ಪಶ್ಚಿಮ ಬಂಗಾಳ ಬಿಜೆಪಿ ಶಾಸಕ ಪಿಎಸಿ ಅಧ್ಯಕ್ಷ : ಮೋದಿಗೆ ದೊಡ್ಡ ಶಾಕ್​ ನೀಡಿದ ದೀದಿ

ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ಚುನಾವಣೆ ವೇಳೆ ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಮುಕುಲ್​ ರಾಯ್​ ಮಮತಾ ಬ್ಯಾನರ್ಜಿ ವಿರುದ್ದ ವಾ್ಗ್ದಾಳಿ ನಡೆಸಿದ್ದರು. ಯಾವಾಗ ಬಿಜೆಪಿ ಹೀನಾಯವಾಗಿ ಸೋತು ಟಿಎಂಸಿ ಅಧಿಕಾರ ಹಿಡಿಯಿತೋ ಆಗ ಬಿಜೆಪಿ ತೊರೆದು ಮರಳಿ ಮಾತೃ ಪಕ್ಷಕ್ಕೆ ಬಂದಿದ್ದಾರೆ. ಆದರೆ ಅವರು ಈಗಲೂ ಬಿಜೆಪಿ ಎಂಎಲ್​ಎ, ಅವರಿನ್ನು ಪಕ್ಷ ತೊರೆದಿಲ್ಲ.

ಮುಕುಲ್​ ರಾಯ್​​

ಮುಕುಲ್​ ರಾಯ್​​

 • Share this:
  ರಾಜಕೀಯ ಬೆಳವಣಿಗೆಯಲ್ಲಿ ಯಾರೂ ಮಿತ್ರರಿಲ್ಲ, ಯಾರೂ ಶತ್ರುಗಳಿಲ್ಲ ಅನ್ನುವುದು ಮತ್ತೆ, ಮತ್ತೆ ಸಾಬೀತಾಗುತ್ತಿದೆ. ಪಶ್ಚಿಮ ಬೆಂಗಾಳದಲ್ಲಿ ಬಿಜೆಪಿಗೆ ಠಕ್ಕರ್​ ಕೊಟ್ಟಿರುವ ತೃಣಮೂಲ ಕಾಂಗ್ರೆಸ್​ ಮುಕುಲ್​ ರಾಯ್​ ಅವರನ್ನು ಸಾರ್ವಜನಿಕ ಲೆಕ್ಕಗಳ ಸಮಿತಿಗೆ ಅಧ್ಯಕ್ಷನನ್ನಾಗಿ ನೇಮಿಸಿ ಶಾಕ್​ ಕೊಟ್ಟಿದೆ. 

  ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ಚುನಾವಣೆ ವೇಳೆ ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಮುಕುಲ್​ ರಾಯ್​ ಮಮತಾ ಬ್ಯಾನರ್ಜಿ ವಿರುದ್ದ ಕಂಡ, ಕಂಡಲ್ಲಿ ವಾಗ್ದಾಳಿ ನಡೆಸಿದ್ದರು. ಯಾವಾಗ ಬಿಜೆಪಿ ಹೀನಾಯವಾಗಿ ಸೋತು ಟಿಎಂಸಿ ಅಧಿಕಾರ ಹಿಡಿಯಿತೋ ಆಗ ಬಿಜೆಪಿ ತೊರೆದು ಮರಳಿ ಮಾತೃ ಪಕ್ಷಕ್ಕೆ ಬಂದಿದ್ದಾರೆ. ಆದರೆ ಅವರು ಈಗಲೂ ಬಿಜೆಪಿ ಎಂಎಲ್​ಎ, ಅವರಿನ್ನು ಪಕ್ಷ ತೊರೆದಿಲ್ಲ.

  ಪಿಎಸಿ ಅಧ್ಯಕ್ಷರನ್ನಾಗಿ ಮುಕುಲ್​ ರಾಯ್​ ಅವರನ್ನು ನೇಮಿಸಲಾಗಿದೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದ ಮೇಲೆ ಬಿಜೆಪಿ ಎಂಎಲ್​ಎ ಹಾಗೂ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಇದನ್ನು ವಿರೋಧಿಸಿ ಘೋಷಣೆಗಳನ್ನು ಕೂಗುತ್ತಾ ವಿಧಾನಸಭೆಯಿಂದ ಹೊರ ನಡೆದರು.

  ರಾಯ್ ಅವರನ್ನು ಪಿಎಸಿ ಅಧ್ಯಕ್ಷರನ್ನಾಗಿ ಘೋಷಿಸಿ ಆಡಳಿತಾರೂಡ ಟಿಎಂಸಿ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಸುವೇಂದು ಅಧಿಕಾರಿ ಆರೋಪಿಸಿದರು. ಅವರು ಬಲೂರ್‌ಘಾಟ್‌ನಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿರುವ ಅಶೋಕ್ ಲಾಹಿರಿ (ಕೇಂದ್ರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ) ಅವರನ್ನು ಪಿಎಸಿ ಅಧ್ಯಕ್ಷರನ್ನಾಗಿ ಮಾಡಲು ಇಚ್ಚಿಸಿದ್ದರು.


  ಜೂನ್​ 18 ರಂದು ಸುವೇಂದು ಅವರು ವಿಧಾನಸಭಾ ಸ್ಪೀಕರ್​ ಅವರಿಗೆ ದೂರು ಸಲ್ಲಿಸಿದ್ದು. ಮುಕುಲ್​ ಅವರು ಬಿಜೆಪಿಗೆ ರಾಜಿನಾಮೆ ಕೊಡದೆ ಜೂನ್​ 11 ರಂದು ಟಿಎಂಸಿ ಸೇರಿದ್ದಾರೆ. ಇದು ಪಕ್ಷಾಂತರ ನಿಷೇಧ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಆದ ಕಾರಣ ಅವರ ಶಾಸಕ ಸ್ಥಾನವನ್ನು ಅನರ್ಹಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

  ಇದುವರೆಗೂ ಇರುವ ರೂಡಿಯಂತೆ ಪಿಎಸಿ ಅಧ್ಯಕ್ಷರನ್ನಾಗಿ ವಿರೋಧ ಪಕ್ಷದವರನ್ನು ಮಾಡುವ ಪರಿಪಾಠವಿದೆ ಆದರೆ ಇಲ್ಲಿ ಟಿಎಂಸಿ ಬಿಜೆಪಿಗೆ ನೀರು ಕುಡಿಸಿದ್ದು ಮುಕುಲ್​ ರಾಯ್​ ಅವರನ್ನು ಈ ಸ್ಥಾನದಲ್ಲಿ ಕೂರಿಸಿದೆ. ಕಾನೂನಾತ್ಮಕವಾಗಿ ನೋಡಿದರೆ ಮುಕುಲ್​ ರಾಯ್​ ಈಗಲೂ ಬಿಜೆಪಿ ಎಂಎಲ್​ಎ. ಇದಲ್ಲದೆ ಸ್ಪೀಕರ್​ಗೆ ಸಹ ವಿವಿಧ ಕಮಿಟಿಗಳ ಅಧ್ಯಕ್ಷರನ್ನು ಆಯ್ಕೆ ಮಾಡುವ ಅಧಿಕಾರ ಸಹ ಇದೆ.

  ಪಶ್ಚಿಮ ಬಂಗಾಳ ವಿಧಾನ ಸಭೆಯಲ್ಲಿ 41 ಕಮಿಟಿಗಳು ಇದ್ದು ಪಿಎಸಿ ಅತ್ಯಂತ ಪ್ರಮುಖವಾದ ಕಮಿಟಿಯಾಗಿದೆ, ಇದು ಸರ್ಕಾರದ ಎಲ್ಲಾ ಆಯ- ವ್ಯಯಗಳನ್ನು ಲೆಕ್ಕ ಮಾಡುವ ಅಧಿಕಾರ ಹೊಂದಿದೆ.

  ಈ ತೀರ್ಮಾನವನ್ನು ಖಂಡಿಸಿ ಬಿಜೆಪಿ ಶಾಸಕರು ವಿಧಾನಸಭೆಯಿಂದ ಹೊರ ನಡೆದರು. ಅಲ್ಲದೆ ಟಿಎಂಸಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಮುಕುಲ್​ ರಾಯ್​ ಅವರನ್ನು ಅನೈತಿಕವಾಗಿ ಕುರ್ಚಿಯಲ್ಲಿ ಕೂರಿಸಿದೆ ಎಂದು ಆರೋಪಿಸಿದರು.

  ಮುಕುಲ್​ ರಾಯ್​ ತನ್ನ ರಾಜಕೀಯ ಜೀವನ ಆರಂಭಿಸಿದ್ದು ಯೂತ್​ ಕಾಂಗ್ರೆಸ್​ ಮೂಲಕ ಆ ವೇಳೆ ಬ್ಯಾನರ್ಜಿಗೆ ಹತ್ತಿರವಾಗಿದ್ದರು. ಯಾವಾಗ ಮಮತಾ ಕಾಂಗ್ರೆಸ್ಸಿನಿಂದ ಹೊರ ಬಂದು ಟಿಎಂಸಿ ಕಟ್ಟಿದರೋ ಆಗ ಅನೇಕ ಯೂತ್​ ಕಾಂಗ್ರೆಸ್​ ಬಿಟ್ಟು ಮಮತಾ ಬಳಗ ಸೇರಿಸರು. ಟಿಎಂಸಿ 1998 ರಲ್ಲಿ ಪ್ರಾರಂಭವಾಯಿತು.

  ಡಿಸೆಂಬರ್​ 17, 1997 ರಂದು ಮುಕುಲ್​ ಟಿಎಂಸಿ ಸೇರಿದರು.  ಆದರೆ ಪಕ್ಷ ಅಧಿಕೃತವಾಗಿ ಪ್ರಾರಂಭವಾಗಿದ್ದು ಜನವರಿ 1 998 ರಲ್ಲಿ. ಶಾರದಾ ಹಗರಣದಲ್ಲಿ ಮುಖ್ಯವಾಗಿ ಕೇಳಿಬಂದ ಹೆಸರು ಎಂದರೆ ಮುಕುಲ್​ ರಾಯ್​ ಯಾವಾಗ ಸಿಬಿಐ ಇವರನ್ನು ಆರೋಪಿ ಎಂದು ಹೇಳಿತೋ ಮಮತಾ ಅವರೊಟ್ಟಿಗಿನ ಸಂಬಂಧ ಹಳಸಲಾಗುತ್ತಾ ಬಂದಿತ್ತು.

  ಸೆಪ್ಟೆಂಬರ್​ 25 2017 ರಲ್ಲಿ ಟಿಎಂಸಿಗೆ ದೊಡ್ಡ ಹೊಡೆತ ಎಂದರೆ ಮುಕುಲ್​ ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದು.

  ಆನಂತರ ಇವರು ನವೆಂಬರ್​ 3, 2017 ರಂದು ಬಿಜೆಪಿ ಸೇರಿ ದೊಡ್ಡ ಆಘಾತ ನೀಡಿದರು. ಅಲ್ಲದೇ ನರೇಂದ್ರ ಮೋದಿ ಅವರ ಜೊತೆ ಕೆಲಸ ಮಾಡಲು ನನಗೆ ಹೆಮ್ಮೆಯಾಗುತ್ತದೆ ಎಂದು ಹೇಳಿಕೆ ನೀಡಿದರು.

  ಇದನ್ನೂ ಓದಿ: COVID: ಜನಗಳೇ ಸ್ವಲ್ಪ ಯೋಚಿಸಿ; ಇನ್ನಾದರೂ ಬುದ್ದಿ ಕಲಿಯಿರಿ ಎಂದ ಕೇಂದ್ರ ಸರ್ಕಾರ

  ನಂತರದ ಬೆಳವಣಿಗೆಯಲ್ಲಿ 2021 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಯಾವಾಗ ಮಣ್ಣು ಮುಕ್ಕಿತೋ  11 ಜನ ಬಿಜೆಪಿ ಶಾಸಕರ ಜೊತೆಗೂಡಿ ಮತ್ತೆ ಘರ್​ ವಾಪಸಿಗೊಂಡರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: