Mukesh Ambani: ಮುಕೇಶ್ ಅಂಬಾನಿಗೆ ಬೆದರಿಕೆ ಕರೆ; ತಾನು ನಂಬರ್ 1 ಟೆರರಿಸ್ಟ್ ಎಂದು ಹೇಳಿಕೊಂಡ ವ್ಯಕ್ತಿ

ಅಪರಿಚಿತ ವ್ಯಕ್ತಿಯಿಂದ ಮುಖೇಶ್ ಅಂಬಾನಿ ಅವರಿಗೆ ಜೀವ ಬೆದರಿಕೆಯ ಒಟ್ಟು 8 ಕರೆಗಳನ್ನು ಮಾಡಲಾಗಿದೆ. ಕರೆ ಮಾಡಿದ ವ್ಯಕ್ತಿ ತಾನು ನಂಬರ್ 1 ಉಗ್ರಗಾಮಿ ಎಂದು ಕರೆದುಕೊಂಡಿದ್ದಾನೆ.

ಮುಖೇಶ್​ ಅಂಬಾನಿ

ಮುಖೇಶ್​ ಅಂಬಾನಿ

  • Share this:
    ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ (Mukesh Ambani) ಮತ್ತು ಅವರ ಕುಟುಂಬಕ್ಕೆ ಮತ್ತೊಮ್ಮೆ ಬೆದರಿಕೆ ಹಾಕಲಾಗಿದೆ. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಬೆದರಿಕೆ ಕರೆ ಬಂದಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಇಂದು (ಆಗಸ್ಟ್ 15) ಒಟ್ಟು ಎಂಟು ಬೆದರಿಕೆ ಕರೆಗಳು ಬಂದಿವೆ ಎಂದು ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ (Reliance Hospital) ಅಧಿಕಾರಿಗಳು ಡಿಬಿ ಮಾರ್ಗ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಾವು ಆಸ್ಪತ್ರೆಯಿಂದ ಬೆದರಿಕೆ ಕರೆಯ ಕುರಿತು ದೂರು ಸ್ವೀಕರಿಸಿದ್ದೇವೆ. ನಾವು ಅದನ್ನು ಪರಿಶೀಲಿಸುತ್ತಿದ್ದೇವೆ ಎಂದು ಮುಂಬೈ ಪೊಲೀಸರ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಅಪರಿಚಿತ ವ್ಯಕ್ತಿಯಿಂದ ಮುಖೇಶ್ ಅಂಬಾನಿ ಅವರಿಗೆ ಜೀವ ಬೆದರಿಕೆಯ ಒಟ್ಟು 8 ಕರೆಗಳನ್ನು ಮಾಡಲಾಗಿದೆ. ಕರೆ ಮಾಡಿದ ವ್ಯಕ್ತಿ ತಾನು ನಂಬರ್ 1 ಉಗ್ರಗಾಮಿ ಎಂದು ಕರೆದುಕೊಂಡಿದ್ದಾನೆ. ಅಲ್ಲದೇ ನ್ಯಾಷನಲ್ ಇನ್ವೆಸ್ಟಿಗೇಷನ್ ಬ್ಯೂರೋ (NIA), ATS ಮತ್ತು ಮುಂಬೈ ಪೊಲೀಸರಿಗೆ ಸಹ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ.

    ಮುಂಬೈ ಪೊಲೀಸರಿಗೆ ದೂರು
    ಈ ವಿಷಯವನ್ನು ಪರಿಶೀಲಿಸಲು ನಾವು ಮುಂಬೈ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಸಿಇಒ ಡಾ ತರಂಗ್ ಗಿಯಾಂಚಂದಾನಿ ತಿಳಿಸಿದ್ದಾರೆ.

    ಅಂಬಾನಿ ಕುಟುಂಬಕ್ಕೆ ಭದ್ರತೆ ಮುಂದುವರೆಸಲು ಅನುಮತಿ
    ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಪೀಠ ಅಂಬಾನಿ ಕುಟುಂಬಕ್ಕೆ ಕೇಂದ್ರ ಸರ್ಕಾರ ಭದ್ರತೆ ನೀಡುವುದನ್ನು ಮುಂದುವರಿಸಬಹುದು ಎಂದು ಸ್ಪಷ್ಟಪಡಿಸಿತ್ತು. ಕೇಂದ್ರ ಸರ್ಕಾರ ಅಂಬಾನಿ ಕುಟುಂಬಕ್ಕೆ ನೀಡಿದ ಭದ್ರತೆಯನ್ನು ಪ್ರಶ್ನಿಸಿ ತ್ರಿಪುರಾ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.

    ಈಗಿನ ಪದ್ಧತಿಯಂತೆ ಅಂಬಾನಿ ಕುಟುಂಬವು  ಭದ್ರತೆಗೆ ತಗಲುವ ನಿರ್ವಹಿಸುವ ವೆಚ್ಚವನ್ನು ಭರಿಸಲಿದೆ ಎಂದು ಪೀಠ ಹೇಳಿದೆ. ಲೈವ್ ಲಾ ಜಾಲತಾಣ ವರದಿ ಮಾಡಿದ ಪ್ರಕಾರ ಸಿಜೆಐ ರಮಣ, ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರ ಪೀಠವು ಪಿಐಎಲ್ ಸಲ್ಲಿಸಿದ ಅರ್ಜಿದಾರರ ಸ್ಥಾನವನ್ನು ಪ್ರಶ್ನಿಸಿತ್ತು.

    ಇದನ್ನೂ ಓದಿ: Independence Day 2022: ಮಹಿಳೆಯರನ್ನು ಗೌರವಿಸಿ; ಮನವಿ ಮಾಡಿದ ಪಿಎಂ ಮೋದಿ

    ಅಲ್ಲದೇ ತ್ರಿಪುರಾ ಹೈಕೋರ್ಟ್ ಅರ್ಜಿಯನ್ನು ಪರಿಗಣಿಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಈಗಿನ ಪದ್ಧತಿಯಂತೆ ಅಂಬಾನಿ ಕುಟುಂಬವು ಅಂತಹ ಭದ್ರತೆಯನ್ನು ನಿರ್ವಹಿಸುವ ವೆಚ್ಚವನ್ನು ಭರಿಸಲಿದೆ ಎಂದು ಪೀಠ ಹೇಳಿತ್ತು.

    ಸುಪ್ರೀಂ ಕೋರ್ಟ್ ಹೇಳಿದ್ದೇನು?
    ಜುಲೈ 22 ರಂದು ನೀಡಲಾದ ಆದೇಶದಲ್ಲಿ ಪ್ರಕರಣದಲ್ಲಿ ಅರ್ಜಿದಾರರು ಖಾಸಗಿ ವ್ಯಕ್ತಿಗೆ ಒದಗಿಸಲಾದ ಭದ್ರತಾ ವಿವರವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಪ್ರಶ್ನಿಸಲು ಯಾವುದೇ ಕಾನೂನು ಮಾನ್ಯತೆಯನ್ನು ಹೊಂದಿಲ್ಲ ಎಂದು ನ್ಯಾಯಾಲಯವು ಗಮನಿಸಿದ್ದಾಗಿ ತಿಳಿಸಿದೆ.

    ಇದನ್ನೂ ಓದಿ: Independence Day 2022: ಕಿತ್ತೂರು ರಾಣಿ ಚೆನ್ನಮ್ಮ, ನಾರಾಯಣ ಗುರುಗಳನ್ನು ಸ್ಮರಿಸಿದ ಪ್ರಧಾನಿ ಮೋದಿ

    ತ್ರಿಪುರಾ ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿದ್ದ ಕೇಂದ್ರ ಸರ್ಕಾರ
    ಕೇಂದ್ರ ಸರ್ಕಾರವು ಅಂಬಾನಿ ಕುಟುಂಬಕ್ಕೆ ಬೆದರಿಕೆ ಗ್ರಹಿಕೆಗೆ ಸಂಬಂಧಿಸಿದ ಸ್ಥಿತಿಯ ವರದಿಯನ್ನು ಒದಗಿಸುವಂತೆ ಸರ್ಕಾರಕ್ಕೆ ತಿಳಿಸುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ತ್ರಿಪುರಾ ಹೈಕೋರ್ಟ್ ನೀಡಿದ ಆದೇಶವನ್ನು ಕೇಂದ್ರ ಸರ್ಕಾರವು ಪ್ರಶ್ನಿಸಿತ್ತು. ಆನಂತರ ಈ ಅರ್ಜಿಯ ವಿಷಯವು ಸುಪ್ರೀಂ ಕೋರ್ಟ್‌ಗೆ ತಲುಪಿತ್ತು.

    ಪ್ರಕರಣದ ವಿವರವಾದ ವಿಚಾರಣೆ ನಡೆಸಿದ ನಂತರ ಹೈಕೋರ್ಟ್‌ನ ಆದೇಶಕ್ಕೆ ಸುಪ್ರೀಂ ಕೋರ್ಟ್ ಜೂನ್‌ನಲ್ಲಿ ತಡೆ ನೀಡಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ಆದೇಶ ನೀಡಿದೆ.
    Published by:guruganesh bhat
    First published: