HOME » NEWS » National-international » MUMBAI FIRE INCIDENT 2 KILLED IN BLAZE AT COVID HOSPITAL SETUP IN A MALL SNVS

Mumbai Fire - ಮುಂಬೈ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿಅವಘಡ; ಇಬ್ಬರ ಸಾವು

ಮಹಾರಾಷ್ಟ್ರ ರಾಜಧಾನಿ ಮುಂಬೈ ನಗರದ ಡ್ರೀಮ್ಸ್ ಮಾಲ್​ನಲ್ಲಿ ಸ್ಥಾಪಿತವಾಗಿದ್ದ ಕೋವಿಡ್ ಆಸ್ಪತ್ರೆಯೊಂದರಲ್ಲಿ ನಿನ್ನೆ ತಡರಾತ್ರಿ ಬೆಂಕಿ ಅಪಘಾತವಾಗಿದ್ದು, ಕನಿಷ್ಠ ಇಬ್ಬರು ಸಾವನ್ನಪ್ಪಿರುವುದು ತಿಳಿದುಬಂದಿದೆ.

news18
Updated:March 26, 2021, 8:27 AM IST
Mumbai Fire - ಮುಂಬೈ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿಅವಘಡ; ಇಬ್ಬರ ಸಾವು
ಮುಂಬೈನ ಭಾಂಡುಪ್​ನಲ್ಲಿ ಅಗ್ನಿಅವಘಡ
  • News18
  • Last Updated: March 26, 2021, 8:27 AM IST
  • Share this:
ಮುಂಬೈ(ಮಾ. 26): ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿನ ಕೋವಿಡ್-19 ಆಸ್ಪತ್ರೆಯೊಂದರಲ್ಲಿ ನಿನ್ನೆ ತಡರಾತ್ರಿ ಅಗ್ನಿ ದುರಂತ ಸಂಭವಿಸಿದ್ದು, ಎರಡಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದು ವರದಿಯಾಗಿದೆ. ಮುಂಬೈನ ಭಾಂಡುಪ್​ನಲ್ಲಿರುವ ಡ್ರೀಮ್ಸ್ ಮಾಲ್​ನಲ್ಲಿ ಸ್ಥಾಪಿಸಲಾಗಿದ್ದ ಸನ್​ರೈಸ್ ಹಾಸ್ಪಿಟಲ್​​ನಲ್ಲಿ ರಾತ್ರಿ 12:30ರ ವೇಳೆಯಲ್ಲಿ ಈ ಅವಘಡವಾಗಿದೆ. ಈ ವೇಳೆ ಆಸ್ಪತ್ರೆಯಲ್ಲಿ 70ಕ್ಕೂ ಹೆಚ್ಚು ರೋಗಿಗಳು ಇದ್ದರೆನ್ನಲಾಗಿದೆ. ಬೆಂಕಿ ದುರಂತವಾದ ಬಳಿಕ ಬಹುತೇಕ ರೋಗಿಗಳನ್ನ ಕೂಡಲೇ ಸ್ಥಳಾಂತರ ಮಾಡಲಾಗಿದೆ. ಆದರೆ, ಬೆಂಕಿ ಹೊತ್ತಿಕೊಳ್ಳಲು ಕಾರಣ ಏನೆಂದು ಗೊತ್ತಾಗಿಲ್ಲ. ತನಿಖೆ ನಡೆಯುತ್ತಿದೆ.

ಭಾಂಡುಪ್​ನಲ್ಲಿರುವ ಡ್ರೀಮ್ಸ್ ಮಾಲ್​ನ ಮೊದಲ ಮಹಡಿಯಲ್ಲಿ ಬೆಂಕಿ ಮೊದಲು ಕಾಣಿಸಿಕೊಂಡಿತು. 3 ಅಥವಾ 4ನೇ ಮಟ್ಟದಲ್ಲಿ ಸಂಭವಿಸಿದ ಅಗ್ನಿ ದುರಂತ ಇದಾಗಿದೆ. ಸುಮಾರು 22 ಅಗ್ನಿಶಾಮಕ ವಾಹನಗಳ ಮೂಲಕ ಬೆಂಕಿ ನಂದಿಸುವ ಕೆಲಸ ನಡೆದಿದೆ.
ಮಾಲ್​ನಲ್ಲಿ ಕೋವಿಡ್ ಆಸ್ಪತ್ರೆ ಸ್ಥಾಪಿಸಿದ್ದಕ್ಕೆ ಬಹಳಷ್ಟು ಆಕ್ಷೇಪಗಳು ವ್ಯಕ್ತವಾಗಿವೆ. ಈ ವಿಷಯವಾಗಿ ಮುಂಬೈ ಮೇಯರ್ ಕೂಡ ಅಸಮಾಧಾನಗೊಂಡಿದ್ದಾರೆ. ಮಾಲ್​ನಲ್ಲಿ ಆಸ್ಪತ್ರೆ ಮಾಡಿದ್ದನ್ನು ತಾನು ಇದೇ ಮೊದಲು ನೋಡಿದ್ದಾಗಿ ಅವರು ಆಕ್ರೋಶ ಹೊರಹಾಕಿದ್ದು, ಈ ಸಂಬಂಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ಧಾರೆ.ಎಎನ್​ಐ ಸುದ್ದಿ ಸಂಸ್ಥೆ ವರದಿ
Published by: Vijayasarthy SN
First published: March 26, 2021, 8:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories