26/11: ಹುತಾತ್ಮರಿಗೆ ಮುಂಬೈ ಇಂಡಿಯನ್ಸ್​ ತಂಡದಿಂದ ವಿಶೇಷ ಗೌರವಾರ್ಪಣೆ

mumbai indians

mumbai indians

ಹತ್ತು ವರ್ಷಗಳ ಹಿಂದೆ ನಡೆದ ಈ ದಾಳಿಯನ್ನು ದೇಶದ ಇತಿಹಾಸದಲ್ಲೇ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ಎಂದು ಪರಿಗಣಿಸಲಾಗಿದೆ.

  • News18
  • 3-MIN READ
  • Last Updated :
  • Share this:

ಮುಂಬೈ: ಅದು 26 ನವೆಂಬರ್ 2008. ಭಾರತದ ಪಾಲಿಗೆ ಕರಾಳ ದಿನ. ಪಾಕಿಸ್ತಾನದ ಹತ್ತು ಉಗ್ರರು ಸಮುದ್ರ ಮಾರ್ಗದ ಮೂಲಕ ನಮ್ಮ ದೇಶದೊಳಗೆ ನುಸುಳಿದ್ದರು. ವಾಣಿಜ್ಯ ನಗರಿ ಮುಂಬೈಯ 7 ಕಡೆ ದಾಳಿ ನಡೆಸಿ, 166 ಜನರನ್ನು ಬಲಿ ತೆಗೆದು ರೌದ್ರನರ್ತನ ಮೆರೆದಿದ್ದರು. ಉಗ್ರರ ಆರ್ಭಟವನ್ನು ಕೆಚ್ಚೆದೆಯಿಂದ ಎದುರಿಸಿದ ಅನೇಕ ಭದ್ರತಾ ಸಿಬ್ಬಂದಿಗಳು ಹುತಾತ್ಮರಾದರು.

ಇನ್ನು ಹಲವರು ಗಾಯಗೊಂಡರು. ಅನೀರಿಕ್ಷಿತವಾಗಿ ಭಾರತದ ಮೇಲಾದ ಈ ಗಾಯಕ್ಕೆ ಇಂದಿಗೆ ಹತ್ತು ವರ್ಷ. ಎಲ್ಲೆಡೆಯು ಭದ್ರತಾ ಸಿಬ್ಬಂದಿಗಳ ಶೌರ್ಯಕ್ಕೆ ಗೌರವ ಸಲ್ಲಿಸಲಾಗುತ್ತಿದೆ. ಈ ವಿಷಯದಲ್ಲಿ ಐಪಿಎಲ್ ತಂಡ ಮುಂಬೈ ಇಂಡಿಯನ್ಸ್ ಕೂಡ ಹಿಂದೆ ಬಿದ್ದಿಲ್ಲ.

26/11 ಹುತಾತ್ಮರ ಗೌರವಾರ್ಥಕವಾಗಿ ಮುಬೈ ಇಂಡಿಯನ್ಸ್​ ತಂಡದ ಆಡಳಿತ ಮಂಡಳಿಯು ದಾಳಿ ನಡೆದಿದ್ದ ನಗರ ಪ್ರಮುಖ ಭಾಗದಲ್ಲಿ ತಂಡದ ಹೆಲ್ಮೆಟ್ ಮತ್ತು ಕ್ರಿಕೆಟ್ ಬ್ಯಾಟ್​ ಇಟ್ಟು ಗೌರವ ಸೂಚಿಸಿದೆ. ಹಾಗೆಯೇ ಈ ಫೋಟೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.



26/11ರಲ್ಲಿ ಹುತಾತ್ಮರಾದ ನಿಜವಾದ ಹೀರೋಗಳಿಗೆ ಮತ್ತು ಬತ್ತದ ಜೀವನ ಉತ್ಸಾಹಕ್ಕೆ ಸೆಲ್ಯೂಟ್ ಸಲ್ಲಿಸಿದೆ. ಈ ಮೂಲಕ ಮುಂಬೈ ಇಂಡಿಯನ್ಸ್, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರಿಗೆ ಮತ್ತು ಭದ್ರತಾ ಸಿಬ್ಬಂದಿಗಳಿಗೆ ಗೌರವ ಅರ್ಪಿಸಿದ್ದಾರೆ.



 




View this post on Instagram




 

Saluting our heroes, the martyrs of 26/11 and the undying spirit of Mumbai. #NeverForget 💙🇮🇳


A post shared by Mumbai Indians (@mumbaiindians) on





ಹತ್ತು ವರ್ಷಗಳ ಹಿಂದೆ ನಡೆದ ಈ ದಾಳಿಯನ್ನು ದೇಶದ ಇತಿಹಾಸದಲ್ಲೇ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ಎಂದು ಪರಿಗಣಿಸಲಾಗಿದೆ. ಮುಂಬೈ ಮಯಾನಗರಿಯನ್ನು ಭಯೋತ್ಪಾದಕರು ಎರಡು ದಿನಗಳ ಕಾಲ ಅಕ್ಷರಶಃ ಹಿಡಿತಕ್ಕೆ ತೆಗೆದುಕೊಂಡಿದ್ದರು. ಸಾರ್ವಜನಿಕ ಸ್ಥಳ ಮತ್ತು ತಾಜ್​ ಹೋಟೆಲ್ ಕೇಂದ್ರವಾಗಿಸಿ ದಾಳಿ ನಡೆಸಿದ್ದಉಗ್ರರ ಅಟ್ಟಹಾಸಕ್ಕೆ 166 ಮಂದಿ ಅಸುನೀಗಿದ್ದರು. ಅಲ್ಲದೆ 300 ಕ್ಕಿಂತಲೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ವೇಳೆ ಮಡಿದ ವೀರರಿಗೆ ಗೌರವ ಸೂಚಿಸಿ ಮುಂಬೈ ಇಂಡಿಯನ್ಸ್ ತಂಡ ನಿಜವಾದ ಸ್ಪಿರಿಟ್ ಮೆರೆದಿದೆ.

ಇದನ್ನೂ ಓದಿ: ಐಪಿಎಸ್ ಅಧಿಕಾರಿಯಾಗಬೇಕೆಂದು ಕನಸು ಕಾಣುತ್ತಿರುವ ಉಗ್ರ ಕಸಬ್ 'ಕಲ್ಪಿತ ಮಗಳು'

First published: