• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Lockdown ನಡುವೆ ಗರ್ಲ್​ಫ್ರೆಂಡ್​​ನ ಮೀಟ್ ಮಾಡ್ಬೇಕು, ಏನು ಮಾಡ್ಲಿ? ಎಂದವನಿಗೆ ಸಖತ್ ಉತ್ತರ ನೀಡಿದ ಮುಂಬೈ ಪೋಲೀಸ್

Lockdown ನಡುವೆ ಗರ್ಲ್​ಫ್ರೆಂಡ್​​ನ ಮೀಟ್ ಮಾಡ್ಬೇಕು, ಏನು ಮಾಡ್ಲಿ? ಎಂದವನಿಗೆ ಸಖತ್ ಉತ್ತರ ನೀಡಿದ ಮುಂಬೈ ಪೋಲೀಸ್

ಟ್ವಿಟರ್​

ಟ್ವಿಟರ್​

ಮುಂಬೈನ ಯುವಪ್ರೇಮಿಯೊಬ್ಬ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಲಾಕ್ಡೌನ್ ಟೈಮಲ್ಲಿ ತನ್ನ ಪ್ರಿಯತಮೆಯನ್ನು ಭೇಟಿಯಾಗ್ಬೇಕು ಎನಿಸುತ್ತಿದೆ, ಏನ್ ಮಾಡ್ಲಿ? ಎಂದು ಪೋಲೀಸರನ್ನೇ ಕೇಳಿದ್ದಾನೆ.

  • Share this:

ಮುಂಬೈ: ಲಾಕ್​ಡೌನ್​ ನಿಂದ ಎಲ್ಲರಿಗೂ ಒಂದಲ್ಲಾ ಒಂದು ಸಮಸ್ಯೆ ಆಗೇ ಆಗುತ್ತೆ. ಆದ್ರೆ ಕೊರೊನಾ ಆರ್ಭಟವನ್ನು ಹತ್ತಿಕ್ಕೋದಕ್ಕೆ ಇದು ಅನಿವಾರ್ಯ ಎನ್ನುವ ಕಾರಣಕ್ಕೆ ದೇಶದ ನಾನಾ ಭಾಗಗಳಲ್ಲಿ ಲಾಕ್​ಡೌನ್ ಘೋಷಿಸಲಾಗಿದೆ. ಆದ್ರೆ ಎಲ್ಲರಿಗಿಂತ ಹೆಚ್ಚು ಇದ್ರಿಂದ ಸಮಸ್ಯೆಯಾಗ್ತಿರೋದು ತಮಗೆ ಎನ್ನುತ್ತಿದ್ದಾರೆ ಪ್ರೇಮಿಗಳು. ಮುಂಬೈನ ಯುವಪ್ರೇಮಿಯೊಬ್ಬ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಲಾಕ್​ಡೌನ್ ಟೈಮಲ್ಲಿ ತನ್ನ ಪ್ರಿಯತಮೆಯನ್ನು ಭೇಟಿಯಾಗ್ಬೇಕು ಎನಿಸುತ್ತಿದೆ, ಏನ್ ಮಾಡ್ಲಿ? ಎಂದು ಪೋಲೀಸರನ್ನೇ ಕೇಳಿದ್ದಾನೆ.


ಟ್ವಿಟರ್​ನಲ್ಲಿ ಮುಂಬೈ ಪೋಲೀಸರ ಎದುರು ಈ ಪ್ರಶ್ನೆ ಇಟ್ಟಿರುವಾತನ ಹೆಸರು ಅಶ್ವಿನ್ ವಿನೋದ್. ಮುಂಬೈನಲ್ಲಿ ತುರ್ತು ಕೆಲಸಗಳಿಗಾಗಿ ಲಾಕ್​ಡೌನ್ ಸಂದರ್ಭದಲ್ಲಿ ಹೊರಗೆ ಓಡಾಡುವವರಿಗೆ ಬೇರೆ ಬೇರೆಯಾದ ಸ್ಟಿಕರ್​ಗಳನ್ನು ನೀಡಲಾಗ್ತಿದೆ. ಹಾಗಾಗಿ “ನಾನು ಹೊರಗೆ ಹೋಗಿ ನನ್ನ ಗೆಳತಿಯನ್ನು ಭೇಟಿಯಾಗಲು ಯಾವ ಸ್ಟಿಕರ್ ಬಳಸಬೇಕು?ನಾನು ಅವಳನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದೀನಿ” ಎಂದು ಟ್ವೀಟಿಸಿದ್ದಾರೆ.



ಮುಂಬೈ ಪೋಲೀಸ್ ಟ್ವಿಟರ್​ನಲ್ಲಿ ಇಂಥಾ ಪ್ರಶ್ನೆಗಳಿಗೆಲ್ಲಾ ಬೊಂಬಾಟ್ ಉತ್ತರಗಳನ್ನು ನೀಡಿ ಭಾರೀ ಫೇಮಸ್ ಆಗಿದ್ದಾರೆ. ಈತನ ಬೇಡಿಕೆಗೂ ಅದ್ಭುತವಾಗಿ ಉತ್ತರಿಸಿದ್ದಾರೆ. “ನಿಮಗೆ ಇದು ಅತ್ಯಂತ ಅಗತ್ಯ ಕೆಲಸ ಎನ್ನುವುದು ನಮಗೆ ಅರ್ಥವಾಗುತ್ತದೆ. ಆದರೆ ನಮ್ಮ ಅಗತ್ಯ ಮತ್ತು ತುರ್ತು ಸೇವೆಗಳ ಅಡಿಯಲ್ಲಿ ನಿಮ್ಮ ಬೇಡಿಕೆ ಬರುವುದಿಲ್ಲ! ದೂರದಲ್ಲಿದ್ದರೆ ಹೃದಯಗಳು ಮತ್ತಷ್ಟು ಹತ್ತಿರವಾಗುತ್ತವೆ, ಈಗ ತಾವು ಆರೋಗ್ಯದಿಂದಿದ್ದೀರಿ. ವಿ.ಸೂ: ನಿಮಗಿಬ್ಬರಿಗೂ ಇಡೀ ಜೀವನ ಜೊತೆಯಾಗಿರಿ ಎಂದು ಹಾರೈಸುತ್ತೇವೆ. ಇದು ಕೇವಲ ಒಂದು ಹಂತ ಅಷ್ಟೇ” ಎಂದು ಉತ್ತರಿಸಿದ್ದಾರೆ.



ಈ ಪೋಸ್ಟ್ ಸದ್ಯ ವೈರಲ್ ಆಗಿದ್ದು ಮುಂಬೈ ಪೋಲೀಸರ ಜಾಣತನವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.






ಇಂಥಾ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಟ್ವೀಟ್​ಗಳ ಮೂಲಕ ಜನರಿಗೆ ಮಾಹಿತಿ ಮತ್ತು ಮನರಂಜನೆ ಎರಡನ್ನೂ ನೀಡ್ತಿದ್ದಾರೆ ಮುಂಬೈ ಪೋಲೀಸರು.

Published by:Soumya KN
First published: