Viral video: ಮನಬಂದಂತೆ ಥಳಿಸಿ ಕಸ ತಿನ್ನಿಸುವ ತನಕ ಬಿಟ್ಟಿಲ್ಲ ಈ ದುಷ್ಕರ್ಮಿಗಳು..!

ಈ ಘಟನೆಗೆ ಅವರಿಬ್ಬರ ನಡುವಿನ ಹಳೆಯ ದ್ವೇಷ ಕಾರಣವಾಗಿದೆ ಎಂದು ಅವರು ಹೇಳಿದರು. ಈ ವಿಡಿಯೋವನ್ನು ನೆಟ್ಟಿಗರು ನೋಡಿ ಏನ್ ಜನ ಇವರು ಮನಬಂದಂತೆ ಥಳಿಸಿ ಮತ್ತೆ ಆತನಿಗೆ ಕಸ ತಿನ್ನಿಸಿದ್ದಾರೆ ಎಂದು ದುಷ್ಕರ್ಮಿಗಳ ವರ್ತನೆಗೆ ಕೆಂಡಾಮಂಡಲವಾಗಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ವ್ಯಕ್ತಿಯನ್ನು ಮನಬಂದಂತೆ ಥಳಿಸುವುದು, ಕೊಲೆ ಮಾಡಿರುವಂತಹ ಅನೇಕ ಘಟನೆಗಳು ನಾವು ದಿನನಿತ್ಯ ಸುದ್ದಿ ಮಾಧ್ಯಮಗಳಲ್ಲಿ ಓದುತ್ತಿರುತ್ತೇವೆ. ಆದರೆ ಹಳೆಯ ದ್ವೇಷದ ಕಾರಣದಿಂದ ವ್ಯಕ್ತಿಯನ್ನು ಚೆನ್ನಾಗಿ ಥಳಿಸಿ ನಂತರ ಆತನಿಗೆ ಏನು ತಿನ್ನಿಸಿದ್ದಾರೆ ಈ ದುಷ್ಕರ್ಮಿಗಳು ಎಂಬುದನ್ನು ಕೇಳಿದರೆ ನೀವು ಹೀಗೂ ಮಾಡುತ್ತಾರೆಯೇ ಎಂದು ಕೋಪಗೊಳ್ಳುವುದಂತೂ ಗ್ಯಾರಂಟಿ. ಇಂತಹ ವಿಚಿತ್ರ ಘಟನೆಯೊಂದು ಮುಂಬೈ ಮಹಾನಗರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.


    ವ್ಯಕ್ತಿಯೊಬ್ಬನನ್ನು ಕಬ್ಬಿಣದ ರಾಡ್‌ನಿಂದ ಮನಬಂದಂತೆ ಥಳಿಸಿ ಅಲ್ಲೇ ಹತ್ತಿರದಲ್ಲಿರುವಂತಹ ಕಸದ ತೊಟ್ಟಿಯಲ್ಲಿ ಇದ್ದ ಕಸವನ್ನು ಆ ವ್ಯಕ್ತಿಗೆ ತಿನ್ನಿಸಿದ ವಿಚಿತ್ರವಾದ ಘಟನೆ ಮುಂಬೈ ಮಹಾನಗರದಲ್ಲಿ ಇರುವಂತಹ ಜೋಗೇಶ್ವರಿ ಪ್ರದೇಶದಲ್ಲಿ ಕಳೆದ ತಿಂಗಳಲ್ಲಿ ನಡೆದಿದ್ದು, ಅಪರಾಧ ಮಾಡಿದವರು ಈ ಘಟನೆಯ ವಿಡಿಯೋವನ್ನು ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು, ವಿಕೃತಿ ಮೆರೆದಿದ್ದಾರೆ. ಈ ವೈರಲ್​ ಆದ ವಿಡಿಯೋ ನೋಡಿದ ನೆಟ್ಟಿಗರ ಕೋಪ ಈಗ ನೆತ್ತಿಗೇರಿದೆ.


    ಈ ವ್ಯಕ್ತಿಯನ್ನು ಮನಬಂದಂತೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು ಮತ್ತೊಬ್ಬ ವ್ಯಕ್ತಿಯ ಹುಡುಕಾಟದಲ್ಲಿದ್ದಾರೆ.


    ಈ ಘಟನೆಯು ಕಳೆದ ತಿಂಗಳಿನಲ್ಲಿ ನಡೆದಿದ್ದು, ಅಪರಾಧ ಪತ್ತೆ ದಳ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 47 ವರ್ಷ ವಯಸ್ಸಿನ ಅಬ್ದುಲ್ ಖಾಲಿದ್ ಮಲಿಕ್ ಶೇಖ್‌ ಎಂಬುವನನ್ನು ಹತ್ತಿರದ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಶೇಖ್ ಅಪರಾಧಗಳ ಇತಿಹಾಸವನ್ನು ಹೊಂದಿದ್ದು, ಈತನ ವಿರುದ್ಧ ಅಂಧೇರಿ, ಬೋರಿವೇಲಿ ರೈಲ್ವೆ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಅನೇಕ ಕೇಸುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.


    ಈತನನ್ನು ಪೊಲೀಸರು ಎರಡು ಬಾರಿ ಬಂಧಿಸಿದ್ದರು ಎನ್ನಲಾಗಿದೆ ಮತ್ತು ಈಗ ಮೇಘವಾಡಿ ಪೊಲೀಸರು ಈ ಘಟನೆಯಲ್ಲಿ ಕೊಲೆ ಯತ್ನದ ಆರೋಪದ ಮೇಲೆ ಈತನನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


    ಶೇಖ್ ಸಹಚರ 20 ವರ್ಷ ವಯಸ್ಸಿನ ಫಾಹಿದ್ ಜಹಿದ್ ಅಲಿ ಶೇಖ್ ತಲೆಮರೆಸಿಕೊಂಡಿದ್ದಾನೆ ಮತ್ತು ಆತನ ಹುಡುಕಾಟದ ಪ್ರಯತ್ನದಲ್ಲಿ ನಮ್ಮ ತಂಡವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೂರು ಕೊಟ್ಟವರು ಮತ್ತು ಆರೋಪಿಗಳು ಒಂದೇ ಪ್ರದೇಶದಲ್ಲಿ ವಾಸಿಸುವರಾಗಿದ್ದು, ಶೇಖ್ ಮತ್ತು ಆತನ ಸಹಚರ ಇಬ್ಬರೂ ಜೋಗೇಶ್ವರಿಯಲ್ಲಿರುವ ಪಾಸ್ಕಲ್ ಏರಿಯಾದ ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಾದರೆ 21 ವರ್ಷ ವಯಸ್ಸಿನ ಮೊಹಮ್ಮದ್ ಅಲಿ ಶೇಖ್‌ರೊಂದಿಗೆ ಹಳೆಯ ದ್ವೇಷದ ಬಗ್ಗೆ ಮಾತಿನ ಚಕಮಕಿಯಾಗಿ ಅವರ ಬಳಿ ಇದ್ದ ಕಬ್ಬಿಣದ ರಾಡ್‌ನಿಂದ ಮೊಹಮ್ಮದ್ ಅಲಿ ಶೇಖ್‌ನನ್ನು ಹೊಡೆದು ಕಸ ತಿನ್ನುವಂತೆ ಮಾಡಿದ್ದಾರೆ.




    ಈ ಘಟನೆಗೆ ಅವರಿಬ್ಬರ ನಡುವಿನ ಹಳೆಯ ದ್ವೇಷ ಕಾರಣವಾಗಿದೆ ಎಂದು ಅವರು ಹೇಳಿದರು. ಈ ವಿಡಿಯೋವನ್ನು ನೆಟ್ಟಿಗರು ನೋಡಿ ಏನ್ ಜನ ಇವರು ಮನಬಂದಂತೆ ಥಳಿಸಿ ಮತ್ತೆ ಆತನಿಗೆ ಕಸ ತಿನ್ನಿಸಿದ್ದಾರೆ ಎಂದು ದುಷ್ಕರ್ಮಿಗಳ ವರ್ತನೆಗೆ ಕೆಂಡಾಮಂಡಲವಾಗಿದ್ದಾರೆ.









    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

    Published by:HR Ramesh
    First published: