ಮುಖೇಶ್​ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ

news18
Updated:July 13, 2018, 8:59 PM IST
ಮುಖೇಶ್​ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ
news18
Updated: July 13, 2018, 8:59 PM IST
-ನ್ಯೂಸ್​ 18 ಕನ್ನಡ

ಬೆಂಗಳೂರು (ಜುಲೈ 13): ಅಲಿಬಾಬಾ ಗ್ರೂಪ್​ನ ಜಾಕ್​ ಮಾ ಅವರನ್ನು ಹಿಂದಿಕ್ಕಿರುವ ರಿಲಯನ್ಸ್​ ಇಂಡಸ್ಟ್ರೀಸ್​ ಮುಖ್ಯಸ್ಥ ಮುಖೇಶ್​ ಅಂಬಾನಿ ಏಷ್ಯಾ ಖಂಡದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಇಂದು ಬಿಡುಗಡೆಯಾಗಿರುವ ಬ್ಲೂಮ್​ಬರ್ಗ್​ ವರದಿ ಪ್ರಕಾರ ಮುಖೇಶ್​ ಅಂಬಾನಿ 44.3 ಬಿಲಿಯನ್​ ಡಾಲರ್​ ಸಂಪತ್ತು ಹೊಂದುವ ಮೂಲಕ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಜಾಕ್​ ಮಾ ಅವರ ಒಟ್ಟು ಆಸ್ತಿ 44 ಬಿಲಿಯನ್​ ಡಾಲರ್​ ಇತ್ತು. ಈ ಮೂಲಕ ಅತ್ಯಂತ ಕಡಿಮೆ ಅಂತರದಿಂದ ಅಂಬಾನಿ ಮೊದಲ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ನ ಮಾರುಕಟ್ಟೆ ಇಂದು 7 ಲಕ್ಷ ಕೋಟಿ ವರಮಾನ  ಹೊಂದುವ ಮೂಲಕ ಟಿಸಿಎಸ್​ನ ನಂತರ ಈ ಪ್ರಮಾಣದ ವಹಿವಾಟನ್ನು ನಡೆಸಿದ 2ನೇ ಸಂಸ್ಥೆಯಾಗಿ ದಾಖಲೆ ಮಾಡಿದೆ. ಈ ಬೆಳವಣಿಗೆಯ ನಂತರ ರಿಲಯನ್ಸ್​ ಇಂಡಸ್ಟ್ರೀಸ್​ನ ಷೇರು ಪ್ರಮಾಣದಲ್ಲಿಯೂ ಹೆಚ್ಚಳ ಕಂಡಿದ್ದು, ಇಂದು ಸಂಜೆಯೊಳಗೆ ಶೇ. 1.7ರಷ್ಟು ಹೆಚ್ಚಳ ಕಂಡಿದೆ.

ಈಗಾಗಲೇ 21.5 ಕೋಟಿ ಗ್ರಾಹಕರನ್ನು ಹೊಂದುವ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಕೂಡ ಮೈಲಿಗಲ್ಲು ಸ್ಥಾಪಿಸಿದೆ. ಬೇರೆ ಟೆಲಿಕಾಂ ಸಂಸ್ಥೆಗಳಿಗೆ ಸ್ಪರ್ಧೆಯೊಡ್ಡುವಂತೆ ಹಲವು ಆಫರ್​ಗಳನ್ನು ನೀಡುತ್ತಿರುವುದರಿಂದ ಗ್ರಾಹಕರ ಸಂಖ್ಯೆ ಇನ್ನೂ ಹೆಚ್ಚುತ್ತಿದೆ. ಈ ತಿಂಗಳಲ್ಲಿ ಅಂಬಾನಿ 4ಕೆ ರೆಸಲ್ಯೂಷನ್​ನ ಅಡ್ವಾನ್ಸ್​ಡ್​ ಫೈಬರ್​ ಒಳಗೊಂಡಿರುವ ಜಿಯೋಜಿಗಾಫೈಬರ್​ ಎಂಬ ಬ್ರಾಡ್​ಬ್ಯಾಂಡ್​ ಅನ್ನು ಕೂಡ ಮಾರುಕಟ್ಟೆಗೆ ಪರಿಚಯಿಸಿದ್ದರು.

 

 
Loading...

 
First published:July 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...