Mumbai LPG Cylinder Blast: ಧಾರಾವಿಯಲ್ಲಿ ಸಿಲಿಂಡರ್​ ಸ್ಪೋಟದಿಂದ ಗಾಯಗೊಂಡಿದ್ದ ಬಾಲಕ ಸಾವು; ತಾಯಿಯ ಸ್ಥಿತಿ ಗಂಭೀರ

ಅರೆಸ್ಟ್ ಆಗಿದ್ದ ಸಿದ್ಧಿಕಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸೋಮವಾರ ಜಾಮೀನು ನೀಡಿದೆ. ಸಿಲಿಂಡರ್​ನ್ನು ಕಾನೂನುಬದ್ಧವಾಗಿ ಖರೀದಿಸಲಾಗಿದೆ ಎಂಬುದನ್ನು ಸಾಬೀತುಪಡಿಸಲು ದಾಖಲೆಗಳನ್ನು ಸಲ್ಲಿಸುವಂತೆ ಪೊಲೀಸರು ಕೇಳಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮುಂಬೈ(ಸೆ.1): ಧಾರಾವಿಯಲ್ಲಿ ಭಾನುವಾರ ನಡೆದ ಎಲ್​ಪಿಜಿ ಗ್ಯಾಸ್​​ ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡಿದ್ದ 7 ವರ್ಷದ ಬಾಲಕ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಬಾಲಕನ ತಾಯಿಯ ಸ್ಥಿತಿ ತೀರಾ ಗಂಭೀರವಾಗಿದೆ.

ಸೋನು ಜೈಸ್ವಲ್​​​ ಮೃತಪಟ್ಟ ಬಾಲಕ, ಆತನ ತಾಯಿ ಸತ್ರಾದೇವಿ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಲಕನ ತಂದೆ ಮತ್ತು ಚಿಕ್ಕಮ್ಮ ಕೂಡ ಗಾಯಗೊಂಡಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಅವರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಘಟನೆ ಧಾರಾವಿಯ ಶಾಹು ನಗರದ ಶಾಂಟಿಯಲ್ಲಿ ನಡೆದಿದೆ. ಈ ಗ್ಯಾಸ್​ ಸಿಲಿಂಡರ್ ಸ್ಪೋಟದಲ್ಲಿ ಒಟ್ಟು 17 ಮಂದಿ ಗಾಯಗೊಂಡಿದ್ದರು. ಬಾಲಕ ಸೇರಿ 5 ಮಂದಿಯ ಸ್ಥಿತಿ ತೀರಾ ಗಂಭೀರವಾಗಿತ್ತು. ಆದರೆ ಮಂಗಳವಾರ ಚಿಕಿತ್ಸೆ ಫಲಿಸದೆ ಬಾಲಕ ಅಸುನೀಗಿದ್ದಾನೆ.

ಇದನ್ನೂ ಓದಿ:Gold Price Today: ಇಂದು ಮತ್ತೆ ಇಳಿಕೆಯಾದ ಚಿನ್ನದ ಬೆಲೆ; ಬೆಂಗಳೂರಿನಲ್ಲಿ ಎಷ್ಟಿದೆ ಗೊತ್ತಾ ರೇಟ್?

7 ವರ್ಷದ ಸೋನು ಜೈಸ್ವಾಲ್ ಮಂಗಳವಾರ ಸಂಜೆ​ ಸಿಯಾನ್​ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. 37 ವರ್ಷದ ವ್ಯಕ್ತಿ, 40 ವರ್ಷದ ಮಹಿಳೆ ಕೂಡ ಘಟನೆಯಲ್ಲಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಸಿವಿಕ್ ಆಫೀಸರ್ ಹೇಳಿದ್ದಾರೆ.

ಪ್ರಕರಣ ಸಂಬಂಧ ಸೋಮವಾರ ಪೊಲೀಸರು ಮೊಹಮ್ಮದ್ ಮಿರಾಜ್​ ಸಿದ್ಧಿಕಿಯನ್ನು ಬಂಧಿಸಿದ್ದರು. ಗ್ಯಾಸ್​ ಸೋರಿಕೆಯಾಗುತ್ತಿದೆ ಎಂದು ಮಿರಾಜ್​ ಹೆಂಡತಿ ಹೇಳಿದ ಬಳಿಕ ಆತ ಸಿಲಿಂಡರ್​ನ್ನು ಮನೆಯಿಂದ ಈಚೆಗೆ ತರಲು ಮುಂದಾಗಿದ್ದ. ಆಗ ಆಕಸ್ಮಿಕವಾಗಿ ಗ್ಯಾಸ್ ಸಿಲಿಂಡರ್ ಆತನ ಕೈಯಿಂದ ಜಾರಿ ಲೇನ್​ ಮೇಲೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆ ಪ್ರಕಾರ, ಯಾರೋ ಒಬ್ಬ ವ್ಯಕ್ತಿ ಸಿಗರೇಟ್​ನ್ನು ಸೇದಿ ಬಳಿಕ ಸಿಲಿಂಡರ್​ ಬಳಿಕ ಇಟ್ಟಿದ್ದಾನೆ. ಅದು ಬೆಂಕಿ ಹೊತ್ತಿಕೊಳ್ಳಲು ಕಾರಣವಾಗಿದೆ. ಸಿಲಿಂಡರ್ ಸ್ಪೋಟಗೊಂಡ ಕೂಡಲೇ ಸಿದ್ಧಿಕಿ ತನ್ನ ಪತ್ನಿ ಮಗುವಿನೊಂದಿಗೆ ಆ ಜಾಗವನ್ನು ತೊರೆದನು. ಆದಾಗ್ಯೂ ಬಾಲಕ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ:Delhi Schools Re-opening: ಇಂದಿನಿಂದ ದೆಹಲಿಯಲ್ಲಿ 9-12ನೇ ತರಗತಿಗಳು ಆರಂಭ; ಮಾರ್ಗಸೂಚಿಗಳು ಇಲ್ಲಿವೆ

ಅರೆಸ್ಟ್ ಆಗಿದ್ದ ಸಿದ್ಧಿಕಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸೋಮವಾರ ಜಾಮೀನು ನೀಡಿದೆ. ಸಿಲಿಂಡರ್​ನ್ನು ಕಾನೂನುಬದ್ಧವಾಗಿ ಖರೀದಿಸಲಾಗಿದೆ ಎಂಬುದನ್ನು ಸಾಬೀತುಪಡಿಸಲು ದಾಖಲೆಗಳನ್ನು ಸಲ್ಲಿಸುವಂತೆ ಪೊಲೀಸರು ಕೇಳಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Latha CG
First published: