ನಿರುದ್ಯೋಗ, ರೈತರ ಸಮಸ್ಯೆಗಳ ಕುರಿತ ಬಹಿರಂಗ ಚರ್ಚೆಗೆ ಪ್ರಧಾನಿ ಮೋದಿ ಸಿದ್ಧವೆ?: ಸವಾಲೆಸೆದ ರಾಹುಲ್ ಗಾಂಧಿ

Lok Sabha Elections 2019: ದೇಶಭಕ್ತಿ, ಉಗ್ರ ನಿಗ್ರಹಣೆ ಹಾಗೂ ಸೇನೆಯೇ ಇಂದಿನ ಚುನಾವಣೆಯ ಪ್ರಮುಖ ಅಂಶವಾಗಿ ಬದಲಾಗಿರುವ ಇಂದಿನ ದಿನದಲ್ಲಿ ಮತ್ತೆ ಕಂದಹಾರ್ ವಿಮಾನ ಅಪಹರಣ ಹಾಗೂ ಉಗ್ರ ಮಸೂದ್ ಬಿಡುಗಡೆ ವಿಚಾರವನ್ನು ಪ್ರಸ್ತಾಪಿಸಿರುವ ರಾಹುಲ್ ಗಾಂಧಿ ಬಿಜೆಪಿ ಪಕ್ಷದ್ದು ಪೊಳ್ಳು ದೇಶಭಕ್ತಿ ಹಾಗೂ ರಾಷ್ಟ್ರೀಯವಾದ ಎಂದು ಕಿಡಿಕಾರಿದ್ದಾರೆ.

MAshok Kumar | news18
Updated:May 6, 2019, 11:48 AM IST
ನಿರುದ್ಯೋಗ, ರೈತರ ಸಮಸ್ಯೆಗಳ ಕುರಿತ ಬಹಿರಂಗ ಚರ್ಚೆಗೆ ಪ್ರಧಾನಿ ಮೋದಿ ಸಿದ್ಧವೆ?: ಸವಾಲೆಸೆದ ರಾಹುಲ್ ಗಾಂಧಿ
ರಾಹುಲ್​ ಗಾಂಧಿ- ನರೇಂದ್ರ ಮೋದಿ
MAshok Kumar | news18
Updated: May 6, 2019, 11:48 AM IST
ನವ ದೆಹಲಿ : ದೇಶದ ಮೂಲಭೂತ ಸಮಸ್ಯೆಗಳಾದ ನಿರುದ್ಯೋಗ, ಆರ್ಥಿಕ ಹಿಂಜರಿತ, ಕೃಷಿ ವ್ಯವಸ್ಥೆಯಲ್ಲಿನ ಬಿಕ್ಕಟ್ಟು, ರೈತರ ಸಂಕಷ್ಟ ಹಾಗೂ ಅಭಿವೃದ್ಧಿಯ ಕುರಿತು ನನ್ನ ಜೊತೆ ಬಹಿರಂಗ ಚರ್ಚೆಗೆ ಬರಲು ಪ್ರಧಾನಿ ನರೇಂದ್ರ ಮೋದಿ ಸಿದ್ದರಿದ್ದಾರೆಯೇ? ಎಂದು ರಾಹುಲ್ ಗಾಂಧಿ ಸವಾಲೆಸೆದಿದ್ಧಾರೆ.

ಶನಿವಾರ ದೆಹಲಿಯಲ್ಲಿರುವ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೊಷ್ಠಿಯಲ್ಲಿ ಎನ್​ಡಿಎ ಸರ್ಕಾರ ಹಾಗೂ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿರುವ ಅವರು, “2016ರ ನವೆಂಬರ್ ತಿಂಗಳ ಇಳಿಸಂಜೆಯಲ್ಲಿ ನೋಟು ಅಮಾನ್ಯೀಕರಣ ಮಾಡುವ ಮೂಲಕ ಬಡವರನ್ನು ಸಂಕಷ್ಟಕ್ಕೆ ದೂಡಿದ್ದು ಯಾರು? ಇಂದು ನಿರುದ್ಯೋಗ ದೇಶದಲ್ಲಿ ಬಹುದೊಡ್ಡ ಸಮಸ್ಯೆಯಾಗಿ ತಲೆದೋರಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಆಶ್ವಾಸನೆ ಕೊಟ್ಟು ಈಗ ಜಾರಿಕೊಳ್ಳುತ್ತಿರುವವರು ಯಾರು?” ಎಂದು ರಾಹುಲ್ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ : ಜೈಷ್​ ಮುಖ್ಯಸ್ಥ ಮಸೂದ್​ನನ್ನು ಪಾಕಿಸ್ತಾನಕ್ಕೆ ಬಿಟ್ಟುಬಂದಿದ್ದು ನೀವೇ ಅಲ್ಲವೇ; ಬಿಜೆಪಿಗೆ ರಾಹುಲ್​ ಪ್ರಶ್ನೆ

“ಪ್ರಸ್ತುತ ದೇಶದಲ್ಲಿ ಕೃಷಿ ಕ್ಷೇತ್ರ ಹಿಂದೆಂದೂ ಕಾಣದ ಬಿಕ್ಕಟ್ಟನ್ನು ಎದುರಿಸುತ್ತಿದೆ. ರೈತರ ಬೆಳೆಗೆ ಗರಿಷ್ಠ ಬೆಂಬಲ ಬೆಲೆ, ಬೆಳೆ ವಿಮೆ ಕೊಡುತ್ತೇನೆ. ರೈತರ ಆತ್ಮಹತ್ಯೆಗೆ ಕಡಿವಾಣ ಹಾಕುತ್ತೇನೆ ಎಂದು ಕಳೆದ ಚುನಾವಣೆಯಲ್ಲಿ ಬಣ್ಣ ಬಣ್ಣದ ಆಶ್ವಾಸನೆ ನೀಡಿದ್ದು ಯಾರು? ಈಗ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವವರು ಯಾರು?” ಎಂದು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿ ಎದುರು ಸಾಲು ಸಾಲು ಪ್ರಶ್ನೆಗಳನ್ನಿಟ್ಟಿದ್ದಾರೆ.

 ಉಗ್ರ ಮಸೂದ್​ನನ್ನು ಮನೆಗೆ ಕಳಿಸಿದ್ದು ಯಾರು? : ಜೈಷ್​-ಎ-ಮಹಮ್ಮದ್ ಉಗ್ರ ಸಂಘಟನೆಯ ಸಂಸ್ಥಾಪಕ ಹಾಗೂ ಪುಲ್ವಾಮಾ ದಾಳಿಯ ಸಂಚುಕೋರ ಭಯೋತ್ಪಾದಕ ಮೌಲಾನ ಮಸೂದ್ ಅಝರ್​ನನ್ನು ಬಿಡುಗಡೆ ಮಾಡಿ ಮನೆಗೆ ಕಳಿಸಿದ್ದು ಯಾರು? ಎಂದು ಪ್ರಶ್ನೆ ಮಾಡುವ ಮೂಲಕ ರಾಹುಲ್ ಗಾಂಧಿ ಪ್ರಧಾನಿ ಮೋದಿಯ ಕಾಲೆಳೆದಿದ್ದಾರೆ.

“ಉಗ್ರ ಮಸೂದ್ ಅಝರ್​ನನ್ನು 1992ರಲ್ಲೇ ಕಾಂಗ್ರೆಸ್ ಸರ್ಕಾರ ಬಂಧಿಸಿತ್ತು. ಆದರೆ, ಆತನನ್ನು ಮತ್ತೆ ಪಾಕಿಸ್ತಾನಕ್ಕೆ ಕಳುಹಿಸಿಕೊಟ್ಟದ್ದು ಯಾರು? ಕಾಂಗ್ರೆಸ್ ಆತನನ್ನು ಪಾಕಿಸ್ತಾನಕ್ಕೆ ಕಳುಹಿಸಿತ್ತೇ? ಕಂದಹಾರ್ ವಿಮಾನ ಅಪಹರಣ ಯಾರ ಕಾಲದಲ್ಲಿ ನಡೆದಿತ್ತು.? ಉಗ್ರರ ಜೊತೆ ಮಾತುಕತೆ ನಡೆಸಿದ್ದು ಯಾರು? ಕೊನೆಗೆ ಮಸೂದ್ ಹೇಗೆ ಬಿಡುಗಡೆಯಾದ? ಎಂದು ಸರಣಿ ಪ್ರಶ್ನೆ ಮಾಡುವ ಮೂಲಕ ರಾಹುಲ್ ಗಾಂಧಿ 1999ರ ಕಂದಹಾರ್ ವಿಮಾನ ಅಪಹರಣದ ವಿಚಾರವನ್ನು ಮತ್ತೆ ಮುನ್ನಲೆಗೆ ತಂದಿದ್ದಾರೆ.

ಇದನ್ನೂ ಓದಿ : ಯುಪಿಎ ಅವಧಿಯ ಸರ್ಜಿಕಲ್ ಸ್ಟ್ರೈಕ್ ದಾಳಿಯನ್ನು ವಿಡಿಯೋ ಗೇಮ್​ಗೆ ಹೋಲಿಸಿ ಮೋದಿ ಸೈನ್ಯವನ್ನು ಅಪಮಾನಿಸಿದ್ದಾರೆ; ರಾಹುಲ್ ಗಾಂಧಿ ಕಿಡಿ
Loading...

ಉಗ್ರ ಮಸೂದ್ ಅಝರ್ ಬಿಡುಗಡೆಗಾಗಿ ಪಾಕಿಸ್ತಾನ್ ಬೆಂಬಲಿತ ಜೈಶ್​-ಎ-ಮಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕರು 180 ಜನ ಪ್ರಯಾಣಿಕರಿದ್ದ ಭಾರತೀಯ ವಿಮಾನವನ್ನು ಅಪರಿಸಿ ಅಪಘಾನಿಸ್ತಾನದ ಕಂದಹಾರ್​ನಲ್ಲಿ ಇಳಿಸಿದ್ದರು. ಕೊನೆಗೆ ಉಗ್ರರ ಜೊತೆ ಮಾತುಕತೆ ನಡೆಸಿದ್ದ ಅಂದಿನ ಬಿಜೆಪಿ ಸರ್ಕಾರ ಉಗ್ರ ಮಸೂದ್ ಸೇರಿದಂತೆ 3 ಜನ ಭಯೋತ್ಪಾದಕರ ಬಿಡುಗಡೆ ಮಾಡಿತ್ತು.

ದೇಶಭಕ್ತಿ, ಉಗ್ರ ನಿಗ್ರಹಣೆ ಹಾಗೂ ಸೇನೆಯೇ ಇಂದಿನ ಚುನಾವಣೆಯ ಪ್ರಮುಖ ಅಂಶವಾಗಿ ಬದಲಾಗಿರುವ ಇಂದಿನ ದಿನದಲ್ಲಿ ಮತ್ತೆ ಕಂದಹಾರ್ ವಿಮಾನ ಅಪಹರಣ ಹಾಗೂ ಉಗ್ರ ಮಸೂದ್ ಬಿಡುಗಡೆ ವಿಚಾರವನ್ನು ಪ್ರಸ್ತಾಪಿಸಿರುವ ರಾಹುಲ್ ಗಾಂಧಿ ಬಿಜೆಪಿ ಪಕ್ಷದ್ದು ಪೊಳ್ಳು ದೇಶಭಕ್ತಿ ಹಾಗೂ ರಾಷ್ಟ್ರೀಯವಾದ ಎಂದು ಕಿಡಿಕಾರಿದ್ದಾರೆ.

First published:May 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...