Mumbai Attack ಮಾಸ್ಟರ್‌ಮೈಂಡ್‌ಗೆ 31 ವರ್ಷ ಜೈಲು ಶಿಕ್ಷೆ! ಹಫೀಜ್ ಸಯೀದ್ ಆಸ್ತಿ ಮುಟ್ಟುಗೋಲಿಗೆ ಕೋರ್ಟ್ ಆದೇಶ

70 ವರ್ಷದ ಹಫೀಜ್ ಸಯೀದ್ ಈ ಹಿಂದೆ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಹಲವು ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದಾನೆ. 2020 ರಲ್ಲಿ, ಆತನಿಗೆ 15 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಮುಂಬೈ ದಾಳಿ ಮಾಸ್ಟರ್ ಮೈಂಡ್, ಉಗ್ರ ಹಫೀಜ್ ಸಯೀದ್

ಮುಂಬೈ ದಾಳಿ ಮಾಸ್ಟರ್ ಮೈಂಡ್, ಉಗ್ರ ಹಫೀಜ್ ಸಯೀದ್

  • Share this:
ಪಾಕಿಸ್ತಾನ: 26/11ರ ಮುಂಬೈ ದಾಳಿ (26/11 Mumbai Attack) ಮಾಸ್ಟರ್ ಮೈಂಡ್ (Master Mind), ಪಾಕಿಸ್ತಾನ (Pakistan) ಮೂಲದ ಭಯೋತ್ಪಾದಕ (Terrorist) ಸಂಘಟನೆ ಜಮಾತ್ ಉದ್ ದಾವಾ ಮುಖ್ಯಸ್ಥ (Jamaat-Ud-Dawa) ಹಫೀಜ್ ಸಯೀದ್‌ಗೆ (Hafiz Saeed) ಕೊನೆಗೂ ತಕ್ಕ ಶಾಸ್ತಿಯೇ ಆಗಿದೆ. ಎರಡು ಪ್ರಕರಣಗಳಲ್ಲಿ ಪಾಕಿಸ್ತಾನದ ಲಾಹೋರ್‌ನಲ್ಲಿರುವ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ (Anti-Terror Court) ಹಫೀಜ್ ಸಯೀದ್‌ಗೆಗೆ 31 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ. ಅಲ್ಲದೇ ಆತನ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಕೋರ್ಟ್ ಖಡಕ್ ಸೂಚನೆ ನೀಡಿದೆ. ಇಷ್ಟೇ ಅಲ್ಲದೇ ಆತನಿಗೆ 3 ಲಕ್ಷದ 40 ಸಾವಿರ ರೂಪಾಯಿ ದಂಡವನ್ನೂ ವಿಧಿಸಿ, ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ ನ್ಯಾಯಾಧೀಶರು ಆದೇಶ ನೀಡಿದ್ದಾರೆ.

 ಪಾಕಿಸ್ತಾನದಲ್ಲೂ ಹಫೀಜ್ ಸಯೀದ್ ಉಗ್ರ ಕೃತ್ಯ

ಈ ಹಫೀಜ್ ಸಯೀದ್ ಪಾಕಿಸ್ತಾನದ ಒಳಗೆ ಕಾರ್ಯಾಚರಣೆ ನಡೆಸಲು ಜಮಾತ್ ಉದ್ ದವಾ ಎಂಬ ಸಂಘಟನೆ ಕಟ್ಟಿಕೊಂಡಿದ್ದಾನೆ. ಇದೇ ಸಂಘಟನೆ ವಿರುದ್ಧ ದಾಖಲಾಗಿದ್ದ 2 ಪ್ರಕರಣಗಳಲ್ಲಿ ಇದೀಗ ಹಫೀಜ್ ಸಯೀದ್ ದೋಷಿ ಎಂದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಶಿಕ್ಷೆಗೆ ಗುರಿಪಡಿಸಲಾಗಿದೆ.

ಹಫೀಜ್ ಆಸ್ತಿ ಮುಟ್ಟುಗೋಲಿಗೆ ಆದೇಶ

ಹಫೀಜ್ ಸಯೀದ್ ಹಲವು ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿರೋದಷ್ಟೇ ಅಲ್ಲ, ಸಾಕಷ್ಟು ಆಸ್ತಿಯನ್ನೂ ಪಾಕಿಸ್ತಾನದಲ್ಲಿ ಹೊಂದಿದ್ದಾನೆ. ಇದೀಗ ಆತನಿಗೆ ಸೇರಿದ ಎಲ್ಲಾ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನ್ಯಾಯಾಲಯ ಆದೇಶ ನೀಡಿದೆ. ಹಫೀಜ್ ಸಯೀದ್ ನಿರ್ಮಿಸಿದ್ದಾನೆ ಎಂದು ಹೇಳಲಾದ ಮಸೀದಿ ಮತ್ತು ಮದರಸಾವನ್ನು ಸ್ವಾಧೀನಪಡಿಸಿಕೊಳ್ಳಲು ಕೂಡ ಕೋರ್ಟ್ ಆದೇಶ ನೀಡಿದೆ. ಮದರಸಾ ನಿರ್ಮಿಸಿದ್ದ ಹಫೀಜ್ ಸಯೀದ್, ಭಯೋತ್ಪಾದಕರನ್ನು ತಯಾರು ಮಾಡುವ ಪ್ರಯೋಗ ಶಾಲೆ ಮಾಡಿಕೊಂಡಿದ್ದ ಎಂಬ ಆರೋಪವಿದೆ. ಶೀಘ್ರವೇ ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: ಯುದ್ಧದಾಹಿ Russiaಗೆ ಭಾರೀ ಮುಖಭಂಗ! UNO ಮಾನವ ಹಕ್ಕುಗಳ ಮಂಡಳಿಯಿಂದ ಅಮಾನತು

ಈಗಾಗಲೇ 15 ವರ್ಷ ಜೈಲು ಶಿಕ್ಷೆ

70 ವರ್ಷದ ಹಫೀಜ್ ಸಯೀದ್ ಈ ಹಿಂದೆ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಹಲವು ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದಾನೆ. 2020 ರಲ್ಲಿ, ಆತನಿಗೆ 15 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಉಗ್ರರನ್ನು ಪೋಷಿಸಿದ ಹಲವು ಪ್ರಕರಣಗಳು ಇನ್ನೂ ಆತನ ಮೇಲಿವೆ. ಉಗ್ರ ಸಂಘಟನೆಗಳಿಗೆ ಹಣಕಾಸಿನ ನೆರವು ನೀಡಿದ ಹಲವು ಕೇಸ್‌ಗಳು ವಿಚಾರಣೆ ಹಂತದಲ್ಲಿವೆ.

ಮುಂಬೈ ದಾಳಿ ಕೇಸ್‌ನಲ್ಲಿ ಇನ್ನೂ ಆಗಿಲ್ಲ ಶಿಕ್ಷೆ

ಲಷ್ಕರ್ - ಎ - ತೊಯ್ಬಾ ಭಯೋತ್ಪಾದಕ ಸಂಘಟನೆ ಶಾಖೆಯಾದ ಜಮಾತ್ ಉದ್ ದಾವಾ ಮುಖ್ಯಸ್ಥ ಈ ಹಫೀಜ್ ಮೊಹಮ್ಮದ್ ಸಯೀದ್. ಈತ 2008ರ ನವೆಂಬರ್ 26ರಂದು ನಡೆದ ಮುಂಬೈ ದಾಳಿಯ ರೂವಾರಿ ಆಗಿದ್ದರೂ ಕೂಡಾ ಈವರೆಗೆ ಆತನಿಗೆ ಯಾವುದೇ ಶಿಕ್ಷೆ ವಿಧಿಸಲಾಗಿಲ್ಲ. ಈ ಪ್ರಕರಣದ ಕುರಿತಾಗಿ ಆತನನ್ನು ನ್ಯಾಯಾಲಯ ವಿಚಾರಣೆಗೆ ಗುರಿಪಡಿಸಿಲ್ಲ. ಕೇವಲ ಪಾಕಿಸ್ತಾನದಲ್ಲಿ ಉಗ್ರ ಕೃತ್ಯ ನಡೆಸಿದ ಆರೋಪದ ಮೇಲೆ ಆತನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಜೈಲಿಗೆ ಕಳಿಸಲು ನ್ಯಾಯಾಲಯ ಆದೇಶಿಸಿದೆ.

ಇದನ್ನೂ ಓದಿ: ಲಡಾಖ್ ಬಳಿಯ Power Grid ಹ್ಯಾಕ್ ಮಾಡಲು ಚೀನಾ ಕುತಂತ್ರ.. ಭಾರತದಿಂದ ದಿಟ್ಟ ಉತ್ತರ!

2021ರಲ್ಲಿ ಹಫೀಜ್ ಸಯೀದ್ ಬಂಧನ

ಭಾರತದ ಕೋರಿಕೆಯ ಮೇರೆಗೆ ವಿಶ್ವಸಂಸ್ಥೆಯು ಹಫೀಜ್ ಮುಹಮ್ಮದ್ ಸಯೀದ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿತ್ತು. ಈತನ ಮೇಲೆ ಅಮೆರಿಕ 10 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ. ಕಳೆದ ವರ್ಷ ಜುಲೈ 17ರಂದು ಪಾಕಿಸ್ತಾನದಲ್ಲಿ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ ಆತನನ್ನು ಬಂಧಿಸಲಾಗಿತ್ತು.
Published by:Annappa Achari
First published: