ಜ.27ರಿಂದ ದಿನದ 24 ಗಂಟೆ ಬಾಗಿಲು ತೆರೆದಿರಲಿವೆ ಮಾಲ್, ಶಾಪಿಂಗ್ ಕಾಂಪ್ಲೆಕ್ಸ್​ಗಳು

ವಸತಿ ರಹಿತ ಪ್ರದೇಶದಲ್ಲಿರುವ ಮಾಲ್​ಗಳಲ್ಲೂ ಶಾಪ್​ಗಳು, ರೆಸ್ಟೋರೆಂಟ್​​ ಮತ್ತು ಥಿಯೇಟರ್​ಗಳು ರಾತ್ರಿಯಿಡೀ ಓಪನ್​ ಇರುತ್ತವೆ. ಆದರೆ ಪಬ್​ ಮತ್ತು ಬಾರ್​ಗಳು ಮಾಮೂಲಿಯಾಗಿ ಮಧ್ಯರಾತ್ರಿ 1.30ಕ್ಕೆ ಮುಚ್ಚಲ್ಪಡುತ್ತವೆ ಎಂದರು.

news18-kannada
Updated:January 22, 2020, 5:22 PM IST
ಜ.27ರಿಂದ ದಿನದ 24 ಗಂಟೆ ಬಾಗಿಲು ತೆರೆದಿರಲಿವೆ ಮಾಲ್, ಶಾಪಿಂಗ್ ಕಾಂಪ್ಲೆಕ್ಸ್​ಗಳು
ಮುಂಬೈ
  • Share this:
ಮುಂಬೈ(ಜ.22): ಮಹಾನಗರಿ, ವಾಣಿಜ್ಯ ನಗರಿ ಮುಂಬೈನಲ್ಲಿ ಇನ್ಮುಂದೆ ಮಾಲ್​ಗಳು, ಉಪಾಹಾರ ರೆಸ್ಟೋರೆಂಟ್​ಗಳು, ಮಲ್ಟಿಫ್ಲೆಕ್ಸ್​​ಗಳು ಮತ್ತು ಶಾಪ್​ಗಳು 24/7 ಬಾಗಿಲು ತೆರೆದಿರುತ್ತವೆ. ಇಂದು ಮಹಾರಾಷ್ಟ್ರ ಸಚಿವ ಸಂಪುಟ ಸಭೆಯಲ್ಲಿ​​​ 'ಮುಂಬೈ 24 ಹವರ್ಸ್​' ಪಾಲಿಸಿಗೆ ಅನುಮೋದನೆ ನೀಡಿದೆ. ಜನವರಿ 27ರಿಂದ ಮುಂಬೈ ನಗರದಲ್ಲಿ ಮಾಲ್​​ಗಳು, ರೆಸ್ಟೋರೆಂಟ್​ಗಳು, ಮಲ್ಟಿಫ್ಲೆಕ್ಸ್​​ಗಳು  ತೆರೆದಿರುತ್ತವೆ. 

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ, ಲಂಡನ್ ಹಾಗೂ ಮಧ್ಯಪ್ರದೇಶದ ಇಂದೋರ್ ನ ರಾತ್ರಿ ಜೀವನದ (ನೈಟ್ ಲೈಫ್) ಉದಾಹರಣೆಯನ್ನು ನೀಡಿದರು. "ಲಂಡನ್ ನ ನೈಟ್ ಲೈಫ್ ಆರ್ಥಿಕ ಚಟುವಟಿಕೆ ಮೌಲ್ಯವೇ ಐದು ಬಿಲಿಯನ್ ಪೌಂಡ್ ಇದೆ. ಸರ್ಕಾರದ ಈ ನಿರ್ಧಾರ ಆದಾಯ ಮತ್ತು ಉದ್ಯೋಗಾವಕಾಶ ಹೆಚ್ಚಿಸಲು ಸಹಕಾರಿಯಾಗಿದೆ. ಸೇವಾ ವಲಯದಲ್ಲಿ ಈಗಾಗಲೇ 5 ಲಕ್ಷ ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ" ಎಂದರು.

ಆರೋಪಿ ಆದಿತ್ಯರಾವ್​ನನ್ನು​ ಮಂಗಳೂರಿಗೆ ಕರೆದೊಯ್ಯಲು ಬೆಂಗಳೂರು ಕೋರ್ಟ್​​ ಅನುಮತಿ

ಈ ರೀತಿ ದಿನದ  24 ಗಂಟೆಯೂ ಸವಲತ್ತು ಒದಗಿಸುವಲ್ಲಿ ಮುಂಬೈ ಹಿಂದುಳಿಯಬಾರದು. ನೈಟ್ ಲೈಫ್ ಅಂದರೆ ಮದ್ಯಪಾನ ಸೇವನೆ ಮಾತ್ರ ಅಂದುಕೊಳ್ಳುವುದು ತಪ್ಪು. ಆನ್ ಲೈನ್ ಶಾಪಿಂಗ್ 24 ಗಂಟೆಯೂ ತೆರೆದಿರುತ್ತದೆ ಅಂದರೆ ಮಳಿಗೆ ಮತ್ತು ಸಂಸ್ಥೆಗಳನ್ನು ಏಕೆ ರಾತ್ರಿ ವೇಳೆ ಮುಚ್ಚಬೇಕು? ಎಂದು ಪ್ರಶ್ನಿಸಿದ್ದಾರೆ.

"ರಾತ್ರಿ ವೇಳೆ ಮಳಿಗೆಗಳು, ಶಾಪಿಂಗ್​​​ ಮಾಲ್​ಗಳು, ಶಾಪ್​ಗಳು ಮತ್ತು ರೆಸ್ಟೋರೆಂಟ್​ಗಳು ಕಡ್ಡಾಯವಾಗಿ ತೆರೆದಿರಲೇಬೇಕು ಎಂದೇನಿಲ್ಲ. ಉತ್ತಮ ವ್ಯವಹಾರ ಮಾಡಬಹುದೆಂದು ಭಾವಿಸುವವರು ಮಾತ್ರ ತಮ್ಮ ಅಂಗಡಿ-ಶಾಪ್​ ಮತ್ತು ಮಾಲ್​ಗಳನ್ನು ಇಷ್ಟಪಟ್ಟು ತೆರೆಯಬಹುದಾಗಿದೆ," ಎಂದರು.

ದೆಹಲಿ ವಿಧಾನಸಭಾ ಚುನಾವಣೆ: ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ

ವಸತಿ ರಹಿತ ಪ್ರದೇಶದಲ್ಲಿರುವ ಮಾಲ್​ಗಳಲ್ಲೂ ಶಾಪ್​ಗಳು, ರೆಸ್ಟೋರೆಂಟ್​​ ಮತ್ತು ಥಿಯೇಟರ್​ಗಳು ರಾತ್ರಿಯಿಡೀ ಓಪನ್​ ಇರುತ್ತವೆ. ಆದರೆ ಪಬ್​ ಮತ್ತು ಬಾರ್​ಗಳು ಮಾಮೂಲಿಯಾಗಿ ಮಧ್ಯರಾತ್ರಿ 1.30ಕ್ಕೆ ಮುಚ್ಚಲ್ಪಡುತ್ತವೆ ಎಂದರು.
First published:January 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ