Lalit Hotel: '4 ಕಡೆ ಬಾಂಬ್ ಇದೆ, 5 ಕೋಟಿ ಕೊಟ್ಟರೆ ನಿಷ್ಕ್ರಿಗೊಳಿಸ್ತೀವಿ' ಮುಂಬೈ ಹೋಟೆಲ್ ಸ್ಫೋಟಿಸುವ ಬೆದರಿಕೆ!

ಮುಂಬೈನ ಸಹರ್ ಪ್ರದೇಶದಲ್ಲಿರುವ ಪ್ರಸಿದ್ಧ ಹೋಟೆಲ್‌ಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಹೋಟೆಲ್‌ನ ಒಳಗೆ 4 ಸ್ಥಳಗಳಲ್ಲಿ ಬಾಂಬ್‌ಗಳನ್ನು ಇಡಲಾಗಿದೆ ಎಂದು ಬೆದರಿಕೆ ಹಾಕಿದ್ದಾನೆ. ಇದನ್ನು ನಿಷ್ಕ್ರಿಯಗೊಳಿಸಲು ಆತ ಬರೋಬ್ಬರಿ 5 ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಪೊಲೀಸರು ಪ್ರಕರಣದ ತನಿಖೆಯಲ್ಲಿ ತೊಡಗಿದ್ದಾರೆ.

ಮುಂಬೈ ಹೋಟೆಲ್ ಸ್ಫೋಟಿಸುವ ಬೆದರಿಕೆ

ಮುಂಬೈ ಹೋಟೆಲ್ ಸ್ಫೋಟಿಸುವ ಬೆದರಿಕೆ

  • Share this:
ಮುಂಬೈ(ಆ.23): ಮುಂಬೈನ ಪ್ರಸಿದ್ಧ ಹೋಟೆಲ್‌ಗೆ (Lalit Hotel) ಬಾಂಬ್ ಬೆದರಿಕೆ ಬಂದಿದೆ. ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಹೋಟೆಲ್‌ನಲ್ಲಿ ನಾಲ್ಕು ಕಡೆ ಬಾಂಬ್ ಇಡಲಾಗಿದೆ ಎಂದು ಹೇಳಿದ್ದಾನೆ. ನಂತರ ಅದನ್ನು ನಿಷ್ಕ್ರಿಯಗೊಳಿಸಲು ಐದು ಕೋಟಿ ರೂ. ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾನೆ. ಈ ಘಟನೆ ಸಹರ್ ಪ್ರದೇಶದಲ್ಲಿ ನಡೆದಿದೆ. ಮಾಹಿತಿ ಪ್ರಕಾರ ಮುಂಬೈನ ಫೈವ್ ಸ್ಟಾರ್ ಹೋಟೆಲ್ 'ದಿ ಲಲಿತ್'ಗೆ ಈ ಬೆದರಿಕೆ ಕರೆ (Bomb Threat) ಬಂದಿದೆ. ಮಾಹಿತಿ ಬಂದ ತಕ್ಷಣ ಪೊಲೀಸರು ಹೋಟೆಲ್‌ಗೆ ಆಗಮಿಸಿದರು. ಇಡೀ ಹೋಟೆಲ್‌ನಲ್ಲಿ ಹುಡುಕಾಟ ನಡೆಸಲಾಯಿತು, ಆದರೆ ಅಲ್ಲಿ ಏನೂ ಕಂಡು ಬಂದಿಲ್ಲ. ಸದ್ಯ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಸುಲಿಗೆ ಹಾಗೂ ಬೆದರಿಕೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಪೊಲೀಸರು ಯಾರ ನಂಬರ್‌ನಿಂದ ಕರೆ ಬಂದಿದೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ.

ಇತ್ತೀಚೆಗೆ, ಮುಂಬೈನ ಟ್ರಾಫಿಕ್ ಪೊಲೀಸರಿಗೆ 26/11 ರೀತಿಯ ದಾಳಿ ನಡೆಸುವ ಬೆದರಿಕೆಗಳು ಬಂದಿದ್ದವು. ಟ್ರಾಫಿಕ್ ಕಂಟ್ರೋಲ್‌ನ ವಾಟ್ಸ್‌ಆ್ಯಪ್ ನಂಬರ್‌ಗೆ ಬೆದರಿಕೆ ಸಂದೇಶ ರವಾನಿಸಿದ್ದು, ಮುಂಬೈನಲ್ಲಿ 26/11 ಮಾದರಿಯ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಅಲ್ಲದೇ ನೀವು ನನ್ನ ಲೊಕೇಷನ್ ಟ್ರೇಸ್​ ಮಾಡಿದರೂ ಅದು ಭಾರತದ ಹೊರಗೆ ತೋರಿಸುತ್ತದೆ ಎಂದು ಬೆದರಿಕೆ ಹಾಕಿದಾತ ಹೇಳಿದ್ದ. ಭಾರತದಲ್ಲಿ ಆರು ಜನ ಸೇರಿ ಈ ದಾಳಿ ನಡೆಸುತ್ತಾರೆಂದೂ ಹೇಳಲಾಗಿತ್ತು. ಈ ಬಗ್ಗೆ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದರೊಂದಿಗೆ ಇತರ ಏಜೆನ್ಸಿಗಳಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: Hubballi ರೈಲ್ವೆ ನಿಲ್ದಾಣದ Bomb Blast ಪ್ರಕರಣಕ್ಕೆ 2 ವರ್ಷ; ರೈಲ್ವೆ ಪೊಲೀಸರಿಂದ ಸಿ ರಿಪೋರ್ಟ್!

ಸಂದೇಶದಲ್ಲಿ ಏನು ಬರೆಯಲಾಗಿತ್ತು?

ಟ್ರಾಫಿಕ್ ಪೊಲೀಸ್ ಕಂಟ್ರೋಲ್ ಸಂಖ್ಯೆ ಮೇಲೆ, +923029858353 ಸಂಖ್ಯೆಯಿಂದ WhatsApp ಸಂದೇಶದಲ್ಲಿ ಬರೆಯಲಾಗಿದೆ. ಶುಭವಾಗಲಿ, ಮುಂಬೈನಲ್ಲಿ ದಾಳಿ ನಡೆಯಲಿದೆ. ಈ ದಾಳಿಯು 26/11 ರ ಹೊಸ ಜ್ಞಾಪನೆಯನ್ನು ತರುತ್ತದೆ. ಇದರಲ್ಲಿ 7 ಮೊಬೈಲ್ ಸಂಖ್ಯೆಗಳನ್ನೂ ಹಂಚಿಕೊಳ್ಳಲಾಗಿದೆ. ಅದರ ಪಕ್ಕದಲ್ಲಿ ಮುಂಬೈ ಸ್ಫೋಟಿಸಲು ತಯಾರಿ ಎಂದು ಬರೆಯಲಾಗಿದೆ. ಯುಪಿ ಎಟಿಎಸ್ ಮುಂಬೈಗೆ ಹಾರಲು ಬಯಸುತ್ತದೆ ಎಂದು ಸಂದೇಶದಲ್ಲಿ ಬರೆಯಲಾಗಿದೆ. ಇದರಲ್ಲಿ ಕೆಲವು ಭಾರತೀಯರು ನನ್ನ ಜೊತೆಗಿದ್ದಾರೆ. ಇವರಲ್ಲಿ ಕೆಲವರ ಹೆಸರುಗಳನ್ನೂ ಸಂದೇಶದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Varanasi Bomb Blast Case 2006: ವಾರಣಾಸಿ ಬಾಂಬ್ ಸ್ಪೋಟ ಪ್ರಕರಣ: 16 ವರ್ಷದ ನಂತರ ಅಪರಾಧಿ ವಾಲಿವುಲ್ಲಾಗೆ ಗಲ್ಲು ಶಿಕ್ಷೆ ಪ್ರಕಟ

ಸಂದೇಶದಲ್ಲಿ ಅಜ್ಮಲ್ ಕಸಬ್ ಬಗ್ಗೆಯೂ ಉಲ್ಲೇಖಿಸಲಾಗಿದೆ

ನನ್ನ ವಿಳಾಸವನ್ನು ಇಲ್ಲಿ ತೋರಿಸುತ್ತೇನೆ, ಆದರೆ ಮುಂಬೈನಲ್ಲಿ ಸ್ಫೋಟವಾಗುತ್ತದೆ ಎಂದು ಸಂದೇಶದಲ್ಲಿ ಬರೆಯಲಾಗಿದೆ. ನಮಗೆ ಯಾವುದೇ ಅಡಗುಸ್ಥಾನವಿಲ್ಲ. ನಿಮಗೆ ದೇಶದಿಂದ ಹೊರಗಿರುವ ಸ್ಥಳವನ್ನು ಗುರುತಿಸಲಾಗುತ್ತದೆ. ಇದರೊಂದಿಗೆ ಉದಯಪುರದ ಕನ್ಹಯ್ಯಾಲಾಲ್ ಮರ್ಡರ್ ಕೂಡ ಅದರಲ್ಲಿ ಪ್ರಸ್ತಾಪವಾಗಿದ್ದು, ದೇಹದಿಂದ ಬೇರ್ಪಡುವ ವಿಷಯವನ್ನು ಹೇಳಲಾಗಿದೆ. ಇದಲ್ಲದೇ ಸಿಧು ಮುಸೇವಾಲಾ ಹಾಗೂ ಅಮೆರಿಕದ ದಾಳಿಯ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.
Published by:Precilla Olivia Dias
First published: