ಮುಂಬೈನ ಜಿಎಸ್​ಟಿ ಭವನದಲ್ಲಿ ಭಾರೀ ಅಗ್ನಿ ಅವಘಡ

ಇಲ್ಲಿ ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ 10 ಮಹಡಿಯ ಈ ಕಟ್ಟಡದೊಳಗೆ ಸಾವಿರಾರು ಜನರಿದ್ದರೆನ್ನಲಾಗಿದೆ. ಆದರೆ, ಎಲ್ಲರನ್ನೂ ಸುರಕ್ಷಿತವಾಗಿ ಕೆಳಗಿಳಿಸಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

news18
Updated:February 17, 2020, 3:45 PM IST
ಮುಂಬೈನ ಜಿಎಸ್​ಟಿ ಭವನದಲ್ಲಿ ಭಾರೀ ಅಗ್ನಿ ಅವಘಡ
ಮುಂಬೈನ ಜಿಎಸ್​ಟಿ ಭವನದಲ್ಲಿ ಅಗ್ನಿ ಆಕಸ್ಮಿಕ
  • News18
  • Last Updated: February 17, 2020, 3:45 PM IST
  • Share this:
ಮುಂಬೈ(ಫೆ. 17): ಮಹಾರಾಷ್ಟ್ರ ರಾಜಧಾನಿ ನಗರದಲ್ಲಿ ಮತ್ತೊಂದು ಬೆಂಕಿ ದುರಂತ ಸಂಭವಿಸಿದೆ. ಬೈಕುಲ್ಲಾ ಈಸ್ಟ್ ಭಾಗದ ಮಜಗಾಂವ್​ನಲ್ಲಿರುವ ಜಿಎಸ್​ಟಿ ಭವನದ 8ನೇ ಮಹಡಿಯಲ್ಲಿ ಇಂದು ಮಧ್ಯಾಹ್ನ ದೊಡ್ಡ ಮಟ್ಟದಲ್ಲಿ ಬೆಂಕಿ ತಗುಲಿದೆ. ಆದರೆ, ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ಇನ್ನೂ ವರದಿಯಾಗಿಲ್ಲ. ಇಲ್ಲಿ ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ 10 ಮಹಡಿಯ ಈ ಕಟ್ಟಡದೊಳಗೆ ಸಾವಿರಾರು ಜನರಿದ್ದರೆನ್ನಲಾಗಿದೆ. ಆದರೆ, ಎಲ್ಲರನ್ನೂ ಸುರಕ್ಷಿತವಾಗಿ ಕೆಳಗಿಳಿಸಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಎಂಟು ಅಗ್ನಿಶಾಮಕ ವಾಹನ ಹಾಗೂ ನೀರಿನ ಟ್ಯಾಂಕರ್​ಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕೆಲಸ ಮಾಡುತ್ತಿವೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರೂ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಅವಲೋಕಿಸಿದ್ಧಾರೆ. ಅವಘಡಕ್ಕೆ ಸಿಲುಕಿರುವ ಕಟ್ಟಡದ ಎದುರೇ ಇದ್ದ ಸೇಂಟ್ ಪೀಟರ್ಸ್ ಶಾಲೆಯನ್ನು ಮುಂಜಾಗ್ರತಾ ಕ್ರಮವಾಗಿ ಬಂದ್ ಮಾಡಲಾಗಿದೆ.

ಇದನ್ನೂ ಓದಿ: ಸುಪ್ರೀಂ ತರಾಟೆ ಬೆನ್ನಲ್ಲೇ ರೂ. 10 ಸಾವಿರ ಕೋಟಿ ಬಾಕಿ ಹಣ ಟೆಲಿಕಾಂ ಇಲಾಖೆಗೆ ಸಲ್ಲಿಸಿದ ಏರ್​ಟೆಲ್​

ಜಿಎಸ್​​ಟಿ ಭವನದಲ್ಲಿದ್ದ ಪ್ರತಿಯೊಬ್ಬ ವ್ಯಕ್ತಿಯೂ ಸುರಕ್ಷಿತವಾಗಿ ಆಚೆ ಬಂದಿರಬಹುದು ಎಂದು ನಂಬಲಾಗಿದೆ. ಯಾರೂ ಕೂಡ ಇನ್ನುವರೆಗೂ ಮಿಸ್ಲಿಂಗ್ ಕಂಪ್ಲೇಂಟ್ ನೀಡಿಲ್ಲ. ಬೆಂಕಿ ನಂದಿಸಿದ ಬಳಿಕ ವಸ್ತುಸ್ಥಿತಿ ಗೊತ್ತಾಗಲಿದೆ ಎಂದು ಜಿಎಸ್​ಟಿ ವಿಶೇಷ ಆಯುಕ್ತರು ಹೇಳಿದ್ಧಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: February 17, 2020, 3:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading