• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Mukhtar Ansari: ಮುಖ್ತಾರ್ ಅನ್ಸಾರಿ ಪತ್ನಿ ಅಫ್ಶಾನ್ ಅನ್ಸಾರಿಗೆ ಹುಡುಕಾಟ, ಇದು ಲೇಡಿ ಡಾನ್ ರಿಯಲ್ ಸ್ಟೋರಿ!

Mukhtar Ansari: ಮುಖ್ತಾರ್ ಅನ್ಸಾರಿ ಪತ್ನಿ ಅಫ್ಶಾನ್ ಅನ್ಸಾರಿಗೆ ಹುಡುಕಾಟ, ಇದು ಲೇಡಿ ಡಾನ್ ರಿಯಲ್ ಸ್ಟೋರಿ!

ಮುಖ್ತಾರ್ ಅನ್ಸಾರಿ ಪತ್ನಿ ಅಫ್ಶಾನ್ ಅನ್ಸಾರಿ ಈ ಇಬ್ಬರಿಗೂ ಅಬ್ಬಾಸ್ ಮತ್ತು ಉಮರ್ ಎಂಬ ಪುತ್ರರಿದ್ದಾರೆ.

ಮುಖ್ತಾರ್ ಅನ್ಸಾರಿ ಪತ್ನಿ ಅಫ್ಶಾನ್ ಅನ್ಸಾರಿ ಈ ಇಬ್ಬರಿಗೂ ಅಬ್ಬಾಸ್ ಮತ್ತು ಉಮರ್ ಎಂಬ ಪುತ್ರರಿದ್ದಾರೆ.

ಮುಖ್ತಾರ್ ಅನ್ಸಾರಿ ಪತ್ನಿ ಅಫ್ಶಾನ್ ಅನ್ಸಾರಿ ಈ ಇಬ್ಬರಿಗೂ ಅಬ್ಬಾಸ್ ಮತ್ತು ಉಮರ್ ಎಂಬ ಪುತ್ರರಿದ್ದಾರೆ.

 • Share this:

ದೆಹಲಿ: ದರೋಡೆಕೋರ ಮತ್ತು ರಾಜಕಾರಣಿ ಮುಖ್ತಾರ್ ಅನ್ಸಾರಿ (Mukhtar Ansaris Wife) ಪತ್ನಿ ಅಫ್ಶಾನ್ ಅನ್ಸಾರಿ (Afshan Ansari) ಪರಾರಿಯಾಗಿದ್ದು, ಲೇಡಿ ಡಾನ್‌ಗಾಗಿ ತೀವ್ರ ಹುಡುಕಾಟ ಆರಂಭವಾಗಿದೆ. ಮುಖ್ತಾರ್‌ ಮತ್ತು ಅವರ ಓರ್ವ ಪುತ್ರ ಪೊಲೀಸರ ಬಲೆಗೆ ಈಗಾಗ್ಲೇ ಬಿದ್ದಿದ್ದು, ಅಫ್ಶಾನ್ ಅನ್ಸಾರಿ ಮಾತ್ರ ತಲೆಮರೆಸಿಕೊಂಡಿದ್ದಾರೆ. ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಅಫ್ಶಾನ್‌ ನಾಪತ್ತೆಯಾಗಿದ್ದು ಪೊಲೀಸರಿಗೆ (Police) ದೊಡ್ಡ ತಲೆನೋವಾಗಿದೆ. ಪೊಲೀಸ್ ದಾಖಲೆಗಳ ಪ್ರಕಾರ, ಅಫ್ಶಾನ್ ಅನ್ಸಾರಿ ವಿರುದ್ಧ ಅನೇಕ ಎಫ್‌ಐಆರ್‌ಗಳಿವೆ.


ಮುಖ್ತಾರ್ ಅನ್ಸಾರಿ ವಿರುದ್ಧ ಜಾರಿ ನಿರ್ದೇಶನಾಲಯ ದಾಖಲಿಸಿದ ಪಿಎಂಎಲ್‌ಎ ಅಡಿಯಲ್ಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಈತನ ಪತ್ನಿಯಾದ ಅಫ್ಶಾನ್ ಸಹ ಭಾಗಿಯಾಗಿದ್ದು, ಈಕೆಯೂ ಸಹ ಆರೋಪಿ ಪಟ್ಟಿಯಲ್ಲಿದ್ದಾಳೆ.


ಗಂಡನ ವ್ಯವಹಾರ ನೋಡಿಕೊಳ್ಳುತ್ತಿದ್ದ ಲೇಡಿ ಡಾನ್
ಡಾನ್ ಮುಖ್ತಾರ್ ಅನ್ಸಾರಿ 2005ರಲ್ಲಿ ಜೈಲು ಪಾಲಾದ ಬಳಿಕ ಆತನ ಅಂತರ್ ರಾಜ್ಯ ಗ್ಯಾಂಗ್ ಅನ್ನು ಈಕೆಯೇ ನಿಭಾಯಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇ.ಡಿ ಸಿದ್ಧಪಡಿಸಿದ ದಸ್ತಾವೇಜಿನ ಪ್ರಕಾರ, ಅಫ್ಶಾನ್ ಅನ್ಸಾರಿ ತನ್ನ ಗಂಡನ ಅಕ್ರಮ ಹಣವನ್ನು ವಿಕಾಸ್ ಕನ್‌ಸ್ಟ್ರಕ್ಷನ್ ಮತ್ತು ಅನ್ಸಾರಿ ಕನ್‌ಸ್ಟ್ರಕ್ಷನ್ ಎಂಟರ್‌ಪ್ರೈಸಸ್ ಸೇರಿ ಹಲವೆಡೆ ಲಾಂಡರಿಂಗ್ ಮಾಡಿದ್ದಾರೆ. ಈಕೆಯ ಇಬ್ಬರು ಸಹೋದರರಾದ ಅತೀಫ್ ರಜಾ ಮತ್ತು ಅನ್ವರ್ ಶಹಜಾದ್ ಅವರು ಕೂಡ ಈ ಸಂಸ್ಥೆಗಳಲ್ಲಿ ಪಾಲುದಾರ ಮತ್ತು ನಿರ್ದೇಶಕರಾಗಿದ್ದಾರೆ.


ಮಕ್ಕಳದ್ದೂ ಇದೆ ಪಾಲು!
ಮುಖ್ತಾರ್ ಅನ್ಸಾರಿ ಪತ್ನಿ ಅಫ್ಶಾನ್ ಅನ್ಸಾರಿ ಈ ಇಬ್ಬರಿಗೂ ಅಬ್ಬಾಸ್ ಮತ್ತು ಉಮರ್ ಎಂಬ ಪುತ್ರರಿದ್ದಾರೆ. ದಂಪತಿಯ ಸಂಪೂರ್ಣ ಅಕ್ರಮ ಚಟುವಟಿಕೆಯಲ್ಲಿ ಪುತ್ರರ ಮತ್ತು ಸಹೋದರರು ಕೂಡ ಪಾಲ್ಗೊಂಡಿದ್ದಾರೆ. ಇವರ ಒಡೆತನದ ಗ್ಲೋರೈಜ್ ಲ್ಯಾಂಡ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಇಲ್ಲಿಯವರೆಗೆ ಸರ್ಕಾರಕ್ಕೆ ಒಂದು ರೂಪಾಯಿ ತೆರಿಗೆ ಕಟ್ಟಿಲ್ಲ ಎಂಬುವುದು ಸಹ ಇತ್ತೀಚಿನ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಶೂಟರ್‌ ಆಗಿರುವ ಅಬ್ಬಾಸ್ ಪ್ರಸ್ತುತ ಜೈಲಿನಲ್ಲಿದ್ದಾನೆ.


ಕುಟುಂಬದ ಮೇಲಿದೆ 50 ಎಫ್‌ಐಆರ್‌
ಮುಖ್ತಾರ್, ಪತ್ನಿ, ಪುತ್ರರು, ಸಹೋದರರು ಮತ್ತು ಇತರ ಸಹಚರರು ಸೇರಿ ಹಲವರು ಇಂದು ಯುಪಿ ಪೊಲೀಸ್ ಮತ್ತು ಇಡಿ ಮತ್ತು ಆದಾಯ ತೆರಿಗೆ ಇಲಾಖೆ ಸೇರಿದಂತೆ ಕೇಂದ್ರೀಯ ಏಜೆನ್ಸಿಗಳಿಂದ ತನಿಖೆ ನಡೆಸುತ್ತಿರುವ ಸುಮಾರು 50 ಎಫ್‌ಐಆರ್‌ಗಳು ಇವರ ಮೇಲಿದೆ. ಈ ಎಲ್ಲಾ ಪ್ರಕರಣಗಳು ಕೊಲೆ, ಸುಲಿಗೆ, ತೆರಿಗೆ ವಂಚನೆ ಮತ್ತು ಭೂಕಬಳಿಕೆಗೆ ಸಂಬಂಧಿಸಿವೆ.
ಆಸ್ತಿ ಜಪ್ತಿ
ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿ, ಅಕ್ರಮವಾಗಿ ನಿರ್ಮಿಸಿದ ಕಟ್ಟಡಗಳಿಂದ ಬಾಡಿಗೆಯಾಗಿ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿ ವಂಚಿಸಿದ ಆರೋಪವನ್ನು ಅಫ್ಶಾನ್ ವಿರುದ್ಧ ಇ.ಡಿ ದಾಖಲಿಸಿದೆ.


ಇದನ್ನೂ ಓದಿ: Viral Video: ಬಾಯಲ್ಲಿ ನೋಟಿಟ್ಟುಕೊಂಡು ಡ್ಯಾನ್ಸರ್​ಗೆ ತುಟಿಯಿಂದ ತೆಗೆಯಲು ಹೇಳಿದ ಕಾಂಗ್ರೆಸ್​ ಶಾಸಕ! ವಿಡಿಯೋ ವೈರಲ್


ಅನ್ಸಾರಿ ಪತ್ನಿಯ ಹೆಸರಿನಲ್ಲಿರುವ ಬೇನಾಮಿ ಆಸ್ತಿಗಳನ್ನು ಪತ್ತೆ ಮಾಡಲಾಗಿದೆ ಎಂದು ಇ.ಡಿ ಮೂಲಗಳು ತಿಳಿಸಿವೆ. ಕಳೆದ ವರ್ಷ ತನಿಖಾ ಸಂಸ್ಥೆಗೆ ಅಫ್ಶಾನ್‌ಗೆ ಸಂಬಂಧಿಸಿದ 6.3 ಕೋಟಿ ರೂ ಮೌಲ್ಯದ ಆಸ್ತಿಗಳನ್ನು ಇ.ಡಿ ಮುಟ್ಟುಗೋಲು ಹಾಕಿಕೊಂಡಿತ್ತು. ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ದಾಖಲೆಗಳ ನಕಲಿಗೆ ಸಂಬಂಧಿಸಿದಂತೆ ಲಕ್ನೋದಲ್ಲಿ ಒಂದು ಪ್ರಕರಣ ದಾಖಲಾಗಿದೆ.


ಉತ್ತಮ ಕುಟುಂಬ ಹಿನ್ನೆಲೆ ಹೊಂದಿರುವ ಮುಖ್ತಾರ್ ಅನ್ಸಾರಿ
ಮುಖ್ತಾರ್ ಅನ್ಸಾರಿ ಪ್ರಸಿದ್ಧ ಕುಟುಂಬದಿಂದ ಬಂದವರು. ಅವರ ಅಜ್ಜ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು, ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರು ಸಹ ಆಗಿದ್ದರು. ಭಾರತದ ಉಪರಾಷ್ಟ್ರಪತಿ, ಭಾರತೀಯ ಸೇನೆಯಲ್ಲಿ ಬ್ರಿಗೇಡಿಯರ್, ಕೇಂದ್ರೀಯ ವಿಶ್ವವಿದ್ಯಾನಿಲಯದ ಉಪಕುಲಪತಿಗಳು, ಸಂಸದರು ಮತ್ತು ಶಾಸಕರನ್ನು ಹೊಂದಿರುವ ಕುಟುಂಬದ ಹಿನ್ನೆಲೆ ಸಾಕಷ್ಟು ಉತ್ತಮವಾಗಿದೆ.


ಇದನ್ನೂ ಓದಿ: Mexican Turtle: ದಕ್ಷಿಣ ಅಮೆರಿಕಾದ ದೈತ್ಯ ಗಾತ್ರದ ಆಮೆ ಪಶ್ಚಿಮ ಬಂಗಾಳದಲ್ಲಿ ಪತ್ತೆ; ಪ್ರಾಣಿ ತಜ್ಞರಲ್ಲಿ ಅಚ್ಚರಿ!

top videos


  ಅವರ ಸಹೋದರ ಅಫ್ಜಲ್ ಅನ್ಸಾರಿ ಕೂಡ 2019 ರ ಲೋಕಸಭೆ ಚುನಾವಣೆಯಲ್ಲಿ ಗಾಜಿಪುರದಿಂದ ಬಿಜೆಪಿಯ ಮನೋಜ್ ಸಿನ್ಹಾ ಅವರನ್ನು ಸೋಲಿಸಿದ್ದರು. ಅವರ ಪುತ್ರ ಅಬ್ಬಾಸ್ 2022 ರ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಮೌದಿಂದ ಗೆಲುವು ಕಂಡಿದ್ದರು.

  First published: