ಮುಂಬೈ(ಜ. 20): ಮಹಾರಾಷ್ಟ್ರ ರಾಜಧಾನಿ ಹಾಗೂ ವಾಣಿಜ್ಯ ನಗರಿಯಲ್ಲಿ ಅಲ್ಲಿನ ಪೊಲೀಸರು ಹೈ-ಟೆಕ್ ವೇಶ್ಯಾವಾಟಿಕೆ ಜಾಲವೊಂದನ್ನು ಭೇದಿಸಿದ್ದಾರೆ. ಪ್ರತಿಷ್ಠಿತ ಪ್ರದೇಶವೊಂದರಲ್ಲಿನ ಹೈಟೆಕ್ ಹೋಟೆಲ್ನಲ್ಲಿ ಮಾಂಸದಂಧೆ ನಡೆಯುತ್ತಿರುವ ಸುಳಿವು ಪಡೆದ ಕ್ರೈಮ್ ಇಂಟೆಲಿಜೆನ್ಸ್ ಘಟಕ ತತ್ಕ್ಷಣವೇ ಕಾರ್ಯಪ್ರವೃತ್ತಗೊಂಡು ಕಾರ್ಯಾಚರಣೆ ನಡೆಸಿದೆ. ದಂಧೆಯಲ್ಲಿ ಬಳಕೆಯಾಗುತ್ತಿದ್ದ ಎಂಟು ಮಂದಿ ಯುವತಿಯರನ್ನು ಪೊಲೀಸರು ರಕ್ಷಿಸಿದ್ದಾರೆ.
ಜುಹು ಬೀಚ್ನಲ್ಲಿನ ಪ್ರತಿಷ್ಠಿತ ಹೋಟೆಲ್ನಲ್ಲಿ ಮಂಗಳವಾರ ಮುಂಬೈ ಪೊಲೀಸರು ರೇಡ್ ನಡೆಸಿ ಈ ಜಾಲವನ್ನು ಪತ್ತೆ ಮಾಡಿ ಮೂವರನ್ನು ಬಂಧಿಸಿದ್ದಾರೆ. ರಕ್ಷಣೆಯಾದ ಎಂಟು ಯುವತಿಯರು ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡಲ್ಪಟ್ಟಿರುವುದು ತಿಳಿದುಬಂದಿದೆ. ಈಗ ಈ ಯುವತಿಯರನ್ನು ಪುನಶ್ಚೇತನ ಗೃಹಕ್ಕೆ ಕಳುಹಿಸಲಾಗಿದೆ.
ಇದನ್ನೂ ಓದಿ: Gang Rape: ದಲಿತ ಯುವತಿ ಮೇಲೆ ಅತ್ಯಾಚಾರವೆಸಗಿ, ನೇಣು ಹಾಕಿ ಕೊಂದ ಕಾಮುಕರು
ಮುಂಬೈನಲ್ಲಿ ವೇಶ್ಯಾವಾಟಿಕೆ ಎಗ್ಗಿಲ್ಲದೆ ನಡೆಯುತ್ತದೆ. ವರ್ಷದ ಹಿಂದೆ ಮಾಂಸದಂಧೆ ನಡೆಯುತ್ತಿದ್ದ ಅನಧಿಕೃತ ವೇಶ್ಯಾಗೃಹವೊಂದರಲ್ಲಿ ಪೊಲೀಸರು ರೇಡ್ ಮಾಡಿ 29 ಮಂದಿಯನ್ನು ಬಂಧಿಸಿದ್ದರು. 135 ಮಹಿಳೆಯರನ್ನು ರಕ್ಷಣೆ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ