Google Pay: ‘ಗೂಗಲ್‌ ಪೇ ಮೂಲಕ ವಿದ್ಯುತ್​​ ಬಿಲ್ ಕಟ್ಟಲೋಗಿ 96 ಸಾವಿರ ಕಳೆದುಕೊಂಡ ವ್ಯಕ್ತಿ

ಮುಂಬೈ ಪೊಲೀಸರು ಗೂಗಲ್​​ ಪೇ ಹೆಸರಿನಲ್ಲಿ ಹಣ ವಂಚಿಸಿದ ಸೈಬರ್​​ ಕಳ್ಳನಿಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ. ಸದ್ಯದಲ್ಲೇ ಆರೋಪಿಯನ್ನು ಬಂಧಿಸುವುದಾಗಿ ಮಾಧ್ಯಮಗಳಿಗೆ ಪೊಲೀಸ್​ ಅಧಿಕಾರಿಯೊಬ್ಬರು ಹೇಳಿದ್ದಾರೆ.

news18
Updated:September 12, 2019, 1:58 PM IST
Google Pay: ‘ಗೂಗಲ್‌ ಪೇ ಮೂಲಕ ವಿದ್ಯುತ್​​ ಬಿಲ್ ಕಟ್ಟಲೋಗಿ 96 ಸಾವಿರ ಕಳೆದುಕೊಂಡ ವ್ಯಕ್ತಿ
‘ಗೂಗಲ್​ ಪೇ‘
news18
Updated: September 12, 2019, 1:58 PM IST
ನವದೆಹಲಿ(ಸೆ.12): ಗೂಗಲ್​​ ಪೇ ಮೂಲಕ ವಿದ್ಯುತ್​​ ಹಣ ಪಾವತಿಸಲೋಗಿ ವ್ಯಕ್ತಿಯೋರ್ವ 96 ಸಾವಿರ ರೂ ಕಳೆದುಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ. ಖತರ್ನಾಕ್​​ ಸೈಬರ್​​ ಕಳ್ಳರು ಗೂಗಲ್‌ ಪೇ ಆ್ಯಪ್​​ ಹ್ಯಾಕ್​​ ಮಾಡುವ ಮೂಲಕ ಹಣ ಕದಿದ್ದಾರೆ ಎಂದು ಪೊಲೀಸ್​​ ಮೂಲಗಳು ತಿಳಿಸಿವೆ.

ವಂಚಕನೋರ್ವ 31 ವರ್ಷದ ವ್ಯಕ್ತಿಯೊಬ್ಬರಿಗೆ ಗೂಗಲ್​​ ಪೇ ಕಸ್ಟಮರ್​​ ಕೇರ್​​ ಅಧಿಕಾರಿ ಎಂದು ಸುಳ್ಳು ಮೂಲಕ 96 ಸಾವಿರ ರೂ ಹಣ ಎಗರಿಸಿದ್ದಾನೆ. ಈ ಸೈಬರ್​​ ಹಾಕರ್​​ ಮುಖೇನ ವಂಚನೆಗೀಡಾದ ವ್ಯಕ್ತಿಯನ್ನು ಮುಂಬೈ ಮೂಲದವರು ಎಂದು ಗುರುತಿಸಲಾಗಿದೆ.

ವಂಚನೆಗೀಡಾದ ವ್ಯಕ್ತಿಯೀಗ ಮುಂಬೈ ನಗರದ ಅಂಧೇತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ವ್ಯಕ್ತಿಯ ದೂರಿನ ಆಧಾರದ ಮೇರೆಗೆ ಎಫ್​​ಐಆರ್​​ ದಾಖಲಿಸಿಕೊಳ್ಳಲಾಗಿದೆ.

ಏನಿದು ಪ್ರಕರಣ?: ಮುಂಬೈ ಮೂಲದ ವ್ಯಕ್ತಿಯೋರ್ವ ಗೂಗಲ್ ಪೇ ಆ್ಯಪ್​​ ಬಳಸಿ ಕರೆಂಟ್ ಬಿಲ್ ಪಾವತಿಸಲು ಮುಂದಾಗಿದ್ದರು. ಈ ವೇಳೆ ಹಣ ವರ್ಗಾವಣೆ ಮಾಡಲು ಎಷ್ಟೇ ಯತ್ನಿಸಿದ್ದರೂ ಹೋಗಲಿಲ್ಲ. ಬಳಿಕ ಗೂಗಲ್​​ ಪೇ ಕಸ್ಟಮರ್​​ ಕೇರ್​​ ಎಂದುಕೊಂಡು ಯಾವುದೋ ನಂಬರ್​​ಗೆ ಕರೆ ಮಾಡಿ ಸಮಸ್ಯೆ ತಿಳಿಸಿದ್ದಾರೆ. ಆಗ ನಾನು ಕಳಿಸುವ ಲಿಂಕ್​​ಗೆ ಹಣ ಕಳುಹಿಸಿ ಎಂದು ಹೇಳಿ 96 ಸಾವಿರ ರೂ ವಂಚಿಸಿದ್ದಾರೆ.

ಇದನ್ನೂ ಓದಿ: ಎಚ್ಚರ! ನೀವು ಗೂಗಲ್​ ಪೇ ಬಳಸುತ್ತೀರಾ?: ಹಾಗಿದ್ರೆ ಈ ಸ್ಟೋರಿ ಓದಿ

ಕಸ್ಟಮರ್​​ ಕೇರ್​​ ಅಧಿಕಾರಿ ಎಂದು ಹೇಳಿ ಹ್ಯಾಕರ್​​ ಕಳಿಸಿದ್ದ ಲಿಂಕ್​​​ ಕ್ಲಿಕ್ಕಿಸಿದ ಕೂಡಲೇ ತನ್ನ ಹಣವೂ ಗೂಗಲ್​​ ಪೇ  ಮೂಲಕ ಸೈಬರ್​​ ಕಳ್ಳರ ಖಾತೆಗೆ ವರ್ಗಾವಣೆಯಾಗಿದೆ. ತಾನು ವಂಚನೆಗೊಳಗಾದ ಸುದ್ದಿ ತಿಳಿದ ಕೂಡಲೇ ವಂಚಕನ ವಿರುದ್ಧ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮುಂಬೈ ಪೊಲೀಸರು ಗೂಗಲ್​​ ಪೇ ಹೆಸರಿನಲ್ಲಿ ಹಣ ವಂಚಿಸಿದ ಸೈಬರ್​​ ಕಳ್ಳನಿಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ. ಸದ್ಯದಲ್ಲೇ ಆರೋಪಿಯನ್ನು ಬಂಧಿಸುವುದಾಗಿ ಮಾಧ್ಯಮಗಳಿಗೆ ಪೊಲೀಸ್​ ಅಧಿಕಾರಿಯೊಬ್ಬರು ಹೇಳಿದ್ದಾರೆ.
Loading...

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ
----------------
First published:September 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...