ. ಬಟ್ಟೆಯಲ್ಲಿ ಸುತ್ತಿ ಹಸುಗೂಸು ಎಂದು ಕೇರ್​ ಮಾಡದೇ ಮೋರಿಯಲ್ಲಿ ಎಸೆದು ಹೋಗಿದ್ದಾಳೆ. ಏನು ಅರಿಯದ ವಯಸ್ಸಿನಲ್ಲಿ, ಈ ಕಂದಮ್ಮ ಮೋರಿಯಲ್ಲಿ ಬಿದ್ದು ನರಳಾಟ ನಡೆಸಿದೆ. ಇಡೀ ರಾತ್ರಿ ಅಳುತ್ತಾ, ಚಿರುತ್ತಾ ಕೊನೆಗೆ ಸುಸ್ತಾಗಿ ಸುಮ್ಮನೆ ಮಲಗಿದೆ.

ಇದನ್ನು ಓದಿ : ನಾಲ್ಕು ಕಿವಿಗಳ ಬೆಕ್ಕನ್ನು ಎಂದಾದರೂ ಕಂಡಿದ್ದೀರಾ? ಇಲ್ಲಿದೆ ನೋಡಿ!

ಮೋರಿಯಲ್ಲಿದ್ದ ಮಗು ಪತ್ತೆ ಹಚ್ಚಿದ ಬೆಕ್ಕುಗಳು

ಹೀಗೆ ಚರಂಡಿಯಲ್ಲಿದ್ದ ಮಗು ಯಾರ ಕಣ್ಣಿಗೂ ಬಿದ್ದಿಲ್ಲ. ಅತ್ತು, ಅತ್ತು ಸುಸ್ತಾಗಿ ಮಲಗಿಬಿಟ್ಟಿತ್ತು. ಆದರೆ, ಬೀದಿ ಬೆಕ್ಕುಗಳು ಆ ಕಂದಮನನ್ನು ಪತ್ತೆ ಹಚ್ಚಿವೆ.  ಅಲ್ಲೇ ರಸ್ತೆ ಮೇಲೆ ತಿರುಗುವ ಬೀದಿ ಬೆಕ್ಕುಗಳು ಆ ಚರಂಡಿಯ ಬಳಿ ಹೋಗಿ ಜೋರಾಗಿ ಕೂಗಿ, ಭಿನ್ನವಾಗಿ ತಮ್ಮ ವರ್ತನೆಯನ್ನು ತೋರಸಲು ಪ್ರಾರಂಭಿಸಿವೆ. ಅದನ್ನು ನೋಡಿದ ಸ್ಥಳೀಯರು ಕುತೂಹಲದಿಂದ ಅಲ್ಲಿಗೆ ಹೋದಾಗ ಪುಟ್ಟ ಮಗು ಪತ್ತೆಯಾಗಿದೆ ಎಂದು ಮುಂಬೈ ಪೊಲೀಸರು ಟ್ವೀಟ್​ ಮಾಡಿದ್ದಾರೆ.



ಪೊಲೀಸರಿಗೆ ಕರೆ ಮಾಡಿದ್ದ ಸ್ಥಳೀಯರು

ಬಟ್ಟೆಯಲ್ಲಿ ಸುತ್ತಿಕೊಂಡಿದ್ದ ನವಜಾತ ಶಿಶುವನ್ನು ನೋಡುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸ್ ನಿರ್ಭಯಾ ಸ್ಕ್ವಾಡ್​​ನ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮಗುವನ್ನು ರಕ್ಷಿಸಿದ್ದಾರೆ. ನಂತರ ಅದನ್ನು ರಾಜಾವಾಡಿಗೆ ಕರೆದೊಯ್ಯದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದೂ ಮುಂಬೈ ಪೊಲೀಸರು ತಿಳಿಸಿದ್ದಾರೆ. ಹಾಗೇ ಪೊಲೀಸ್​ ಸಿಬ್ಬಂದಿ ಆ ಮುದ್ದಾದ ಮಗುವನ್ನು ಎತ್ತಿಕೊಂಡಿರುವ ಫೋಟೋವನ್ನೂ ಟ್ವಿಟರ್​​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಸದ್ಯ ಮಗುವಿನ ಪಾಲಕರ ಪತ್ತೆ ಕಾರ್ಯವೂ ಶುರುವಾಗಿದೆ.

ಇದನ್ನು ಓದಿ : ಈ ಮೀನಿಗೆ 555 ಹಲ್ಲು, ಪ್ರತಿ ದಿನ ಬೀಳುತ್ತೆ 20 ಹಲ್ಲು

ಬೀದಿ ಬೆಕ್ಕುಗಳ ಕೆಲಸಕ್ಕೆ ನೆಟ್ಟಿಗರ ಮೆಚ್ಚುಗೆ

ಇನ್ನೂ ಈ ಬಗ್ಗೆ ಟ್ವೀಟ್​ ಮಾಡುತ್ತಿದ್ದಂತೆ ನೆಟ್ಟಿಗರು ಬೆಕ್ಕುಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ರೀತಿ ಪ್ರಾಣಿಗಳು ಪ್ರತಿ ಭಾರಿ ಮನುಷ್ಯನಿಗೆ ಒಂದಲ್ಲ ಒಂದು ರೂಪದಲ್ಲಿ ಸಹಾಯ ಮಾಡುತ್ತಲೇ ಇರುತ್ತವೆ. ಆದರೆ ಮನುಷ್ಯ ಮಾತ್ರ ಅವುಗಳ ಮೇಲೆ ಚೂರು ಕನಿಕರ ತೋರದೆ ಹಲ್ಲೆ ಮಾಡುತ್ತಾನೆ. ಇನ್ನು ಮುಂದೆಯಾದರು ಪ್ರಾಣಿಗಳ ಮೇಲೆ ಹಲ್ಲೆ ಮಾಡುವುನದನ್ನ ನಿಲ್ಲಿಸಲಿ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ.
Published by:Vasudeva M
First published: