Fired from Job: ಏಕಾಏಕಿ ಕೆಲಸದಿಂದ ವಜಾ; ಸಹೋದ್ಯೋಗಿಗಳ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ

ಕೆಲಸದಿಂದ ಆತನನ್ನು ವಜಾಗೊಳಿಸುತ್ತಿದ್ದಂತೆ ಕುಪಿತನಾದ ಆತ ತಮ್ಮ ಆರು ಜನ ಸಹೋದ್ಯೋಗಿಗಳ ಮೇಲೆ ಪೇಪರ್​ ಕಟ್ಟರ್​​ನಿಂದ ಹಲ್ಲೆ ನಡೆಸಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮುಂಬೈ (ಅ. 13): ಕೋವಿಡ್ ಸಂಕಷ್ಟದಲ್ಲಿರುವ ಜನರು ಆರ್ಥಿಕವಾಗಿ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಈ ನಡುವೆ ಅನೇಕ ಕಂಪನಿಗಳು ಕೂಡ ಉದ್ಯೋಗಿಗಳ ವಜಾ (sacking) ಮಾಡಿದ ಕಾರಣ ಸಾಕಷ್ಟು ಕುಟುಂಬಗಳು ಕಂಗೆಟ್ಟಿದ್ದವು. ಕೋವಿಡ್​ ಸಂಕಷ್ಟದ (Covid Crisis) ಸುಧಾರಿಸುತ್ತಿರುವ ಈ ಹೊತ್ತಿನಲ್ಲಿ ಕೆಲಸ ಕಳೆದುಕೊಂಡ ವ್ಯಕ್ತಿಯೊಬ್ಬ ದಿಕ್ಕ ಕಾಣದೇ ತಮ್ಮ ಸಹೋದ್ಯೋಗಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಏಕಾಏಕಿ ಉದ್ಯೋಗದಿಂದ (Sack From Job) ತೆಗೆದು ಹಾಕಿದ ಹಿನ್ನಲೆ ಕ್ರೋಧಿತನಾದ ಉದ್ಯೋಗಿ ಈ ರೀತಿಯ ವರ್ತನೆ (attacked his colleague) ತೋರಿ ಸದ್ಯ ಪೊಲೀಸರ ವಶದಲ್ಲಿದ್ದಾನೆ.

    ಏನಿದು ಘಟನೆ
    ಮುಂಬೈನ ಬಿಪಿಒ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಏಕಾಏಕಿ ಕೆಲಸ ಕಳೆದು ಕೊಂಡಿದ್ದಾನೆ. ಮಲಾಡ್​ ಎಂಬ ಬಿಪಿಒ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ. ಕೆಲಸದಿಂದ ಆತನನ್ನು ವಜಾಗೊಳಿಸುತ್ತಿದ್ದಂತೆ ಕುಪಿತನಾದ ಆತ ತಮ್ಮ ಆರು ಜನ ಸಹೋದ್ಯೋಗಿಗಳ ಮೇಲೆ ಪೇಪರ್​ ಕಟ್ಟರ್​​ನಿಂದ ಹಲ್ಲೆ ನಡೆಸಿದ್ದಾನೆ.

    ಕೆಲಸ ಕಳೆದುಕೊಂಡ ಕುಪಿತನಾಗಿದ್ದ ವ್ಯಕ್ತಿ
    ಹಲ್ಲೆ ಮಾಡಿದ ವ್ಯಕ್ತಿಯನ್ನು ಸುಜಿತ್​ ಸಿಂಗ್​ ಎಂದು ಗುರುತಿಸಲಾಗಿದೆ. ಈತ ಮೈಂಡ್​ ಸ್ಪೇಸ್​ ಎಂಬ ವಿಮಾ ಕಂಪನಿಯಲ್ಲಿ ಬಿಪಿಒ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಇತ್ತೀಚೆಗೆ ಈತನನ್ನು ಯಾವುದೋ ಕಾರಣಕ್ಕೆ ಕಂಪನಿಯ ಕೆಲಸದಿಂದ ವಜಾಗೊಳಿಸಲಾಗಿದೆ.

    ಆರು ಜನರ ಮೇಲೆ ಹಲ್ಲೆ
    ಇದಾದ ಬಳಿಕ ಸೋಮವಾರ ಮಧ್ಯಾಹ್ನ ಈತ ತನ್ನ ಸಹೋದ್ಯೋಗಿಗಳೊಂದಿಗೆ ಮಾತನಾಡುವ ವೇಳೆ ವಾಗ್ವಾದ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತೆರಳಿ ಆತ ಇಬ್ಬರು ಸಹೋದ್ಯೋಗಿ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ಘಟನೆಯಲ್ಲಿ ರಿಷಭ್​ ಸಾವಂತ್​ ಎಂಬಾಂತ ಗಾಯಗೊಂಡಿದ್ದಾನೆ.

    ಉಳಿದ ಸಹೋದ್ಯೋಗಿಗಳಾದ ಹಸನ್ ಶೇಖ್, ಅಥರ್ವ ಕದಮ್, ಪ್ರಶಾಂತ್ ಮಿಶ್ರಾ ಮತ್ತು ದಿವ್ಯೇಶ್​ ಕೂಡ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

    ಇದನ್ನು ಓದಿ: ಸರ್ಕಾರದ ಮೌನದ ಬಗ್ಗೆ ಅಮೆರಿಕದಲ್ಲಿ ಉತ್ತರಿಸಿದ Nirmala Sitharaman

    ಹಲ್ಲೆ ಯತ್ನದ ಆರೋಪದ ಮೇಲೆ ಪ್ರಕರಣ ದಾಖಲು
    ಈ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್​ 307ರ ಅಡಿ ಕೊಲೆ ಯತ್ನದ ಆರೋಪದ ಮೇಲೆ ಬಂಗೂರ್​ ನಗರ ಪೊಲೀಸರು ಆರೋಪಿ ಸುಜಿತ್​ ಸಿಂಗ್​ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಸಿಂಗ್​ ಅನ್ನು ವಶಕ್ಕೆ ಪಡೆಯಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಬಂಗೂರ್ ನಗರ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಶೋಭಾ ಪಿಸೆ ತಿಳಿಸಿದ್ದಾರೆ

    ಇದನ್ನು ಓದಿ: ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಕೆಲಸ ಮಾಡಬೇಕಾ; ಇಲ್ಲಿದೆ ಉತ್ತಮ ಅವಕಾಶ

    ಕೋವಿಡ್ ಬಳಿಕ ಕೆಲಸ ಕಳೆದುಕೊಂಡ ಮಂದಿ ಅಧಿಕ

    ಏರುತ್ತಿರುವ ಖರ್ಚಿನ ಜೊತೆಗೆ ಕೋವಿಡ್​ ಜನರ ಬದುಕಿಗೆ ಸಾಕಷ್ಟು ತೊಂದರೆ ನೀಡಿದೆ. ಈಗಾಗಲೇ ಲಾಕ್​ಡೌನ್​ನಿಂದಾಗಿ ಅನೇಕ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಸಿಕ್ಕ ಕೆಲಸ ಉಳಿಸಿಕೊಳ್ಳಲು ಅನೇಕ ಮಂದಿ ಪ್ರಯತ್ನ ನಡೆಸುತ್ತಿದ್ದಾರೆ. ಈ ಎಲ್ಲಾ ಪರಿಸ್ಥಿತಿಗಳು ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಕೂಡ ಸಾಕಷ್ಟು ಪರಿಣಾಮ ಬೀರುತ್ತಿದೆ. ಇದೇ ಉದ್ದೇಶದಿಂದಲೇ ಆತಂಕಕ್ಕೆ ಒಳಗಾಗಿರುವ ವ್ಯಕ್ತಿ ಈ ಕೃತ್ಯ ನಡೆಸಿರುವ ಸಾಧ್ಯತೆ ಇದೆ ಎಂಬುದನ್ನು ಕೂಡ ಅಲ್ಲಗಳೆಯುವಂತೆ ಇಲ್ಲ. ಆತನಿಗೆ ಮಾನಸಿಕ ಚಿಕಿತ್ಸೆ ಅವಶ್ಯಕತೆ ಕೂಡ ಇದೆ ಎನ್ನಲಾಗಿದೆ.
    Published by:Seema R
    First published: