ಅವಳಲ್ಲ ಅವನು...!: ಹನಿಮೂನ್​ಗೆ ಹೋದ ಗಂಡನಿಗೆ ಶಾಕ್​ ಕೊಟ್ಟ ಹೆಂಡತಿಯ ರಹಸ್ಯ!


Updated:August 6, 2018, 6:34 PM IST
ಅವಳಲ್ಲ ಅವನು...!: ಹನಿಮೂನ್​ಗೆ ಹೋದ ಗಂಡನಿಗೆ ಶಾಕ್​ ಕೊಟ್ಟ ಹೆಂಡತಿಯ ರಹಸ್ಯ!

Updated: August 6, 2018, 6:34 PM IST
ನ್ಯೂಸ್​ 18 ಕನ್ನಡ

ಮುಂಬೈ(ಆ.06): ಮುಂಬೈನಲ್ಲಿ ಅತ್ಯಂತ ವಿಚಿತ್ರವಾದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಮದುಮಗನೊಬ್ಬನಿಗೆ ಮದುವೆಯಾದ ಬಳಿಕ ತನ್ನ ಹೆಂಡತಿಯೂ ತನ್ನಂತೆ ಓರ್ವ ಹುಡುಗ ಎಂದು ಗೊತ್ತಾಗಿದೆ. ಸದ್ಯ ಹುಡುಗ ನೀಡಿದ ದೂರಿನ ಮೇರೆಗೆ ಪೊಲೀಸರು ಆತನ ಅತ್ತೆ ಮನೆಯವರ ವಿರುದ್ಧ ವಂಚನೆಯ ಪ್ರಕರಣ ದಾಖಲಿಸಿದ್ದಾರೆ.

ಲಭ್ಯವಾದ ಮಾಹಿತಿ ಅನ್ವಯ ಮುಂಬೈನ ಗೋವಂಡೀ ಇಲಾಖೆಯ ನಿವಾಸಿ 22 ವರ್ಷದ ಯಾಮೀನ್​ ಸೈಯದ್​ ಎಂಬವರಿಗೆ​ ತನ್ನದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಹುಡುಗಿಯೊಂದಿಗೆ ಗೆಳೆತನವಿತ್ತು. ಈ ಗೆಳೆತನವು ಕೆಲವೇ ದಿನಗಳಲ್ಲಿ ಪ್ರೀತಿಗೆ ತಿರುಗಿತ್ತು. ಇಬ್ಬರ ಕುಟುಂಬದವರೂ ಈ ಸಂಬಂಧಕ್ಕೆ ಸಮ್ಮತಿ ಸೂಚಿಸಿದ್ದು, ಇಬ್ಬರೂ ಇದೇ ವರ್ಷ ವಿವಾಹವಾಗಿದ್ದರು. ಮದುವೆಯಾದ ನವದಂಪತಿ ಹನಿಮೂನ್​ಗಾಗಿ ತೆರಳಿದ್ದರು. ಆದರೆ ಅಲ್ಲಿ ಸೈಯ್ಯದ್​ರವರ ಎಲ್ಲಾ ಕನಸುಗಳು, ಕೆಟ್ಟದಾಗಿ ಮಾರ್ಪಾಡಾದವು. ತಾನು ಮದುವೆಯಾಗಿದ್ದು ಹುಡುಗಿಯನ್ನಲ್ಲ, ಹುಡುಗ ಎಂಬ ವಾಸ್ತವತೆ ಸೈಯ್ಯದ್​ಗೆ ಹನಿಮೂನ್​ಗೆ ಹೋದ ಸಂದರ್ಭದಲ್ಲಿ ಗೊತ್ತಾಗಿದೆ.

ಈ ಕುರಿತಾಗಿ ಯಾಮಿನ್​ ಸೈಯ್ಯದ್​ ಬಳಿ ಮಾತುಕತೆ ನಡೆಸಿದಾಗ "ಆಕೆ ಯಾವತ್ತೂ ನನ್ನಿಂದ ದೂರವಿರುತ್ತಿದ್ದಳು. ಹೆಚ್ಚಾಗಿ ಆಕೆ ಅನಾರೋಗ್ಯ ಹಾಗೂ ಆಪರೇಶನ್​ ಆಗಿದೆ ಎಂಬ ಕಾರಣಗಳನ್ನು ನೀಡಿ ನನ್ನಿಂದ ಅಂತರ ಕಾಪಾಡಿಕೊಳ್ಳುತ್ತಿದ್ದಳು. ಆದರೆ ನಾವು ಹನಿಮೂನ್​ಗೆ ಹೋದಾಗ ಆಕೆ ಹುಡುಗ ಎಂದು ಗೊತ್ತಾಯಿತು" ಎಂದಿದ್ದಾರೆ.

ತನಗೆ ಬಹುದೊಡ್ಡ ಮೋಸವಾಗಿದೆ ಎನ್ನುವುದು ಸೈಯ್ಯದ್​ ಮಾತಾಗಿದೆ. ಇನ್ನು ಈ ವಿಚಾರವನ್ನು ಆತ ತನ್ನ ತಂದೆಗೆ ತಿಳಿಸಿದಾಗ ಅವರಿಗೂ ಶಾಕ್​ ಆಗಿದೆ. ಆದರೆ ಸುಮ್ಮನಿರದ ಅವರು ಈ ಕುರಿತಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನು ಯಾಮಿನ್​ ತಂದೆ ಯಾಕುಬ್​ ಈ ಕುರಿತಾಗಿ ಮಾತನಾಡುತ್ತಾ ಅವರ ಕುಟುಂಬದವರು ನಮ್ಮಿಂದ ಎಲ್ಲವನ್ನೂ ಮುಚ್ಚಿಟ್ಟರು. ಇದೇ ಕಾರಣದಿಂದ ನಾವು ಪೊಲೀಸರಿಗೆ ಮೋಸ ಮಾಡಿದ್ದಾರೆಂದು ದೂರು ನೀಡಿದ್ದೇವೆ" ಎಂದಿದ್ದಾರೆ.

ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶಿವಾಜಿನಗರ ಠಾಣೆಯ ಇನ್ಸ್​ಪೆಕ್ಟರ್​ ದೀಪಕ್​ ಪಗಾರೆ ಈ ಕುರಿತಾಗಿ ಪ್ರತಿಕ್ರಿಯಿಸಿದ್ದು, "ನಾವು ಆರೋಪಿಗಳು ಹಾಗೂ ಅವರ ಕುಟುಂಬಸ್ಥರ ವಿರುದ್ಧ ವಂಚನೆಯ ಕೇಸ್​ ದಾಖಲಿಸಿದ್ದೇವೆ. ಸದ್ಯ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ" ಎಂದಿದ್ದಾರೆ.
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ