ಮುಂಬೈನ ಕ್ರಿಸ್ಟೆಲ್​ ಟವರ್​ನಲ್ಲಿ ಬೆಂಕಿ ಅನಾಹುತ; ನಾಲ್ಕು ಮಂದಿ ಸಾವು

news18
Updated:August 22, 2018, 11:59 AM IST
ಮುಂಬೈನ ಕ್ರಿಸ್ಟೆಲ್​ ಟವರ್​ನಲ್ಲಿ ಬೆಂಕಿ ಅನಾಹುತ; ನಾಲ್ಕು ಮಂದಿ ಸಾವು
news18
Updated: August 22, 2018, 11:59 AM IST
ನ್ಯೂಸ್​ 18

ಮಹಾರಾಷ್ಟ್ರ (ಆ.22): ಮುಂಬೈನ ಕ್ರಿಸ್ಟಲ್​ ಟವರ್​ನ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು,  ದುರಂತದಲ್ಲಿ  ನಾಲ್ವರು ಸಾವನ್ನಪ್ಪಿದ್ದು, 10ಜನ ಗಂಭೀರ ಗಾಯಗೊಂಡಿದ್ದಾರೆ

16 ಅಂತಸ್ತಿನ ಕಟ್ಟಡದ 9 ಮತ್ತು 10 ನೇ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿ ಶಾಮಕದಳ ಕಟ್ಟಡದಲ್ಲಿ ಸಿಲುಕಿದವರ ರಕ್ಷಣೆ ಮಾಡಿದ್ದಾರೆ.


Loading...

ಶಾರ್ಟ್ ಸರ್ಕ್ಯೂಟ್​ ಅಗ್ನಿ ಅನಾಹುತಕ್ಕೆ ಕಾರಣವಾಗಿದೆ.  ಸ್ಥಳಕ್ಕೆ 20 ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದು, ರಕ್ಷಣೆಯಲ್ಲಿ ತೊಡಗಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಂಬೈನಲ್ಲಿ ಈ ರೀತಿಯ ಬೆಂಕಿ ದುರಂತಗಳು ಸಂಭವಿಸುತ್ತಲೆ ಇದ್ದು, ಕಳೆದ ಜೂನ್​ನಲ್ಲಿ ಬಿಯೊಮೊಂಡೆ ಟವರ್​ನಲ್ಲಿ ಅಗ್ನಿ ಅನಾಹುತ ಸಂಭವಿಸಿತ್ತು. ಸತತ ಐದು ಘಂಟೆ ಕಾರ್ಯಚಾರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಈ ಅವಘಡದಲ್ಲಿ ಸಿಲುಕಿದ್ದ 90 ಜನರನ್ನು ರಕ್ಷಿಸಲಾಗಿದೆ.
First published:August 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ