ಆಕಾಶ್‌ ಅಂಬಾನಿ-ಶ್ಲೋಕಾ ಮದುವೆ: ಆಮಂತ್ರಣ ಪತ್ರಿಕೆಗೆ ಅಂಬಾನಿ ಕುಟುಂಬದಿಂದ ವಿಶೇಷ ಪೂಜೆ

ಮುಂಬೈನಲ್ಲಿರುವ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನ ಜಿಯೊ ವಲ್ಡ್‌ ಸೆಂಟರ್‌ನಲ್ಲಿ ಮುಂದಿನ ತಿಂಗಳು ಮೂರು ದಿನಗಳ ಮದುವೆ ನಡೆಯಲಿದೆ. ಆರತಕ್ಷತಾ ಕಾರ್ಯಕ್ರಮವು ಮಾ.11ರಂದು ನಡೆಯಲಿದೆ.

zahir | news18
Updated:February 11, 2019, 9:58 PM IST
ಆಕಾಶ್‌ ಅಂಬಾನಿ-ಶ್ಲೋಕಾ ಮದುವೆ: ಆಮಂತ್ರಣ ಪತ್ರಿಕೆಗೆ ಅಂಬಾನಿ ಕುಟುಂಬದಿಂದ ವಿಶೇಷ ಪೂಜೆ
ಅಂಬಾನಿ ಕುಟುಂಬ
zahir | news18
Updated: February 11, 2019, 9:58 PM IST
ಮುಂಬೈ: ರಿಲಯನ್ಸ್‌ ಸಮೂಹದ ಮುಖ್ಯಸ್ಥ ಮುಖೇಶ್‌ ಅಂಬಾನಿ ಕುಟುಂಬದಲ್ಲಿ ಮತ್ತೊಂದು ವಿವಾಹ ಸಂಭ್ರಮ. ಈ ಹಿನ್ನಲೆಯಲ್ಲಿ ಇಂದು ಮುಂಬೈನ ಸಿದ್ಧಿವಿನಾಯಕ ದೇವಾಲಯಕ್ಕೆ ಅಂಬಾನಿ ಕುಟುಂಬದವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಪತ್ನಿ ನೀತಾ ಅಂಬಾನಿ ಹಾಗೂ ಮಗ ಆಕಾಶ್ ಅಂಬಾನಿ ಜೊತೆಗಿದ್ದರು.

ಆಕಾಶ್‌ ಅಂಬಾನಿ ಮತ್ತು ವಜ್ರದ ಉದ್ಯಮಿ ರಸ್ಸೆಲ್‌ ಮೆಹ್ತಾ ಪುತ್ರಿ ಶ್ಲೋಕಾ ಅವರ ವಿವಾಹ ಮಹೋತ್ಸವವು ಮಾ.9ರಂದು ನಡೆಯಲಿದೆ. ಈ ವಿವಾಹದ ಮೊದಲ ಆಮಂತ್ರಣ ಪತ್ರಿಕೆಗೆ ವಿಶೇಷ ಪೂಜೆ ನೆರವೇರಿಸಿದ ಅಂಬಾನಿ ಕುಟುಂಬ, ಮೊದಲ ಪತ್ರಿಕೆಯನ್ನು ಸಿದ್ಧಿ ವಿನಾಯಕ ದೇವರಿಗೆ ಅರ್ಪಿಸಿದರು.

ಮುಂಬೈನಲ್ಲಿರುವ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನ ಜಿಯೊ ವಲ್ಡ್‌ ಸೆಂಟರ್‌ನಲ್ಲಿ ಮುಂದಿನ ತಿಂಗಳು ಮೂರು ದಿನಗಳ ಮದುವೆ ನಡೆಯಲಿದೆ. ಆರತಕ್ಷತಾ ಕಾರ್ಯಕ್ರಮವು ಮಾ.11ರಂದು ನಡೆಯಲಿದ್ದು, ದೇಶ ವಿದೇಶಗಳ ಖ್ಯಾತ ಉದ್ಯಮಿಗಳು, ರಾಜಕಾರಣಿಗಳು ಮತ್ತು ನಾನಾ ವಲಯಗಳ ಸೆಲೆಬ್ರಿಟಿಗಳ ದಂಡೇ ಈ ವಿವಾಹ ಸಮಾರಂಭಕ್ಕೆ ಆಗಮಿಸಲಿದೆ ಎನ್ನಲಾಗಿದೆ.

ವಿವಾಹ ಸಮಾರಂಭಕ್ಕೂ ಮುಂಚಿತವಾಗಿ ಸ್ವಿಜರ್ಲೆಂಡ್‌ನಲ್ಲಿ ಮೂರು ದಿನಗಳ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಫೆ.23 ರಿಂದ 25ರ ತನಕ ನಡೆಯುವ ಈ ಸಂಭ್ರಮದಲ್ಲಿ ಸುಮಾರು 500 ಅತಿಥಿಗಳು ಪಾಲ್ಗೊಳ್ಳಲಿದ್ದಾರೆ ಹೇಳಲಾಗಿದೆ.

2018 ರ ಅಂತ್ಯದಲ್ಲಿ ಮುಖೇಶ್‌ ಅಂಬಾನಿ ಅವರ ಪುತ್ರಿ ಇಶಾ ಮತ್ತು ಪಿರಮಲ್‌ ಅವರ ಅದ್ಧೂರಿ ವಿವಾಹ ರಾಜಸ್ತಾನದಲ್ಲಿ ನಡೆದಿತ್ತು. ಇದೀಗ ಅಂಬಾನಿ ಕುಟುಂಬದಲ್ಲಿ ಮತ್ತೊಂದು ವಿವಾಹ ಸಂಭ್ರಮ ಮನೆಮಾಡಿದೆ.
First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...