ಸೆಪ್ಟೆಂಬರ್​ನಲ್ಲಿ ಜಿಯೋಫೈಬರ್​​ ಲೋಕಾರ್ಪಣೆ; ಸೌದಿಯೊಂದಿಗೆ ರಿಲಾಯನ್ಸ್​ ಅತಿದೊಡ್ಡ ವಿದೇಶಿ ಹೂಡಿಕೆ ಒಪ್ಪಂದ; ಮುಖೇಶ್​ ಅಂಬಾನಿ

ನಮ್ಮ ಪ್ರಧಾನಿ ಅವರು 2022ರ ವೇಳೆಗೆ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್​ ಡಾಲರ್​ಗೆ ಹೆಚ್ಚಿಸುವ ಗುರಿಯನ್ನು ಹಾಕಿಕೊಂಡಿದ್ದಾರೆ. ಇದನ್ನು ನಾನು ಸಂಪೂರ್ಣವಾಗಿ ಅನುಮೋದಿಸುತ್ತೇನೆ. ಆದರೆ, ನಾನು ಭಾರತ 2030ರ ವೇಳೆಗೆ 10 ಟ್ರಿಲಿಯನ್​ ಡಾಲರ್​ ಆರ್ಥಿಕತೆ ತಲುಪಬೇಕು ಎಂಬುದನ್ನು ನಿರೀಕ್ಷಿಸುತ್ತೇನೆ ಎಂದು ಮುಖೇಶ್​ ಅಂಬಾನಿ ಹೇಳಿದರು.

HR Ramesh | news18
Updated:August 12, 2019, 12:48 PM IST
ಸೆಪ್ಟೆಂಬರ್​ನಲ್ಲಿ ಜಿಯೋಫೈಬರ್​​ ಲೋಕಾರ್ಪಣೆ; ಸೌದಿಯೊಂದಿಗೆ ರಿಲಾಯನ್ಸ್​ ಅತಿದೊಡ್ಡ ವಿದೇಶಿ ಹೂಡಿಕೆ ಒಪ್ಪಂದ; ಮುಖೇಶ್​ ಅಂಬಾನಿ
ರಿಲಾಯನ್ಸ್​ ಇಂಡಿಸ್ಟ್ರಿಸ್​ ಲಿಮಿಟೆಡ್​ನ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಮುಖೇಶ್​ ಅಂಬಾನಿ.
HR Ramesh | news18
Updated: August 12, 2019, 12:48 PM IST
ಮುಂಬೈ: ಭಾರತ ನವಭಾರತವಾಗಿ ಬದಲಾಗಿದೆ. ಹಾಗೆಯೇ ರಿಲಾಯನ್ಸ್​ ಕೂಡ ನವ ರಿಲಾಯನ್ಸ್​ ಆಗಿ ಬದಲಾಗಲಿದೆ ಎಂದು ರಿಲಾಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ ಅಧ್ಯಕ್ಷ ಮುಖೇಶ್​ ಅಂಬಾನಿ ಅವರು ಹೇಳಿದರು.

ಮುಂಬೈನಲ್ಲಿ ಇಂದು ನಡೆದ ರಿಲಾಯನ್ಸ್​ ಇಂಡಸ್ಟ್ರಿಸ್​ ಲಿಮಿಟೆಡ್​ನ 42ನೇ ವಾರ್ಷಿಕ ಮಹಾಸಭೆ ಉದ್ದೇಶಿಸಿ ಮಾತನಾಡಿದ ಮುಖೇಶ್​ ಅಂಬಾನಿ, ನಮ್ಮ ಪ್ರಧಾನಿ ಅವರು 2022ರ ವೇಳೆಗೆ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್​ ಡಾಲರ್​ಗೆ ಹೆಚ್ಚಿಸುವ ಗುರಿಯನ್ನು ಹಾಕಿಕೊಂಡಿದ್ದಾರೆ. ಇದನ್ನು ನಾನು ಸಂಪೂರ್ಣವಾಗಿ ಅನುಮೋದಿಸುತ್ತೇನೆ. ಆದರೆ, ನಾನು ಭಾರತ 2030ರ ವೇಳೆಗೆ 10 ಟ್ರಿಲಿಯನ್​ ಡಾಲರ್​ ಆರ್ಥಿಕತೆ ತಲುಪಬೇಕು ಎಂಬುದನ್ನು ನಿರೀಕ್ಷಿಸುತ್ತೇನೆ. ರಿಲಾಯನ್ಸ್​ ಇಂಡಸ್ಟ್ರಿಸ್​ ಲಿಮಿಟೆಡ್ ಕಳೆದ ಆರ್ಥಿಕ ವರ್ಷದಲ್ಲಿ​ 67 ಸಾವಿರ ಕೋಟಿ ಜಿಎಸ್​ಟಿ ಪಾವತಿಸಿರುವ ಅತಿದೊಡ್ಡ ಸಂಸ್ಥೆಯಾಗಿದೆ. ಕೆಲವು ವಲಯಗಳಲ್ಲಿನ ಆರ್ಥಿಕತೆ ನಿಧಾನಗತಿಯಲ್ಲಿ ಸಾಗುತ್ತಿರುವುದು ಕೇವಲ ತಾತ್ಕಾಲಿಕವಷ್ಟೇ. ಭಾರತದ ಆರ್ಥಿಕತೆಯ ಮೂಲಭೂತ ಅಂಶಗಳು ಬಹಳ ಪ್ರಬಲವಾಗಿವೆ. ಹೆಚ್ಚು ಹೆಚ್ಚು ವ್ಯವಹಾರಗಳಿಗೆ ಭದ್ರಬುನಾದಿ ಸ್ಥಿರ ಸರ್ಕಾರದಿಂದ ಸಾಧ್ಯವಾಗಲಿದೆ ಎಂದು ಹೇಳಿದರು.

ಸೌದಿಯ ಅರಾಮ್ಕೊ ಜೊತೆಗಿನ ವಿದೇಶಿ ಹೂಡಿಕೆ ಒಪ್ಪಂದದ ಬಗ್ಗೆ ಮಾತನಾಡಿದ ಮುಖೇಶ್​ ಅಂಬಾನಿ, ಇದು ರಿಲಾಯನ್ಸ್​ನ ಅತಿ ದೊಡ್ಡ ವಿದೇಶಿ ಹೂಡಿಕೆಯಾಗಿದ್ದು, ಭಾರತದ ಅತಿದೊಡ್ಡ ಒಪ್ಪಂದ ಕೂಡ ಆಗಿದೆ. ಆಯಲ್​ ಟು ಕೆಮಿಕಲ್​ (ಒ2ಸಿ) ವಿಭಾಗದಲ್ಲಿ ಸೌದಿಯ ಅರಾಮ್ಕೊ ಮತ್ತು ರಿಲಾಯನ್ಸ್​ ದೀರ್ಘಾವಧಿ ಪಾಲುದಾರಿಕೆ ಒಡಂಬಡಿಕೆ ಒಪ್ಪಂದಕ್ಕೆ ಸಹಿ ಹಾಕಿವೆ. 75 ಬಿಲಿಯನ್​ ಡಾಲರ್​ ಮೌಲ್ಯದ ಆಯಲ್​ ಟು ಕೆಮಿಕಲ್​ (ಒ2ಸಿ) ವಿಭಾಗದಲ್ಲಿ ಅರಾಮ್ಕೊ ಶೇ.20ರಷ್ಟು ಷೇರನ್ನು ಹೂಡಿಕೆ ಮಾಡಲಿದೆ ಎಂದು ತಿಳಿಸಿದರು.ಜಿಯೋ ಫೈಬರ್​ ಸೇವೆಯನ್ನು ವಾಣಿಜ್ಯ ಉದ್ದೇಶದೊಂದಿಗೆ ಇದೇ ವರ್ಷದ ಸೆಪ್ಟೆಂಬರ್​5ರಂದು ಜಿಯೋ ಆರಂಭದ ಮೂರನೇ ವಾರ್ಷಿಕೋತ್ಸವದ ವೇಳೆ ಲೋಕಾರ್ಪಣೆ ಮಾಡಲಾಗುತ್ತಿದೆ. 1600 ಪಟ್ಟಣಗಳಲ್ಲಿ 20 ಮಿಲಿಯನ್​ ನಿವಾಸಿಗಳು ಮತ್ತು 15 ಮಿಲಿಯನ್​ ಉದ್ಯಮಿಗಳನ್ನು ತಲುಪುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಮುಖೇಶ್​ ಅಂಬಾನಿ ಇದೇ ವೇಳೆ ಘೋಷಿಸಿದರು.

ಕಳೆದ ತಿಂಗಳು ನಾವು ನಮ್ಮ ಎಂಎಸ್​ಒ ಮೂಲಸೌಕರ್ಯವನ್ನು ವಿಶ್ವ ದರ್ಜೆಯ ಗುಣಮಟ್ಟಕ್ಕೆ ಹೆಚ್ಚಿಸಿಕೊಂಡಿದ್ದೇವೆ. ಈಗ ಎಲ್‌ಸಿಒ ಪಾಲುದಾರರು ಡಿಟಿಎಚ್‌ಗಿಂತಲೂ ಉತ್ತಮ ವೈಶಿಷ್ಟ್ಯ, ವಿಶ್ವಾಸಾರ್ಹತೆ ಹೊಂದಿರುವ ಹೈ-ಡೆಫಿನಿಷನ್ ಚಾನೆಲ್‌ಗಳನ್ನು ಗ್ರಾಹಕರಿಗೆ ನೀಡಬಹುದು. ಪ್ರತಿ ಜಿಯೋಫೈಬರ್​ ಮನೆಯೊಂದಿಗೆ ನಮ್ಮ ಎಲ್ಲ ಎಲ್​ಸಿಒ ಪಾಲುದಾರರು ತಮ್ಮ ಪ್ರಸಾರ ಟಿವಿ ವ್ಯವಹಾರಕ್ಕಾಗಿ ಸ್ಥಿರವಾದ ಆದಾಯವನ್ನು ಪಡೆಯಲಿದ್ದಾರೆ ಎಂದು ತಿಳಿಸಿದರು.

ಅಲ್ಟ್ರಾ ಹೈ ಸ್ಪೀಡ್​ ಜಿಗಾಫೈಬರ್​ ಸೇವೆ ನೀಡುವುದಾಗಿ ನಾವು ಕಳೆದ ವರ್ಷ ನಿಮಗೆ ಭರವಸೆ ನೀಡಿದ್ದೇವೆ. ಇಂದು ನಮ್ಮ ವೇಗ 100 ಎಂಬಿಪಿಎಸ್​ನಿಂದ 1 ಜಿಬಿಪಿಎಸ್​ ಆಗಿದೆ. ಹತ್ತು ಕೋಟಿ ಭಾರತೀಯರು ಇಂದು ಪ್ರತಿ ತಿಂಗಳು ಜಿಯೋ ವಿಡಿಯೋ ಕರೆಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
Loading...

ನಾವು ನಮ್ಮ ಯೋಜನೆಗಳನ್ನು ಜಾಗತಿಕ ದರಗಳ ಹತ್ತನೇ ಒಂದು ಭಾಗಕ್ಕಿಂತ ಕಡಿಮೆ ಬೆಲೆಗೆ ನೀಡುತ್ತಿದ್ದೇವೆ. ಎಲ್ಲರ ಆರ್ಥಿಕ ಸ್ಥಿತಿಗೂ ಅನುಕೂಲವಾಗುವಂತೆ ಜಿಯೋ ಫೈಬರ್​ ದರವನ್ನು ತಿಂಗಳಿಗೆ 700 ರೂಪಾಯಿಯಿಂದ 10 ಸಾವಿರ ರೂ.ವರೆಗೆ ಒದಗಿಸಲಿದ್ದೇವೆ. ಗ್ರಾಹಕರು ಕರೆ ಮತ್ತು ಡಾಟಾಗೂ ಹಣ ಪಾವತಿಸುತ್ತಿದ್ದಾರೆ. ಇದೀಗ ನಾನು ಘೋಷಣೆ ಮಾಡುತ್ತಿದ್ದೇನೆ ಲ್ಯಾಂಡ್​ಲೈನ್​​ ಚಂದಾದಾರರಿಗೆ ಉಚಿತ ಕರೆಗಳನ್ನು ನೀಡಲಾಗುತ್ತದೆ.  ಜಿಯೋ ಫೈಬರ್​ ಟಾರಿಫ್​ ಗ್ರಾಹಕರು ಡಾಟಾಗೆ ಹಣ ಪಾವತಿಸಬೇಕಾಗುತ್ತದೆ. ಜಿಯೋ ಲ್ಯಾಂಡ್​ಲೈನ್​ ಹೊಂದಿರುವ ದೇಶದ ಎಲ್ಲ ಗ್ರಾಹಕರಿಗೂ ಎಲ್ಲ ಕಾಲಕ್ಕೂ ಕರೆಗಳು ಉಚಿತವಾಗಿರಲಿದೆ ಎಂದು ತಿಳಿಸಿದರು.

ಜಿಯೋ ಫಾರೆವರ್ ಪ್ಲಾನ್ ಬಗ್ಗೆ ವಿಸ್ತಾರವಾಗಿ ಹೇಳಿದ ಮುಖೇಶ್ ಅಂಬಾನಿ, 'ಜಿಯೋ ಫೈಬರ್ ವೆಲ್ಕಮ್ ಆಫರ್, ಜಿಯೋ ಫೈಬರ್ ಗ್ರಾಹಕರ ವಾರ್ಷಿಕ ಯೋಜನೆ, ಸಂಪೂರ್ಣ ಎಚ್​ಡಿ ಟೆಲಿವಿಷನ್ ಅಥವಾ ಹೋಮ್ ಪಿಸಿ ಮತ್ತು 4 ಕೆ ಸೆಟ್-ಟಾಪ್-ಬಾಕ್ಸ್  ಸಂಪೂರ್ಣವಾಗಿ ಉಚಿತವಾಗಿರಲಿದೆ ಎಂದು ಹೇಳಿದರು.
First published:August 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...