ಎಂಎಸ್​ಸಿ ಗಣಿತ ವಿದ್ಯಾರ್ಥಿಗಳು ಕಸಗುಡಿಸುವ ಕೆಲಸ ಪಡೆಯುತ್ತಿದ್ದಾರೆ: ನಿರೊದ್ಯೋಗ ಸಮಸ್ಯೆ ಬಗ್ಗೆ ಸಂಸದ

ಸಂಸತ್ತಿನ ಪ್ರಶ್ನೋತ್ತರ ಅವಧಿಯಲ್ಲಿ, ಡಿಎಂಕೆ ನಾಯಕ ಎ ರಾಜಾ ಅವರು ಮೆಕ್ಯಾನಿಕಲ್ ಎಂಜಿನಿಯರ್ ಮತ್ತು ಎಂಬಿಎ ಆಗಿರುವ ವ್ಯಕ್ತಿಯು ರೈಲ್ವೆಯಲ್ಲಿ 'ಖಲಾಸಿ' ಉದ್ಯೋಗವನ್ನು ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. 'ಖಲಾಸಿ' ಎಂದರೆ ಸಾಮಾನ್ಯವಾಗಿ ಸಹಾಯಕ ಎಂದರ್ಥ.

ಡಿಎಂಕೆ ಸಂಸದ ಎ. ರಾಜಾ

ಡಿಎಂಕೆ ಸಂಸದ ಎ. ರಾಜಾ

 • Share this:
  ನವದೆಹಲಿ: ಎಂಎಸ್ಸಿ ಗಣಿತ ಓದಿರುವ ವಿದ್ಯಾರ್ಥಿಗೆ ಮದ್ರಾಸ್ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಕಸ ಗುಡಿಸುವ ಕೆಲಸ ಸಿಗುತ್ತಿದೆ ಎಂದು ಲೋಕಸಭಾ ಸದಸ್ಯರೊಬ್ಬರು ಆರೋಪಿಸಿದ್ದಾರೆ. ಸೋಮವಾರ ಸಂಸತ್ತಿನಲ್ಲಿ ನಿರುದ್ಯೋಗ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಡಿಎಂಕೆ ಸಂಸದ ಪ್ರಶ್ನಿಸಿದ್ದಾರೆ.

  ಸಂಸತ್ತಿನ ಪ್ರಶ್ನೋತ್ತರ ಸಮಯದಲ್ಲಿ, ಡಿಎಂಕೆ ನಾಯಕ ಎ ರಾಜಾ ಅವರು ಮೆಕ್ಯಾನಿಕಲ್ ಎಂಜಿನಿಯರ್ ಮತ್ತು ಎಂಬಿಎ ಆಗಿರುವ ವ್ಯಕ್ತಿಯು ರೈಲ್ವೆಯಲ್ಲಿ 'ಖಲಾಸಿ' ಉದ್ಯೋಗವನ್ನು ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. 'ನೋಂದಾಯಿತ ನಿರುದ್ಯೋಗ ವ್ಯಕ್ತಿಗಳ ಕುರಿತು ಸದನವು ಪ್ರಶ್ನೆಯನ್ನು ಕೈಗೆತ್ತಿಕೊಂಡಾಗ ಅನೇಕ ವಿರೋಧ ಪಕ್ಷದ ಸದಸ್ಯರು ದೇಶದ ಉದ್ಯೋಗ ಪರಿಸ್ಥಿತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದರು.

  ನಿರುದ್ಯೋಗ ದರವು 45 ವರ್ಷಗಳಲ್ಲಿ ಮೊದಲ ಬಾರಿಗೆ ಹೆಚ್ಚಿದೆ ಎಂದು ರಾಜ ಅವರು, ಮದ್ರಾಸ್ ವಿಶ್ವವಿದ್ಯಾಲಯದ ಎಂಎಸ್ಸಿ ಗಣಿತ ವಿದ್ಯಾರ್ಥಿಯೊಬ್ಬನು ಮದ್ರಾಸ್ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಸ್ವೀಪರ್ ಹುದ್ದೆಯನ್ನು ಪಡೆಯುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ಕಾರ್ಮಿಕ ಮತ್ತು ಉದ್ಯೋಗ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಅವರು ಉದ್ಯೋಗಕ್ಕಾಗಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಿವೆ ಮತ್ತು ನಿರುದ್ಯೋಗವನ್ನು ನಿಭಾಯಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಉತ್ತರವನ್ನು ನೀಡಿದರು.

  ದೇಶದಲ್ಲಿ ಅಧಿಕೃತ ನಿರುದ್ಯೋಗಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದೆಯೇ ಎಂದು ಕಾಂಗ್ರೆಸ್​ ಸದಸ್ಯ ಆದೂರ್​ ಪ್ರಕಾಶ್​ ಪ್ರಶ್ನಿಸಿದರು. ಇದಕ್ಕೆ ಲಿಖಿತ ರೂಪದಲ್ಲಿ ಉತ್ತರಿಸಿದ ಗಂಗ್ವಾರ್​, 2015ರಲ್ಲಿ 4.35 ಕೋಟಿ ಜನ, 2016ರಲ್ಲಿ 4.34 ಕೋಟಿ ಮತ್ತು 2017ರಲ್ಲಿ 4.24 ಕೋಟಿ ಜನ ಅಧಿಕೃತ ನಿರುದ್ಯೋಗಿಗಳಿದ್ದರು ಎಂದಿದ್ದಾರೆ.

  ಇದನ್ನೂ ಓದಿ: ಕೊರೋನಾ ತಡೆಗೆ ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಬಿಎಸ್​ವೈ ವಿಡಿಯೋ ಕಾನ್ಫರೆನ್ಸ್; ಡಿಸಿಗಳಿಗೆ ಹಲವು ಕಟ್ಟುನಿಟ್ಟಿನ ಸೂಚನೆ

  ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ನೀಡಿದ ಮಾಹಿತಿಯ ಆಧಾರದ ಮೇಲೆ ಸಚಿವರು ಈ ವಿವರಗಳನ್ನು ನೀಡಿದ್ದಾರೆ. ಏಪ್ರಿಲ್ 2016 ರಲ್ಲಿ, ಲೇಬರ್ ಬ್ಯೂರೋ ಕೃಷಿಯನ್ನು ಬಿಟ್ಟು ಎಂಟು ಕ್ಷೇತ್ರಗಳನ್ನು ಒಳಗೊಂಡ ಕೈಗಾರಿಕಾ ಆರ್ಥಿಕತೆಯ ವಿಭಾಗದಲ್ಲಿ ತ್ರೈಮಾಸಿಕಗಳಲ್ಲಿ ಉದ್ಯೋಗದ ಪರಿಸ್ಥಿತಿಯಲ್ಲಿನ ಬದಲಾವಣೆಯನ್ನು ಅಳೆಯುವ ಉದ್ದೇಶದಿಂದ ಪರಿಷ್ಕರಿಸಿದ ತ್ರೈಮಾಸಿಕ ಉದ್ಯೋಗ ಸಮೀಕ್ಷೆಯನ್ನು (ಕ್ಯೂಇಎಸ್) ಪ್ರಾರಂಭಿಸಿತ್ತು.

  ಇದನ್ನೂ ಓದಿ: ಬೆಂಗಳೂರಿನಲ್ಲಿ ಸೂಪರ್​ ಮಾರ್ಕೆಟ್​ಗಳು ಬಂದ್ ಇಲ್ಲ ಎಂದ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್

  ಆ ಕ್ಷೇತ್ರಗಳೆಂದರೆ ಉತ್ಪಾದನೆ, ನಿರ್ಮಾಣ, ವ್ಯಾಪಾರ, ಸಾರಿಗೆ, ಶಿಕ್ಷಣ, ಆರೋಗ್ಯ, ವಸತಿ ಮತ್ತು ರೆಸ್ಟೋರೆಂಟ್‌ಗಳು ಮತ್ತು 10 ಅಥವಾ ಹೆಚ್ಚಿನ ಕಾರ್ಮಿಕರನ್ನು ಹೊಂದಿರುವ ಐಟಿ / ಬಿಪಿಒ.

  ಆರ್ಥಿಕತೆಯ ಆಯ್ದ ಎಂಟು ಕ್ಷೇತ್ರಗಳಲ್ಲಿ 2016 ರ ಏಪ್ರಿಲ್ ನಿಂದ 2017 ರ ಅಕ್ಟೋಬರ್ ವರೆಗೆ 6.16 ಲಕ್ಷ ಕಾರ್ಮಿಕರ ಉದ್ಯೋಗದಲ್ಲಿ ಸಂಪೂರ್ಣ ಸಕಾರಾತ್ಮಕ ಬದಲಾವಣೆ ಕಂಡುಬಂದಿದೆ ಎಂದು ಗಂಗ್ವಾರ್ ಹೇಳಿದ್ದಾರೆ.

  (ವರದಿ: ಸಂಧ್ಯಾ ಎಂ)
  First published: