Radhika Merchant: ರಾಧಿಕಾ ಮರ್ಚೆಂಟ್ ಅದ್ಧೂರಿ ಅರಂಗೇಟ್ರಂ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಾರೆಯರ ಸಮಾಗಮ

ರಾಧಿಕಾ ಮರ್ಚೆಂಟ್ ಅವರು ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ ಮತ್ತು ಅವರು ತಮ್ಮ ನೃತ್ಯ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ 'ಅರಂಗೇತ್ರಂ' ಅನ್ನು ಪ್ರದರ್ಶಿಸಿದರು.

 ರಾಧಿಕಾ ಮರ್ಚೆಂಟ್

ರಾಧಿಕಾ ಮರ್ಚೆಂಟ್

 • Share this:
  ಮುಂಬೈ (ಜೂನ್ 5): ಮುಂಬೈ ನಗರವನ್ನು ಭಾರತದ ವಾಣಿಜ್ಯ ನಗರಿ ಎಂದು ಕರೆಯಲಾಗುತ್ತದೆ. ಇದಲ್ಲದೇ ವೈವಿಧ್ಯಮಯ ಸಂಸ್ಕೃತಿಗಳ ನಗರಿ ಮುಂಬೈ ಕಳೆದ ಕೆಲವು ತಿಂಗಳಿಂದ ಸ್ತಬ್ಧವಾಗಿತ್ತು, ಆದರೆ ಮತ್ತೊಮ್ಮೆ ಈ ವೈಭವಗಳು ಮತ್ತೆ ಝೇಂಕರಿಸಿದೆ. ಹೌದು, ಮುಂಬೈ ಮಹಾನಗರಿಯಲ್ಲಿ ಭರತನಾಟ್ಯ (Bharatanatyam) ನೃತ್ಯ ಕಾರ್ಯಕ್ರಮ ನಡೆಯಿತು. ಎಲ್ಲರೂ ಈ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಿದ್ದಾರೆ. ವಾಸ್ತವವಾಗಿ, ಈ ಪ್ರದರ್ಶನವನ್ನು ರಾಧಿಕಾ ಮರ್ಚೆಂಟ್ (Radhika Merchant) ಪ್ರಸ್ತುತಪಡಿಸಿದರು. ರಾಧಿಕಾ ಮರ್ಚೆಂಟ್ ಅವರು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ (Mukesh Ambani) ಮತ್ತು ನೀತಾ ಅಂಬಾನಿ (Nita Ambani) ಅವರ ಭಾವಿ ಸೊಸೆ. ರಾಧಿಕಾ ಅವರು ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ ಮತ್ತು ಅವರು ತಮ್ಮ ನೃತ್ಯ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ 'ಅರಂಗೇತ್ರಂ' ಅನ್ನು ಪ್ರದರ್ಶಿಸಿದರು.

  ಆರಂಗೇತ್ರಂ ಎಂಬುದು ತಮಿಳು ಪದ. ಇದರ ಅರ್ಥ- ಭಾರತೀಯ ಶಾಸ್ತ್ರೀಯ ನೃತ್ಯ ಮತ್ತು ಸಂಗೀತದ ಅನ್ವೇಷಕನ ಮೊದಲ ಹಂತದ ಪ್ರದರ್ಶನ ಎಂದು ಹೇಳಲಾಗುತ್ತದೆ.

  ರಾಧಿಕಾ ಅವರ ಭರತನಾಟ್ಯ ಪ್ರದರ್ಶನ:

  ರಾಧಿಕಾ ಅವರು ಶ್ರೀ ನಿಭಾ ಆರ್ಟ್ಸ್‌ನ ಭಾವನಾ ಠಾಕರ್ ಅವರಿಂದ ನೃತ್ಯ ಪಾಠಗಳನ್ನು ಕಲಿತಿದ್ದಾರೆ. ಭಾರತೀಯ ಶಾಸ್ತ್ರೀಯ ನೃತ್ಯ ಜಗತ್ತಿನಲ್ಲಿ ಭಾವನಾ ಠಾಕರ್ ಅವರ ಕೊಡುಗೆ ಉತ್ತಮವಾಗಿದೆ. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಈ ಕ್ಷೇತ್ರದೊಂದಿಗೆ ಒಡನಾಟ ಹೊಂದಿದ್ದಾರೆ. ಜಿಯೋ ವರ್ಲ್ಡ್ ಸೆಂಟರ್‌ನಲ್ಲಿರುವ ಗ್ರ್ಯಾಂಡ್ ಥಿಯೇಟರ್‌ನಲ್ಲಿ ಅಂಬಾನಿ ಅವರ ಮಗನ ಬಾವಿ ಪತ್ನಿಯಾದ ರಾಧಿಕಾ ಅವರು ತಮ್ಮಭರತನಾಟ್ಯ ಪ್ರದರ್ಶನವನ್ನು ನಡೆಸಿದರು.

  ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಪ್ರೇಕ್ಷಕರು:

  ರಾಧಿಕಾ ಅವರ ಭರತನಾಟ್ಯ ಕಾರ್ಯಕ್ರಮವನ್ನು ವೀಕ್ಷಿಸಲು ಮತ್ತು ರಾಧಿಕಾ ಅವರನ್ನು ಪ್ರೋತ್ಸಾಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ವ್ಯಾಪಾರಿಗಳು ಮತ್ತು ಅಂಬಾನಿ ಕುಟುಂಬದ ಎಲ್ಲಾ ಸದಸ್ಯರು ಮತ್ತು ಆಪ್ತರು ಉಪಸ್ಥಿತರಿದ್ದರು. ಇದು ಕಲೆ, ವ್ಯಾಪಾರ ಮತ್ತು ಸಾರ್ವಜನಿಕ ಸೇವೆಗೆ ಸಂಬಂಧಿಸಿದ ಎಲ್ಲಾ ವ್ಯಕ್ತಿಗಳನ್ನು ಒಳಗೊಂಡಿತ್ತು.

  ಇದನ್ನೂ ಓದಿ: Reliance: ಭಾರತದಲ್ಲಿ ಟಾಡ್ಸ್ ಎಸ್.ಪಿ.ಎ ಫ್ರಾಂಚೈಸಿಗಾಗಿ ರಿಲಯನ್ಸ್ ಒಪ್ಪಂದ

  ಈ ಪ್ರದರ್ಶನದ ಸಮಯದಲ್ಲಿ ಪ್ರೇಕ್ಷಕರ ಉತ್ಸಾಹದಿಂದ ಕಾರ್ಯಕ್ರಮವನ್ನು ವೀಕ್ಷಿಸಿದ್ದು, ಜನರು ಧೀರೂಭಾಯಿ ಅಂಬಾನಿ ಚೌಕ್‌ನಿಂದ ಜಿಯೋ ವರ್ಲ್ಡ್ ಸೆಂಟರ್‌ನ ಗ್ರ್ಯಾಂಡ್ ಥಿಯೇಟರ್‌ಗೆ ತೆರಳುತ್ತಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಬಹುತೇಕ ಅತಿಥಿಗಳು ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದರು. ಮಹಿಳೆಯರು ಬ್ರೊಕೇಡ್ ಮತ್ತು ಕಸೂತಿ ರೇಷ್ಮೆ ಸೀರೆಗಳಲ್ಲಿ ಮತ್ತು ಪುರುಷ ಅತಿಥಿಗಳು ಶೇರ್ವಾನಿ ಮತ್ತು ಕುರ್ತಾದಲ್ಲಿ ಕಾಣಿಸಿಕೊಂಡರು.

  ಕಟ್ಟುನಿಟ್ಟಾಗಿ ಕೊರೋನಾ ನಿಯಮ ಪಾಲನೆ:

  ಇನ್ನು, ಅತಿಥಿಗಳನ್ನು ಅಂಬಾನಿ ಅವರು ಮತ್ತು ಕುಟುಂಬದ ಸದಸ್ಯರು ಆತ್ಮೀಯವಾಗಿ ಬರಮಾಡಿಕೊಂಡರು. ಈ ಪ್ರದರ್ಶನದ ಸಮಯದಲ್ಲಿ, ಕೋವಿಡ್ -19 ನ ಎಲ್ಲಾ ಪ್ರೋಟೋಕಾಲ್‌ಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಯಿತು. ಕಾರ್ಯಕ್ರಮಕ್ಕೆ ಹಾಜರಾಗುವ ಮೊದಲು ಅತಿಥಿಗಳನ್ನು ಸಹ ಕೋವಿಡ್​ 19ನ ಪರೀಕ್ಷಿಸಲಾಯಿತು. ಸಾರ್ವಜನಿಕ ಹಿತಾಸಕ್ತಿ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ಅತಿಥಿಗಳು ಈ ಪರೀಕ್ಷೆಗೆ ಸಂತೋಷದಿಂದ ಒಪ್ಪಿಕೊಂಡಿದ್ದು, ಇಲ್ಲೊಂದು ವಿಶೇಷವಾಗಿತ್ತು.

  ರಾಧಿಕಾ ಅವರ ಮೊದಲ ಏಕವ್ಯಕ್ತಿ ಪ್ರದರ್ಶನ:

  ಈ ಇಡೀ ಕಾರ್ಯಕ್ರಮದ ತಾರೆ ರಾಧಿಕಾ ಮರ್ಚೆಂಟ್ ಎಂಬುದು ಗೊತ್ತಿರುವಂತೆಯೇ ತಮ್ಮ ನೃತ್ಯದ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಭಾವನಾ ಠಾಕರ್ ಅವರು ರಾಧಿಕಾ ಮರ್ಚೆಂಟ್ ಅವರಿಗೆ ನೃತ್ಯ ಕಲಿಸಿದ್ದಾರೆ. ಎಂಟು ವರ್ಷಗಳ ಕಾಲ ರಾಧಿಕಾ ಅವರಿಗೆ ಭರತನಾಟ್ಯ ಕಲಿಸಿದ್ದಾರೆ. ಈ ನೃತ್ಯ ಅಭ್ಯಾಸದ ಕೊನೆಯ ನಿಲುಗಡೆ 'ಅರಂಗೇತ್ರಂ'. ಇದು ರಾಧಿಕಾ ಅವರ ಮೊದಲ ಏಕವ್ಯಕ್ತಿ ಪ್ರದರ್ಶನವಾಗಿತ್ತು.

  ಇದನ್ನೂ ಓದಿ: Jiomart: ಈ ಕ್ಷೇತ್ರಕ್ಕೂ ಕಾಲಿಟ್ಟ ರಿಲಯನ್ಸ್​! ನಿಮ್ಗೆ ಬೇಕಿರೋದೆಲ್ಲಾ ಜಿಯೋ ಮಾರ್ಟ್​ನಲ್ಲೇ ಸಿಗುತ್ತೆ

  'ಅರಂಗೇತ್ರಂ' ಹೊಸ ಕಲಾವಿದರಿಗೆ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರವನ್ನು ಪ್ರವೇಶಿಸಲು ಮತ್ತು ಗುರು-ಶಿಷ್ಯ ಸಂಪ್ರದಾಯವನ್ನು ಮುಂದುವರಿಸಲು ಒಂದು ಅವಕಾಶವಾಗಿದೆ. ರಾಧಿಕಾ ಅಂಬಾನಿ ಕುಟುಂಬದ ಎರಡನೇ ಭರತನಾಟ್ಯ ಕಲಾವಿದೆಯಾಗಿರುವುದು ಕಾಕತಾಳೀಯ. ನೀತಾ ಅಂಬಾನಿ ಈಗಾಗಲೇ ಅಂಬಾನಿ ಕುಟುಂಬದಲ್ಲಿ ಭರತನಾಟ್ಯದ ಕಲಾವಿದೆಯಾಗಿದ್ದಾರೆ. ಇಂದಿಗೂ, ಅವರು ತಮ್ಮ ಎಲ್ಲಾ ಕಾರ್ಯನಿರತತೆ ಮತ್ತು ರಾಷ್ಟ್ರೀಯ-ಅಂತರರಾಷ್ಟ್ರೀಯ ಜವಾಬ್ದಾರಿಗಳ ನಡುವೆ ತಮ್ಮ ಕಲೆಯನ್ನು ಮುಂದುವರೆಸಿದ್ದಾರೆ.
  Published by:shrikrishna bhat
  First published: