Mumbai Drug Bust: ಹಡಗಿನಲ್ಲಿ ರೇವ್​ ಪಾರ್ಟಿ ಮಾಡುತ್ತಿದ್ದವರ ಮೇಲೆ ಎನ್​ಸಿಬಿ ದಾಳಿ; ಬಾಲಿವುಡ್ ಸ್ಟಾರ್ ಮಗನ ವಿಚಾರಣೆ

ದಾಳಿಯಲ್ಲಿ ಇಬ್ಬರು ಮಹಿಳೆಯರನ್ನು ಒಳಗೊಂಡಂತೆ 8 ಮಂದಿಯನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಅವರ ಪಾತ್ರವೇನು ಎಂಬುದನ್ನು ತನಿಖೆ ಮಾಡಲಾಗುತ್ತಿದೆ.

ಶಾರೂಖ್ ಖಾನ್-ಮಗ ಆರ್ಯನ್ ಖಾನ್

ಶಾರೂಖ್ ಖಾನ್-ಮಗ ಆರ್ಯನ್ ಖಾನ್

 • Share this:
  ನವದೆಹಲಿ(ಅ.03): ಐಷಾರಾಮಿ ಹಡಗೊಂದರಲ್ಲಿ ರೇವ್​ ಪಾರ್ಟಿ ಮಾಡುತ್ತಿದ್ದವರ ಮೇಲೆ ಎನ್​ಸಿಬಿ(Narcotics Control Bureau -NCB) ಅಧಿಕಾರಿಗಳು ದಾಳಿ ನಡೆಸಿ ಒಟ್ಟು 08 ಮಂದಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ. ಎನ್​ಸಿಬಿ ಮೂಲಗಳ ಪ್ರಕಾರ, ಬಾಲಿವುಡ್ ಸ್ಟಾರ್​​ ಮಗನನ್ನೂ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.   

  ಏನಿದು ಘಟನೆ?

  ವಾಣಿಜ್ಯ ನಗರಿ ಮುಂಬೈನ ಐಷಾರಾಮಿ ಹಡಗೊಂದರ ಒಳಗೆ ರೇವ್ ಪಾರ್ಟಿ ನಡೆಯುತ್ತಿತ್ತು. ಈ ವೇಳೆ ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ (ಎನ್​​ಸಿಬಿ) ಅಧಿಕಾರಿಗಳು ದಾಳಿ ನಡೆಸಿ ಕೊಕೇನ್, ಹಶೀನ್ ಮತ್ತು ಎಂಡಿಎಂಎ ಸೇರಿದಂತೆ ಅನೇಕ ಅಕ್ರಮ ಡ್ರಗ್ಸ್​​ಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಡಿಲಿಯಾ ಕ್ರೂಸ್​ ಎಂಪ್ರೆಸ್​ ಹಡಗಿನ ಮೇಲೆ ಎನ್​ಸಿಬಿ ದಾಳಿ ನಡೆಸಿದೆ.

  ದಾಳಿಯಲ್ಲಿ ಮೂವರು ಮಹಿಳೆಯರು ಸೇರಿ ಒಟ್ಟು 8 ಮಂದಿಯನ್ನು ಬಂಧಿಸಲಾಗಿದೆ. ಮಹಿಳೆಯರು ದೆಹಲಿ ಮೂಲದವರು ಎನ್ನಲಾಗುತ್ತಿದೆ.  ಜೊತೆಗೆ ಮುಂಬೈ ರೇವ್ ಪಾರ್ಟಿ ಆಯೋಜಕರಿಗೆ ಎನ್​ಸಿಬಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಎನ್​ಸಿಬಿ ಕಚೇರಿಗೆ ವಿಚಾರಣೆಗೆ ಬರುವಂತೆ ಆಯೋಜಕರಿಗೆ ಸಮನ್ಸ್ ನೀಡಲಾಗಿದೆ.

  ಇದನ್ನೂ ಓದಿ:New District Vijayanagar: ರಾಜ್ಯದ 31ನೇ ಜಿಲ್ಲೆಯಾಗಿ ಉದ್ಘಾಟನೆಗೊಂಡ ‘ವಿಜಯನಗರ‘; 2 ದಶಕಗಳ ನಿರಂತರ ಹೋರಾಟಕ್ಕೆ ಸಂದ ಜಯ

  ಎನ್​ಸಿಬಿ ಅಧಿಕಾರಿಗಳ ತಂಡ ನಿನ್ನೆಯೇ ಮುಂಬೈಗೆ ಆಗಮಿಸಿದ್ದರು. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ಇಂದು ಕಾರ್ಡೆಲಿಯಾ ಕ್ರೂಸ್(ಹಡಗು)​ ಮೇಲೆ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆ ಸಮಯದಲ್ಲಿ ಶಂಕಿತರನ್ನು ವಶಕ್ಕೆ ಪಡೆದು, ಕೊಕೇನ್, ಎಂಡಿಎಂಎ ಇನ್ನಿತರೆ ಡ್ರಗ್​ಗಳನ್ನು ಪತ್ತೆ ಹಚ್ಚಲಾಯಿತು. ಶೋಧನೆ ವೇಳೆ ಪತ್ತೆಯಾದ ಡ್ರಗ್​ನ್ನು ಎನ್​ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

  ದಾಳಿಯಲ್ಲಿ ಮೂವರು ಮಹಿಳೆಯರನ್ನು ಒಳಗೊಂಡಂತೆ 8 ಮಂದಿಯನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಅವರ ಪಾತ್ರವೇನು ಎಂಬುದನ್ನು ತನಿಖೆ ಮಾಡಲಾಗುತ್ತಿದೆ. ಎನ್​ಸಿಬಿ ಮುಂಬೈ ಅಧಿಕಾರಿಗಳು ಅಪರಾಧ ಸಂಖ್ಯೆ Cr 94/21 ನ್ನು ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ.

  ಬಾಲಿವುಡ್ ಸ್ಟಾರ್​ಮಗನ ಬಂಧನ ಸಾಧ್ಯತೆ?

  ಈಗಾಗಲೇ ಬಾಲಿವುಡ್ ಸ್ಟಾರ್​ ಮಗನ ಮೊಬೈಲ್​ನ್ನು ವಶಕ್ಕೆ ಪಡೆದಿರುವ ಎನ್​ಸಿಬಿ ಅಧಿಕಾರಿಗಳು, ವಾಟ್ಸ್ಯಾಪ್​ ಚಾಟ್​​ನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ, ವಿಚಾರಣೆ ಬಳಿಕ ಸ್ಟಾರ್​ ಮಗನನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.  ಆತನ ಅಧಿಕಾರಿಗಳ ಮುಂದೆ ಸ್ಪೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ ಎಂದು ತಿಳಿದು ಬಂದಿದೆ. ನಿರಂತರವಾಗಿ ಡ್ರಗ್ಸ್​ ಬುಕ್ ಮಾಡಿರುವ ಬಗ್ಗೆ ಎನ್​ಸಿಬಿ ಅಧಿಕಾರಿಗಳ ಮುಂದೆ ಬಾಯಿ ಬಿಟ್ಟಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಹೀಗಾಗಿ ವಿಚಾರಣೆ ಬಳಿಕ ಎನ್​ಸಿಬಿ ಅಧಿಕಾರಿಗಳು ಖ್ಯಾತ ಬಾಲಿವುಡ್ ಸ್ಟಾರ್​ ಮಗನನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
  Published by:Latha CG
  First published: