Mukesh Ambani: ಸೋಮನಾಥ ದೇವಾಲಯಕ್ಕೆ ಮುಕೇಶ್ ಅಂಬಾನಿ ಭೇಟಿ, ವಿಶೇಷ ಪೂಜೆ ಸಲ್ಲಿಸಿ 1.51 ಕೋಟಿ ದೇಣಿಗೆ

ಸೋಮನಾಥ ದೇವಾಲಯಕ್ಕೆ ಮುಕೇಶ್ ಅಂಬಾನಿ ಭೇಟಿ

ಸೋಮನಾಥ ದೇವಾಲಯಕ್ಕೆ ಮುಕೇಶ್ ಅಂಬಾನಿ ಭೇಟಿ

ಶಿವರಾತ್ರಿ ಪ್ರಯುಕ್ತ ರಿಲಯನ್ಸ್​ ಇಂಡಸ್ಟ್ರೀಸ್​ ಅಧ್ಯಕ್ಷರಾದ ಮುಕೇಶ್ ಅಂಬಾನಿ (Mukesh Ambani) ಅವರು ಗುಜರಾತ್​ನಲ್ಲಿರುವ ಸೋಮನಾಥ ದೇವಾಯಲಕ್ಕೆ (Somnath Temple) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಪುತ್ರ ಆಕಾಶ್​ ಅಂಬಾನಿ (Akash Ambani) ಸಾಥ್ ನೀಡಿದ್ದಾರೆ.

ಮುಂದೆ ಓದಿ ...
  • Share this:

ಗುಜರಾತ್​: ಶನಿವಾರ ಇಡೀ ದೇಶವೇ ಮಹಾಶಿವರಾತ್ರಿ (Maha Shivratri) ಹಬ್ಬವನ್ನು ಆಚರಿಸುತ್ತಿದೆ. ಶಿವರಾತ್ರಿ ಪ್ರಯುಕ್ತ ರಿಲಯನ್ಸ್​ ಇಂಡಸ್ಟ್ರೀಸ್​ ಅಧ್ಯಕ್ಷರಾದ ಮುಕೇಶ್ ಅಂಬಾನಿ (Mukesh Ambani) ಅವರು ಗುಜರಾತ್​ನಲ್ಲಿರುವ ಸೋಮನಾಥ ದೇವಾಯಲಕ್ಕೆ (Somnath Temple) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಪುತ್ರ ಆಕಾಶ್​ ಅಂಬಾನಿ (Akash Ambani) ಸಾಥ್ ನೀಡಿದ್ದಾರೆ. ಈ ವೇಳೆ ದೇವಸ್ಥಾನ ಟ್ರಸ್ಟ್​ನ ಅಧ್ಯಕ್ಷ ಪಿ.ಕೆ. ಲಾಹಿರಿ ಹಾಗೂ ಕಾರ್ಯದರ್ಶಿ ಯೋಗೇಂದ್ರಭಾಯಿ ದೇಸಾಯಿ ಸ್ವಾಗತಿಸಿದ್ದಾರೆ. ಮುಕೇಶ್ ಅಂಬಾನಿ ಮತ್ತು ಆಕಾಶ್ ಅಂಬಾನಿ ದೇವಸ್ಥಾನದಲ್ಲಿ ಸೋಮನಾಥನಿಗೆ ಅಭಿಷೇಕ ಮಾಡಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ಸೋಮನಾಥ ದೇವಾಲಯದ ಟ್ರಸ್ಟ್‌ಗೆ ಬರೋಬ್ಬರಿ 1.51 ಕೋಟಿ ರೂಪಾಯಿಗಳ ದೇಣಿಗೆ ನೀಡಿದ್ದಾರೆ.


ಅಂಬಾನಿ ಕುಟುಂಬ ಅಪಾರವಾದ ದೈವಭಕ್ತಿಯನ್ನು ಹೊಂದಿದೆ. ಭಾರತೀಯ ಸಂಪ್ರದಾಯಗಳಿಗೆ ವಿಶೇಷ ಮನ್ನಣೆ ನೀಡುವ ಕುಟುಂಬ ಪ್ರತಿಯೊಂದು ಹಿಂದೂ ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಇಂದು ಮಹಾಶಿವರಾತ್ರಿ ಪ್ರಯುಕ್ತ ಇಡೀ ದೇಶವೇ ಆದಿಯೋಗಿಯ ಆರಾಧನೆಯಲ್ಲಿ ತೊಡಗಿಸಿಕೊಂಡಿದೆ. ಅಂಬಾನಿ ಕುಟುಂಬ ಕೂಡ ಈ ಶುಭ ಸಂದರ್ಭದಲ್ಲಿ ಮಹಾದೇವನಿಗೆ ಪ್ರಾರ್ಥನೆ ಸಲ್ಲಿಸಿ ದೇಣಿಗೆ ನೀಡಿದೆ.


ಇದನ್ನೂ ಓದಿ:Mukesh Ambani: 1 ಲಕ್ಷ ಹೊಸ ಉದ್ಯೋಗ ಸೃಷ್ಟಿಸುತ್ತೇವೆ; ಮುಕೇಶ್​ ಅಂಬಾನಿ ಘೋಷಣೆ


ಕೇದಾರನಾಥ ಮತ್ತು ಬದ್ರಿನಾಥ್​ ದೇವಾಲಯ ಸಮಿತಿಗೆ 5 ಕೋಟಿ ರೂ ದೇಣಿಗೆ


ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಆಕಾಶ್ ಅಂಬಾನಿ ರಾಜಸ್ಥಾನದ ರಾಜ್‌ಸಮಂದ್‌ನ ನಾಥದ್ವಾರ ಪಟ್ಟಣದಲ್ಲಿರುವ ಪ್ರಸಿದ್ಧ ಶ್ರೀನಾಥ್‌ಜಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅವರು ಜಿಯೋ 5 ಜಿ ಸೇವೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು. ದೀಪಾವಳಿ ಸಂದರ್ಭದಲ್ಲಿ ದೇವಸ್ಥಾನದ ಟ್ರಸ್ಟ್‌ಗೆ 1.5 ಕೋಟಿ ರೂಪಾಯಿ ದೇಣಿಗೆ ನೀಡಿದ್ದರು. ಅಕ್ಟೋಬರ್‌ನಲ್ಲಿಯೇ ಮುಕೇಶ್ ಅಂಬಾನಿ ಉತ್ತರಾಖಂಡದ ಕೇದಾರನಾಥ ಮತ್ತು ಬದ್ರಿನಾಥ್​ ದೇವಾಲಯಗಳಿಗೆ ಭೇಟಿ ನೀಡಿದ್ದರು ಮತ್ತು ಪ್ರತಿ ದೇವಾಲಯ ಸಮಿತಿಗೆ ಒಟ್ಟು 5 ಕೋಟಿ ರೂ ದೇಣಿಗೆ ನೀಡಿದ್ದರು.




ಗುರುವಾಯೂರ್ ದೇವಾಲಯದಲ್ಲಿ ಅನ್ನದಾನಕ್ಕೆ ದೇಣಿಗೆ


ಇದಕ್ಕೂ ಮೊದಲು, ಮುಕೇಶ್ ಅಂಬಾನಿ ಸೆಪ್ಟೆಂಬರ್‌ನಲ್ಲಿ ಕೇರಳದ ಪ್ರಸಿದ್ಧ ಗುರುವಾಯೂರ್ ದೇವಾಲಯಕ್ಕೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಅವರ ಕಿರಿಯ ಪುತ್ರ ಅನಂತ್ ಅಂಬಾನಿ, ಭಾವಿ ಸೊಸೆ ರಾಧಿಕಾ ಮರ್ಚಂಟ್ ಜೊತೆಗೆ ಗುರುವಾಯೂರ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದೇವಾಲಯದ ಅಧಿಕಾರಿಗಳ ಮಾಹಿತಿಯ ಪ್ರಕಾರ, ಅಂಬಾನಿ 1.51 ಕೋಟಿ ರೂ.ಗಳ ಚೆಕ್ ಅನ್ನು ಅನ್ನದಾನಕ್ಕಾಗಿ ಬಳಸಲು ನೀಡಿದ್ದರು ಎಂದು ತಿಳಿದುಬಂದಿದೆ.


ಸೆಪ್ಟೆಂಬರ್​ನಲ್ಲಿ ತಿರುಪತಿಗೆ ಭೇಟಿ


ಸೆಪ್ಟೆಂಬರ್ ತಿಂಗಳಿನಲ್ಲಿಯೇ ಅಂಬಾನಿ ತಮ್ಮ ಕುಟುಂಬ ಸದಸ್ಯರೊಂದಿಗೆ ತಿರುಮಲದಲ್ಲಿರುವ ವೆಂಕಟೇಶ್ವರನ ದರ್ಶನವನ್ನು ಪಡೆದಿದ್ದರು. ತಿರುಮಲ ದೇಗುಲಕ್ಕೂ 1.51 ಕೋಟಿ ರೂಪಾಯಿ ದೇಣಿಗೆಯನ್ನೂ ನೀಡಿದ್ದರು.


ಅಂಬಾನಿ ಕುಟುಂಬದಲ್ಲಿ ಈ ವರ್ಷ ಶುಭ ಕಾರ್ಯಕ್ರಮ ನಡೆಯುತ್ತಿದ್ದು, ಅವರ ಕಿರಿಯ ಪುತ್ರ ಅನಂತ್​ ಅಂಬಾನಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಜನವರಿ 19 ರಂದು ಮುಂಬೈನಲ್ಲಿರುವ ಮುಖೇಶ್ ಅಂಬಾನಿ ಅವರ ನಿವಾಸ ಆಂಟಿಲಿಯಾದಲ್ಲಿ ನಡೆದ ಸಮಾರಂಭದಲ್ಲಿ ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್​ರೊಂದಿಗೆ ನಿಶ್ಚಿತಾರ್ಥ ನಡೆದಿದೆ. ಶೀಘ್ರದಲ್ಲೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ.

Published by:Rajesha M B
First published: