• Home
  • »
  • News
  • »
  • national-international
  • »
  • Mumbai Terror Attack: ಮುಂಬೈ ದಾಳಿಕೋರ ಅಜ್ಮಲ್ ಕಸಬ್ ಪಾಕಿಸ್ತಾನಿ ಎಂದು ಕೊನೆಗೂ ಒಪ್ಪಿಕೊಂಡ ಪಾಕ್ ಸಚಿವ..!

Mumbai Terror Attack: ಮುಂಬೈ ದಾಳಿಕೋರ ಅಜ್ಮಲ್ ಕಸಬ್ ಪಾಕಿಸ್ತಾನಿ ಎಂದು ಕೊನೆಗೂ ಒಪ್ಪಿಕೊಂಡ ಪಾಕ್ ಸಚಿವ..!

ಶೇಕ್ ರಶೀದ್

ಶೇಕ್ ರಶೀದ್

ಪಾಕ್​ನ ಓರ್ವ ಮಂತ್ರಿ ಶೇಕ್ ರಷೀದ್ ಎಂಬುವರರು ಈಗ, ಈ ಹಿಂದೆ ಮುಂಬೈ ಉಗ್ರವಾದಿ ದಾಳಿಯಲ್ಲಿ ಸಿಲುಕಿ ಹಾಕಿಕೊಂಡಿದ್ದ ಅಜ್ಮಲ್ ಕಸಬ್ ಎಂಬಾತನು ಪಾಕಿಸ್ತಾನದವನೇ ಎಂದು ಸಾಬೀತುಪಡಿಸುವಂತಹ ಹೇಳಿಕೆಯೊಂದನ್ನು ನೀಡಿ ಮತ್ತೆ ಸಂಚಲನ ಮೂಡಿಸಿದ್ದಾರೆ.

  • Share this:

ಪಾಕಿಸ್ತಾನದ (Pakistan) ಸ್ಥಿತಿಗತಿಗಳು ದಿನ ದಿನಕ್ಕೆ ಹೀನಾಯವಾಗುತ್ತಿರುವುದು ಈಗ ಎಲ್ಲರಿಗೂ ಗೊತ್ತಿರುವ ವಿಚಾರ. ರಿಯಾಸತ್-ಎ-ಮದೀನಾ ಮಾಡುವುದಾಗಿ, ಮೂರು ತಿಂಗಳಲ್ಲೇ ಲಂಚಗುಳಿತನ ಕಿತ್ತೆಸೆಯುವುದಾಗಿ, ಕಪ್ಪು ಹಣ ತರುವುದಾಗಿ, ಎಲ್ಲರಿಗೂ ಉದ್ಯೋಗ ಸಿಗುವಂತೆ ಮಾಡುವುದಾಗಿ, ಅದ್ಭುತ ನಾಡೊಂದನ್ನು ನಿರ್ಮಿಸುವೆ ಎಂಬ ಬಣ್ಣ ಬಣ್ಣದ ಮಾತುಗಳನ್ನಾಡಿ ಜನರನ್ನು ಹುಚ್ಚು ಮಾಡಿ ಪ್ರಧಾನಿ ಹುದ್ದೆ ಅಲಂಕರಿಸಿದ್ದ ಇಮ್ರಾನ್ ಖಾನ್ (Imran Khan) ತದನಂತರ ಮಾಡಿದ್ದೆಲ್ಲ ಕಾರ್ಯ ಸದ್ಯ ಪಾಕಿಸ್ತಾನವು ಪಾತಾಳಕ್ಕೆ ಕುಸಿಯುವಂತೆ ಮಾಡಿದೆ. ತನ್ನ ಹುದ್ದೆ ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕೆಂಬ ಹರ ಸಾಹಸ ಪಡುತ್ತಿರುವ ಇಮ್ರಾನ್ ಸಂಪುಟದ ಇನ್ನೊಬ್ಬ ಪ್ರಭಾವಿ ಮಂತ್ರಿಯಾಗಿರುವ ಶೇಕ್ ರಷೀದ್ (Sheikh Rasheed Ahmad) ಎಂಬುವರರು ಈಗ, ಈ ಹಿಂದೆ ಮುಂಬೈ ಉಗ್ರವಾದಿ ದಾಳಿಯಲ್ಲಿ ಸಿಲುಕಿ ಹಾಕಿಕೊಂಡಿದ್ದ ಅಜ್ಮಲ್ ಕಸಬ್ (Ajmal Kasab) ಎಂಬಾತನು ಪಾಕಿಸ್ತಾನದವನೇ ಎಂದು ಸಾಬೀತುಪಡಿಸುವಂತಹ ಹೇಳಿಕೆಯೊಂದನ್ನು ನೀಡಿ ಮತ್ತೆ ಸಂಚಲನ ಮೂಡಿಸಿದ್ದಾರೆ.


ಹೌದು, 26/11ರ ಮುಂಬೈ ಆತಂಕವಾದಿ ದಾಳಿಯಲ್ಲಿ ಅಜ್ಮಲ್ ಕಸಬ್ ಎಂಬ ಉಗ್ರ ಜೀವಂತವಾಗಿ ಸೆರೆ ಹಿಡಿಯಲ್ಪಟ್ಟಿದ್ದ. ತದನಂತರ ಅವನನ್ನು ವಿಚಾರಿಸಲಾಗಿ ಆತ ಪಾಕಿಸ್ತಾನಿ ಎಂಬುದಾಗಿ ಒಪ್ಪಿಕೊಂಡಿದ್ದ. ಈ ವಿಚಾರವನ್ನು ಹಿಡಿದು ಭಾರತವು ಪಾಕಿಸ್ತಾನವನ್ನು ಪ್ರಶ್ನಿಸಿದ್ದಾಗ, ಪಾಕಿಸ್ತಾನವು ಭಾರತಕ್ಕೆ ಸಿಕ್ಕಿರುವ ವ್ಯಕ್ತಿ ಪಾಕಿಸ್ತಾನದವನಲ್ಲ ಎಂತಲೂ ಅವನ ಬಗ್ಗೆ ತಮಗೇನೂ ತಿಳಿಯದು ಎಂತಲೂ ಸಬೂಬು ಹೇಳುತ್ತಲೇ ಬಂದಿತ್ತು. ಇತ್ತೀಚಿನವರೆಗೂ ಪಾಕಿಸ್ತಾನ ಆ ವ್ಯಕ್ತಿ ತನ್ನ ದೇಶದವನೆಂದು ಒಪ್ಪಿಕೊಂಡಿರಲಿಲ್ಲ.


ಕಸಬ್ ಪಾಕಿಸ್ತಾನದವನು ಎಂದ ಸಚಿವ:


ಆದರೆ, ನಿನ್ನೆ ಈ ಬಗ್ಗೆ ಮಾತನಾಡಿರುವ ಪಾಕಿಸ್ತಾನದ ಆಂತರಿಕ ಸಚಿವ ಆಗಿರುವ ಶೇಕ್ ರಷೀದ್ ಅವರು, ಅಜ್ಮಲ್ ಕಸಬ್ ಪಾಕಿಸ್ತಾನದವನು ಹಾಗೂ ಇವನ ವಾಸದ ಸ್ಥಳದ ಬಗ್ಗೆ ಎಲ್ಲ ಮಾಹಿತಿಗಳನ್ನು ಅಂದಿನ ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅವರು ಭಾರತಕ್ಕೆ ಸೋರಿಕೆ ಮಾಡಿದ್ದರೆಂದು ಹೇಳಿದ್ದಾರೆ. ಈ ಮೂಲಕ ಹಲವು ವರ್ಷಗಳಿಂದ ಪಾಕಿಸ್ತಾನವು ಈ ವಿಷಯದಲ್ಲಿ ಸುಳ್ಳು ಹೇಳಿರುವುದು ಈಗ ಎಲ್ಲರಿಗೂ ಗೊತ್ತಾದಂತಾಗಿದೆ.


ಇದನ್ನೂ ಓದಿ: 26/11 Mumbai Attack: ಇಂದು ದೇಶ ಕಂಡ ಅತ್ಯಂತ ಕರಾಳ ದಿನ: 26/11 ಮುಂಬೈ ಉಗ್ರರ ದಾಳಿಗೆ 12 ವರ್ಷ


ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸಹ ಆಹ್ವಾನಿತನಾಗಿದ್ದ ಸಭೆಯೊಂದರಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡುವಾಗ ರಷೀದ್ ಅವರು ಈ ಹೇಳಿಕೆಯನ್ನು ನೀಡಿದರು. ಆ ಸಂದರ್ಭದಲ್ಲಿ ಅವರು, "ನಮ್ಮ ಮಾಜಿ ಪ್ರಧಾನಿ ನವಾಜ್ ಅವರೇ ಭಾರತಕ್ಕೆ ಅಜ್ಮಲ್ ಕಸಬ್ ಕುರಿತಾದ ಎಲ್ಲ ಮಾಹಿತಿಗಳನ್ನು ನೀಡಿದ್ದಾರೆ" ಎಂದು ಆರೋಪಿಸುತ್ತ ಅವರು ಒಬ್ಬ ಲಂಚಕೋರನಾಗಿದ್ದು ಗಡಾಫಿ, ಸದ್ದಾಂ ಹುಸೇನ್ ಹಾಗೂ ಒಸಾಮಾ ಬಿನ್ ಲಾಡೆನ್ ಅವರಿಂದ ಹಣ ಪಡೆದಿದ್ದರು ಎಂಬುದಾಗಿ ಹೇಳಿದರು ಎಂಬುದು ವರದಿಯಾಗಿದೆ.


ಯಾವುದು ಈ ಘಟನೆ:


ಭಾರತದ ಆರ್ಥಿಕ ರಾಜಧಾನಿ ಎಂದೇ ಪರಿಗಣಿಸಲ್ಪಡುವ ಮುಂಬೈ ಮೇಲೆ 2008, ನವೆಂಬರ್ 26 ರಂದು ಸಮುದ್ರ ಮಾರ್ಗವಾಗಿ ಪಾಕಿಸ್ತಾನದಿಂದ ಬಂದ ಕೆಲ ಆತಂಕವಾದಿಗಳು ಆಕ್ರಮಣ ಮಾಡಿದ್ದರು. ಈ ಉಗ್ರರು ಛತ್ರಪತಿ ಶಿವಾಜಿ ಟರ್ಮಿನಸ್, ಜನಜಂಗುಳಿ ಪ್ರದೇಶಗಳು, ತಾಜ್ ಹೋಟೆಲ್ ಸೇರಿದಂತೆ ಮುಂಬೈನ ಹಲವೆಡೆ ಮನಸೋ ಇಚ್ಛೆ ಬಂದಂತೆ ನಗರದಲ್ಲಿ ಗುಂಡಿನ ಮಳೆಗೆರೆದಿದ್ದರು. ಈ ಒಟ್ಟಾರೆ ಘಟನೆಯಲ್ಲಿ 174 ಜನರು ಹತರಾದರೆ 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.


ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆ:


ಕುತಂತ್ರಿ ಪಾಕಿಸ್ತಾನದ ಉಗ್ರ ಸಂಘಟನೆಯು ತಾನು ಕಳುಹಿಸಿದ್ದ ಈ ಆತಂಕಿಗಳು ಹಿಂದೂ ಧರ್ಮದ ಕೆಲ ಸಂಕೇತಗಳನ್ನು ಧರಿಸುವಂತೆ ಮಾಡಿತ್ತು. ಈ ಮೂಲಕ ಆ ದಾಳಿ ಮಾಡಿದವರು ಹಿಂದೂಗಳೇ ಆಗಿದ್ದಾರೆ ಎಂಬ ಭ್ರಮೆ ಎಲ್ಲರಲ್ಲೂ ಮೂಡಲಿ ಎಂಬ ಉದ್ದೇಶ ಆ ಸಂಘಟನೆ ಹೊಂದಿತ್ತು. ಲಷ್ಕರ್ ಎ ತೊಯ್ಬಾ ಎಂಬ ಉಗ್ರವಾದಿ ಸಂಘಟನೆ ನಡೆಸಿದ್ದ ಕುಕೃತ್ಯ ಇದಾಗಿತ್ತು ಹಾಗೂ ಇದರಲ್ಲಿ ಮುಂಬೈ ಪೊಲೀಸ್ ಇಲಾಖೆಯ ಸಬ್ ಇನ್ಸ್ಪೆಕ್ಟರ್ ಆಗಿದ್ದ ತುಕಾರಾಂ ಒಂಬಳೆ ಅವರು ತಮ್ಮ ಪ್ರಾಣ ಕೊಟ್ಟು ಕಸಬ್‌ನನ್ನು ಜೀವಂತವಾಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.


ಇದನ್ನೂ ಓದಿ: 26/11 Mumbai Attack: ಮುಂಬೈ ದಾಳಿ ನಂತರ ಕಸಬ್​ನನ್ನು ಹಿಂದೂ ಎಂದು ಬಿಂಬಿಸಲು ನಡೆದಿತ್ತು ಸಂಚು; ಸತ್ಯ ಬಿಚ್ಚಿಟ್ಟ ಮಾಜಿ ಕಮಿಷನರ್


ಆ ನಂತರ ಕಸಬ್ ನನ್ನು ರಾಷ್ಟ್ರೀಯ ತನಿಖಾ ತಂಡದವರು ತಮ್ಮ ವಶಕ್ಕೆ ಪಡೆದು ಅವನಿಂದ ಹಲವಾರು ಮಾಹಿತಿಗಳನ್ನು ಹೊರ ತೆಗೆದಿದ್ದರು. ನ್ಯಾಯಾಲಯದಲ್ಲಿ ಅವನ ವಿರುದ್ಧ ವಿಚಾರಣೆ ನಡೆಸಿ ಕೊನೆಗೆ ಅವನನ್ನು ತಪ್ಪಿತಸ್ಥನನ್ನಾಗಿ ಘೋಷಿಸಿದ ಬಳಿಕ 21 ನವೆಂಬರ್ 2012 ರಂದು ಗಲ್ಲಿಗೇರಿಸಲಾಗಿತ್ತು.


ಆ ಬಳಿಕ ಭಾರತವು ತನ್ನ ವಿರೋಧ ವ್ಯಕ್ತಪಡಿಸುತ್ತ ಪಾಕಿಸ್ತಾನವನ್ನು ಕಸಬ್ ವಿಚಾರವಾಗಿ ಹಲವು ಬಾರಿ ಪ್ರಶ್ನಿಸಿತ್ತಾದರೂ ಪಾಕಿಸ್ತಾನವು ಕಸಬ್ ತಮ್ಮ ನಾಗರಿಕ ಎಂದು ಎಂದಿಗೂ ಒಪ್ಪಿಕೊಂಡಲೇ ಇರಲಿಲ್ಲ. ಆದರೆ, ಈಗ ಪಾಕಿಸ್ತಾನದ ಸಚಿವರೊಬ್ಬರು ಮಾಜಿ ಪ್ರಧಾನಿ ಒಬ್ಬರ ಮೇಲೆ ತಮ್ಮ ಆರೋಪಗಳನ್ನು ಹೊರಿಸುವ ಭರದಲ್ಲಿ ಎಲ್ಲರ ಮುಂದೆ ಕಸಬ್ ಪಾಕಿಸ್ತಾನದವನೆಂದು ಒಪ್ಪಿಕೊಂಡಿದ್ದಾರೆ.

Published by:shrikrishna bhat
First published: