ಅಜ್ಜನಾಗಿ ಬಡ್ತಿಪಡೆದ ಉದ್ಯಮಿ ಮುಖೇಶ್​ ಅಂಬಾನಿ; ಮೊಮ್ಮಗನ ಫೋಟೋ ವೈರಲ್​

ಮೊಮ್ಮಗವಿನೊಂದಿಗೆ ಮುಖೇಶ್​ ಅಂಬಾನಿ

ಮೊಮ್ಮಗವಿನೊಂದಿಗೆ ಮುಖೇಶ್​ ಅಂಬಾನಿ

Mukesh Ambani's Grandson : ಮುಖೇಶ್​ ಅಂಬಾನಿ ಮಗ ಆಕಾಶ್​ ಅಂಬಾನಿ ಹಾಗೂ ಶ್ಲೋಕಾ ಮೆಹ್ತಾ ಅವರಿಗೆ ಗಂಡು ಮಗು ಜನಿಸಿದೆ

  • Share this:

    ಮುಂಬೈ  (ಡಿ .10): ಉದ್ಯಮಿ ಮುಖೇಶ್​ ಅಂಬಾನಿ ಹಾಗೂ ನೀತಾ ಅಂಬಾನಿ ಈಗ ಅಜ್ಜ, ಅಜ್ಜಿಯಾದ ಸಂಭ್ರಮದಲ್ಲಿದ್ದಾರೆ. ಮುಖೇಶ್​ ಅಂಬಾನಿ ಮಗ ಆಕಾಶ್​ ಅಂಬಾನಿ ಹಾಗೂ ಶ್ಲೋಕಾ ಮೆಹ್ತಾ ಅವರಿಗೆ ಗಂಡು ಮಗು ಜನಿಸಿದೆ. ಈ ಕುರಿತು ಕುಟುಂಬದ ವಕ್ತಾರರು ಮಾಹಿತಿ ಹಂಚಿಕೊಂಡಿದ್ದಾರೆ. ತಾಯಿ, ಮಗು ಆರೋಗ್ಯವಾಗಿದ್ದು, ಮುಖೇಶ್​ ಅಂಬಾನಿ  ಜೀವನದ ಖುಷಿ ಮತ್ತಷ್ಟು ಹೆಚ್ಚಿದೆ ಎಂದು ತಿಳಿಸಿದ್ದಾರೆ. ಮೊಮ್ಮೊಗನೊಂದಿಗೆ ಮುಖೇಶ್​ ಅಂಬಾನಿ ಮೊದಲ ಫೋಟೋ ಹಂಚಿಕೊಂಡಿದ್ದು, ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. 


    ಮೊದಲ ಮಗುವಿನ ಆಗಮನದಲ್ಲಿ ಶ್ಲೋಕಾ ಮತ್ತು ಆಕಾಶ್​ ಸಂಭ್ರಮ ಹೆಚ್ಚಿದೆ ಎಂದು ರಿಲಯನ್ಸ್​ ಇಂಡಸ್ಟ್ರಿಸ್​ ಲಿಮಿಟೆಡ್​ನ ಪರಿಮಳ್​ ನಾಥ್ವಾನಿ ಟ್ವಿಟರ್​ನಲ್ಲಿ ಮಗುವಿನ ಫೋಟೋ ಹಂಚಿಕೊಂಡಿದ್ದಾರೆ. ಅಲ್ಲದೇ ಮನೆಗೆ ಹೊಸ ಸದಸ್ಯನ ಆಗಮನಕ್ಕೆ ಮುಖೇಶ್​ ಹಾಗೂ ನೀತಾ ಅವರಿಗೂ ಶುಭಾಶಯ ಕೋರುತ್ತೇನೆ. ಇದು ನಿಜಕ್ಕೂ ಸಂತೋಷ ಪಡುವ ದಿನವಾಗಿದ್ದು, ಮಗುವಿಗೆ ದೇವರು ಇನ್ನಷ್ಟು ಪ್ರೀತಿ ಆಶೀರ್ವಾದ ನೀಡಲಿ ಎಂದು ಟ್ವೀಟ್​ ಮಾಡಿದ್ದಾರೆ.


    ಮೊದಲ ಬಾರಿಗೆ ಅಜ್ಜ ಅಜ್ಜಿಯಾಗಿ ಮುಖೇಶ್​ ಹಾಗೂ ನೀತಾ ಬಡ್ತಿ ಪಡೆದಿದ್ದಾರೆ. 2019 ರ ಮಾರ್ಚ್​ ನಲ್ಲಿ ಶೋಕ್ಲಾ ಹಾಗೂ ಆಕಾಶ್​ ಹಸೆಮಣೆ ಏರಿದ್ದರು. ಜಿಯೋ ವರ್ಲ್ಡ್​​ ಸೆಂಟರ್​ನಲ್ಲಿ ನಡೆದ ಅದ್ಧೂರಿ ವಿವಾಹದಲ್ಲಿ ಬಾಲಿವುಡ್​ ಸೇರಿದಂತೆ ಹಲವು ದಿಗ್ಗಜ್ಜರು ಭಾಗಿಯಾಗಿದ್ದರು.

    Published by:Seema R
    First published: