Raj Kundra : ಅಶ್ಲೀಲ ಚಿತ್ರ ಪ್ರಕರಣ: ರಾಜ್​ ಕುಂದ್ರಾಗೆ ಜಾಮೀನು ಮಂಜೂರು

ಪ್ರಕರಣದಲ್ಲಿ ಬಂಧಿಯಾರಗಿರುವ ಮತ್ತೊಬ್ಬ ಆರೋಪಿಯಾದ ರಾಜ್ ಕುಂದ್ರಾ ಸಂಸ್ಥೆಯೊಂದರ ಐಟಿ ಮುಖ್ಯಸ್ಥ ರಯಾನ್ ಥಾರ್ಪೆಗೆ ಕೂಡ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ರಾಜ್​ ಕುಂದ್ರಾ

ರಾಜ್​ ಕುಂದ್ರಾ

  • Share this:
    ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಜೈಲು ಸೇರಿದ್ದ ಬಾಲಿವುಡ್​ ಬೆಡಗಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್​ ಕುಂದ್ರಾಗೆ (Raj Kundra) ಮುಂಬಯಿ ನ್ಯಾಯಾಲಯ (Mubai Court) ಜಾಮೀನು ನೀಡಿದೆ. 50 ಸಾವಿರ ಶ್ಯೂರಿಟಿಯೊಂದಿಗೆ ನ್ಯಾಯಾಲಯ ಜಾಮೀನು ನೀಡಿದೆ. ಈ ಹಿಂದೆ ಜಾಮೀನು ಕೋರಿ ರಾಜ್​ ಕುಂದ್ರಾ ಸೆಷನ್ಸ್​ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಸೆಷನ್ಸ್​ ನ್ಯಾಯಾಲಯ ಈ ಅರ್ಜಿ ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಅವರು ಬಾಂಬೆ ಹೈ ಕೋರ್ಟ್​ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಅವರಿಗೆ ಜಾಮೀನು ನೀಡಿದೆ.

    ಪ್ರಕರಣದಲ್ಲಿ ಬಂಧಿಯಾರಗಿರುವ ಮತ್ತೊಬ್ಬ ಆರೋಪಿಯಾದ ರಾಜ್ ಕುಂದ್ರಾ ಸಂಸ್ಥೆಯೊಂದರ ಐಟಿ ಮುಖ್ಯಸ್ಥ ರಯಾನ್ ಥಾರ್ಪೆಗೆ ಕೂಡ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

    ಉದ್ಯಮಿ ರಾಜ್​ ಕುಂದ್ರಾ ಪರವಾಗಿ ವಾದಿಸಿದ ವಕೀಲ ಪ್ರಶಾಂತ್​ ಪಾಟೀಲ್​, ವಿಡಿಯೋ ತಾಣಗಳಿಗೆ ಯಾವ ರೀತಿಯ ವಿಷಯವನ್ನು ಅಪ್ಲೋಡ್ ಮಾಡಬೇಕೆಂದು ಸೆಲೆಬ್ರಿಟಿ ಮತ್ತು ನಿರ್ಮಾಪಕರು ನಿರ್ಧರಿಸುತ್ತಾರೆ. ಏನನ್ನು ಅಪ್‌ಲೋಡ್ ಮಾಡಬೇಕೆಂದು ಕುಂದ್ರಾ ಅಥವಾ ರಯಾನ್ ನಿರ್ಧರಿಸಲಿಲ್ಲ. 1400 ಪುಟಗಳ ಚಾರ್ಜ್‌ಶೀಟ್‌ನಲ್ಲಿ, ಕುಂದ್ರಾ ಅಪ್‌ಲೋಡ್ ಮಾಡುತ್ತಿರುವುದನ್ನು ತೋರಿಸುವ ಒಂದು ಸಾಕ್ಷ್ಯವೂ ಇಲ್ಲ ಎಂದು ಕೋರ್ಟ್​ಗೆ ತಿಳಿಸಿದರು.

    ಇದನ್ನು ಓದಿ: ಇಂಧನದ ಬೆಲೆ ಕಡಿತಗೊಳಿಸಿ ಎಂಬ ನೈತಿಕತೆ ಕಾಂಗ್ರೆಸ್​ಗೆ ಇಲ್ಲ; ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ತಿರುಗೇಟು

    ಇನ್ನು ರಾಜ್​ ಕುಂದ್ರಾ ಅವರಿಗೆ ಜಾಮೀನು ನೀಡಿದರೆ ಸಾಕ್ಷ್ಯಾ ನಾಶ ಮಾಡುವ ಸಾಧ್ಯತೆ ಇದೆ ಎಂದು ಪ್ರಾಸಿಕ್ಯೂಷನ್​ ಪ್ರತಿವಾದಿಸಿತು.

    ಇಂದು ಸಂಜೆ ಪ್ರಕರಣ ಆಲಿಸಿದ ನ್ಯಾಯಾಲಯ ಜಾಮೀನು ನೀಡಿದ್ದು, ನ್ಯಾಯಾಲಯದ ಕೆಲ ಕಾರ್ಯಗಳು ಮುಗಿದ ವೇಳೆ ಅವರು ಇಂದು ಜೈಲಿನಿಂದ ಬಿಡುಗಡೆಯಾಗುವುದು ಅನುಮಾನವಾಗಿದೆ. ನಾಳೆ ಅಥವಾ ನಾಡಿದ್ದು, ರಾಜ್​ ಕುಂದ್ರಾ ಬಿಡುಗಡೆ ಆಗಲಿದ್ದಾರೆ.

    ಇದನ್ನು ಓದಿ: ಕೋವಿಡ್ ಸಂದರ್ಭದಲ್ಲಿ ಮಾನವೀಯತೆ ಮೆರೆದ ನಟ ಸೋನು ಸೂದ್ ತೆರಿಗೆ ವಂಚಿಸಿದ್ದಾರೆಯೇ?

    ಕಳೆದ ಎರಡು ತಿಂಗಳ ಹಿಂದೆ ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣ (pornography) Case ಸಂಬಂಧಿಸಿದಂತೆ ಮುಂಬೈ ಪೊಲೀಸರು ಉದ್ಯಮಿ ರಾಜ್​ ಕುಂದ್ರಾ ಅವರನ್ನು ಬಂಧಿಸಿದ್ದರು. ರಾಜ್​ ಕುಂದ್ರಾ ಜೊತೆಗೆ ಆತನ ಸಹಚರ ಮತ್ತು ಪ್ರಕರಣದ ಮತ್ತೊರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.

    ಈ ಪ್ರಕರಣದಲ್ಲಿ ತನ್ನನ್ನು ಬಲಿಪಶು ಮಾಡಲಾಗಿದೆ. ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ನಾನು ಭಾಗಿಯಾಗಿದ್ದೇನೆ ಎಂಬ ಕುರಿತು ಯಾವುದೇ ಸಾಕ್ಷಿಗಳು ಇಲ್ಲ ಎಂದು ರಾಜ್​ ಕುಂದ್ರಾ ಅರ್ಜಿಯಲ್ಲಿ ತಿಳಿಸಿದ್ದರು.  ಕಳೆದ ಗುರುವಾರ ಉದ್ಯಮಿ ರಾಜ್​ ಕುಂದ್ರಾ ಮೇಲೆ 1400 ಪುಟಗಳ ಚಾರ್ಜ್​ ಶೀಟ್​ ಅನ್ನು ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

    ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಮುಂಬೈ ಪೊಲೀಸರು ಎಲ್ಲಾ ದಿಕ್ಕುಗಳಿಂದಲೂ ತನಿಖೆ ನಡೆಸುತ್ತಿದ್ದರು.  ರಾಜ್​ಕುಂದ್ರಾರ ಪೋರ್ನ್​​ ಆ್ಯಪ್​, ಅಕ್ರಮವಾಗಿ ಕೋಟ್ಯಂತರ ರೂಪಾಯಿ ಗಳಿಕೆ ಸಂಬಂಧ ಹಲವು ಸಂಗತಿಗಳು  ಕುರಿತು ಕೆದಕಿ ವಿಚಾರಣೆ ನಡೆಸಿದ್ದರು. ಇನ್ನು ಈ ಪ್ರಕರಣದಿಂದ ಸಾಕಷ್ಟು ಮುಜಗರಕ್ಕೆ ಒಳಗಾಗಿರುವ ನಟಿ ಶಿಲ್ಪಾ ಶೆಟ್ಟಿ ಸಾಕಷ್ಟು ವಿಚಲಿತರಾಗಿದ್ದು, ರಾಜ್​ ಕುಂದ್ರಾ ಅವರಿಂದ ದೂರ ಆಗಬೇಕು ಎಂದು ನಿರ್ಧರಿಸಲಿದ್ದಾರೆ ಎನ್ನಲಾಗಿತ್ತು. ಪ್ರಕರಣ ಕುರಿತು ನಟಿ ಶಿಲ್ಪಾ ಶೆಟ್ಟಿ  ಅವರನ್ನು ತನಿಖೆಗೆ ಒಳಪಡಿಸಲಾಗಿತ್ತು. ಈ ವೇಳೆ ಹೇಳಿಕೆ ದಾಖಲಿಸಿರುವ ಅವರು, ತಮ್ಮ ಕಾರ್ಯದಲ್ಲಿ ತಾವು ಮುಳುಗಿದ ಹಿನ್ನಲೆ ರಾಜ್​ ಕುಂದ್ರಾ ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ಹೆಚ್ಚು ಚಿಂತಿಸಲಯ ಹೋಗಲಿಲ್ಲ ಎಂದಿದ್ದರು.
    Published by:Seema R
    First published: