• Home
  • »
  • News
  • »
  • national-international
  • »
  • Mukesh Ambani: ಅಂಬಾನಿ ಕುಟುಂಬಕ್ಕೆ ಕೊಲೆ ಬೆದರಿಕೆ; ಬಿಹಾರದಲ್ಲಿ ಆರೋಪಿ ಬಂಧನ

Mukesh Ambani: ಅಂಬಾನಿ ಕುಟುಂಬಕ್ಕೆ ಕೊಲೆ ಬೆದರಿಕೆ; ಬಿಹಾರದಲ್ಲಿ ಆರೋಪಿ ಬಂಧನ

ಮುಕೇಶ್​ ಅಂಬಾನಿ

ಮುಕೇಶ್​ ಅಂಬಾನಿ

ಪೊಲೀಸರು ಅಪರಾಧಕ್ಕೆ ಬಳಸಿದ ಮೊಬೈಲ್ ಫೋನ್ ಅನ್ನು ಸಹ ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

  • Share this:

ಪಾಟ್ನಾ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಕುಟುಂಬಕ್ಕೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ  (Mukesh Ambani Family Threat Call) ಬಿಹಾರದ (Bihar) ದರ್ಭಾಂಗಾ ಜಿಲ್ಲೆಯಲ್ಲಿ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. ಪೊಲೀಸರು ಅಪರಾಧಕ್ಕೆ ಬಳಸಿದ ಮೊಬೈಲ್ ಫೋನ್ ಅನ್ನು ಸಹ ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಮುಂಬೈ ಪೊಲೀಸರು ಬಂಧಿಸಿರುವ ಆರೋಪಿಯನ್ನು ರಾಕೇಶ್ ಕುಮಾರ್ ಮಿಶ್ರಾ ಎಂದು ಗುರುತಿಸಲಾಗಿದೆ. ನಿನ್ನೆ (ಅಕ್ಟೋಬರ್ 5) ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಕರೆ ಮಾಡಿ ಈ ಬೆದರಿಕೆ ಹಾಕಲಾಗಿದೆ. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ (Reliance Foundation Hospital) ಸಂಖ್ಯೆಗೆ ಅಪರಿಚಿತ ಸಂಖ್ಯೆಯಿಂದ ಬೆದರಿಕೆ ಬಂದಿದ್ದು, ಮುಕೇಶ್ ಅಂಬಾನಿ, ನೀತಾ ಅಂಬಾನಿ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿತ್ತು. 


ಏನಿದು ಪ್ರಕರಣ?
ಪೊಲೀಸರು ನೀಡಿದ ವರದಿಯ ಪ್ರಕಾರ ಇಂದು ಮಧ್ಯಾಹ್ನ 12.57 ಕ್ಕೆ ಸರ್ಕಲ್ 2ರ ಡಿ.ಬಿ.ಮಾರ್ಗ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಸಂಖ್ಯೆಗೆ ಅಪರಿಚಿತ ಸಂಖ್ಯೆಯಿಂದ ಬೆದರಿಕೆ ಕರೆ ಬಂದಿದೆ. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿ ಮುಕೇಶ್ ಅಂಬಾನಿ ಅವರ ಕುಟುಂಬಕ್ಕೂ ಬೆದರಿಕೆ ಹಾಕಿದ್ದ. ಈ ಬೆದರಿಕೆ ಕರೆಯ ಆಧಾರದ ಮೇಲೆ ಡಾ. ಡಿಬಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಬೆದರಿಕೆ ಕೆರೆಗ ಸಂಬಂಧಿಸಿ ಮುಂಬೈ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


ಈ ಹಿಂದೆಯೂ ಜೀವ ಬೆದರಿಕೆ
ಈ ಹಿಂದೆಯೂ ಉದ್ಯಮಿ ಮುಕೇಶ್ ಅಂಬಾನಿ (Mukesh Ambani) ಮತ್ತು ಅವರ ಕುಟುಂಬಕ್ಕೆ ಮತ್ತೊಮ್ಮೆ ಬೆದರಿಕೆ ಹಾಕಲಾಗಿತ್ತು. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಬೆದರಿಕೆ ಕರೆ ಬಂದಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದರು. ಆಗಸ್ಟ್ 15 ರಂದು ಒಟ್ಟು ಎಂಟು ಬೆದರಿಕೆ ಕರೆಗಳು ಬಂದಿವೆ ಎಂದು ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ (Reliance Hospital) ಅಧಿಕಾರಿಗಳು ಡಿಬಿ ಮಾರ್ಗ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಾವು ಆಸ್ಪತ್ರೆಯಿಂದ ಬೆದರಿಕೆ ಕರೆಯ ಕುರಿತು ದೂರು ಸ್ವೀಕರಿಸಿದ್ದೇವೆ. ನಾವು ಅದನ್ನು ಪರಿಶೀಲಿಸುತ್ತಿದ್ದೇವೆ ಎಂದು ಮುಂಬೈ ಪೊಲೀಸರ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದರು.


ಇದನ್ನೂ ಓದಿ: Chemistry Nobel: ಮಹತ್ವದ ಸಂಶೋಧನೆಗೆ ರಸಾಯನಶಾಸ್ತ್ರ ನೊಬೆಲ್​ ಪುರಸ್ಕಾರ ಪ್ರಕಟ


ಅಪರಿಚಿತ ವ್ಯಕ್ತಿಯಿಂದ ಮುಖೇಶ್ ಅಂಬಾನಿ ಅವರಿಗೆ ಜೀವ ಬೆದರಿಕೆಯ ಒಟ್ಟು 8 ಕರೆಗಳನ್ನು ಮಾಡಲಾಗಿತ್ತು. ಕರೆ ಮಾಡಿದ ವ್ಯಕ್ತಿ ತಾನು ನಂಬರ್ 1 ಉಗ್ರಗಾಮಿ ಎಂದು ಕರೆದುಕೊಂಡಿದ್ದಾನೆ. ಅಲ್ಲದೇ ನ್ಯಾಷನಲ್ ಇನ್ವೆಸ್ಟಿಗೇಷನ್ ಬ್ಯೂರೋ (NIA), ATS ಮತ್ತು ಮುಂಬೈ ಪೊಲೀಸರಿಗೆ ಸಹ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿತ್ತು.


ಮುಂಬೈ ಪೊಲೀಸರಿಗೆ ದೂರು
ಈ ವಿಷಯವನ್ನು ಪರಿಶೀಲಿಸಲು ನಾವು ಮುಂಬೈ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಸಿಇಒ ಡಾ ತರಂಗ್ ಗಿಯಾಂಚಂದಾನಿ ತಿಳಿಸಿದ್ದರು.


ಅಂಬಾನಿ ಕುಟುಂಬಕ್ಕೆ ಭದ್ರತೆ ಮುಂದುವರೆಸಲು ಅನುಮತಿ
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಪೀಠ ಅಂಬಾನಿ ಕುಟುಂಬಕ್ಕೆ ಕೇಂದ್ರ ಸರ್ಕಾರ ಭದ್ರತೆ ನೀಡುವುದನ್ನು ಮುಂದುವರಿಸಬಹುದು ಎಂದು ಸ್ಪಷ್ಟಪಡಿಸಿತ್ತು. ಕೇಂದ್ರ ಸರ್ಕಾರ ಅಂಬಾನಿ ಕುಟುಂಬಕ್ಕೆ ನೀಡಿದ ಭದ್ರತೆಯನ್ನು ಪ್ರಶ್ನಿಸಿ ತ್ರಿಪುರಾ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.


ಇದನ್ನೂ ಓದಿ: Maiden Cough Syrup: ಭಾರತದಲ್ಲಿ ತಯಾರಾದ ಶೀತ-ಕೆಮ್ಮು ಸಿರಪ್ ಸೇವಿಸಿ 66 ಮಕ್ಕಳು ಸಾವು: ವಿಶ್ವಸಂಸ್ಥೆಯಿಂದ್ ಅಲರ್ಟ್​ ಜಾರಿ!


ಈಗಿನ ಪದ್ಧತಿಯಂತೆ ಅಂಬಾನಿ ಕುಟುಂಬವು ಭದ್ರತೆಗೆ ತಗಲುವ ನಿರ್ವಹಿಸುವ ವೆಚ್ಚವನ್ನು ಭರಿಸಲಿದೆ ಎಂದು ಪೀಠ ಹೇಳಿದೆ. ಲೈವ್ ಲಾ ಜಾಲತಾಣ ವರದಿ ಮಾಡಿದ ಪ್ರಕಾರ ಸಿಜೆಐ ರಮಣ, ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರ ಪೀಠವು ಪಿಐಎಲ್ ಸಲ್ಲಿಸಿದ ಅರ್ಜಿದಾರರ ಸ್ಥಾನವನ್ನು ಪ್ರಶ್ನಿಸಿತ್ತು.

Published by:ಗುರುಗಣೇಶ ಡಬ್ಗುಳಿ
First published: