Breaking News: ಅಂಬಾನಿ ಕುಟುಂಬಕ್ಕೆ ಮತ್ತೆ ಜೀವ ಬೆದರಿಕೆ

ಮುಕೇಶ್ ಅಂಬಾನಿ

ಮುಕೇಶ್ ಅಂಬಾನಿ

ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಸಂಖ್ಯೆಗೆ ಅಪರಿಚಿತ ಸಂಖ್ಯೆಯಿಂದ ಬೆದರಿಕೆ ಬಂದಿದ್ದು, ಮುಖೇಶ್ ಅಂಬಾನಿ, ನೀತಾ ಅಂಬಾನಿ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ.

  • Share this:

ಮುಂಬೈ, ಅಕ್ಟೋಬರ್ 05: ಖ್ಯಾತ ಕೈಗಾರಿಕೋದ್ಯಮಿ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಗ್ರೂಪ್​ನ ಅಧ್ಯಕ್ಷ ಮುಕೇಶ್ ಅಂಬಾನಿ (Mukesh Ambani Family Threat Call) ಅವರಿಗೆ ಮತ್ತೊಮ್ಮೆ ಬೆದರಿಕೆ ಹಾಕಲಾಗಿದೆ. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಕರೆ ಮಾಡಿ ಈ ಬೆದರಿಕೆ ಹಾಕಲಾಗಿದೆ. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ (Reliance Foundation Hospital) ಸಂಖ್ಯೆಗೆ ಅಪರಿಚಿತ ಸಂಖ್ಯೆಯಿಂದ ಬೆದರಿಕೆ ಬಂದಿದ್ದು, ಮುಕೇಶ್ ಅಂಬಾನಿ, ನೀತಾ ಅಂಬಾನಿ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ.


ಪೊಲೀಸರು ನೀಡಿದ ವರದಿಯ ಪ್ರಕಾರ ಇಂದು ಮಧ್ಯಾಹ್ನ 12.57 ಕ್ಕೆ ಸರ್ಕಲ್ 2ರ ಡಿ.ಬಿ.ಮಾರ್ಗ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಸಂಖ್ಯೆಗೆ ಅಪರಿಚಿತ ಸಂಖ್ಯೆಯಿಂದ ಬೆದರಿಕೆ ಕರೆ ಬಂದಿದೆ. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿ ಮುಕೇಶ್ ಅಂಬಾನಿ ಅವರ ಕುಟುಂಬಕ್ಕೂ ಬೆದರಿಕೆ ಹಾಕಿದ್ದ. ಈ ಬೆದರಿಕೆ ಕರೆಯ ಆಧಾರದ ಮೇಲೆ ಡಾ. ಡಿಬಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಬೆದರಿಕೆ ಕೆರೆಗ ಸಂಬಂಧಿಸಿ ಮುಂಬೈ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


ಈ ಹಿಂದೆಯೂ ಜೀವ ಬೆದರಿಕೆ
ಈ ಹಿಂದೆಯೂ  ಉದ್ಯಮಿ ಮುಕೇಶ್ ಅಂಬಾನಿ (Mukesh Ambani) ಮತ್ತು ಅವರ ಕುಟುಂಬಕ್ಕೆ ಮತ್ತೊಮ್ಮೆ ಬೆದರಿಕೆ ಹಾಕಲಾಗಿತ್ತು. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಬೆದರಿಕೆ ಕರೆ ಬಂದಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದರು. ಆಗಸ್ಟ್ 15 ರಂದು ಒಟ್ಟು ಎಂಟು ಬೆದರಿಕೆ ಕರೆಗಳು ಬಂದಿವೆ ಎಂದು ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ (Reliance Hospital) ಅಧಿಕಾರಿಗಳು ಡಿಬಿ ಮಾರ್ಗ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಾವು ಆಸ್ಪತ್ರೆಯಿಂದ ಬೆದರಿಕೆ ಕರೆಯ ಕುರಿತು ದೂರು ಸ್ವೀಕರಿಸಿದ್ದೇವೆ. ನಾವು ಅದನ್ನು ಪರಿಶೀಲಿಸುತ್ತಿದ್ದೇವೆ ಎಂದು ಮುಂಬೈ ಪೊಲೀಸರ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದರು.


ಇದನ್ನೂ ಓದಿ: KCR National Party: ತೆಲಂಗಾಣ ಸಿಎಂ ರಾಷ್ಟ್ರ ರಾಜಕೀಯಕ್ಕೆ! ಭಾರತೀಯ ರಾಷ್ಟ್ರ ಸಮಿತಿ ಘೋಷಣೆ


ಅಪರಿಚಿತ ವ್ಯಕ್ತಿಯಿಂದ ಮುಖೇಶ್ ಅಂಬಾನಿ ಅವರಿಗೆ ಜೀವ ಬೆದರಿಕೆಯ ಒಟ್ಟು 8 ಕರೆಗಳನ್ನು ಮಾಡಲಾಗಿತ್ತು. ಕರೆ ಮಾಡಿದ ವ್ಯಕ್ತಿ ತಾನು ನಂಬರ್ 1 ಉಗ್ರಗಾಮಿ ಎಂದು ಕರೆದುಕೊಂಡಿದ್ದಾನೆ. ಅಲ್ಲದೇ ನ್ಯಾಷನಲ್ ಇನ್ವೆಸ್ಟಿಗೇಷನ್ ಬ್ಯೂರೋ (NIA), ATS ಮತ್ತು ಮುಂಬೈ ಪೊಲೀಸರಿಗೆ ಸಹ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿತ್ತು.


ಮುಂಬೈ ಪೊಲೀಸರಿಗೆ ದೂರು
ಈ ವಿಷಯವನ್ನು ಪರಿಶೀಲಿಸಲು ನಾವು ಮುಂಬೈ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಸಿಇಒ ಡಾ ತರಂಗ್ ಗಿಯಾಂಚಂದಾನಿ ತಿಳಿಸಿದ್ದರು.


ಅಂಬಾನಿ ಕುಟುಂಬಕ್ಕೆ ಭದ್ರತೆ ಮುಂದುವರೆಸಲು ಅನುಮತಿ
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಪೀಠ ಅಂಬಾನಿ ಕುಟುಂಬಕ್ಕೆ ಕೇಂದ್ರ ಸರ್ಕಾರ ಭದ್ರತೆ ನೀಡುವುದನ್ನು ಮುಂದುವರಿಸಬಹುದು ಎಂದು ಸ್ಪಷ್ಟಪಡಿಸಿತ್ತು. ಕೇಂದ್ರ ಸರ್ಕಾರ ಅಂಬಾನಿ ಕುಟುಂಬಕ್ಕೆ ನೀಡಿದ ಭದ್ರತೆಯನ್ನು ಪ್ರಶ್ನಿಸಿ ತ್ರಿಪುರಾ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.


ಇದನ್ನೂ ಓದಿ: Shocking: ರಷ್ಯಾದ ಹ್ಯಾಕರ್​ ಸಹಾಯದಿಂದ ಎಕ್ಸಾಮ್​ ಹ್ಯಾಕ್ ಮಾಡಿದ 820 ಭಾರತೀಯ ವಿದ್ಯಾರ್ಥಿಗಳು!


ಈಗಿನ ಪದ್ಧತಿಯಂತೆ ಅಂಬಾನಿ ಕುಟುಂಬವು ಭದ್ರತೆಗೆ ತಗಲುವ ನಿರ್ವಹಿಸುವ ವೆಚ್ಚವನ್ನು ಭರಿಸಲಿದೆ ಎಂದು ಪೀಠ ಹೇಳಿದೆ. ಲೈವ್ ಲಾ ಜಾಲತಾಣ ವರದಿ ಮಾಡಿದ ಪ್ರಕಾರ ಸಿಜೆಐ ರಮಣ, ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರ ಪೀಠವು ಪಿಐಎಲ್ ಸಲ್ಲಿಸಿದ ಅರ್ಜಿದಾರರ ಸ್ಥಾನವನ್ನು ಪ್ರಶ್ನಿಸಿತ್ತು.

Published by:ಗುರುಗಣೇಶ ಡಬ್ಗುಳಿ
First published: