Raj Kundra: ಅಶ್ಲೀಲ ಚಿತ್ರಗಳ ಪ್ರಕಟಣೆ ಮತ್ತು ನಿರ್ಮಾಣಕ್ಕೆ ಸಂಬಂಧಿಸಿದಂತೆ ಚಾರ್ಜ್‌ಶೀಟ್ ಸಲ್ಲಿಕೆ

ಚಾರ್ಜ್‌ಶೀಟ್ ನಲ್ಲಿ ನಟಿಯರಾದ ಶಿಲ್ಪಾ ಶೆಟ್ಟಿ, ಶೆರ್ಲಿನ್ ಚೋಪ್ರಾ ಸೇರಿದಂತೆ 43 ಸಾಕ್ಷಿಗಳ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

ರಾಜ್​ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ

ರಾಜ್​ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ

  • Share this:
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯವರ  ಪತಿ (Shilpa Shetty Husband ) ಹಾಗೂ ಉದ್ಯಮಿ ರಾಜ್ ಕುಂದ್ರಾ (Businessman Raj Kundra) ಅವರ ವಿರುದ್ಧ ಕೇಳಿಬಂದಿರುವ ಅಶ್ಲೀಲ ಚಿತ್ರಗಳ ಪ್ರಕಟಣೆ ಮತ್ತು ನಿರ್ಮಾಣಕ್ಕೆ ಸಂಬಂಧಿಸಿದಂತೆ (Charges related to publishing and production of pornographic films) ಮುಂಬೈ ಅಪರಾಧ ವಿಭಾಗವು ನ್ಯಾಯಾಲಯಕ್ಕೆ 1,500 ಪುಟಗಳ ಪೂರಕ ಚಾರ್ಜ್‌ಶೀಟ್ (Charge Sheet) ಸಲ್ಲಿಸಿದೆ‌. ಈ ಚಾರ್ಜ್‌ಶೀಟ್ ನಲ್ಲಿ ನಟಿಯರಾದ ಶಿಲ್ಪಾ ಶೆಟ್ಟಿ, ಶೆರ್ಲಿನ್ ಚೋಪ್ರಾ (Sharlin Chopra) ಸೇರಿದಂತೆ 43 ಸಾಕ್ಷಿಗಳ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

ಅಶ್ಲೀಲ ಚಿತ್ರಗಳ ಪ್ರಕಟಣೆ ಮತ್ತು ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಮತ್ತಿತರರ ವಿರುದ್ಧ ಫೆಬ್ರವರಿಯಲ್ಲಿ ಎಫ್ಐಆರ್ (FIR) ದಾಖಲಾಗಿತ್ತು. ಈ ಎಫ್ಐಆರ್ ಆಧರಿಸಿ ಮುಂಬೈ ಪೊಲೀಸರು (Mumbai Police) ಜುಲೈ 19 ರಂದು ರಾಜ್ ಕುಂದ್ರಾ ಸೇರಿದಂತೆ 11 ಜನರನ್ನು ಬಂಧಿಸಿದ್ದರು. ರಾಜ್ ಕುಂದ್ರಾ ಬಂಧನಕ್ಕೆ ಕಾರಣವಾಗುವ ಮೊದಲು ಐದು ತಿಂಗಳ ಸುದೀರ್ಘವಾದ ತನಿಖೆ ನಡೆಸಿ ಆರೋಪಿಗಳು ಅಶ್ಲೀಲ ವಿಷಯವನ್ನು ಹಾಟ್​ಹಿಟ್​ ಚಲನಚಿತ್ರಗಳು ಮತ್ತು ಹಾಟ್‌ಶಾಟ್‌ಗಳಂತಹ ಚಂದಾದಾರಿಕೆ ಆಧಾರಿತ ಮೊಬೈಲ್ ಅಪ್ಲಿಕೇಶನ್‌ಗಳು ಹಾಗೂ ಹಾಟ್​ಹಿಟ್ ಮೂವೀಸ್, ನ್ಯೂಫ್ಲಿಕ್ಸ್ ಮತ್ತು ಎಸ್ಕೇಪನೋವ್‌ಗಳ ಮೂಲಕ ವಿತರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲಾಗಿತ್ತು.

Raj Kundra porn case: HotShots app wanted bold, 'topless' artists for project 'Khwaab', explosive email surfaces.
ರಾಜ್ ಕುಂದ್ರಾ


ಆರೋಪಿಗಳು ಚಲನಚಿತ್ರ (Cinema) ಅಥವಾ ವೆಬ್ ಸರಣಿಗಳಲ್ಲಿ (Web Seris) ಅವಕಾಶದ ದೊಡ್ಡ ನಿರೀಕ್ಷೆಯಲ್ಲಿದ್ದ ಕಲಾವಿದರಿಗೆ ಬೆದರಿಕೆ ಹಾಕಿದ್ದರು ಎಂದು ಖಚಿತಪಡಿಸಿಕೊಳ್ಳಲಾಗಿತ್ತು. ಈಗ ಚಾರ್ಜ್‌ಶೀಟ್ ನಲ್ಲಿ ಇವೆಲ್ಲವನ್ನೂ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ನಡೆದ ಘಟಾನವಳಿಗಳ ಸರಣಿ (Time Line) ಇಲ್ಲಿದೆ.

ಜುಲೈ 19: ಅಶ್ಲೀಲ ಚಿತ್ರಗಳ ಪ್ರಕಟಣೆ ಮತ್ತು ನಿರ್ಮಾಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರಿಂದ ರಾಜ್ ಕುಂದ್ರಾ ಸೇರಿ 11 ಜನರ ಬಂಧನ.

ಜುಲೈ 20: ಮುಂಬೈ ಪೋಲಿಸ್‌ನ ಕ್ರೈಂ ಬ್ರಾಂಚ್‌ನ ಪ್ರಾಪರ್ಟಿ ಸೆಲ್ ರಾಜ್ ಕುಂದ್ರಾ ಅವರನ್ನು ಜೆಜೆ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದಿತು. ಅಲ್ಲಿಂದ ನಂತರ ಅವರನ್ನು ಮುಂಬೈ ಪೊಲೀಸ್ ಆಯುಕ್ತರ ಕಚೇರಿಗೆ ಕರೆದೊಯ್ಯಲಾಯಿತು. ಅವರು ರಾತ್ರಿಯಿಡೀ ಅಪರಾಧ ವಿಭಾಗದ ವಶದಲ್ಲಿದ್ದರು. ಅವರನ್ನು ಜುಲೈ 20 ರಂದು ಕಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಜುಲೈ 22: ರಾಜ್ ಕುಂದ್ರಾ ಅವರ ಆಪ್ತ ಸಹಾಯಕ (PA) ಉಮೇಶ್ ಕಾಮತ್ ಚಿತ್ರೀಕರಿಸಿದ 70 ವಿಡಿಯೋಗಳನ್ನು ಕ್ರೈಂ ಬ್ರಾಂಚ್ ಪತ್ತೆ ಮಾಡಿತು.

ಜುಲೈ 23: ರಾಜ್ ಕುಂದ್ರಾ ಅವರ ಪತ್ನಿ ಶಿಲ್ಪಾ ಶೆಟ್ಟಿ ತಮ್ಮ ಪತಿಯ ವ್ಯವಹಾರಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಅವರನ್ನು ಅಪರಾಧ ವಿಭಾಗವು ಪ್ರಶ್ನಿಸಿತು. ವಿಚಾರಣೆ ವೇಳೆ ಶಿಲ್ಪಾಶೆಟ್ಟಿ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ.

ಜುಲೈ 27: ರಾಜ್ ಕುಂದ್ರಾ ಅವರ ಪೋಲಿಸ್ ಕಸ್ಟಡಿ ಮುಕ್ತಾಯ. ಬಳಿಕ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು.

ಇದನ್ನೂ ಓದಿ: ಸ್ಯಾಂಡಲ್​ವುಡ್​ ಗ್ಲಾಮರಸ್​ ಗೊಂಬೆ Ramya ಲೆಟೆಸ್ಟ್​ ಫೋಟೋಗಳಿಗೆ ಅಭಿಮಾನಿಗಳು ಫಿದಾ..!

ಜುಲೈ 29: ರಾಜ್ ಕುಂದ್ರಾ ತನ್ನ ಬಂಧನಕ್ಕೆ ಮುಂಚಿತವಾಗಿ ಪೊಲೀಸರು ಸಮನ್ಸ್ ನೀಡಲಿಲ್ಲ ಎಂಬ ಕಾರಣಕ್ಕೆ ಆತನನ್ನು ಮುಂಬೈ ಪೋಲಿಸರು ಬಂಧಿಸುವುದನ್ನು ಪ್ರಶ್ನಿಸಿ ಮನವಿಯನ್ನು ಸಲ್ಲಿಸಿದರು.

ಆಗಸ್ಟ್ 2: ಯಾವುದೇ ಕಾನೂನು ನೋಟಿಸ್ ನೀಡದ ಕಾರಣ ತಮ್ಮ ಬಂಧನ ಕಾನೂನುಬಾಹಿರ ಎಂದು ರಾಜ್ ಕುಂದ್ರಾ ಮತ್ತು ಆತನ ಸಹಚರ ರಯಾನ್ ಥಾರ್ಪೆ ಸಲ್ಲಿಸಿದ ಮನವಿಯ ಮೇಲೆ ಬಾಂಬೆ ಹೈಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿತು. ಆಗಸ್ಟ್ 5: ಮ್ಯಾಜಿಸ್ಟ್ರೇಟ್ ಕೋರ್ಟ್ ರಾಜ್ ಕುಂದ್ರಾ ಮತ್ತು ಅವರ ಸಹವರ್ತಿ ಥೋರ್ಪೆಯ ಜಾಮೀನು ಅರ್ಜಿಯ ತಿರಸ್ಕರಿಸಿತು.

Actress Gehana Vasisth supports Raj Kundra and says we did bold movies not porn know the difference.
ರಾಜ್ ಕುಂದ್ರಾ - ಗೆಹೆನಾ ವಸಿಷ್ಟ್


ಆಗಸ್ಟ್ 8: ಬಾಂಬೆ ಹೈಕೋರ್ಟ್ ಕೂಡ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕಸ್ಟಡಿಯಿಂದ ಬಿಡುಗಡೆ ಕೋರಿ ನೀಡಿದ್ದ ರಿಮಾಂಡ್ ಆದೇಶವನ್ನು ಎತ್ತಿಹಿಡಿಯಿತು.

ಆಗಸ್ಟ್ 13: ರಾಜ್ ಕುಂದ್ರಾ ಪ್ರಮುಖ ಆರೋಪಿಯಾಗಿರುವ ಪೋರ್ನ್ ರಾಕೆಟ್ ಪ್ರಕರಣದ ತನಿಖೆಗಾಗಿ ಮುಂಬೈ ಪೊಲೀಸ್ ಅಪರಾಧ ವಿಭಾಗವು ವಿಶೇಷ ತನಿಖಾ ತಂಡವನ್ನು (SIT) ರಚಿಸಿತು.

ಆಗಸ್ಟ್ 18: ಅಶ್ಲೀಲ ಚಲನಚಿತ್ರಗಳ ರಾಕೆಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಕುಂದ್ರಾ ಬಂಧನದಿಂದ ಮಧ್ಯಂತರ ರಕ್ಷಣೆಯನ್ನು ನೀಡಿತು.

ಇದನ್ನೂ ಓದಿ: Hrithik Roshan: ಹೃತಿಕ್​ ರೋಷನ್​ ಹಾಲಿವುಡ್​ ಎಂಟ್ರಿ: ಸ್ಪೈ ಪಾತ್ರದಲ್ಲಿ ಬಾಲಿವುಡ್ ಹಂಕ್​..!

ಆಗಸ್ಟ್ 25: ಅಶ್ಲೀಲ ಚಲನಚಿತ್ರಗಳ ರಾಕೆಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಉದ್ಯಮಿ ಕುಂದ್ರಾ ಮತ್ತು ಆತನ ಸಹವರ್ತಿ ಉಮೇಶ್ ಕಾಮತ್ ಅವರಿಗೆ ಸೆಪ್ಟೆಂಬರ್ 8 ರವರೆಗೆ ಬಂಧನದಿಂದ ಮಧ್ಯಂತರ ರಕ್ಷಣೆಯನ್ನು ಮುಂದುವರಿಸಿತು.

ಸೆಪ್ಟೆಂಬರ್ 13: ಬಾಂಬೆ ಹೈಕೋರ್ಟ್ ಸೈಬರ್ ಕ್ರೈಂ ಸೆಲ್ ನಿಂದ ದಾಖಲಾಗಿರುವ ಆಪಾದಿತ ಪೋರ್ನ್ ಫಿಲ್ಮ್ ರಾಕೆಟ್ ಪ್ರಕರಣದಲ್ಲಿ ಸೆಪ್ಟೆಂಬರ್ 20 ರವರೆಗೆ ಬಂಧನದ ವಿರುದ್ಧ ರಕ್ಷಣೆ ವಿಸ್ತರಿಸಿತು.

ಸೆಪ್ಟೆಂಬರ್ 15: ರಾಜ್ ಕುಂದ್ರಾ ಮತ್ತು ಸಹಚರರ ವಿರುದ್ಧ ಅಶ್ಲೀಲ ಚಲನಚಿತ್ರಗಳ ಪ್ರಕರಣದಲ್ಲಿ ಮುಂಬೈ ಪೊಲೀಸರು ರಾಜ್ ಕುಂದ್ರಾ ಮತ್ತು ಆತನ ಸಹವರ್ತಿ ರಯಾನ್ ಥಾರ್ಪ್ ವಿರುದ್ಧದ ಸುಮಾರು 1,500 ಪುಟಗಳ ಚಾರ್ಜ್ ಶೀಟ್ ಅನ್ನು ಅಪರಾಧ ವಿಭಾಗವು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಯಿತು. ಚಾರ್ಜ್‌ಶೀಟ್ ನಲ್ಲಿ ರಾಜ್ ಕುಂದ್ರಾ ಅವರನ್ನು ಪ್ರಕರಣದ "ಮುಖ್ಯ ಸಂಚಾಲಕ" (Main facilitator) ಎಂದು ಉಲ್ಲೇಖಿಸಲಾಗಿದೆ.
Published by:Anitha E
First published: