ಸುಶಾಂತ್ ಪ್ರಕರಣಕ್ಕೆ ಟ್ವಿಸ್ಟ್‌; ಸಾವಿಗೆ ಕಾರಣ ನಟನ ಸಹೋದರಿ ಪ್ರಿಯಾಂಕ, ನಟಿ ರಿಯಾ ದೂರಿನ ಅನ್ವಯ ಕೇಸ್ ದಾಖಲು

ನಟಿ ರಿಯಾ ಈ ದೂರಿನ ಅನ್ವಯ ಸುಶಾಂತ್ ಸಿಂಗ್ ಸಹೋದರಿ ಪ್ರಿಯಾಂಕ ಸಿಂಗ್ ಮತ್ತು ವೈದ್ಯ ತರುಣ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈ ಮೂಲಕ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ದಿಕ್ಕು ಬದಲಿಸಿದೆ. ಈಗಾಗಲೇ ಸುಶಾಂತ್ ಸಿಂಗ್ ಪ್ರಕರಣಗಳನ್ನು ಹೆಚ್ಚಿನ ತನಿಖೆಗಾಗಿ ಸಿಬಿಐಗೂ ವಹಿಸಲಾಗಿದೆ.

ನಟ ಸುಶಾಂ‌ತ್-ರಿಯಾ ಚಕ್ರವರ್ತಿ .

ನಟ ಸುಶಾಂ‌ತ್-ರಿಯಾ ಚಕ್ರವರ್ತಿ .

  • Share this:
ಮುಂಬೈ (ಸೆಪ್ಟೆಂಬರ್‌ 08); ದಿವಂಗತ ನಟ ಸುಶಾಂತ್ ಸಿಂಗ್ ಅವರಿಗೆ ದೆಹಲಿ ಮೂಲದ ವೈದ್ಯ ತರುಣ್ ಕುಮಾರ್ ಹಾಗೂ ಆತನ ಅಹೋದರಿ ಪ್ರಿಯಾಂಕಾ ಸಿಂಗ್ ಪ್ರಿಸ್ಕ್ರಿಪ್ಶನ್ ಇಲ್ಲದೆ ನಕಲಿ ಔಷಧಿ ನೀಡಿದ್ದಾರೆ ಎಂದು ನಟಿ ರಿಯಾ ಸಿಂಗ್ ನೀಡಿದ ಮಾಹಿತಿ ಆಧರಿಸಿ ಮುಂಬೈಪೊಲೀಸರು ಇಬ್ಬರ ಮೇಲೂ ಇದೀಗ ಎಫ್ಐಆರ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಮೋಸ, ವಂಚನೆ, ಆತ್ಮಹತ್ಯೆಗೆ ಪ್ರಚೋದನೆ, ಕ್ರಿಮಿನಲ್ ಪಿತೂರಿ, ಮಾದಕ ದ್ರವ್ಯ ಮತ್ತು ಸೈಕೋಟ್ರೋಪಿಕ್ ಸೇರಿದಂತೆ ವಿವಿಧ ಸೆಕ್ಷನ್ ಅಡಿಯಲ್ಲಿ ಇವರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಮಾದಕ ವಸ್ತುಗಳಿಗೆ ಸಂಬಂಧಿಸಿದ ಎನ್‌ಸಿಬಿ ವಿಚಾರಣೆಗೆ ಹಾಜರಾದ ವೇಳೆ ನಟಿ ರಿಯಾ ಚಕ್ರವರ್ತಿ ಪೊಲೀಸರಿಗೆ ಅನೇಕ ಮಾಹಿತಿಗಳನ್ನು ನೀಡಿದ್ದಾರೆ. ಅಲ್ಲದೆ, ಈ ವೇಳೆ ನಟ ಸುಶಾಂತ್ ಸಿಂಗ್ ಅವರ ಸಹೋದರಿ ಪ್ರಿಯಾಂಕ ಸಿಂಗ್ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆ ಮತ್ತು ಟೆಲಿ ಮೆಡಿಸಿನ್ ಪ್ರಾಕ್ಟೀಸ್ ಗೈಡ್ಲೈನ್ಸ್ ಅಡಿಯಲ್ಲಿ ಎಫ್ಐಆರ್ ದಾಖಲಿಸಬೇಕೆಂದು ಕೋರಿದ್ದರು.

34 ವರ್ಷದ ನಟ ಸುಶಾಂತ್ ಸಿಂಗ್ ರಜಪೂತ್ ಕಳೆದ ಜೂನ್ 14 ರಂದು ಉಪನಗರ ಬಾಂದ್ರಾದಲ್ಲಿರುವ ಅವರ ಅಪಾರ್ಟ್‌‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಆದರೆ, ಇವರ ಸಾವಿಗೆ ಮಾದಕ ವಸ್ತುಗಳ ಬಳಕೆಯೂ ಕಾರಣ ಇರಬಹುದು ಎಂಬ ಹಿನ್ನೋಟದಲ್ಲಿ ಸಿಬಿಐ ಜೊತೆಗೆ ಇದೀಗ ಎನ್‌ಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಎಸ್‌ಸಿಬಿ ಪೊಲೀಸರಿಗೆ ಮಾಹಿತಿ ನೀಡಿದ ನಟಿ ರಿಯಾ ಚಕ್ರವರ್ತಿ, “ಜೂನ್ 8 ರಂದು ಸುಶಾಂತ್ ಮತ್ತು ಪ್ರಿಯಾಂಕಾ ನಡುವಿನ ಕೆಲವು ವಾಟ್ಸಾಪ್ ಚಾಟ್‌ಗಳು ಅಪರಾಧದ ಹಿನ್ನೆಲೆ ಇರುವಂತೆ ಕಾಣಿಸುತ್ತಿದೆ.  ಈ ಚಾಟಿಂಗ್‌ನಲ್ಲಿ ಎನ್‌ಡಿಪಿಎಸ್‌ ಕಾಯ್ದೆಯಡಿ ನಿಷೇಧಿಸಲ್ಪಟ್ಟ ವಿವಿಧ ಔಷಧಗಳನ್ನು ತೆಗೆದುಕೊಳ್ಳುವಂತೆ ನಟ ಸುಶಾಂತ್ ಸಿಂಗ್‌ಗೆ ಸಲಹೆ ನೀಡಿರುವುದು ಸ್ಪಷ್ಟವಾಗುತ್ತದೆ.

ಇದನ್ನೂ ಓದಿ : ನಟ ಸುಶಾಂತ್ ಸಿಂಗ್ ಪ್ರಕರಣ; ತನಿಖೆ ಆರಂಭಿಸಿದ ಸಿಬಿಐ, ಮುಂಬೈ ಪೊಲೀಸರಿಂದ ಎಲ್ಲಾ ಮಹತ್ವದ ದಾಖಲೆಗಳ ಹಸ್ತಾಂತರ

ಅಲ್ಲದೆ, ಅದೇ ದಿನ ಸುಶಾಂತ್ ವೈದ್ಯರ ಪ್ರಿಸ್ಕ್ರಿಪ್ಶನ್ ಇಲ್ಲದೆ ಈ ಔಷಧಿಗಳನ್ನು ತೆಗೆದೂಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಪ್ರಿಯಾಂಕ ಸಿಂಗ್‌ಗೆ ಹೇಳಿದ್ದಾರೆ. ಈ ವೇಳೆ ನವದೆಹಲಿಯ ಡಾ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಿಂದ ಹೃದ್ರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ತರುಣ್ ಕುಮಾರ್ ಅವರು ಪ್ರಿಸ್ಕ್ರಿಪ್ಷನ್ ಕಳುಹಿಸಿದ್ದಾರೆ" ಎಂದು ನಟಿ ರಿಯಾ ದೂರಿನಲ್ಲಿ ದಾಖಲಿಸಿದ್ದಾರೆ.

ಪರಿಣಾಮ ಈ ದೂರಿನ ಅನ್ವಯ ಸುಶಾಂತ್ ಸಿಂಗ್ ಸಹೋದರಿ ಪ್ರಿಯಾಂಕ ಸಿಂಗ್ ಮತ್ತು ವೈದ್ಯ ತರುಣ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈ ಮೂಲಕ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ದಿಕ್ಕು ಬದಲಿಸಿದೆ. ಈಗಾಗಲೇ ಸುಶಾಂತ್ ಸಿಂಗ್ ಪ್ರಕರಣಗಳನ್ನು ಹೆಚ್ಚಿನ ತನಿಖೆಗಾಗಿ ಸಿಬಿಐಗೂ ವಹಿಸಲಾಗಿದೆ.
Published by:MAshok Kumar
First published: