12 ಗಂಟೆ ಅವಧಿಯ ಕೇಶ ಕಸಿ ಮಾಡಿಸಿಕೊಂಡ 50 ಗಂಟೆಗಳ ನಂತರ ಸಾವನ್ನಪ್ಪಿದ ಮುಂಬೈ ಉದ್ಯಮಿ...

ಶ್ರವಣ ಕುಮಾರ ಚೌಧರಿ ಸತತ 12 ಘಂಟೆಗಳ ಕಾಲ ಆಸ್ಪತ್ರೆಯಲ್ಲಿ ಕೇಶ ಕಸಿಯನ್ನು ಮಾಡಿಕೊಂಡಿದ್ದರು. ಉಸಿರುಗಟ್ಟುವಿಕೆ ಮತ್ತು ಗಂಟಲು ಮತ್ತು ಮುಖದ ಮೇಲೆ ಊತ ಕಾಣಿಸಿಕೊಳ್ಳಲು ಶುರುವಾದ ನಂತರ ಚೌಧರಿಯವರನ್ನು ಪೊವೈ ಉಪನಗರ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತು

G Hareeshkumar | news18
Updated:March 13, 2019, 6:50 PM IST
12 ಗಂಟೆ ಅವಧಿಯ ಕೇಶ ಕಸಿ ಮಾಡಿಸಿಕೊಂಡ 50 ಗಂಟೆಗಳ ನಂತರ ಸಾವನ್ನಪ್ಪಿದ ಮುಂಬೈ ಉದ್ಯಮಿ...
ಸಾಂದರ್ಭಿಕ ಚಿತ್ರ
G Hareeshkumar | news18
Updated: March 13, 2019, 6:50 PM IST
ಮುಂಬೈ ( ಮಾ.13) :  43 ವರ್ಷ ವಯಸ್ಸಿನ ಉದ್ಯಮಿಯೊಬ್ಬರು ಸುದೀರ್ಘ 12 ಗಂಟೆಗಳ ಕೇಶ ಕಸಿ ಮಾಡಿಸಿಕೊಂಡು ಆಸ್ಪತ್ತ್ರೆಯಲ್ಲಿ ದಾಖಲಾಗಿ 50 ಗಂಟೆಗಳ ನಂತರ ಮರಣ ಹೊಂದಿರುವ ಹೃದಯ ವಿದ್ರಾವಕ ಘಟನೆ ಮುಂಬೈ ನಗರದಲ್ಲಿ ನಡೆದಿದೆ. 

ಮೃತಪಟ್ಟಿರುವ ವ್ಯಕ್ತಿಯನ್ನು ಉದ್ಯಮಿ ಶ್ರವಣಕುಮಾರ್ ಚೌಧರಿ ಎಂದು ಗುರುತಿಸಲಾಗಿದೆ. ಇವರು ಸೆಂಟ್ರಲ್ ಮುಂಬೈನಲ್ಲಿನ ಚಿಂಚ್ಪೋಕ್ಲಿ ಯಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೇಶ ಕಸಿ ಪ್ರಕ್ರಿಯೆ ಸೆಷನ್ ಗೆ ಮಾರ್ಚ್ 8 ರಂದು ಹಾಜರಾಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಶ್ರವಣ ಕುಮಾರ್ ಚೌಧರಿ ಸತತ 12 ಘಂಟೆಗಳ ಕಾಲ ಆಸ್ಪತ್ರೆಯಲ್ಲಿ ಕೇಶ ಕಸಿಯನ್ನು ಮಾಡಿಕೊಂಡಿದ್ದರು. ಉಸಿರುಗಟ್ಟುವಿಕೆ ಮತ್ತು ಗಂಟಲು ಮತ್ತು ಮುಖದ ಮೇಲೆ ಊತ ಕಾಣಿಸಿಕೊಳ್ಳಲು ಶುರುವಾದ ನಂತರ ಚೌಧರಿಯವರನ್ನು ಪೊವೈ ಉಪನಗರ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ಅಲರ್ಜಿಯ (ರಿಯಾಕ್ಷನ್) ಪ್ರತಿಕ್ರಿಯೆಯಿಂದಾಗಿ ಶನಿವಾರ (ಮಾರ್ಚ್ 9) ರಂದು ನಿಧನರಾದರು ಎನ್ನಲಾಗಿದೆ.

ಇದನ್ನೂ ಓದಿ : ಕೋಳಿ ಹಿಡಿಯಲು ಬಂದ ನರಿಯೇ ಬಲಿಯಾದ ಕಥೆ ಇದು

ವೈದ್ಯಕೀಯ ಸಲಹೆಗೆ ವಿರುದ್ಧವಾಗಿ 9000 ಕೂದಲುಗಳನ್ನು ಒಂದೇ ಬಾರಿಗೆ ಕಸಿ ಮಾಡಿಸಿಕೊಳ್ಳಬೇಕು ಎಂದು ಆ ಉದ್ಯಮಿ ಬಯಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

3000 ಕ್ಕಿಂತ ಹೆಚ್ಚಿನ ಕೂದಲುಗಳನ್ನು ಒಂದೇ ಸಲದ ಪ್ರಕ್ರಿಯೆಯಲ್ಲಿ ಪಡೆಯುವುದು ಕೂಡ ಸೂಕ್ತವಾಗಿರಲಿಲ್ಲ, ಆದರೆ ಈ ಪ್ರಕರಣದಲ್ಲಿ 12 ಗಂಟೆಗಳ ಕಾಲ ಕೇಶ ಕಸಿ ಮುಂದುವರೆಯಿತು ಎಂದು ಹೇಳಿದ್ದಾರೆ.

ಸಾವಿನ ನಿಖರವಾದ ಕಾರಣವನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಅಂತಿಮ ಮರಣೋತ್ತರ ಪರೀಕ್ಷೆ ವರದಿಯನ್ನುಕಾಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Loading...

ಇದೇ ರೀತಿ 2016ರಲ್ಲಿ ಚೈನೈನಲ್ಲಿ ಒಂದು ಘಟನೆ ನಡೆದಿತ್ತು. ಸಂತೋಷ ಎನ್ನುವ  ಅಂತಿಮ ವರ್ಷದ  ವೈದ್ಯಕೀಯ ವಿದ್ಯಾರ್ಥಿ ಕೇಶ ಕಸಿಯನ್ನು ಮಾಡಿಸಿಕೊಂಡ ಎರಡನೇ ದಿನದಲ್ಲಿ ಸಾವನಪ್ಪಿದ. ಅವನು 10 ಗಂಟೆ ಅವಧಿಯಲ್ಲಿ ಸುಮಾರು 1.200 ಕೇಶ ಕಸಿ ಮಾಡಿಸಿಕೊಂಡಿದ ಎನ್ನಲಾಗಿದೆ.

First published:March 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...