HOME » NEWS » National-international » MUMBAI LOCAL TRAIN SERVICES TO BE OPENED FOR GENERAL PUBLIC FROM FEB 1 RHHSN

ಫೆ.1ರಿಂದ ಸಾರ್ವಜನಿಕರಿಗೆ ಮುಂಬೈ ಸ್ಥಳೀಯ ರೈಲು ಸೇವೆ ಪುನಾರಂಭ; ಮಹಾರಾಷ್ಟ್ರ ಸರ್ಕಾರ ಘೋಷಣೆ

ಮಹಾರಾಷ್ಟ್ರ ಸರ್ಕಾರವು ರಾಜ್ಯದಲ್ಲಿ ಕೊರೋನಾ ವೈರಸ್ ಪ್ರೇರಿತ ಲಾಕ್‌ಡೌನ್ ನಿರ್ಬಂಧಗಳನ್ನು ಫೆಬ್ರವರಿ 28 ರವರೆಗೆ ವಿಸ್ತರಿಸಿದೆ. ನಿರ್ಬಂಧಗಳನ್ನು ಹಂತಹಂತವಾಗಿ ತೆರವುಗೊಳಿಸುವ ಸಲುವಾಗಿ ಮಿಷನ್ ಬಿಗಿನ್ ಎಗೇನ್ ಯೋಜನೆಯನ್ನು ಕಾರ್ಯಗತಗೊಳಿಸಿದೆ. ಸರ್ಕಾರದ ಮಾರ್ಗಸೂಚಿಗಳು ಫೆಬ್ರವರಿ 28 ರವರೆಗೆ ಜಾರಿಯಲ್ಲಿರುತ್ತವೆ. 

news18-kannada
Updated:January 29, 2021, 4:10 PM IST
ಫೆ.1ರಿಂದ ಸಾರ್ವಜನಿಕರಿಗೆ ಮುಂಬೈ ಸ್ಥಳೀಯ ರೈಲು ಸೇವೆ ಪುನಾರಂಭ; ಮಹಾರಾಷ್ಟ್ರ ಸರ್ಕಾರ ಘೋಷಣೆ
ಸಾಂದರ್ಭಿಕ ಚಿತ್ರ.
  • Share this:
ಮುಂಬೈ: ಕೊರೋನಾದಿಂದ ತಡೆಹಿಡಿಯಲಾಗಿದ್ದ ಮುಂಬೈ ಸಬ್​ಅರ್ಬನ್​ ರೈಲು ಸೇವೆ ಫೆಬ್ರವರಿ 1ರ ಸೋಮವಾರದಿಂದ ಪೂರ್ಣ ಪ್ರಮಾಣದಲ್ಲಿ ಪುನಾರಂಭವಾಗಲಿದೆ ಎಂದು ಮಹಾರಾಷ್ಟ್ರ ಸರ್ಕಾರ ಶುಕ್ರವಾರ ಹೇಳಿದೆ. ಸೋಮವಾರದಿಂದ ಮುಂಬೈನ ಸ್ಥಳೀಯ ರೈಲಿನಲ್ಲಿ ಸಾರ್ವಜನಿಕರು ಎಂದಿನಂತೆ ಓಡಾಡಬಹುದು ಎಂದು ಟೈಮ್ಸ್ ನೌ ವರದಿ ಮಾಡಿದೆ. 

ಆದಾಗ್ಯೂ, ಇದಕ್ಕೂ ಮುನ್ನ ಬಂದ ವರದಿ ಪ್ರಕಾರ ಸ್ಥಳೀಯ ರೈಲುಗಳು ಇದೇ ತಿಂಗಳ ಜನವರಿ 29ರಿಂದ ಪೂರ್ಣಪ್ರಮಾಣದಲ್ಲಿ ಓಡಾಟ ಆರಂಭಿಸಲಿವೆ ಎಂದು ಹೇಳಲಾಗಿತ್ತು. ಇದೀಗ ಸರ್ಕಾರ ಅಧಿಕೃತವಾಗಿ ಫೆಬ್ರವರಿ 1ರಿಂದ ಸ್ಥಳೀಯ ರೈಲು ಸೇವೆ ಪುನಾರಂಭವಾಗಲಿದೆ ಎಂದು ತಿಳಿಸಿದೆ.

ಶುಕ್ರವಾರ ಮಹಾರಾಷ್ಟ್ರ ರಾಜ್ಯ ಸರ್ಕಾರದ ಹೇಳಿಕೆ ಪ್ರಕಾರ, ಮೊದಲ ಸ್ಥಳೀಯ ರೈಲಿನ ಪ್ರಾರಂಭದಿಂದ ಬೆಳಿಗ್ಗೆ 7 ಗಂಟೆಯವರೆಗೆ ಪ್ರಯಾಣಿಕರು ರೈಲುಗಳಲ್ಲಿ ಪ್ರಯಾಣಿಸಬಹುದು. ನಂತರ, ಅವರು ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ ಸೇವೆಯನ್ನು ಪಡೆಯಬಹುದು ಮತ್ತು ನಂತರ ರಾತ್ರಿ 9 ಗಂಟೆಯ ನಂತರ ಸೇವೆಯ ಅಂತ್ಯವಾಗುತ್ತದೆ. ಉಳಿದ ಗಂಟೆಗಳಲ್ಲಿ, ಅಗತ್ಯ ಸೇವೆಗಳಲ್ಲಿರುವವರಿಗೆ ಮಾತ್ರ ರೈಲುಗಳು ತೆರೆದಿರುತ್ತವೆ. ಉದಾಹರಣೆಗೆ ಮುಂಚೂಣಿ ಕೆಲಸಗಾರರು, ಆರೋಗ್ಯ ಸಿಬ್ಬಂದಿ ಮತ್ತು ಇತರರು. ಮಹಿಳಾ ಪ್ರಯಾಣಿಕರಿಗೆ ಗರಿಷ್ಠ ಸಮಯದಲ್ಲಿ ಸೇವೆಗಳನ್ನು ಉಚಿತವಾಗಿ ಪಡೆಯಲು ಅವಕಾಶವಿದೆ.

ಇದನ್ನು ಓದಿ: ದೆಹಲಿ ಮತ್ತೆ ಉದ್ವಿಗ್ನ; ಪ್ರತಿಭಟನಾನಿರತ ರೈತರ ವಿರುದ್ಧ ‘ಸ್ಥಳೀಯ ಜನರ’ ಆಕ್ರೋಶ; ಕಲ್ಲು ತೂರಾಟ

ಸ್ಥಳೀಯ ರೈಲು ಸೇವೆಗಳ ಸಂಪೂರ್ಣ ಪುನರಾರಂಭದ ಕುರಿತು ಚರ್ಚಿಸಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ರಾಜ್ಯ ಸರ್ಕಾರಿ ಅಧಿಕಾರಿಗಳು, ರೈಲ್ವೆ ಇಲಾಖೆ ಅಧಿಕಾರಿಗಳು ಮತ್ತು ಬೃಹತ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಅಧಿಕಾರಿಗಳು ಭಾಗವಹಿಸಿದ್ದರು. ಸರ್ಕಾರ ನಿಗದಿ ಮಾಡಿರುವ ದಿನಾಂಕದಿಂದ ರೈಲು ಸೇವೆಯನ್ನು ಪುನಾರಂಭಿಸುವಂತೆ ಮುಂಬೈ ಟ್ರಾಫಿಕ್ ಕಂಟ್ರೋಲ್ ಡಿಪಾರ್ಟ್ಮೆಂಟ್ ಸ್ಟೇಷನ್ ಮಾಸ್ಟರ್ಸ್​ಗಳಿಗೆ ಪತ್ರ ಕಳಿಸಿದ್ದಾರೆ ಎಂದು ವರದಿಯಾಗಿದೆ.

ರೈಲು ಸೇವೆಗಳನ್ನು ಪುನರಾರಂಭಿಸುವ ಸಂಬಂಧ ಹಲವು ಮಾರ್ಗಗಳ ಕುರಿತು ರಾಜ್ಯ ಸರ್ಕಾರ ಚರ್ಚೆ ನಡೆಸಿದೆ. ಪೀಕ್ ಸಮಯ ಹೊರತುಪಡಿಸಿದ ಸಮಯದಲ್ಲಿ ಮಾತ್ರ ಪೂರ್ಣ ಪ್ರಮಾಣದ ಸೇವೆಗಳನ್ನು ಪುನರಾರಂಭಿಸಲಾಗುವುದು ಎಂದು ಅಧಿಕಾರಿಯೊಬ್ಬರು ಈ ಹಿಂದೆ ತಿಳಿಸಿದ್ದರು. ಮಹಾರಾಷ್ಟ್ರ ಸರ್ಕಾರವು ರಾಜ್ಯದಲ್ಲಿ ಕೊರೋನಾ ವೈರಸ್ ಪ್ರೇರಿತ ಲಾಕ್‌ಡೌನ್ ನಿರ್ಬಂಧಗಳನ್ನು ಫೆಬ್ರವರಿ 28 ರವರೆಗೆ ವಿಸ್ತರಿಸಿದೆ. ನಿರ್ಬಂಧಗಳನ್ನು ಹಂತಹಂತವಾಗಿ ತೆರವುಗೊಳಿಸುವ ಸಲುವಾಗಿ 'ಮಿಷನ್ ಬಿಗಿನ್ ಎಗೇನ್' ಯೋಜನೆಯನ್ನು ಕಾರ್ಯಗತಗೊಳಿಸಿದೆ. ಸರ್ಕಾರದ ಮಾರ್ಗಸೂಚಿಗಳು ಫೆಬ್ರವರಿ 28 ರವರೆಗೆ ಜಾರಿಯಲ್ಲಿರುತ್ತವೆ.
Published by: HR Ramesh
First published: January 29, 2021, 4:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories