ಮುಂಬೈ: ಸದ್ಯ ಭಾರತ ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆಗಳ ಪೈಕಿ ಬಡತನ, ನಿರುದ್ಯೋಗ, (Unemployement) ಬೆಲೆ ಏರಿಕೆ (Price Hike) ಮುಂತಾದವುಗಳು ಹೇಗೆ ಪ್ರಮುಖವಾದವುಗಳೋ, ನಾವು ಪರಿಸರದ ದೃಷ್ಟಿಯಿಂದ ನೋಡೋದಾದ್ರೆ ಪ್ಲಾಸ್ಟಿಕ್ (Plastic) ಕೂಡ ಅತಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಭಾರತದಲ್ಲಿ ದಿನ ನಿತ್ಯ ಸಾವಿರ ಸಾವಿರ ಟನ್ ಪ್ಲಾಸ್ಟಿಕ್ ಬಳಕೆಯಾಗುತ್ತಿದ್ದು, ಸರ್ಕಾರಗಳು ಈ ಹಿಂದಿನಿಂದಲೂ ಪ್ಲಾಸ್ಟಿಕ್ನ್ನು ಕಡಿಮೆ ಬಳಸುವಂತೆ (Recycle Plastic) ಜಾಗೃತಿ ಮೂಡಿಸುತ್ತಿದ್ದರೂ ಹೇಳಿಕೊಳ್ಳುವಂತಹ ಮಟ್ಟಿಗೇನೂ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಿಲ್ಲ. ಇದೆಲ್ಲದರ ಮಧ್ಯೆ ಪ್ಲಾಸ್ಟಿಕ್ ಬಳಕೆ ಕಡಿಮೆಗೊಳಿಸಲು ಉಪಾಯವೊಂದನ್ನು ಮುಂಬೈ ಏರ್ಪೋರ್ಟ್ನಲ್ಲಿ (Mumbai Airport) ಪ್ರಯೋಗಿಸಲಾಗಿದೆ.
ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸುಸ್ಥಿರವಾದ ಕ್ರಮವನ್ನು ಕೈಗೊಳ್ಳುಲು ವಿಮಾನ ನಿಲ್ದಾಣದ ಅಧಿಕಾರಿಗಳು ಮುಂದಾಗಿದ್ದು, ಏಕ ಬಳಕೆಯ ಪ್ಲಾಸ್ಟಿಕ್ ಮತ್ತು ಕಸದ ಮರು ಬಳಕೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ವೆಂಡಿಂಗ್ ಯಂತ್ರಗಳನ್ನು (RVM) ಸ್ಥಾಪಿಸಲಾಗಿದೆ. ಏರ್ಪೋರ್ಟ್ಗೆ ಆಗಮಿಸುವ ಪ್ರಯಾಣಿಕರು ಹೆಚ್ಚಾಗಿ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸುತ್ತಿರುವುದರಿಂದ ಆ ಬಾಟಲಿಗಳನ್ನು ಮರು ಬಳಕೆ ಮಾಡುವ ಮೂರು ರಿವರ್ಸ್ ವೆಂಡಿಂಗ್ ಮೆಷಿನ್ಗಳನ್ನು ಮುಂಬೈ ಏರ್ಪೋರ್ಟ್ನ 2ನೇ ಟರ್ಮಿನಲ್ನಲ್ಲಿ ಸ್ಥಾಪಿಸಲಾಗಿದೆ.
ಗಂಟೆಗೆ 450 ಪ್ಲಾಸ್ಟಿಕ್ ಬಾಟಲ್ ಕಂಪ್ರೆಸ್
ಮೂರು ಮೆಷಿನ್ಗಳಲ್ಲಿ ಪ್ರತೀ ಮೆಷಿನ್ ಕೂಡ ಗಂಟೆಗೆ ಸುಮಾರು 450 ಪ್ಲಾಸ್ಟಿಕ್ ಬಾಟಲ್ಗಳನ್ನು ಕಂಪ್ರೆಸ್ ಮಾಡಿ ಪುನಃ ಮರುಬಳಕೆಗೆ ಆಗುವಂತೆ ತಯಾರುಗೊಳಿಸುತ್ತದೆ. ಇದರಿಂದ ಅಂದಾಜು 70% ನಷ್ಟು ತ್ಯಾಜ್ಯವನ್ನು ಉಳಿತಾಯ ಮಾಡಲು ಸಾಧ್ಯವಿದ್ದು, ಇದರಿಂದ ಪ್ಲಾಸ್ಟಿಕ್ನ ಮರುಬಳಕೆಯಾಗಿ ತ್ಯಾಜ್ಯವೂ ಕಡಿಮೆಯಾಗಿ ಅದನ್ನು ಸಾಗಿಸಲು ಖರ್ಚಾಗುತ್ತಿದ್ದ ಸಾರಿಗೆ ವೆಚ್ಚ ಕೂಡ ಉಳಿತಾಯವಾಗಲಿದೆ.
2019ರಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ
ಮುಂಬೈ ವಿಮಾನ ನಿಲ್ದಾಣವು 2019ರಲ್ಲಿ ತನ್ನ ಎಲ್ಲಾ ಲಾಜಿಸ್ಟಿಕ್ ಮತ್ತು ಕಾರ್ಯವಿಧಾನಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧ ಮಾಡಿದ್ದು, ಇದೀಗ ರಿವರ್ಸ್ ವೆಂಡಿಂಗ್ ಮೆಷಿನ್ಗಳನ್ನು ಬಳಕೆ ಮಾಡುವುದರಿಂದ ವಿಮಾನ ನಿಲ್ದಾಣದಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧ ಮಾಡಲು ಹೆಜ್ಜೆ ಇಂಟ್ಟಂತಾಗುತ್ತದೆ ಎಂದು ಏರ್ಪೋರ್ಟ್ನ ಅಧಿಕಾರಿಗಳು ತಿಳಿಸಿದ್ದಾರೆ.
ಏನಿದರ ಉಪಯೋಗ?
ರಿವರ್ಸ್ ವೆಂಡಿಂಗ್ ಮೆಷಿನ್ಗಳನ್ನು ಬಳಸುತ್ತಿರುವುದರಿಂದ ನಿಜವಾಗಿಯೂ ಲಾಭವಾಗಲಿದ್ದು, ವಿಶೇಷವಾಗಿ RVM ಮೆಷಿನ್ಗಳು ಒಂದು ವರ್ಷದಲ್ಲಿ ಸುಮಾರು 125 tCO2e ಇಂಗಾಲದ ಹೊರ ಸೂಸುವಿಕೆಯನ್ನು ಕಡಿಮೆ ಮಾಡಲು ಕೊಡುಗೆ ನೀಡುತ್ತವೆ. ಮಾತ್ರವಲ್ಲದೇ ಮುಂಬೈ ಏರ್ಪೋರ್ಟ್ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ ಈವರೆಗೆ 85 ಟನ್ PET ಪ್ಲಾಸ್ಟಿಕ್ ನೀರಿನ ಬಾಟಲ್ಗಳನ್ನು ಮರುಬಳಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Transparent Wood: ಪ್ಲಾಸ್ಟಿಕ್ಗೆ ಪರ್ಯಾಯವಾಗಿ ಬರುತ್ತಿದೆ ಟ್ರಾನ್ಸ್ಪರೆಂಟ್ ವುಡ್ !
ರಿವರ್ಸ್ ವೆಂಡಿಂಗ್ ಮೆಷಿನ್ಗಳು ಅನೇಕ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, PET ಪ್ಲಾಸ್ಟಿಕ್ ಬಾಟಲ್ಗಳನ್ನು ಮರುಬಳಕೆ ಮಾಡುವ ಬಳಕೆದಾರರಿಗೆ ಜಿಂಗ್ಬಸ್, ಮೈಂತ್ರಾ ಮತ್ತು ಸ್ವಿಗ್ಗಿ ಆಪ್ಗಳಲ್ಲಿ ವಸ್ತುಗಳನ್ನು ಖರೀದಿಸುವವರಿಗೆ ರಿಯಾಯಿತಿ ದರದ ಆಫರನ್ನೂ ನೀಡಿದೆ. ರಿವರ್ಸ್ ವೆಂಡಿಂಗ್ ಮೆಷಿನ್ನ ಬಳಕೆದಾರರಿಗೆ ಎಸ್ಎಂಎಸ್ ಮೂಲಕ ಕೂಪನ್ಗಳ ಕೊಡುಗೆಯನ್ನೂ ಕಳುಹಿಸಲಾಗುತ್ತದೆ.
ರಿವರ್ಸ್ ವೆಂಡಿಂಗ್ ಮೆಷಿನ್ ಬಳಕೆಯಿಂದ ಏಕ-ಬಳಕೆಯ ಪ್ಲಾಸ್ಟಿಕ್ ಕಸ ಮರುಬಳಕೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಮುಂಬೈ ವಿಮಾನ ನಿಲ್ದಾಣದಲ್ಲಿ ಇಂಗಾಳದ ಹೊರ ಸೂಸುವಿಕೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡಲು ಪ್ರಯತ್ನ ಮುಂದುವರಿಯುತ್ತದೆ, ಇದಕ್ಕಾಗಿಯೇ ಪಿಇಟಿ ಬಾಟಲಿಗಳ ಬಳಕೆಗೆ ಹೆಚ್ಚು ಗಮನ ಕೊಡುತ್ತಿದ್ದೇವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ