Mukul Rohatgi: ಮತ್ತೆ ಭಾರತದ ಅಟಾರ್ನಿ ಜನರಲ್ ಆಗಿ ಮರಳಲಿದ್ದಾರೆ ಮುಕುಂದ್ ರೋಹಟಗಿ

ಹಿರಿಯ ವಕೀಲರಾದ ಮುಕುಲ್ ರೋಹಟಗಿ ಭಾರತದ ಅಟಾರ್ನಿ ಜನರಲ್ ಆಗಿ ಮರಳಲಿದ್ದು ಅಕ್ಟೋಬರ್ 1 ರಿಂದ ತಮ್ಮ ಎರಡನೇ ಅವಧಿಯನ್ನು ಪ್ರಾರಂಭಿಸಲಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ. ಕೆ.ಕೆ ವೇಣುಗೋಪಾಲ್ ಅವರ ಅಧಿಕಾರಾವಧಿಯು ಸೆಪ್ಟೆಂಬ 30 ಕ್ಕೆ ಕೊನೆಗೊಳ್ಳಲಿದ್ದು ಅವರ ಸ್ಥಾನವನ್ನು ರೋಹಟಗಿ ವಹಿಸಲಿದ್ದಾರೆ.

ಮುಕುಲ್ ರೋಹಟಗಿ

ಮುಕುಲ್ ರೋಹಟಗಿ

  • Share this:
ಹಿರಿಯ ವಕೀಲರಾದ (Senior Lawyer) ಮುಕುಲ್ ರೋಹಟಗಿ (Mukul Rohatgi) ಭಾರತದ ಅಟಾರ್ನಿ ಜನರಲ್ ಆಗಿ ಮರಳಲಿದ್ದು ಅಕ್ಟೋಬರ್ 1 ರಿಂದ ತಮ್ಮ ಎರಡನೇ ಅವಧಿಯನ್ನು ಪ್ರಾರಂಭಿಸಲಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ. ಕೆ.ಕೆ ವೇಣುಗೋಪಾಲ್ (K.K Venugopal) ಅವರ ಅಧಿಕಾರಾವಧಿಯು ಸೆಪ್ಟೆಂಬ 30 ಕ್ಕೆ ಕೊನೆಗೊಳ್ಳಲಿದ್ದು ಅವರ ಸ್ಥಾನವನ್ನು ರೋಹಟಗಿ ವಹಿಸಲಿದ್ದಾರೆ. 67 ರ ಹರೆಯದ ಮುಕುಲ್ ರೋಹಟಗಿ 2017 ರಲ್ಲಿ ಹುದ್ದೆಗೆ ರಾಜೀನಾಮೆ (Resignation) ನೀಡಿದ ನಂತರ ಕೆ. ಕೆ ವೇಣುಗೋಪಾಲ್ ಅಧಿಕಾರ ವಹಿಸಿಕೊಂಡಿದ್ದರು. ಜೂನ್ 2014 ರಲ್ಲಿ ಅಟಾರ್ನಿ ಜನರಲ್ (Attorney General) ಆಗಿ ನೇಮಕಗೊಂಡಿದ್ದ ರೋಹಟಗಿ ಜೂನ್ 2017 ರವರೆಗೆ ಸೇವೆ ಸಲ್ಲಿಸಿದ್ದರು.

ಸಪ್ಟೆಂಬರ್ 30 ನಂತರ ಅಧಿಕಾರದಲ್ಲಿ ಇರುವುದಿಲ್ಲ
ಶ್ರೀ ವೇಣುಗೋಪಾಲ್ ಅವರ ವಿಸ್ತೃತ ಅಧಿಕಾರಾವಧಿಯು ಸೆಪ್ಟೆಂಬರ್ 30 ರಂದು ಕೊನೆಗೊಳ್ಳುತ್ತದೆ. ಅವರು ಐದು ವರ್ಷಗಳ ಕಾಲ ಕೇಂದ್ರದ ಉನ್ನತ ಕಾನೂನು ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. 2020 ರಲ್ಲಿ ಮೂರು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದಾಗ 91 ರ ಹರೆಯದ ವೇಣುಗೋಪಾಲ್ ವಯಸ್ಸಿನ ಕಾರಣ ನೀಡಿ ಹುದ್ದೆಯಿಂದ ಕೆಳಗಿಳಿಸುವಂತೆ ಸರಕಾರವನ್ನು ವಿನಂತಿಸಿಕೊಂಡಿದ್ದರು.

ಇದನ್ನೂ ಓದಿ: Arvind Kejriwal: ಆಟೋ ಡ್ರೈವರ್ ಮನೆಗೆ ಊಟಕ್ಕೆ ಹೊರಟ ಕೇಜ್ರಿವಾಲ್; ತಡೆದ ಪೊಲೀಸರಿಗೆ ವಾರ್ನ್

ಆದರೆ, ಇನ್ನೊಂದು ಅವಧಿಗೆ ಹುದ್ದೆಯಲ್ಲಿ ಮುಂದುವರಿಯುವಂತೆ ಸರಕಾರ ವಿನಂತಿಸಿಕೊಂಡಿತು. ಈ ಪ್ರಕಾರವಾಗಿ ಬರೇ ಎರಡು ವರ್ಷಗಳಿಗೆ ವೇಣುಗೋಪಾಲ್ ಹುದ್ದೆಯನ್ನು ವಿಸ್ತರಿಸಿಕೊಂಡರು. ಸೆಪ್ಟೆಂಬರ್ 30 ನಂತರ ಅಧಿಕಾರಾವಧಿಯಲ್ಲಿ ಇರುವುದಿಲ್ಲ ಎಂದ ವೇಣುಗೋಪಾಲ್ ಸರಕಾರಕ್ಕೆ ಸೂಚಿಸಿದ್ದರು.

ವೇಣುಗೋಪಾಲ್ ಅಧಿಕಾರಾವಧಿಯನ್ನು ಈ ವರ್ಷದ ಜೂನ್ ಅಂತ್ಯದಲ್ಲಿ ಮೂರು ತಿಂಗಳು ವಿಸ್ತರಿಸಲಾಯಿತು. ವಿಸ್ತರಣೆಯನ್ನು ಪಡೆದ ನಂತರ ಅಟಾರ್ನಿ ಜನರಲ್ ಅಧಿಕಾರವಾಧಿಯು 30 ಸಪ್ಟೆಂಬರ್ 2022 ರಂದು ಕೊನೆಗೊಳ್ಳಲಿದೆ. ಪ್ರಸ್ತುತ ಅವಧಿ ಪೂರ್ಣಗೊಂಡ ನಂತರ ಉನ್ನತ ಕಾನೂನು ಅಧಿಕಾರಿಯಾಗಿ ಮುಂದುವರಿಯುವಂತಿಲ್ಲ ಎಂದು ವೇಣುಗೋಪಾಲ್ ಸರಕಾರಕ್ಕೆ ಸೂಚಿಸಿದ್ದಾರೆ ಎಂಬುದು ತಿಳಿದು ಬಂದಿದೆ.

ಜಮ್ಮು ಮತ್ತು ಕಾಶ್ಮೀರ 370 ನೇ ವಿಧಿಯ ರದ್ದುಗೊಳಿಸುವಿಕೆ
ಮುಕುಲ್ ರೋಹಟಗಿ ಈ ಹಿಂದೆ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. 2017 ರಲ್ಲಿ ಶ್ರೀ ರೋಹಟಗಿ ಅವರು ಅಧಿಕಾರವನ್ನು ತೊರೆದ ನಂತರವೂ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ 370 ನೇ ವಿಧಿಯನ್ನು ರದ್ದುಗೊಳಿಸುವುದು ಸೇರಿದಂತೆ ಸೂಕ್ಷ್ಮ ಕಾನೂನು ವಿಷಯಗಳ ಬಗ್ಗೆ ಸರ್ಕಾರವು ಅವರನ್ನು ಸಂಪರ್ಕಿಸಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

ಸರಕಾರದ ಉನ್ನತ ವಕೀಲರಾಗಿ ಮುಕುಲ್ ರೋಹಟಗಿ ನೇಮಿಸಿದ ಬಿಜೆಪಿ ಸರಕಾರ
ರೋಹಟಗಿಯವರ ಮೊದಲ ಅವಧಿಯಲ್ಲಿ, 2014 ರಲ್ಲಿ ಬಿಜೆಪಿ ಭಾರಿ ಜನಾದೇಶವನ್ನು ಗೆದ್ದು ಅಧಿಕಾರಕ್ಕೆ ಬಂದ ಕೂಡಲೇ ಅವರನ್ನು ಸರಕಾರದ ಉನ್ನತ ವಕೀಲರಾಗಿ ನೇಮಿಸಲಾಯಿತು. ಭಾರತದ ಅತ್ಯಂತ ಉನ್ನತ ವಕೀಲರಲ್ಲಿ ಒಬ್ಬರಾದ ಶ್ರೀ ರೋಹಟಗಿ ಅವರು ಗುಜರಾತ್ ಸರಕಾರವನ್ನು ಪ್ರತಿನಿಧಿಸಿದ ಗುಜರಾತ್ ಗಲಭೆ ಪ್ರಕರಣ ಸೇರಿದಂತೆ ಹಲವಾರು ಪ್ರಮುಖ ಪ್ರಕರಣಗಳನ್ನು ಗೆದ್ದಿರುವ ಚಾಣಾಕ್ಷ ಎಂದೆನಿಸಿದ್ದಾರೆ.

ಇದನ್ನೂ ಓದಿ:  Electric Highway: ಭಾರತದಲ್ಲೂ ಎಲೆಕ್ಟ್ರಿಕ್ ಹೈವೇ ನಿರ್ಮಾಣ, ಗಾಡಿ ಓಡಿದ್ರೆ ಚಾರ್ಜ್ ಆಗುತ್ತೆ!

ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗಕ್ಕೆ ಸಂಬಂಧಿಸಿದ ಪ್ರಕರಣವನ್ನೂ ಅವರು ವಾದಿಸಿದರು. ತೀರಾ ಇತ್ತೀಚೆಗೆ, ಡ್ರಗ್ಸ್-ಆನ್-ಕ್ರೂಸ್ ಪ್ರಕರಣದಲ್ಲಿ ಬಂಧಿತರಾದ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರ ರಕ್ಷಣಾ ತಂಡದ ನೇತೃತ್ವನ್ನು ರೋಹಟಗಿ ವಹಿಸಿದ್ದರು.

ರಾಷ್ಟ್ರಪತಿಗಳಿಂದ ನೇಮಕ
ಸಂವಿಧಾನದ 76 ನೇ ವಿಧಿಯ ಪ್ರಕಾರ, ರಾಷ್ಟ್ರಪತಿಗಳು ಭಾರತದ ಅಟಾರ್ನಿ ಜನರಲ್ ಆಗಿ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಳ್ಳಲು ಅರ್ಹತೆ ಹೊಂದಿರುವ ವ್ಯಕ್ತಿಯನ್ನು ನೇಮಿಸುತ್ತಾರೆ. ಅಟಾರ್ನಿ ಜನರಲ್ ಅವರು ದೇಶದ ಎಲ್ಲಾ ನ್ಯಾಯಾಲಯಗಳಲ್ಲಿ ಪ್ರೇಕ್ಷಕರ ಹಕ್ಕನ್ನು ಸಹ ಪಡೆದುಕೊಳ್ಳುತ್ತಾರೆ.
Published by:Ashwini Prabhu
First published: