World Environment Day: ಇಂದು ಈ ಸಂಸದರು ಕೇವಲ ಸಸ್ಯಾಹಾರ ಮಾತ್ರ ಸೇವನೆ ಮಾಡ್ತಾರೆ; ಯಾಕೆ ಗೊತ್ತಾ?

ಸಸ್ಯಾಹಾರ

ಸಸ್ಯಾಹಾರ

World Environment Day June 5th: ಇದೇ ರೀತಿ ಸಂಸದ ಕೌಶಲ್ ಕಿಶೋರ್ ವಿಡಿಯೋ ಬಿಡುಗಡೆ ಮಾಡಿ, ಈ ವರ್ಷದ ವಿಶ್ವ ಪರಿಸರ ದಿನಾಚರಣೆಯಂದು ಪ್ರತಿಯೊಬ್ಬರೂ ಸಸ್ಯಾಹಾರ ಸೇವನೆ ಮಾಡಿ ಎಂದು ಮನವಿ ಮಾಡಿದ್ದಾರೆ.

  • Share this:

ಇಂದು ವಿಶ್ವ ಪರಿಸರ ದಿನ(World Environment Day). ಪ್ರತೀ ವರ್ಷ ಜೂನ್ 5ನ್ನು ವಿಶ್ವ ಪರಿಸರ ದಿನವನ್ನಾಗಿ ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಇದೇ ವೇಳೆ ದೇಶದಲ್ಲಿ ವಿವಿಧ ರಾಜಕೀಯ ಪಕ್ಷಗಳ ಕೆಲವು ಸಂಸದರು ಜೂನ್​ 5ರಂದು ಸಂಪೂರ್ಣವಾಗಿ ಸಸ್ಯಾಹಾರವನ್ನು ಸೇವಿಸುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸುತ್ತಾರೆ. ಪೆಟಾ ಇಂಡಿಯಾ(PETA India)ದಿಂದ ಆಯೋಜಿಸುವ ಕಾರ್ಯಕ್ರಮದಲ್ಲಿ ಕೈ ಜೋಡಿಸಿ, ಅದರ ಮೂಲಕ ಮಾಂಸ, ಡೈರಿ ಉತ್ಪನ್ನಗಳು ಮತ್ತು ಪ್ರಾಣಿಗಳಿಂದ ಪಡೆದ ಯಾವುದೇ ಉತ್ಪನ್ನಗಳನ್ನು ತಿನ್ನದೇ ಸಂಪೂರ್ಣ ಸಸ್ಯಾಹಾರ (ವೇಗನ್-Vegan) ಸೇವಿಸುತ್ತಾರೆ. ಆ ಮುಖಾಂತರ ಜನರು ಭೂ-ಸ್ನೇಹಿ ಆಹಾರಗಳನ್ನು ತಿನ್ನುವಂತೆ ಅರಿವು ಮೂಡಿಸುತ್ತಾರೆ.


ನಮ್ಮ ದೇಶದಲ್ಲಿ ಹಲವು ಸಂಸದರು ಈ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಅವರಲ್ಲಿ ಪಿಲಿಭಿತ್ ಸಂಸದೆ ಮನೇಕಾ ಗಾಂಧಿ, ಸಂಭಾಲ್ ಸಂಸದ ಶಫಿಖರ್ ರಹಮಾನ್ ಬಾರ್ಕ್, ವಿಜಿಯಾನಗರಮ್ ಸಂಸದ ಬೆಲ್ಲಾನ ಚಂದ್ರಶೇಖರ್, ನೈನಿತಾಲ್-ಉದ್ದಮ್​ಸಿಂಗ್ ನಗರದ ಸಂಸದ ಅಜಯ್ ಭಟ್, ಅಮಲಾಪುರದ ಸಂಸದೆ ಅನುರಾಧಾ ಚಿಂತಾ, ಸಿರ್ಸಾ ಸಂಸದೆ ಸುನೀತಾ ದುಗ್ಗಲ್, ರಾಜ್​ಮಹಲ್ ಸಂಸದ ವಿಜಯ್ ಹನ್ಸಡಕ್ ಹಾಗೂ ಮೋಹನ್​ ಲಾಲ್​ಗಂಜ್​ ಸಂಸದ ಕೌಶಲ್ ಕಿಶೋರ್ ಪೆಟಾ ಜೊತೆ ಕೈ ಜೋಡಿಸಿದ್ದಾರೆ. ಇವರು ಪ್ರತೀ ವರ್ಷ ವಿಶ್ವ ಪರಿಸರ ದಿನದಂದು ಕೇವಲ ಸಸ್ಯಾಹಾರವನ್ನು ಸೇವಿಸುವ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.


ಇದನ್ನೂ ಓದಿ:Karnataka Weather Today: ಕರ್ನಾಟಕಕ್ಕೆ ಮುಂಗಾರು ಎಂಟ್ರಿ; ಭಾರೀ ಮಳೆಯಿಂದ ಕರಾವಳಿಯಲ್ಲಿ ಇಂದು ರೆಡ್ ಅಲರ್ಟ್​ ಘೋಷಣೆ


ವಿಶ್ವ ಪರಿಸರ ದಿನದಂದು ವೇಗನ್ ಆಹಾರವನ್ನು ಸೇವಿಸುವ ಮೂಲಕ ಪೆಟಾ(PETA) ಭಾರತದ ಹಸಿರು ಉಪಕ್ರಮವನ್ನು ಸೇರಲು ನನಗೆ ಸಂತಸವಾಗುತ್ತಿದೆ. ಪ್ರಾಣಿಗಳಿಂದ ಪಡೆದ ಆಹಾರಕ್ಕಿಂತ ಹೆಚ್ಚಾಗಿ ಸಸ್ಯಾಹಾರ ತಿನ್ನುವುದರ ಮೂಲಕ ನಾವು ಜನರಲ್ಲಿ ಅರಿವು ಮೂಡಿಸಬೇಕು. ಜೊತೆಗೆ ವೇಗನ್ ಆಹಾರ ಸೇವನೆಯಿಂದ ನಾವು ಹವಾಮಾನ ಬದಲಾವಣೆ ಹಾಗೂ ಇತರೆ ಪರಿಸರೀಯ ಪರಿಣಾಮಗಳ ವಿರುದ್ಧ ಹೋರಾಡಬಹುದಾಗಿದೆ ಎಂದು ಸಂಸದೆ ಅನುರಾಧ ಚಿಂತಾ ಹೇಳುತ್ತಾರೆ.


ಇದೇ ರೀತಿ ಸಂಸದ ಕೌಶಲ್ ಕಿಶೋರ್ ವಿಡಿಯೋ ಬಿಡುಗಡೆ ಮಾಡಿ, ಈ ವರ್ಷದ ವಿಶ್ವ ಪರಿಸರ ದಿನಾಚರಣೆಯಂದು ಪ್ರತಿಯೊಬ್ಬರೂ ಸಸ್ಯಾಹಾರ ಸೇವನೆ ಮಾಡಿ ಎಂದು ಮನವಿ ಮಾಡಿದ್ದಾರೆ.


ಇದನ್ನೂಓದಿ:Karnataka Weather: ಕರ್ನಾಟಕವನ್ನು ಪ್ರವೇಶಿಸಿದ ಮುಂಗಾರು: ಬೆಂಗಳೂರಲ್ಲಿ ವರುಣನ ಆರ್ಭಟ, ಇತರೆಡೆ ಸಾಮಾನ್ಯ!


ಈ ಸಂಸದರು ನಾವು ಪ್ರಾಣಿಗಳ ಜೀವವನ್ನು ಉಳಿಸಬಹುದು, ನೀರಿನ ಬಳಕೆಯನ್ನು ಕಡಿಮೆ ಮಾಡಬಹುದು, ವೇಗನ್ ಆಹಾರ ಆಯ್ಕೆ ಮಾಡುವ ಮೂಲಕ ಹಸಿರುಮನೆ ಪರಿಣಾಮ ಹಾಗೂ ಅನಿಲ ಹೊರಸೂಸುವಿಕೆಯನ್ನು ತಡೆಯಬಹುದು ಎಂದು ಜನರಿಗೆ ತೋರಿಸಲು ಹಿಂಜರಿಯಲಿಲ್ಲ ಎಂದು ಪೆಟಾ ಇಂಡಿಯಾ ವೇಗನ್ ಸಂಯೋಜಕ ಡಾ.ಕಿರಣ್​ ಅಹುಜಾ ಹೇಳುತ್ತಾರೆ.


ಏಪ್ರಿಲ್​ ತಿಂಗಳಿನಲ್ಲಿ, ಪೆಟಾ ಯುಕೆ(ಇಂಗ್ಲೆಂಡ್​) ಹೇಳಿದ ಬಳಿಕ, ಹಲವು ಮಂದಿ ಬ್ರಿಟಿಷ್ ಸಂಸದರು ವೇಗನ್ ಆಹಾರವನ್ನು ಸೇವಿಸಿ ವಿಶ್ವ ಪರಿಸರ ದಿನವನ್ನು ಆಚರಿಸಿದರು.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

First published: