HOME » NEWS » National-international » MUKESH AMBANI MARK ZUCKERBERG IN CONVERSATION AT FACEBOOK FUEL FOR INDIA SNVS

Facebook Fuel For India 2020 – ಗಮನ ಸೆಳೆಯಿತು ಮಾರ್ಕ್ ಝುಕರ್​ಬರ್ಗ್ ಮತ್ತು ಅಂಬಾನಿ ಸಂವಾದ

ಅಭಿವೃದ್ಧಿಗೆ ಡಿಜಿಟಲ್ ಕನೆಕ್ಟಿವಿಟಿ ಎಷ್ಟು ಮುಖ್ಯ ಎಂಬುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ Facebook Fuel For India 2020 ಶೃಂಗಸಭೆಯಲ್ಲಿ ರಿಲಾಯನ್ಸ್ ಛೇರ್ಮನ್ ಮತ್ತು ಫೇಸ್ಬುಕ್ ಸಂಸ್ಥಾಪಕರು ಗಹನ ಚರ್ಚೆ ನಡೆಸಿದರು.

news18
Updated:December 15, 2020, 2:14 PM IST
Facebook Fuel For India 2020 – ಗಮನ ಸೆಳೆಯಿತು ಮಾರ್ಕ್ ಝುಕರ್​ಬರ್ಗ್ ಮತ್ತು ಅಂಬಾನಿ ಸಂವಾದ
ಮಾರ್ಕ್ ಝುಕರ್​ಬರ್ಗ್ ಮತ್ತು ಮುಕೇಶ್ ಅಂಬಾನಿ
  • News18
  • Last Updated: December 15, 2020, 2:14 PM IST
  • Share this:
ಮುಂಬೈ(ಡಿ. 15): ಇಂದು ಪ್ರಾರಂಭಗೊಂಡ ಫೇಸ್​ಬುಕ್ ಫುಯಲ್ ಫಾರ್ ಇಂಡಿಯಾ ಆನ್​ಲೈನ್ ಶೃಂಗಸಭೆಯ ಮೊದಲ ದಿನದ ಕಾರ್ಯಕ್ರಮದಲ್ಲಿ ಮುಕೇಶ್ ಅಂಬಾನಿ ಮತ್ತು ಮಾರ್ಕ್ ಝುಕರ್​ಬರ್ಗ್ ನಡುವಿನ ಸಂವಾದವೇ ಪ್ರಮುಖ ಅಂಶವೆನಿಸಿತು. ವಿಶ್ವ ಉದ್ಯಮದ ದಿಗ್ಗಜರಾದ ಫೇಸ್​ಬುಕ್ ಸಂಸ್ಥಾಪಕ ಮತ್ತು ರಿಲಾಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥರ ಮಧ್ಯೆ ಡಿಜಿಟಲ್ ಕ್ಷೇತ್ರದ ಪ್ರಾಮುಖ್ಯತೆ ಬಗ್ಗೆ ಗಹನ ಚರ್ಚೆ ಆಯಿತು. ಜನಸಮೂಹವನ್ನು ಸಬಲೀಕರಣಗೊಳಿಸಲು, ಸರಿಯಾದ ತಂತ್ರಜ್ಞಾನದಿಂದ ಸಣ್ಣ ಉದ್ದಿಮೆಗಳಿಗೆ ಉತ್ತೇಜನ ನೀಡಲು ಡಿಜಿಟಲ್ ಕನೆಕ್ಟಿವಿಟಿ ಎಷ್ಟು ಮುಖ್ಯ ಎಂಬುದನ್ನು ತಿಳಿಸಿದರು. ಡಿಜಿಟಲ್ ಇಂಡಿಯಾ ಯೋಜನೆ, ಫೇಸ್​ಬುಕ್-ಜಿಯೋ ಸಹಭಾಗಿತ್ವ ಇತ್ಯಾದಿ ವಿಚಾರಗಳ ಬಗ್ಗೆಯೂ ಸಂವಾದ ನಡೆಸಿದರು.

ಭಾರತದಲ್ಲಿ ಡಿಜಿಟಲ್ ಕನೆಕ್ಟಿವಿಟಿಗೆ ಮತ್ತೊಂದು ಹೆಸರು ಫೇಸ್​ಬುಕ್ ಆಗಿದೆ. ಮಾರ್ಕ್ ಝುಕರ್​ವರ್ಗ್ ಅವರು ವಿಶ್ವದ ಡಿಜಿಟಲ್ ಕನೆಕ್ಟಿವಿಟಿಯ ನಿಜವಾದ ಆರ್ಕಿಟೆಕ್ಟ್ ಆಗಿದ್ಧಾರೆ. ಫೇಸ್​ಬುಕ್, ಇನ್ಸ್​ಟಾಗ್ರಾಮ್ ಮತ್ತು ವಾಟ್ಸಪ್ ಆ್ಯಪ್​ಗಳ ಮೂಲಕ ಫೇಸ್ಬುಕ್ ಸಂಸ್ಥೆ ಭಾರತದಲ್ಲಿ ಅತಿದೊಡ್ಡ ಬಳಕೆದಾರರ ಸಮೂಹ ಹೊಂದಿದೆ. ಫೇಸ್​ಬುಕ್ ವಾಚ್ ಪ್ಲಾಟ್​ಫಾರ್ಮ್ ಮೂಲಕ ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್ ಸರಣಿಯನ್ನು ಪ್ರಸಾರ ಮಾಡುತ್ತಿದೆ. ಫೇಸ್​ಬುಕ್ ವಾಚ್ ಅಪ್ಲಿಕೇಶನ್ ಉಚಿತವಾಗಿ ಡೌನ್​ಲೋಡ್ ಮಾಡಿಕೊಳ್ಳಬಹುದಾಗಿದ್ದು, ಅದು ವೆಬ್​ನಲ್ಲಷ್ಟೇ ಅಲ್ಲ ಸ್ಮಾರ್ಟ್​ ಟಿವಿಗಳಲ್ಲೂ ಲಭ್ಯವಿದೆ. ಸ್ಪೇನ್ ದೇಶದ ಲಾ ಲಿಗಾ ಫುಟ್ಬಾಲ್ ಲೀಗ್​ನ ಪ್ರಸಾರ ಹಕ್ಕು ಪಡೆದಿರುವ ಫೇಸ್​ಬುಕ್ ಸಂಸ್ಥೆ ಈಗ ಭಾರತದಲ್ಲಿ ಕ್ರಿಕೆಟ್ ಪ್ರಸಾರವನ್ನೂ ಮಾಡುತ್ತಿದೆ ಎಂದು ಮುಕೇಶ್ ಅಂಬಾನಿ ಶ್ಲಾಘನೆ ವ್ಯಕ್ತಪಡಿಸಿದರು.ಮಾರ್ಕ್ ಝುಕರ್​ಬರ್ಗ್ ಅವರು ಜನಸಾಮಾನ್ಯರಿಗೆ ಸರಿಯಾದ ಸಂಪರ್ಕ ಸಾಧನ, ಹಣಕಾಸು, ಸಾಮಾಜಿಕ ವಾಣಿಜ್ಯ, ಶಿಕ್ಷಣ ಮೊದಲಾದವನ್ನ ಒದಗಿಸುವುದರ ಪ್ರಾಮುಖ್ಯತೆ ಕುರಿತು ತಮಗಿರುವ ಒಲವನ್ನು ತೋರ್ಪಡಿಸಿದರು. ಜಗತ್ತಿನ ಕೋಟ್ಯಂತರ ಸಣ್ಣ ಉದ್ದಿಮೆಗಳು ಫೇಸ್​ಬುಕ್ನ ಪರಿಕರಗಳಿಗೆ ಮೌಲ್ಯ ನೀಡುತ್ತಿವೆ. ಕೋವಿಡ್ ನಂತರದ ಜಾಗತಿಕ ಚೇತರಿಕೆಗೆ ಈ ಸಣ್ಣ ಉದ್ಯಮಗಳೇ ಪ್ರಮುಖ ಪಾತ್ರ ವಹಿಸುತ್ತವೆ. ಫೇಸ್​ಬುಕ್​ನಲ್ಲಿ ಇಂಥ ಸಣ್ಣ ಉದ್ಯಮಗಳಿಗೆ ನಾವು ಸೇವೆ ನೀಡುತ್ತಿದ್ದೇವೆ. ಭಾರತದಲ್ಲಿ ಇದು ಇನ್ನೂ ದಿಟವಾಗಿದೆ. ಭಾರತದಲ್ಲಿ 6 ಕೋಟಿಗೂ ಅಧಿಕ ಸಣ್ಣ ಉದ್ದಿಮೆಗಳು ಹಾಗೂ ಅವುಗಳೊಂದಿಗೆ ನೌಕರಿಯಾಗಿ ಜೋಡಿತಗೊಂಡಿರುವ ಇನ್ನೂ ಅಧಿಕ ಸಂಖ್ಯೆಯ ಜನರು ಫೇಸ್​ಬುಕ್ ಮತ್ತು ಜಿಯೋ ಪಾಲುದಾರಿಕೆಯ ವ್ಯಾಪ್ತಿ ಬರುತ್ತಾರೆ. ಭಾರತದ ಸಣ್ಣ ಉದ್ದಿಮೆಗಳು ಜಾಗತಿಕ ಆರ್ಥಿಕ ಚೇತರಿಕೆಗೆ ಪ್ರಮುಖ ಪಾತ್ರ ವಹಿಸುವುದರಿಂದ ಈ ಅಂಶ ಬಹಳ ಮುಖ್ಯ. ನಾವು ಈ ಉದ್ದಿಮೆಗಳಿಗೆ ಅತ್ಯುತ್ತಮ ಸೌಕರ್ಯ ಒದಗಿಸುವುದರತ್ತ ಗಮನ ಹರಿಸಿದ್ದೇವೆ ಎಂದು ಮಾರ್ಕ್ ಝುಕರ್​ಬರ್ಗ್ ತಿಳಿಸಿದರು.

ಇದನ್ನೂ ಓದಿ: ರೈತರ ಅನಿಸಿಕೆ ಕೇಳಲು, ಚರ್ಚಿಸಲು ಸದಾ ಸಿದ್ಧರಿದ್ದೇವೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್

ಮುಕೇಶ್ ಅಂಬಾನಿ ಅವರು ಈಗಿನ ಕೋವಿಡ್ ಸಂಕಷ್ಟದ ಪರಿಸ್ಥಿತಿಯನ್ನು ಅಭಿವೃದ್ಧಿಯತ್ತ ಚಿಮ್ಮಲು ಒಂದು ಅವಕಾಶವಾಗಿ ಬಳಸಿಕೊಳ್ಳುವ ವಿಚಾರವನ್ನು ಚರ್ಚಿಸಿದರು. ಒಂದು ಸಂಕಷ್ಟದ ಪರಿಸ್ಥಿತಿಯು ಹೊಸ ಅಭಿವೃದ್ಧಿಗೆ ದಾರಿದೀಪವಾಗುತ್ತದೆ. ಕೋವಿಡ್ ವಿರುದ್ಧದ ಸಮರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮರ್ಥವಾಗಿ ದೇಶವನ್ನು ಮುನ್ನಡೆಸಿದ್ದಾರೆ. ಕೆಲ ಪಾಶ್ಚಿಮಾತ್ಯ ರಾಷ್ಟ್ರಗಳಂತೆ ಭಾರತ ಸಿರಿತನ ಹೊಂದಿಲ್ಲದಿದ್ದರೂ ದುರ್ಬಲ ಜನರಿಗೆ ರಕ್ಷಣೆ ನೀಡಲು ಅವರು ಸಮರ್ಪಕ ಕ್ರಮಗಳನ್ನ ಕೈಗೊಂಡಿದ್ದಾರೆ. ರಿಲಾಯನ್ಸ್ ಸಂಸ್ಥೆ ಜವಳಿ ಉದ್ಯಮದಲ್ಲಿದ್ದರಿಂದ ಕೆಲವೇ ತಿಂಗಳಲ್ಲಿ 1 ಲಕ್ಷಕ್ಕೂ ಅಧಿಕ ಪಿಪಿಇ ಕಿಟ್​ಗಳನ್ನ ತಯಾರಿಸಲು ಸಾಧ್ಯವಾಯಿತು. ಈಗ ನಾವು ಪಿಪಿಇ ಕಿಟ್​ಗಳ ರಫ್ತು ಮಾಡುವ ಮಟ್ಟಕ್ಕೆ ಹೋಗಿದ್ದೇವೆ ಎಂದು ಅಂಬಾನಿ ವಿವರ ನೀಡಿದರು.

ಫೇಸ್​ಬುಕ್ ಸಂಸ್ಥೆ ಜಿಯೋ ಪ್ಲಾಟ್​ಫಾರ್ಮ್​ಗಳಲ್ಲಿ ಕೋಟ್ಯಂತರ ಡಾಲರ್ ಹಣದ ಹೂಡಿಕೆ ಮಾಡಿದೆ. ವಾಟ್ಸಾಪ್, ಜಿಯೋಮಾರ್ಟ್ ಇತ್ಯಾದಿಗಳ ಮೂಲಕ ಸಣ್ಣಪುಟ್ಟ ಅಂಗಡಿಗಳನ್ನ ಆನ್​ಲೈನ್​ಗೆ ತಂದು ವ್ಯವಹಾರ ಹೆಚ್ಚಳಕ್ಕೆ ಪ್ರೋತ್ಸಾಹ ನೀಡುವ ಪ್ರಯತ್ನ ನಡೆದಿದೆ. ಈ ಬಗ್ಗೆಯೂ ಮಾರ್ಕ್ ಝುಕರ್​ಬರ್ಗ್ ಮತ್ತು ಮುಕೇಶ್ ಅಂಬಾನಿ ಚರ್ಚೆ ನಡೆಸಿದರು. ಇದೇ ವೇಳೆ, ಭಾರತ ಇನ್ನೆರಡು ದಶಕಗಳಲ್ಲಿ ವಿಶ್ವದ ಅಗ್ರ ಮೂರು ಆರ್ಥಿಕ ರಾಷ್ಟ್ರಗಳಲ್ಲಿ ಒಂದಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
Published by: Vijayasarthy SN
First published: December 15, 2020, 1:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories