HOME » NEWS » National-international » MUMBAI ARTHUR ROAD JAIL KEEPS SPECIAL CELL READY TO LODGE NIRAV MODI RHHSN

ನೀರವ್ ಮೋದಿ ಬಂಧಿಸಿಡಲು ಸಿದ್ಧವಾಗಿದೆ ಮುಂಬೈನ ಅರ್ಥರ್ ರಸ್ತೆಯ ಜೈಲಿನ ವಿಶೇಷ ಕೊಠಡಿ

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸ್ಯಾಮ್ಯುವೆಲ್ ಗೂಝೀ ಅವರು, ಮಾನವ ಹಕ್ಕುಗಳ ಅನುಸಾರವಾಗಿ ಭಾರತದ ಆರ್ಥಿಕ ಅಪರಾಧಿ ನೀರವ್​ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವುದು ನನಗೆ ತೃಪ್ತಿ ನೀಡಿದೆ. ಆದರೆ, ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲೂ ಸಹ ಆರೋಪಿಗೆ ಅವಕಾಶ ಇದೆ ಎಂದು ಹೇಳಿದ್ದರು.

news18-kannada
Updated:February 26, 2021, 2:39 PM IST
ನೀರವ್ ಮೋದಿ ಬಂಧಿಸಿಡಲು ಸಿದ್ಧವಾಗಿದೆ ಮುಂಬೈನ ಅರ್ಥರ್ ರಸ್ತೆಯ ಜೈಲಿನ ವಿಶೇಷ ಕೊಠಡಿ
ನೀರವ್ ಮೋದಿ.
  • Share this:
ಪಂಜಾಬ್​ ನ್ಯಾಷನಲ್​ ಬ್ಯಾಂಕ್​ನಿಂದ ಸುಮಾರು 14,000 ಕೋಟಿ ಹಣವನ್ನು ಸಾಲವನ್ನಾಗಿ ಪಡೆದು, ವಂಚಿಸಿ ವಿದೇಶಕ್ಕೆ ಪಲಾಯನ ಮಾಡಿದ್ದ ವಜ್ರ ವ್ಯಾಪಾರಿ, ಆರ್ಥಿಕ ಅಪರಾಧಿ ನೀರವ್ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸಬಹುದು ಎಂದು ಇಂಗ್ಲೆಂಡ್​ ನ್ಯಾಯಾಲಯ ಗುರುವಾರ ಮಹತ್ವದ ತೀರ್ಪು ನೀಡಿತ್ತು. ಈ ಬೆನ್ನಲ್ಲೇ ನೀರವ್ ಮೋದಿಗಾಗಿ ಮುಂಬೈನ ಆರ್ಥರ್ ರಸ್ತೆಯ ಜೈಲಿನಲ್ಲಿ ವಿಶೇಷ ಕೊಠಡಿ ಸಜ್ಜುಗೊಳಿಸಲಾಗಿದೆ ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ.

ನೀರವ್ ಮೋದಿಯನ್ನು ಮುಂಬೈಗೆ ಕರೆತಂದ ಬಳಿಕ ಅತೀ ಹೆಚ್ಚು ಭದ್ರತೆ ಹೊಂದಿರುವ ಬರಾಕ್ ಸಂಖ್ಯೆ 12ರ ಮೂರು ಕೊಠಡಿಗಳಲ್ಲಿ ಒಂದರಲ್ಲಿ ಇರಿಸಲಾಗುವುದು ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ನೀರವ್ ಮೋದಿಯನ್ನು ಇರಿಸುವ ಸಿದ್ಧತೆಗಳು ಪೂರ್ಣಗೊಂಡಿವೆ. ಮತ್ತು ಅವರನ್ನು ಇರಿಸುವ ಕೊಠಡಿಯನ್ನು ಸಜ್ಜುಗೊಳಿಸಲಾಗಿದೆ. ಯಾವಾಗ ಬೇಕಾದರೂ ಅವರನ್ನು ಭಾರತಕ್ಕೆ ಹಸ್ತಾಂತರವಾಗಬಹುದು ಎಂದು ಹೇಳಿದ್ದಾರೆ.

ಭಾರತದ ಬ್ಯಾಂಕ್​ಗಳಿಗೆ ಬಹುಕೋಟಿ ವಂಚನೆ ಎಸಗಿದ್ದ ನೀರವ್ ಮೋದಿ ಹಣವನ್ನು ಪಾವತಿಸದೆ ಇಂಗ್ಲೆಂಡ್​ ಪಲಾಯನ ಮಾಡಿದ್ದರು. ಹೀಗಾಗಿ ಅವರನ್ನು ಹಸ್ತಾಂತರಿಸುವಂತೆ ಭಾರತ ಸರ್ಕಾರ ಇಂಗ್ಲೆಂಡ್ ಕೋರ್ಟ್​ನಲ್ಲಿ ಮನವಿ ಸಲ್ಲಿಸಿತ್ತು. ಈ ನಿಟ್ಟಿನಲ್ಲಿ ವಿಚಾರಣೆ ಆರಂಭಿಸಿದ್ದ ನ್ಯಾಯಾಲಯ "ಸಾಂಕ್ರಾಮಿಕ ರೋಗ ಮತ್ತು ಭಾರತೀಯ ಜೈಲು ಪರಿಸ್ಥಿತಿಗಳಲ್ಲಿ ಅವರ ಮಾನಸಿಕ ಆರೋಗ್ಯವು ಹದಗೆಡುತ್ತದೆ" ಎಂಬ ಆರೋಪಿಯ ವಾದಗಳನ್ನು ತಳ್ಳಿಹಾಕಿದೆ. ಅಲ್ಲದೆ, ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಸಮ್ಮತಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸ್ಯಾಮ್ಯುವೆಲ್ ಗೂಝೀ, "ಮಾನವ ಹಕ್ಕುಗಳ ಅನುಸಾರವಾಗಿ ಭಾರತದ ಆರ್ಥಿಕ ಅಪರಾಧಿ ನೀರವ್​ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವುದು ನನಗೆ ತೃಪ್ತಿ ನೀಡಿದೆ. ಆದರೆ, ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲೂ ಸಹ ಆರೋಪಿಗೆ ಅವಕಾಶ ಇದೆ. ನೀರವ್​ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಿದರೆ ಅವರಿಗೆ ನ್ಯಾಯ ದೊರಕುವುದಿಲ್ಲ ಎಂಬ ವಾದಕ್ಕೆ ಯಾವುದೇ ಪುರಾವೆಗಳಿಲ್ಲ. ಭಾರತದಲ್ಲಿ ನೀರವ್ ಮೋದಿ ವಿರುದ್ಧ ಪ್ರಬಲವಾದ ಪ್ರಕರಣಗಳು ಇವೆ. ನೀರವ್ ಮೋದಿ ನ್ಯಾಯಸಮ್ಮತ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆಂದು ನಾನು ಒಪ್ಪುವುದಿಲ್ಲ. ಈ ವ್ಯವಹಾರಗಳಲ್ಲಿ ಅಪ್ರಾಮಾಣಿಕತೆಯ ಪ್ರಕ್ರಿಯೆ ಇದೆ. ಹೀಗಾಗಿ ಈ ಪ್ರಕರಣಗಳ ಕುರಿತು ವಿಚಾರಣೆಯನ್ನು ಅವರು ಎದುರಿಸಲೇಬೇಕು" ಎಂದು ಹೇಳಿದ್ದರು.

ಇದನ್ನು ಓದಿ: Fire Accident: ತಮಿಳುನಾಡಿನ ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಅವಘಡ; 6 ಜನ ಸಾವು, 19 ಜನರಿಗೆ ಗಾಯ

49 ವರ್ಷದ ನೀರವ್ ಮೋದಿ, ವೆಸ್ಟ್​ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ನೈರುತ್ಯ ಲಂಡನ್‌ನ ವಾಂಡ್ಸ್‌ವರ್ತ್ ಕಾರಾಗೃಹದಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದರು. ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ತೀರ್ಪನ್ನು ಇಂಗ್ಲೇಡ್‌ನ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರಿಗೆ ಸಹಿ ಹಾಕಲು ಕಳುಹಿಸುತ್ತಾರೆ. ತೀರ್ಪಿನ ಫಲಿತಾಂಶವನ್ನು ಅವಲಂಬಿಸಿ ಎರಡೂ ಕಡೆಗಳಲ್ಲಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.
Youtube Video

ನೀರವ್ ಮೋದಿಯನ್ನು ಹಸ್ತಾಂತರ ವಾರಂಟ್‌ನಲ್ಲಿ ಮಾರ್ಚ್ 19, 2019 ರಂದು ಬಂಧಿಸಲಾಯಿತು. ಇನ್ನೂ ನೀರವ್​ ಮೋದಿ ಸಂಬಂಧಿ ಮೇಹುಲ್​ ಚೋಸ್ಕಿ ಅವರನ್ನು ಬಂಧಿಸಲೂ ಸಹ ಭಾರತ ಸರ್ಕಾರ ಬಲೆ ಬೀಸಿದ್ದು, ಶೀಘ್ರದಲ್ಲೇ ಅವರನ್ನೂ ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
Published by: HR Ramesh
First published: February 26, 2021, 2:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories