ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋ ಸಂಸ್ಥೆಯ ಮೇಲೆ ವಿದೇಶಿ ಸಂಸ್ಥೆಗಳು ನಿರಂತರವಾಗಿ ಹೂಡಿಕೆ ಮಾಡುತ್ತಿದೆ. ಹೀಗಾಗಿ, ರಿಲಾಯನ್ಸ್ ಸಂಸ್ಥೆ ಮೌಲ್ಯ ಹೆಚ್ಚುತ್ತಲೇ ಇದೆ. ಹೀಗಾಗಿ, ಮುಖೇಶ್ ಅಂಬಾನಿ ವಿಶ್ವದ ಆರನೇ ಶ್ರೀಮಂತನಾಗಿ ಹೊರ ಹೊಮ್ಮಿದ್ದಾರೆ. ಈ ಮೂಲಕ ಆಲ್ಪಾಬೆಟ್ ಕೋ ಫೌಂಡರ್ ಲ್ಯಾರಿ ಪೇಜ್ ಅವರನ್ನು ಅಂಬಾನಿ ಹಿಂದಿಕ್ಕಿದ್ದಾರೆ.
ಜಿಯೋ ಸಂಸ್ಥೆಯ ಮೇಲೆ ಪ್ರಪ್ರಥಮಬಾರಿಗೆ ಫೇಸ್ಬುಕ್ ಸಂಸ್ಥೆ ಹೂಡಿಕೆ ಮಾಡಿತ್ತು. ನಂತರ ಸಿಲ್ವರ್ ಲೇಕ್ ಸೇರಿ 13 ಬಾರಿ ಹೂಡಿಕೆಗಳಾಗಿವೆ. ಹೀಗಾಗಿ, ರಿಲಾಯನ್ಸ್ ಸಂಸ್ಥೆಯ ಮೌಲ್ಯ ಹೆಚ್ಚಿದೆ. ಇದರಿಂದ ಅಂಬಾನಿ ವಿಶ್ವದ ಶ್ರೀಮಂತರ ಸಾಲಿನಲ್ಲಿ ಆರನೇ ಸ್ಥಾನಕ್ಕೆ ಜಿಗಿದ್ದಾರೆ.
ಜಿಯೋ ಸಂಸ್ಥೆಯ ಮೇಲೆ ಹೂಡಿಕೆಗಳು ಆರಂಭವಾದ ನಂತರ ರಿಲಾಯನ್ಸ್ ಷೇರುಗಳ ಮೌಲ್ಯ ಕೂಡ ಏರಿಕೆ ಕಂಡಿತ್ತು. ಸದ್ಯ ಅಂಬಾನಿ ಬಳಿ 5,45,823 ಕೋಟಿ ರೂಪಾಯಿ ಆಸ್ತಿ ಇದೆ.
ಮುಖೇಶ್ ಅಂಬಾನಿ ಈ ಮೊದಲು ತೈಲ ಉದ್ಯಮದ ಮೇಲೆ ಹೆಚ್ಚು ಹೂಡಿಕೆ ಮಾಡುತ್ತಿದ್ದರು. ಆದರೆ, ಈಗ ಅವರು ಈ ಕಾಮರ್ಸ್ನತ್ತ ಮುಖ ಮಾಡಿದ್ದು, ಡಿಜಿಟಲ್ ಕ್ಷೇತ್ರದಲ್ಲಿ ಹೆಚ್ಚೆಚ್ಚು ಹೂಡಿಕೆ ಪಡೆಯುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ