ನವ ದೆಹಲಿ (ಫೆಬ್ರವರಿ 08); "ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯಿಂದಾಗಿ MSP ಕನಿಷ್ಠ ಬೆಂಬಲ ಬೆಲೆ ಕಾನೂನು ತೆರೆಮರೆಯ ಸರಿಯಲಿದೆ. ಕೃಷಿಯಲ್ಲಿನ ಹೊಸ ಸುಧಾರಣೆಗಳು ರೈತರ ಅಂತ್ಯಕ್ಕೆ ಕಾರಣವಾಗಬಹು ಎಂಬ ಆತಂಕ ರೈತರಲ್ಲಿದೆ. ಆದರೆ, ಈ ಆತಂಕವನ್ನು ಬಗೆಹರಿಸಬೇಕಾದ ಕರ್ತವ್ಯ ನಮ್ಮ ಮೇಲಿದೆ. ಈ ಮೂಲಕ ನಾನು ಒಂದು ವಿಚಾರವನ್ನು ರೈತರಿಗೆ ತಿಳಿಯಪಡಿಸಲು ಇಚ್ಚಿಸುತ್ತೇನೆ. ಕನಿಷ್ಟ ಬೆಂಬಲ ಬೆಲೆ ಈ ಹಿಂದೆ ಇತ್ತು. ಈಗಲೂ ಇದೆ, ಅಲ್ಲದೆ ಮುಂದೆಯೂ ಇರಲಿದೆ" ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಇಂದು ರೈತರಿಗೆ ಭರವಸೆ ನೀಡಿದ್ದಾರೆ.
ಈ ಕುರಿತು ಇಂದು ಸಂಸತ್ನಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, "MSP ಈ ಹಿಂದೆ ಇತ್ತು. ಇಂದೂ ಇದೆ ಭವಿಷ್ಯದಲ್ಲೂ ಇರಲಿದೆ ಎಂದು ಹೇಳುವ ಮೂಲಕ ನಿರ್ದಿಷ್ಟ ಬೆಳೆಗಳಿಗೆ ಮಾರುಕಟ್ಟೆ ದರಗಳಿಂದ ನಿಗದಿಪಡಿಸಿದ ಪೂರ್ವ ನಿರ್ಧರಿತ ಬೆಲೆಯನ್ನು ರೈತರಿಗೆ ಖಾತರಿಪಡಿಸುವ ಯೋಜನೆಯ ಭವಿಷ್ಯದ ಬಗ್ಗೆ ಎಲ್ಲಾ ಅನುಮಾನಗಳನ್ನು ತೆಗೆದುಹಾಕಲು ಯತ್ನಿಸಿದ್ದಾರೆ.
ತಮ್ಮ ಒಂದು ಗಂಟೆ ಅವಧಿಯ ಭಾಷಣದಲ್ಲಿ, ಪ್ರಧಾನಮಂತ್ರಿ ಕೃಷಿ ಕ್ಷೇತ್ರದಲ್ಲಿ ಸುಧಾರಣೆಗಳ ಅಗತ್ಯತೆಯ ಬಗ್ಗೆ ದೀರ್ಘವಾಗಿ ಮಾತನಾಡುತ್ತಾ, "ಸರ್ಕಾರವು ತನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಮತ್ತು ಮೂರು ಶಾಸನಗಳನ್ನು ರದ್ದುಗೊಳಿಸಲು ಒಪ್ಪುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ, "ಹೊಸ ಕೃಷಿ ಕಾನೂನಿಗೆ ಸಂಬಂಧಿಸಿದಂತೆ ಚರ್ಚೆ, ಸಂವಾದ ಮತ್ತು ಸಲಹೆಗಳನ್ನು ಆಲಿಸಲು ಕೇಂದ್ರ ಸರ್ಕಾರ ಯಾವಾಗಲೂ ಮುಕ್ತವಾಗಿದೆ. ಹೀಗಾಗಿ ದೆಹಲಿ ಗಡಿಯಲ್ಲಿನ ಪ್ರತಿಭಟನೆಯನ್ನು ಕೈಬಿಟ್ಟು ಮಾತುಕತೆ ಬನ್ನಿ" ಎಂದು ರೈತರ ಬಳಿ ಪ್ರಧಾನಿ ಮೋದಿ ಮತ್ತೊಮ್ಮೆ ಮನವಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ