50 ಮಕ್ಕಳ ದತ್ತು ಪಡೆದ ಮಹಿಳಾ ಕಾನ್ಸ್​ಟೇಬಲ್​; ಈಕೆ ಮುಂಬೈನ ಮದರ್​ ತೆರೇಸಾ

ರೆಹಾನಾ ಇಂದು 50 ಮಕ್ಕಳ ತಾಯಿಯಾಗಿರುವ ಮಹಿಳೆಯ ಈಕೆ 2000ರಲ್ಲಿ ಪೊಲೀಸ್​ ಕಾನ್​ಸ್ಟೇಬಲ್​ ಆಗಿ ಸೇರಿಕೊಂಡಿದ್ದ ಇವರು ಇಂದು ಅನಾಥ ಮಕ್ಕಳ ತಾಯಿಯಾಗಿದ್ದಾರೆ.

ರೆಹಾನಾ

ರೆಹಾನಾ

 • Share this:
  ಜಾಗತಿಕ ಸೋಂಕು ಕೋವಿಡ್​ ದೇಶದ ಜನರನ್ನು ಮಾತ್ರವಲ್ಲದೇ, ಆರ್ಥಿಕತೆ, ವೈದ್ಯಕೀಯ ಸೌಲಭ್ಯವನ್ನು ಸಂಕಷ್ಟಕ್ಕೆ ದೂಡಿತು. ಸೋಂಕಿನಿಂದ ತತ್ತರಿಸಿದ ಅದೆಷ್ಟೋ ಪ್ರೀತಿ ಪಾತ್ರರು ನಮ್ಮ ತೊರೆದು ಹೋದರು. ಇದರಿಂದ ಅದೆಷ್ಟೋ ಮಕ್ಕಳು ಇಂದು ಅನಾಥರಾಗಿದ್ದಾರೆ. ತಮ್ಮ ಬಾಲ್ಯವನ್ನು ಅಪ್ಪ-ಅಮ್ಮನ ಜೊತೆ ಕಳೆಯಬೇಕಿದ್ದ ಅನೇಕ ಮಕ್ಕಳು ಇಂದು ಏಕ ಪೋಷಕರ ಆಸರೆಗೆ ಒಳಗಾಗಿದ್ದಾರೆ. ಮತ್ತೆ ಕೆಲವರು ಒಟ್ಟಿಗೆ ಅಪ್ಪ-ಅಮ್ಮ ಇಬ್ಬರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಇಂತಹ ಅದೆಷ್ಟೋ ಅನಾಥ, ನಿರ್ಗತಿಕ ಮಕ್ಕಳು ಆಸರೆಗಾಗಿ ಎದುರು ನೋಡುತ್ತಿದ್ದಾರೆ. ಇಂತಹ ನಿರ್ಗತಿಕ ಬುಡಕಟ್ಟು ಮಕ್ಕಳ ಪಾಲಿಗೆ ಮುಂಬೈನ ಮಹಿಳಾ ಪೊಲೀಸ್​ ಕಾನ್ಸ್​ಟೇಬಲ್ ಒಬ್ಬರಯ​ ಆಸರೆ ಆಗಿದ್ದಾರೆ. ಮಹಾರಾಷ್ಟ್ರದ ರಾಯಗಢ್​ದ 50ಕ್ಕೂ ಹೆಚ್ಚು ಬುಡಕಟ್ಟು ಮಕ್ಕಳನ್ನು ದತ್ತು ಪಡೆಯುವ ಮೂಲಕ ಮದರ್​ ಥೆರೇಸಾ ಆಗಿದ್ದಾರೆ.

  ರೆಹಾನಾ ಇಂದು 50 ಮಕ್ಕಳ ತಾಯಿಯಾಗಿರುವ ಮಹಿಳೆಯ ಈಕೆ 2000ರಲ್ಲಿ ಪೊಲೀಸ್​ ಕಾನ್​ಸ್ಟೇಬಲ್​ ಆಗಿ ಸೇರಿಕೊಂಡಿದ್ದ ಇವರು ಇಂದು ಅನಾಥ ಮಕ್ಕಳ ತಾಯಿಯಾಗಿದ್ದಾರೆ. ಅಷ್ಟೇ ಅಲ್ಲದೇ, ನಿರ್ಗತಿಕರಿಗೆ ತಮ್ಮ ಸಹಾಯ ಹಸ್ತವನ್ನು ಚಾಚುತ್ತಿದ್ದಾರೆ.
  ವಾಲಿಬಾಲ್​ ಆಟಗಾರ್ತಿ ಕೂಡ ಆಗಿರುವ ರೆಹಾನ ಕಳೆದ ವರ್ಷ ತಮ್ಮ ಮಗಳ ಹುಟ್ಟು ಹಬ್ಬ ಆಚರಿಸಲು ರಾಯಗಢದ ವಾಜೆ ತಾಲುಕಿನ ದ್ಯಾನ್​ಜಿ ವಿದ್ಯಾಲಯಕ್ಕೆ ತೆರಳಿದ್ದರು. ಅಲ್ಲಿನ ಮಕ್ಕಳ ಸ್ಥಿತಿ ಕಂಡು ಆ ಮಕ್ಕಳ ದತ್ತು ಪಡೆಯುವ ಪ್ರಕ್ರಿಯೆ ಕುರಿತು ಅಲ್ಲಿನ ಶಾಲಾ ಪ್ರಾಶುಂಪಾಲರ ಬಳಿ ಚರ್ಚಿಸಿದರು.

  ಈ ವೇಳೆ ಶಿಸ್ತುಬದ್ಧವಾಗಿ ವರ್ತಿಸುತ್ತಿದ್ದ ಮಕ್ಕಳು ಹಿನ್ನಲೆ ಅರಿತ ಆಕೆ ಮಕ್ಕಳು ಅತ್ಯಂತ ಕಡು ಬಡತನದಿಂದ ಬಂದವರು ಎಂಬುದು ಅರಿವಾಯಿತು. ಅಲ್ಲದೇ, ಅನೇಕ ಮಕ್ಕಳಿಗೆ ಕಾಲಿಗೆ ಹಾಕಲು ಚಪ್ಪಲಿ ಸಹ ಇರಲಿಲ್ಲ. ಇವನ್ನೆಲ್ಲಾ ಗಮನಿಸಿದ ರೆಹನಾ ತಕ್ಷಣಕ್ಕೆ ಮಕ್ಕಳನ್ನು ದತ್ತು ಪಡೆಯಲು ಮುಂದಾದರು. 10ನೇ ತರಗತಿವರೆಗೆ ಮಕ್ಕಳ ಶಿಕ್ಷಣ ವೆಚ್ಚವನ್ನು ಭರಿಸುವುದಾಗಿ ತಿಳಿಸಿದರು.

  ಇದನ್ನು ಓದಿ: ಮೈಸೂರು ಅರಸು ಮನೆತನದ ಹೆಸರಲ್ಲಿ ವಂಚನೆ; ಓದಿದ್ದು 7ನೇ ಕ್ಲಾಸ್​ ಆದ್ರೂ ವಿದೇಶಿ ಭಾಷೆಯಲ್ಲಿ ನಿಪುಣ

  ಇಷ್ಟೇ ಅಲ್ಲದೇ ರೆಹನಾ, ಕೋವಿಡ್​ ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ಆಕ್ಸಿಜನ್​ ಪೂರೈಕೆ, ಮಾಸ್ಕ್​, ಲಸಿಕೆ ಪಡೆಯಲು ಸಹ ನೆರವು ನೀಡಿದ್ದಾರೆ. ತಮ್ಮ ದೈನಂದಿನ ವೃತ್ತಿ ಜೀವನದ ಜೊತೆಗೆ ಆಕೆಯ ಈ ಸೇವಾ ಮನೋಭಾವ ಅರಿತ ಪೊಲೀಸ್​ ಕಮಿಷನರ್​​ ಹೇಮಂತ್​ ನಗ್ರಲೆ ಆಕೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನಿಸಿದ್ದಾರೆ.

  ಇಷ್ಟೇ ಅಲ್ಲದೇ ರೆಹನಾ 2017ರಲ್ಲಿ ಶ್ರೀಲಂಕಾದಲ್ಲಿ ಆಯೋಜಿಸಿದ್ದ ಕ್ರೀಡಾ ಸ್ಪರ್ಧೆಯಲ್ಲಿ ಮಹಿಳಾ ಪೊಲೀಸ್​ ಪ್ರತಿನಿಧಿಯಾಗಿ ಸ್ಪರ್ಧಿಸಿ ಬೆಳ್ಳಿ ಮತ್ತು ಚಿನ್ನದ ಪದಕ ಗೆದ್ದಿದ್ದಾರೆ


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
  Published by:Seema R
  First published: