ಮುಖೇಶ್ ಅಂಬಾನಿ ಈಗ ಜಗತ್ತಿನ 4ನೇ ಅತಿದೊಡ್ಡ ಶ್ರೀಮಂತ; ಅವರ ಒಟ್ಟಾರೆ ಆಸ್ತಿ ಮೌಲ್ಯ ಎಷ್ಟು ಗೊತ್ತೇ?

ಫೇಸ್​ಬುಕ್​ ಸಂಸ್ಥಾಪಕ ಮಾರ್ಕ್​ ಜುಗರ್​ಬರ್ಗ್ ಅವರು ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಇದ್ದಾರೆ. ಅವರ ಒಟ್ಟಾರೆ ಆಸ್ತಿ ಮೌಲ್ಯ ಇತ್ತೀಚಿಗೆ 100 ಬಿಲಿಯನ್ ಡಾಲರ್ ದಾಟಿದೆ. ಮೊದಲ ಮತ್ತು ಎರಡನೇ ಶ್ರೀಮಂತರ ಸಾಲಿನಲ್ಲಿ ಜೆಫ್​ ಬೆಜೋಸ್​ ಮತ್ತು ಬಿಲ್​ ಗೇಟ್ಸ್​ ಇದ್ದಾರೆ. 

news18-kannada
Updated:August 8, 2020, 9:15 PM IST
ಮುಖೇಶ್ ಅಂಬಾನಿ ಈಗ ಜಗತ್ತಿನ 4ನೇ ಅತಿದೊಡ್ಡ ಶ್ರೀಮಂತ; ಅವರ ಒಟ್ಟಾರೆ ಆಸ್ತಿ ಮೌಲ್ಯ ಎಷ್ಟು ಗೊತ್ತೇ?
ಮುಕೇಶ್ ಅಂಬಾನಿ.
  • Share this:
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್​ಐಎಲ್​) ಅಧ್ಯಕ್ಷ ಮುಖೇಶ್ ಅಂಬಾನಿ ಇದೀಗ ಜಗತ್ತಿನ ನಾಲ್ಕನೇ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಬ್ಲೂಮ್​ಬರ್ಗ್​ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಮುಖೇಶ್ ಅಂಬಾನಿ ಅವರು ಎಲ್​ವಿಎಂಎಚ್ ಮೊಯೆಟ್ ಹೆನ್ನೆಸ್ಸಿ ಲೂಯಿ ವಿಟಾನ್​ ಅಧ್ಯಕ್ಷ ಮತ್ತು ಸಿಇಒ ಬರ್ನಾರ್ಡ್ ಅರ್ನಾಲ್ಟ್ ಅವರಿಗಿಂತ ಹೆಚ್ಚು ಆಸ್ತಿ ಹೊಂದುವ ಮೂಲಕ ಜಗತ್ತಿನ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಆರ್​ಐಎಲ್​ಗೆ ಈ ವರ್ಷ 22 ಬಿಲಿಯನ್ ಡಾಲರ್ ಹಣ ಸಂಗ್ರಹವಾದ ಬಳಿಕ 63 ವರ್ಷದ ಮುಖೇಶ್ ಅಂಬಾನಿ ಅವರ ಬಳಿ 80.6 ಬಿಲಿಯನ್ ಡಾಲರ್ (6.04 ಲಕ್ಷ ಕೋಟಿ) ಆಸ್ತಿ ಇದೆ.

ಅರ್ನಾಲ್ಟ್ ಅವರಿಂದ 1.24 ಬಿಲಿಯನ್ ಡಾಲರ್ ಮೌಲ್ಯ ಕಡಿಮೆಯಾಗಿದ್ದು, ಅವರ ಒಟ್ಟಾರೆ ಆಸ್ತಿ 80.2 ಬಿಲಿಯನ್ ಡಾಲರ್ (6.01 ಲಕ್ಷ ಕೋಟಿ) ಆಗಿದೆ. ಇದರೊಂದಿಗೆ ಅವರು ಜಗತ್ತಿನ ಹತ್ತು ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ.

ಭಾರತದ ಶ್ರೀಮಂತ ವ್ಯಕ್ತಿಯಾದ ಮುಖೇಶ್ ಅಂಬಾನಿ ಅವರು ಇತ್ತೀಚಿನ ವಾರಗಳಲ್ಲಿ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಸಿಲಿಕಾನ್ ವ್ಯಾಲಿ ಟೈಟಾನ್‌ಗಳಾದ ಎಲೋನ್ ಮಸ್ಕ್, ಆಲ್ಫಾಬೆಟ್ ಇಂಕ್ ಸಹ-ಸಂಸ್ಥಾಪಕರಾದ ಸೆರ್ಗೆ ಬ್ರಿನ್ ಮತ್ತು ಲ್ಯಾರಿ ಪೇಜ್, ಮತ್ತು  ವಾರೆನ್ ಬಫೆಟ್ ಸೇರಿದಂತೆ ಹಲವು ದೊಡ್ಡ ಉದ್ಯಮಿಗಳನ್ನು ಹಿಂದಿಕ್ಕೆ ಮುಂದೆ ಸಾಗಿದ್ದಾರೆ.

ಹತ್ತು ಶ್ರೀಮಂತ ವ್ಯಕ್ತಿಗಳ ಪಟ್ಟಿ ಮಾಡಿರುವ ಬ್ಲೂಮ್​ಬರ್ಗ್ ಸೂಚ್ಯಂಕದ ಪ್ರಕಾರ,  ಎಂಟು ಮಂದಿ ಅಮೆರಿಕನ್ನರು ಅಂಬಾನಿಯನ್ನು ಕೇವಲ ಭಾರತದ ಶ್ರೀಮಂತರನ್ನಾಗಿ ಅಷ್ಟೇ ಅಲ್ಲದೇ, ಏಷ್ಯಾದ ಅತಿದೊಡ್ಡ ಶ್ರೀಮಂತರನ್ನಾಗಿ ಮಾಡಿದ್ದಾರೆ.

ಇದನ್ನು ಓದಿ: 25 Years of Mobile Phones: ಮೊಬೈಲ್ ಮೂಲಕ ಭಾರತದಲ್ಲಿ ಮೈಲುಗಲ್ಲು ಸೃಷ್ಟಿ; 2ಜಿ ಗ್ರಾಹಕರನ್ನೀಗ ಅಪ್​ಗ್ರೇಡ್ ಮಾಡಬೇಕಿದೆ;​ ಮುಖೇಶ್ ಅಂಬಾನಿ

ಫೇಸ್​ಬುಕ್​ ಸಂಸ್ಥಾಪಕ ಮಾರ್ಕ್​ ಜುಗರ್​ಬರ್ಗ್ ಅವರು ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಇದ್ದಾರೆ. ಅವರ ಒಟ್ಟಾರೆ ಆಸ್ತಿ ಮೌಲ್ಯ ಇತ್ತೀಚಿಗೆ 100 ಬಿಲಿಯನ್ ಡಾಲರ್ ದಾಟಿದೆ. ಮೊದಲ ಮತ್ತು ಎರಡನೇ ಶ್ರೀಮಂತರ ಸಾಲಿನಲ್ಲಿ ಜೆಫ್​ ಬೆಜೋಸ್​ ಮತ್ತು ಬಿಲ್​ ಗೇಟ್ಸ್​ ಇದ್ದಾರೆ. ಜುಗರ್​ಬರ್ಗ್​ ಅವರ ಮೌಲ್ಯವೂ 2020ರಲ್ಲಿ 22.1 ಬಿಲಿಯನ್​ ಡಾಲರ್ ಹೆಚ್ಚಳವಾಗುವ ಮೂಲಕ ಅವರ ಒಟ್ಟಾರೆ ಆಸ್ತಿ ಮೌಲ್ಯ 102 ಬಿಲಿಯನ್ ಡಾಲರ್​ ಮುಟ್ಟಿದೆ.
Published by: HR Ramesh
First published: August 8, 2020, 9:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading