ತನ್ನನ್ನು ಹುಟ್ಟಿಸಿದ್ದೇ ತಪ್ಪೆಂದು ಅಪ್ಪ-ಅಮ್ಮನ ಮೇಲೆ ದೂರು ನೀಡಿದ ಮಗರಾಯ!

ಎಷ್ಟೋ ಜನರು ತಮ್ಮ ಲೈಂಗಿಕ ಆಸೆಯನ್ನು ಪೂರೈಸಿಕೊಳ್ಳುವ ಭರದಲ್ಲಿ ಮಗುವಿನ ಜನ್ಮಕ್ಕೆ ಕಾರಣರಾಗುತ್ತಾರೆ. ಆಮೇಲೆ ಮಗುವನ್ನು ಸರಿಯಾಗಿ ಬೆಳೆಸಲು ಸಾಧ್ಯವಾಗದೆ ಕಷ್ಟ ಪಡುವಂತೆ ಮಾಡುತ್ತಾರೆ ಎಂದು ರಫೇಲ್ ಸ್ಯಾಮ್ಯುಯಲ್ ಆರೋಪಿಸಿದ್ದಾನೆ.

Sushma Chakre | news18
Updated:February 6, 2019, 4:34 PM IST
ತನ್ನನ್ನು ಹುಟ್ಟಿಸಿದ್ದೇ ತಪ್ಪೆಂದು ಅಪ್ಪ-ಅಮ್ಮನ ಮೇಲೆ ದೂರು ನೀಡಿದ ಮಗರಾಯ!
ರಫೇಲ್ ಸ್ಯಾಮ್ಯುಯಲ್
  • News18
  • Last Updated: February 6, 2019, 4:34 PM IST
  • Share this:
ಮುಂಬೈ (ಫೆ. 6): ಜೀವನದಲ್ಲಿ ಒಂದು ಬಾರಿಯೂ ಪೊಲೀಸ್​ ಠಾಣೆಯ ಮೆಟ್ಟಿಲು ಹತ್ತದವರದು ಒಂದು ಗುಂಪಾದರೆ ಪೊಲೀಸ್​ ಸ್ಟೇಷನ್​ ಅನ್ನೇ ಮಾವನ ಮನೆಯನ್ನಾಗಿಸಿಕೊಂಡವರದು ಇನ್ನೊಂದು ಗುಂಪು. ಪೊಲೀಸರು ತಮ್ಮ ಅಧಿಕಾರಾವಧಿಯಲ್ಲಿ ಎಂತೆಂಥ ವ್ಯಕ್ತಿಗಳನ್ನು, ಪ್ರಕರಣಗಳನ್ನು ನೋಡಿರುತ್ತಾರೆ ಎಂದು ನಿಮಗೆ ಗೊತ್ತಾದರೆ ಆಶ್ಚರ್ಯ ಪಡುತ್ತೀರಿ.

ಮುಂಬೈನಲ್ಲಿ ಇಂತಹ ಒಂದು ಅಪರೂಪದ ಪ್ರಕರಣ ಪೊಲೀಸರ ಮುಂದೆ ಬಂದಿದ್ದು, ದೂರು ನೀಡಿದಾತ ಮಾಡಿದ ಆರೋಪವನ್ನು ಕೇಳಿ ಸ್ವತಃ ಪೊಲೀಸರೇ ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ. 27 ವರ್ಷದ ಮುಂಬೈನ ಯುವಕನೊಬ್ಬ ತನ್ನ ಅಪ್ಪ-ಅಮ್ಮನ ವಿರುದ್ಧವೇ ದೂರು ನೀಡಿದ್ದಾನೆ. ಮಗನೇ ತಂದೆ-ತಾಯಿಯ ಮೇಲೆ ದೂರು ನೀಡಿರಬೇಕಾದರೆ ಅದೆಂಥಾ ಆರೋಪವನ್ನು ಮಾಡಿರಬಹುದು ಎಂಬ ಯೋಚನೆ ಬರುವುದು ಸಹಜ.

ಹುಟ್ಟಿಸಿದ್ದೇ ತಪ್ಪೆಂದ ಭೂಪ!

ತನ್ನ ಅನುಮತಿ ಪಡೆಯದೆ ತನಗೆ ಜನ್ಮ ನೀಡಿರುವ ಅಪ್ಪ-ಅಮ್ಮನ ವಿರುದ್ಧ ಪೊಲೀಸರಿಗೆ ಆ ಯುವಕ ದೂರು ಸಲ್ಲಿಸಿದ್ದಾನೆ. ರಫೇಲ್ ಸ್ಯಾಮ್ಯುಯಲ್ ಎಂಬಾತ ಈ ದೂರು ನೀಡಿದ್ದು, ಈ ಮೂಲಕ ಆತ ಮುಂಬೈನಲ್ಲೆಲ್ಲ ಸುದ್ದಿಯಾಗಿದ್ದಾನೆ. ತನ್ನ ಅನುಮತಿ ಪಡೆಯದೆ ಜನ್ಮ ನೀಡಿರುವ ಅಪ್ಪ-ಅಮ್ಮನ ವಿರುದ್ಧ ದೂರು ನೀಡಿ ಕೋರ್ಟ್​ ಮೆಟ್ಟಿಲೇರಲು ಸಿದ್ಧನಾಗಿರುವ ರಫೇಲ್ ವರ್ತನೆಗೆ ಪೊಲೀಸರಿಗೆ ನಗಬೇಕೋ, ಅಳಬೇಕೋ ಎಂಬುದು ಗೊತ್ತಾಗಲಿಲ್ಲವಂತೆ.

ದಿನಕ್ಕೆ ಎಷ್ಟು ಹೊತ್ತು ಮಲಗ್ತೀರಾ?; ನಿದ್ರೆ ಕಡಿಮೆಯಾದರೆ ಏನಾಗುತ್ತೆ ಗೊತ್ತಾ... ಇಲ್ಲಿದೆ ಶಾಕಿಂಗ್​ ನ್ಯೂಸ್​!

ಇದೀಗ, ಮಗನನ್ನು ಹುಟ್ಟಿಸಿದ ತಪ್ಪಿಗೆ ಆತನ ಅಪ್ಪ-ಅಮ್ಮ ಕೋರ್ಟ್​ ಮೆಟ್ಟಿಲು ಹತ್ತಬೇಕಾದ ಪರಿಸ್ಥಿತಿ ಬಂದಿದೆ. ತಮಗೆ ಇಷ್ಟ ಬಂದಂತೆ ಮಕ್ಕಳನ್ನು ಹುಟ್ಟಿಸುವುದರಿಂದ ಭೂಮಿಗೆ ಹೊರೆಯಾಗುತ್ತದೆ. ಇದು ನೈತಿಕವಾಗಿಯೂ ತಪ್ಪು ಎಂದು ಆತ ದೂರಿನಲ್ಲಿ ದಾಖಲಿಸಿದ್ದಾನೆ. ಮನುಷ್ಯನ ಜೀವನದಲ್ಲಿ ಸುಖಕ್ಕಿಂತ ಕಷ್ಟಗಳೇ ಹೆಚ್ಚು. ಹೀಗಾಗಿ, ಜನರು ಮಕ್ಕಳನ್ನು ಹೆರುವುದನ್ನು ನಿಲ್ಲಿಸಬೇಕು ಎಂದು ಕೂಡ ಆತ ಪೊಲೀಸರ ಬಳಿ ಹೇಳಿದ್ದಾನೆ.

ಇನ್ನು, ಫೇಸ್​ಬುಕ್​ನಲ್ಲೂ ರಫೇಲ್ ಸ್ಯಾಮ್ಯುಯಲ್ ಈ ಬಗ್ಗೆ ಬರೆದುಕೊಂಡಿದ್ದು, 'ನಾನು ನನ್ನ ಅಪ್ಪ-ಅಮ್ಮನನ್ನು ತುಂಬ ಪ್ರೀತಿಸುತ್ತೇನೆ. ಆದರೆ, ಅವರು ನನ್ನನ್ನು ಅವರಿಗೋಸ್ಕರ ಹುಟ್ಟಿಸಿದರು. ಅವರ ಸಂತೋಷಕ್ಕಾಗಿ ನಾನು ಜನ್ಮ ಪಡೆಯುವಂತಾಯಿತು. ಅವರ ಕರ್ತವ್ಯ ಎಂಬಂತೆ ಮಗುವನ್ನು ಹುಟ್ಟಿಸಿದ ಕಾರಣಕ್ಕೆ ನಾನು ಈಗ ಕೆಲಸ ಮಾಡುವಂತಾಗಿದೆ, ಕಷ್ಟ ಪಡುವಂತಾಗಿದೆ. ನನ್ನನ್ನು ಹುಟ್ಟಿಸದೇ ಇರುತ್ತಿದ್ದರೆ ಈ ಕಷ್ಟವೇ ಇರುತ್ತಿರಲಿಲ್ಲ' ಎಂದು ಪೋಸ್ಟ್​ ಮಾಡಿದ್ದಾನೆ. ಆ ಪೋಸ್ಟ್​ಗೆ ಹಲವರು ತರಾಟೆ ತೆಗೆದುಕೊಂಡಿದ್ದರಿಂದ ಅದನ್ನು ಡಿಲೀಟ್​ ಮಾಡಲಾಗಿದೆ.

ದಾನ ಮಾಡಲು ಮಗಳು ಆಸ್ತಿಯಲ್ಲ; ಮದುವೆಯಲ್ಲಿ ಕನ್ಯಾದಾನ ಮಾಡಲು ನಿರಾಕರಿಸಿದ ತಂದೆ

ಎಷ್ಟೋ ಜನರು ತಮ್ಮ ಲೈಂಗಿಕ ಆಸೆಯನ್ನು ಪೂರೈಸಿಕೊಳ್ಳುವ ಭರದಲ್ಲಿ ಮಗುವಿನ ಜನ್ಮಕ್ಕೆ ಕಾರಣರಾಗುತ್ತಾರೆ. ಆಮೇಲೆ ಮಗುವನ್ನು ಸರಿಯಾಗಿ ಬೆಳೆಸಲು ಸಾಧ್ಯವಾಗದೆ ಕಷ್ಟ ಪಡುವಂತೆ ಮಾಡುತ್ತಾರೆ. ನೀವು ಯಾರನ್ನು ಬೇಕಾದರೂ ಕೇಳಿ... ನನಗೆ ಬೇಕಾಗಿತ್ತು ಅದಕ್ಕೆ ಮಗುವನ್ನು ಮಾಡಿಕೊಂಡೆ ಎಂದೇ ಹೇಳುತ್ತಾರೆ. ಅವರಿಗೆ ಬೇಕಾಗಿತ್ತು ಎಂದು ಇನ್ನೊಂದು ಜೀವವನ್ನು ಸೃಷ್ಟಿ ಮಾಡುವುದು ಎಷ್ಟು ಸರಿ? ಎಂದು ಸ್ಯಾಮ್ಯುಯಲ್ ಪ್ರಶ್ನಿಸಿದ್ದಾರೆ.ರಫೇಲ್ ಸ್ಯಾಮ್ಯುಯಲ್ ಅವರ ತಂದೆ-ತಾಯಿ ಇಬ್ಬರೂ ವಕೀಲರಾಗಿದ್ದು, ಅವರಿಬ್ಬರ ವಿರುದ್ಧವೇ ಆತ ಕೋರ್ಟ್​ನಲ್ಲಿ ದಾವೆ ಹೂಡಲು ಸಿದ್ಧನಾಗಿದ್ದಾನೆ. ಆತನ ಅಮ್ಮ ಕವಿತಾ ಸ್ಯಾಮ್ಯುಯಲ್​ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನನ್ನ ಮಗನ ಗಮನಕ್ಕೆ ತಾರದೆ ನಾವು ಆತನನ್ನು ಹುಟ್ಟಿಸಿದ್ದೇ ತಪ್ಪು ಎಂಬುದೇ ಆತನ ವಾದವಾದರೆ ನಾವು ತಪ್ಪು ಮಾಡಿದ್ದೇವೆ ಎಂದು ಒಪ್ಪಿಕೊಳ್ಳಲು ಸಿದ್ಧರಿದ್ದೇವೆ. ಆದರೆ, ನಮ್ಮ ಹಾಗೆ ಈ ದೇಶದಲ್ಲಿರುವ ಎಲ್ಲ ಪೋಷಕರೂ ಅಪರಾಧ ಮಾಡಿದ್ದಾರೆ ಎಂದು ಹೇಳಿದ್ದಾರೆ.

First published:February 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading