Expensive Cities: ಮರ್ಸರ್ ಅಧ್ಯಯನದ ಪ್ರಕಾರ ಭಾರತಕ್ಕೆ ಬರುವ ವಲಸಿಗರಿಗೆ ಈ ಎರಡು ನಗರಗಳು ದುಬಾರಿ ಅಂತೆ

ಮರ್ಸರ್‌ನ 2022ರ ಜೀವನ ವೆಚ್ಚ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಜೀವನ ವೆಚ್ಚ ಮತ್ತು ವಸತಿ ವೆಚ್ಚಗಳೆರಡರಲ್ಲೂ ಅತ್ಯಂತ ದುಬಾರಿ ನಗರವಾಗಿದ್ದು, ಈ ಪಟ್ಟಿಯಲ್ಲಿ ಮುಂಬೈ ಅಗ್ರ ಸ್ಥಾನವನ್ನು ಪಡೆದಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಮರ್ಸರ್‌ನ 2022ರ ಜೀವನ ವೆಚ್ಚ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ (India) ಜೀವನ ವೆಚ್ಚ ಮತ್ತು ವಸತಿ ವೆಚ್ಚಗಳೆರಡರಲ್ಲೂ ಅತ್ಯಂತ ದುಬಾರಿ ನಗರವಾಗಿದ್ದು (Expensive Cities), ಈ ಪಟ್ಟಿಯಲ್ಲಿ ಮುಂಬೈ ಅಗ್ರ ಸ್ಥಾನವನ್ನು ಪಡೆದಿದೆ. ಭಾರತದ ಪ್ರಮುಖ ನಗರಳಾದ ಮುಂಬೈ (Mumbai) ಮತ್ತು ನವದೆಹಲಿಯು (New Delhi) ಏಷಿಯಾ ಖಂಡದ ಟಾಪ್ 40ನೇ ಅತ್ಯಂತ ದುಬಾರಿ ನಗರಗಳಲ್ಲಿ ಸ್ಥಾನ ಪಡೆದಿವೆ. ಆದರೆ ಇದೇ ಭಾರತ ದೇಶದ ಮತ್ತೊಂದುಜನಪ್ರಿಯ ನಗರ ಕೋಲ್ಕಾತ್ತಾವು (Kolkata) ಪಟ್ಟಿಯ ಕೊನೆಯಲ್ಲಿ ಸ್ಥಾನ ಪಡೆದಿದ್ದು, ಈ ನಗರವು ಕಡಿಮೆ ವೆಚ್ಚದ ನಗರವಾಗಿದೆ ಎಂದು ವರದಿಯಲ್ಲಿ ಪ್ರಕಟಗೊಂಡಿದೆ.

ಮರ್ಸರ್‌ನ 2022 ರ ಜೀವನ ವೆಚ್ಚ ಸಮೀಕ್ಷೆಯ ಪ್ರಕಾರ, ಮುಂಬೈ (127) ಭಾರತದಲ್ಲಿ ಜೀವನ ವೆಚ್ಚ ಮತ್ತು ವಸತಿ ವೆಚ್ಚಗಳೆರಡರಲ್ಲೂ ಅತ್ಯಂತ ದುಬಾರಿ ನಗರವಾಗಿದೆ. ಇದರ ನಂತರ ನವದೆಹಲಿ (155), ಚೆನ್ನೈ (177), ಬೆಂಗಳೂರು (178), ಮತ್ತು ಹೈದರಾಬಾದ್ (192), ಪುಣೆ (201) ಮತ್ತು ಕೋಲ್ಕತ್ತಾ (203) ಟಾಪ್ ಸ್ಥಾನದಲ್ಲಿ ಕಡಿಮೆ ವೆಚ್ಚದ ಭಾರತೀಯ ನಗರಗಳಾಗಿವೆ.

ಕಂಪನಿಗಳನ್ನು ಸ್ಥಾಪಿಸಲು ಅತ್ಯಂತ ಜನಪ್ರಿಯ ಸ್ಥಳ
ಭಾರತದ ಆರ್ಥಿಕ ಕೇಂದ್ರವಾಗಿರುವ ಮುಂಬೈ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ತಮ್ಮ ಕಂಪನಿಗಳನ್ನು ಸ್ಥಾಪಿಸಲು ಈ ನಗರವು ಅತ್ಯಂತ ಜನಪ್ರಿಯ ಸ್ಥಳವಾಗಿದೆ ಎಂದು ಸಮೀಕ್ಷೆಯು ವರದಿಯಲ್ಲಿ ಈ ವಿಚಾರವನ್ನು ಬಹಿರಂಗ ಪಡಿಸಿದೆ. ಇದೆಲ್ಲದನ್ನು ಪರಿಗಣಿಸಿ ಕೆಲವು ಕಂಪನಿಗಳು ಮುಂಬೈನಲ್ಲಿರುವ ಹೆಚ್ಚಿನ ಜೀವನ ವೆಚ್ಚದ ಕಾರಣ ಬಹುರಾಷ್ಟ್ರೀಯ ಕಂಪನಿಗಳೂ ಹೈದರಾಬಾದ್, ಚೆನ್ನೈ ಮತ್ತು ಪುಣೆಯಂತಹ ಇತರ ಕಡಿಮೆ ವೆಚ್ಚದ ಸ್ಥಳಗಳಿಗೆ ತಮ್ಮ ಕಂಪನಿಗಳನ್ನು ವಿಸ್ತರಿಸುತ್ತಿವೆ ಎಂದು ತಿಳಿದಿದೆ.

ಮರ್ಸರ್‌ನ ಇಂಡಿಯಾ ಮೊಬಿಲಿಟಿ ಲೀಡರ್ ರಾಹುಲ್ ಶರ್ಮಾ ಅವರು, “COVID-19-ಸಂಬಂಧಿತ ಪರಿಣಾಮವಾಗಿ ಅಗತ್ಯ ವಸ್ತುಗಳಿಗೆ ಜಾಗತಿಕ ಪೂರೈಕೆಯು ಅನೇಕ ರೀತಿಯಲ್ಲಿ ಅಡ್ಡಿಪಡಿಸಿವೆ, ಇದು ಉಕ್ರೇನ್ ಮತ್ತು ರಷ್ಯಾ ನಡುವಿನ ಸಂಘರ್ಷದಿಂದ ಮತ್ತಷ್ಟು ಉಲ್ಬಣಗೊಂಡಿದೆ. ಈ ಅನಿಶ್ಚಿತತೆಯ ಪರಿಣಾಮವಾಗಿ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಕಂಪನಿಯ ವಲಸಿಗ ಉದ್ಯೋಗಿಗಳ ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ನಗರದ ತಮ್ಮ ಜಾಗತಿಕ ಚಲನಶೀಲತೆಯ ಉಪಕ್ರಮಗಳನ್ನು ಮರುಮೌಲ್ಯಮಾಪನ ಮಾಡಲು ಒತ್ತಾಯಿಸುತ್ತಿರುವುದು ಕಂಡು ಬರುತ್ತಿದೆ ಇದರ ಜೊತೆಗೆ ಆರ್ಥಿಕತೆಯೊಂದಿಗೆ ಇದನ್ನು ಸಮತೋಲನಗೊಳಿಸಲಾಗಿದೆ, ಮತ್ತು ಜಗತ್ತಿನಾದ್ಯಂತ ಬಹುಪಾಲು ದೇಶಗಳಲ್ಲಿ ಹಣದುಬ್ಬರವು ಕೂಡ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿದೆ.

2022ರ  ಜೀವನ ವೆಚ್ಚ ಸಮೀಕ್ಷೆ
ಈ ಜೀವನ ವೆಚ್ಚ ಸಮೀಕ್ಷೆಯನ್ನು ಮಾರ್ಚ್ 2022ರಲ್ಲಿ ನಡೆಸಲಾಯಿತು. ಈ ವರ್ಷದ ಟಾಪ್ ಸ್ಥಾನವು ಐದು ಖಂಡಗಳಲ್ಲಿರುವ ದೇಶಕ್ಕೆ ನೀಡಿರುವ ಕಾರಣ 227 ನಗರಗಳಲ್ಲಿ ವಸತಿ, ಸಾರಿಗೆ, ಆಹಾರ, ಬಟ್ಟೆ, ಗೃಹೋಪಯೋಗಿ ವಸ್ತುಗಳು ಮತ್ತು ಮನರಂಜನೆ ಸೇರಿದಂತೆ 200ಕ್ಕೂ ಹೆಚ್ಚು ಸರಕುಗಳ ಬೆಲೆಗಳನ್ನು ಇಲ್ಲಿ ಒಂದಕ್ಕೊಂದು ಹೋಲಿಸಲಾಗುತ್ತದೆ.

ಇದನ್ನೂ ಓದಿ: Free Electricity: ಎಲ್ಲರಿಗೂ ಫ್ರೀ ಕರೆಂಟ್! ತಿಂಗಳಿಗೆ 300 ಯುನಿಟ್ ವಿದ್ಯುತ್ ಉಚಿತ ಯೋಜನೆ ಜಾರಿಗೊಳಿಸಿದ ಭಗವಂತ್ ಮಾನ್

ಹಾಗೆಯೇ ಈ ವರ್ಷ ಮರ್ಸರ್ ಜೀವನ ವೆಚ್ಚದ ವಿಧಾನವನ್ನು ಮತ್ತೆ ಪರಿಷ್ಕರಿಸಿದೆ. ಈ ಪರಿಷ್ಕರಣೆಯಲ್ಲಿ ಸ್ಮಾರ್ಟ್‌ವಾಚ್‌ಗಳು, ಟ್ಯಾಬ್ಲೆಟ್ ಕಂಪ್ಯೂಟರ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳಂತಹ ಹೊಸ ವಸ್ತುಗಳನ್ನು ತನ್ನ ಪಟ್ಟಿಗೆ ಸೇರಿಸಿಕೊಂಡಿದೆ.ಹಾಗೆಯೇ ಮ್ಯೂಸಿಕ್ ಸಿಡಿಗಳು ಮತ್ತು ವಿಡಿಯೋ ಚಲನಚಿತ್ರಗಳ ಮೇಲಿನ ವೆಚ್ಚವನ್ನು ಈ ಪಟ್ಟಿಯಿಂದ ಕೈ ಬಿಡಲಾಗಿದೆ.

ಮುಂಬೈ ಮತ್ತು ನವದೆಹಲಿ ದುಬಾರಿ ನಗರಗಳು
ದೈನಂದಿನ ವೆಚ್ಚಗಳಿಗೆ ಕೊಡುಗೆ ನೀಡುವ ಅಂಶಗಳನ್ನು ಅಧ್ಯಯನವು ಹೈಲೈಟ್ ಮಾಡುತ್ತದೆ, ಉದಾ: ಮೌಲ್ಯಮಾಪನ ಮಾಡಲಾಗಿರುವ ಭಾರತೀಯ ನಗರಗಳಲ್ಲಿ, ಹಾಲು, ಬ್ರೆಡ್, ತರಕಾರಿಗಳು ಇತ್ಯಾದಿಗಳಂತಹ ದೈನಂದಿನ ಅಗತ್ಯತೆಗಳು ಕೋಲ್ಕತ್ತಾದಲ್ಲಿ ಕಡಿಮೆ ವೆಚ್ಚವನ್ನು ಹೊಂದಿವೆ, ಆದರೆ ಮುಂಬೈ ಮತ್ತು ನವದೆಹಲಿಗಳು ಹೆಚ್ಚಿನ ವೆಚ್ಚವನ್ನು ಹೊಂದಿವೆ. ವಿದ್ಯುತ್ , ಫೋನ್ ವೆಚ್ಚಗಳು ಇತ್ಯಾದಿಗಳ ವಿಷಯದಲ್ಲಿ, ಮನೆಯನ್ನು ನಡೆಸಲು ಬೇಕಾಗಿರುವ ಉಪಯುಕ್ತತೆಗಳ ವೆಚ್ಚವು ಮುಂಬೈನಲ್ಲಿ ಹೆಚ್ಚು ಎಂದು ತಿಳಿಸಿದೆ.

ಇದು ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ ಅತ್ಯಂತ ಕಡಿಮೆಯಾಗಿದೆ. ಉದಾ: ಮುಂಬೈನಲ್ಲಿ ಚಲನಚಿತ್ರವನ್ನು ನೋಡುವುದು ಅತ್ಯಂತ ದುಬಾರಿ ವೆಚ್ಚ ಆದರೆ ಅದೇ ಚಲನಚಿತ್ರವನ್ನು ಹೈದರಾಬಾದ್ ನಲ್ಲಿ ನೋಡುವುದು ಅಗ್ಗವಾದ ವೆಚ್ಚ ಎಂದು ತಿಳಿಯಬಹುದು.

ಪುಣೆ ಮತ್ತು ಕೋಲ್ಕತ್ತಾಕ್ಕಿಂತ ಹೆಚ್ಚು ದುಬಾರಿ ನಗರ
ದೇಶದ ವಸತಿ ಮಾರುಕಟ್ಟೆಯನ್ನು ಮೌಲ್ಯಮಾಪನ ಮಾಡುವಾಗ ಭಾರತದಲ್ಲಿ ಪರೀಕ್ಷಿಸಿದ ಎಲ್ಲಾ ನಗರಗಳಲ್ಲಿ ಹೈದರಾಬಾದ್‌ನಲ್ಲಿ ಅಗ್ಗದ ವಸತಿ ಇದೆ ಎಂದು ಸಮೀಕ್ಷೆಯಲ್ಲಿ ಕಂಡು ಬಂದಿದೆ. ಇದೆಲ್ಲದರ ನಂತರ, ಜೀವನ ವೆಚ್ಚ ಮತ್ತು ವಸತಿ ಎರಡನ್ನೂ ಗಣನೆಗೆ ತೆಗೆದುಕೊಂಡಾಗ ಹೈದರಾಬಾದ್ ನಗರವು , ಪುಣೆ ಮತ್ತು ಕೋಲ್ಕತ್ತಾಕ್ಕಿಂತ ಹೆಚ್ಚು ದುಬಾರಿ ನಗರವಾಗಿದೆ.

ಇದನ್ನೂ ಓದಿ: Scorpion Sting: ಸರ್ಕಾರಿ ಶಾಲೆಯುಲ್ಲಿ ಚೇಳು ಕುಟುಕಿ ವಿದ್ಯಾರ್ಥಿನಿ ಸಾವು

ಇತರ ಭಾರತೀಯ ನಗರಗಳಲ್ಲಿ, ಮುಂಬೈ ಅತ್ಯಂತ ದುಬಾರಿ ಮನೆ ಬಾಡಿಗೆಗಳನ್ನು ಹೊಂದಿದೆ, ನಂತರ ನವದೆಹಲಿ ಮತ್ತು ಬೆಂಗಳೂರು ನಗರಗಳು ದುಬಾರಿ ಮನೆ ಬಾಡಿಗೆ ಹೊಂದಿವೆ. “ನಾವು ಇದೆಲ್ಲದಕ್ಕಿಂತ, ಭಾರತದ ಎಲ್ಲ ನಗರಗಳಲ್ಲಿ ಪೆಟ್ರೋಲ್ ಬೆಲೆ ಹೆಚ್ಚಿರುವುದನ್ನು ನೋಡಿದ್ದೇವೆ. ಅಲ್ಲದೆ, ಹೊಸ ಕಾರಿನ ಬೆಲೆ ಮತ್ತು ಇತರ ನಿರ್ವಹಣಾ ವೆಚ್ಚಗಳು ಭಾರತದ ಎಲ್ಲ ನಗರಗಳಲ್ಲಿ ಹೆಚ್ಚಾಗಿದೆ, ”ಎಂದು ಶರ್ಮಾ ಹೇಳಿದ್ದಾರೆ.
Published by:Ashwini Prabhu
First published: